24 ಗಂಟೆಗಳು ಕುದಿಯುವ ನೀರಿನ ನದಿ: ಅಮೆಜಾನ್ ಕಾಡಿನಲ್ಲಿ ಪತ್ತೆಯಾಯಿತೊಂದು ಅದ್ಭುತ!

ಅಮೆಜಾನ್ ಅರಣ್ಯಗಳೆಂದರೆ ಒಂದು ರೋಚಕವಾದ ಪ್ರದೇಶ, ಮಿಲಿಯನ್ ಎಕರೆಗಳಷ್ಟು ವಿಶಾಲವಾಗಿ ಹರಡಿರುವ ಈ ಅರಣ್ಯಗಳಲ್ಲಿ ಬಹುತೇಕ ಭಾಗಗಳನ್ನು ತಲುಪಲು ಇದುವರೆಗೂ ಕೂಡ ಮನುಷ್ಯನಿಗೆ ಸಾಧ್ಯವಾಗಿಲ್ಲ. ಇಂದಿಗೂ ಕೂಡಾ ಅಮೆಜಾನ್ ಅರಣ್ಯಗಳು ಒಂದು ರೀತಿಯ ರಹಸ್ಯಮಯ ಅರಣ್ಯವಾಗಿಯೇ ಉಳಿದಿದೆ. ಈ ವಿಶಾಲವಾದ ಅರಣ್ಯದ ವಿಸ್ತಾರ ಎಷ್ಟಿದೆಯೆಂದು ಊಹೆ ಮಾಡುವುದು ಕೂಡಾ ಕಷ್ಟ. ಅಮೆಜಾನ್ ಅರಣ್ಯ ಒಂದಲ್ಲ, ಎರಡಲ್ಲಾ ಬರೋಬ್ಬರಿ ಒಂಬತ್ತು ದೇಶಗಳ ಗಡಿಯುದ್ದಕ್ಕೂ ಹರಡಿದೆ ಎಂದರೆ ಈ ಕಾಡು ಇನ್ನೆಷ್ಟು ವಿಶಾಲವಾಗಿದೆ ಎಂದು ಊಹಿಸಿಕೊಳ್ಳಬಹುದಷ್ಟೇ. ಅಮೆಜಾನ್ ಕಾಡು ವೈವಿಧ್ಯಮಯ ಜೀವಜಂತುಗಳಿಗೆ ಹಾಗೂ ಮರ-ಗಿಡಗಳಿಗೆ ಅಮೆಜಾನ್ ಆಶ್ರಯ ತಾಣವಾಗಿದೆ. ಅರಣ್ಯ ಪ್ರಿಯರಿಗೆ, ಅರಣ್ಯದ ಬಗ್ಗೆ ಅಧ್ಯಯನ ಮಾಡುವವರಿಗೆ ಇದೊಂದು ಜ್ಞಾನ ಭಂಡಾರವಿದ್ದಂತೆ ಎಂದರೆ ಕೂಡಾ ತಪ್ಪಾಗಲಾರದು. ‌

ಇದೇ ಅಮೆಜಾನ್ ಕಾಡಿನ ಒಂದು ಭಾಗ ಪೆರು ದೇಶದೊಂದಿಗೆ ಕೂಡ ತನ್ನ. ಗಡಿಯನ್ನು ಹಂಚಿಕೊಂಡಿದೆ. ಇಲ್ಲೊಂದು ನದಿ ಎದ್ದು ಈ ನದಿಯು ಸಾಮಾನ್ಯವಾಗಿಯಂತೂ ಇಲ್ಲ. ವಿಶೇಷ ಏನೆಂದರೆ ಈ ನದಿಯ ನೀರು ಸದಾ ಕುದಿಯುತ್ತಲೇ ಇರುತ್ತದೆ. ವಿಜ್ಞಾನಿಗಳು ಈ ನದಿಯನ್ನು ಪ್ರಪಂಚದ ಏಕಮಾತ್ರ ಥರ್ಮಲ್ ರಿವರ್ ಎಂದು ಹೆಸರಿಸಿರುವುದು ಮಾತ್ರವೇ ಅಲ್ಲದೆ ಈ ನದಿಯ ನೀರು ಹೀಗೆ ಬಿಸಿಯಾಗಿರುವುದರ ಹಿಂದೆ ಅಡಗಿರುವ ಕಾರಣವೇನು ಎಂದು ಕಂಡು ಹಿಡಿಯುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ ಎನ್ನಲಾಗಿದೆ.‌
ಈ ವಿಸ್ಮಯಕಾರಿ ನದಿಯನ್ನು ಪತ್ತೆ ಹಚ್ಚಿದವರು ಭೂವಿಜ್ಞಾನಿ ಆದಂತಹ ಆ್ಯಂಡ್ರೆ ರೂಸೋ ಎನ್ನುವವರು.ಇವರು 2011ರಲ್ಲಿ ಈ ಬಾಯ್ಲಿಂಗ್ ರಿವರ್ ಅಥವಾ ಕುದಿಯುವ ನೀರಿನ ನದಿಯನ್ನು ಪತ್ತೆಹಚ್ಚಿದರು.

ಸಾಂಕೇತಿಕ ಫೋಟೋ

ಈ ಕುದಿಯುವ ನೀರಿ‌ನ ನದಿಯನ್ನು ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಮಯಾನ್ ತುಯಾಕೋ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಆ್ಯಂಡ್ರೆ ರೂಸೋ ಅವರು ಈ ನದಿಯನ್ನು ಪತ್ತೆಹಚ್ಚಲು ಬಹಳ ಶ್ರಮಪಟ್ಟಿದ್ದಾರೆ. ಬಾಲ್ಯದಲ್ಲಿ ಇವರ ತಾತ ಕುದಿಯುವ ನೀರಿನ ನದಿಯ ಬಗ್ಗೆ ಕಥೆಗಳನ್ನು ಹೇಳುತ್ತಿದ್ದರಂತೆ. ವೈಜ್ಞಾನಿಕ ಮನೋಭಾವದ ಬಾಲಕ ಆ್ಯಂಡ್ರಿ ಅವರಿಗೆ ಆ ಕತೆಯನ್ನು ಕೇಳುತ್ತಿದ್ದಾಗ, ಅವರ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಜನಪದ ಕಥೆಗಳಲ್ಲಿ ಹೇಳಲಾಗಿರುವ ಈ ನದಿ ವಾಸ್ತವವಾಗಿ ಇದ್ದೇ ಇರುತ್ತದೆ ನಂಬಿಕೆ ದೃಢವಾಗಿತ್ತಂತೆ. ಬಾಲ್ಯದಲ್ಲಿ ತಲೆಯೊಳಗೆ ಹೋದ ನದಿಯ ವಿಚಾರವು ಮನಸ್ಸಿನಿಂದ ಕಳೆದು ಹೋಗಲಿಲ್ಲ.

ಆ್ಯಂಡ್ರೂ ಭೂವಿಜ್ಞಾನಿ ಆದಮೇಲೆ ಅಂದು ತಾತ ಹೇಳಿದ್ದ ಕಥೆಯೊಳಗಿನ ಕುದಿಯುವ ನೀರಿನ ನದಿ ಎಲ್ಲಿದೆ? ಎಂಬುದನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಚಾಲನೆ ನೀಡಿದರು. ಗಣಿ ಕೆಲಸಗಳು ನಡೆಯುವ ಕಡೆ ಹೋಗಿ ಈ ನದಿಯ ಬಗ್ಗೆ ವಿಚರಣೆ ಮಾಡಿದರು, ಅಲ್ಲದೆ ಸರ್ಕಾರ ಹಾಗೂ ಗ್ಯಾಸ್ ಕಂಪನಿಗಳ ಬಳಿ ಕೂಡ ಏನಾದರೂ ಮಾಹಿತಿ ಸಿಗಬಹುದೆಂದು ಇವರು ಪ್ರಯತ್ನವನ್ನು ಮಾಡಿದರು. ಆದರೆ ಅವರ ಪ್ರಯತ್ನದಲ್ಲಿ ಈ ನದಿಯ ಬಗ್ಗೆ ಯಾವುದೇ ರೀತಿಯ ಉಪಯುಕ್ತ ಮಾಹಿತಿ ಮಾತ್ರ ಸಿಗಲೇ ಇಲ್ಲ. ಕಡೆಗೆ ಆ್ಯಂಡ್ರೂ ತಾನೇ ಸ್ವತಃ ನದಿಯನ್ನು ಪತ್ತೆಹಚ್ಚಲು ಹೊರಟರು.

ಆ್ಯಂಡ್ರೂ ಅಮೆಜಾನ್ ಅರಣ್ಯಗಳಲ್ಲಿ ಕುದಿಯುವ ನೀರಿನ ನದಿಯನ್ನು ಹುಡುಕಲು ಹೊರಟಾಗ ಅನೇಕರು ಅಂತಹ ಯಾವುದೇ ನದಿ ಇಲ್ಲ ಎಂದು ಹೇಳಿದರಂತೆ. ಆದರೆ ಅದು ನಿಜವೋ ಸುಳ್ಳೋ ತಿಳಿಯುವುದಕೋಸ್ಕರ ಭೀ ಕ ರವಾದ ಅಮೆಜಾನ್ ಕಾಡನ್ನು ಪ್ರವೇಶಿಸಲು ಆಂಡ್ರ್ಯೂ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು, ಪೇರು ದೇಶಕ್ಕೆ ಹೊಂದಿಕೊಂಡಿರುವ ಅಮೆಜಾನ್ ಕಾಡು ಪ್ರವೇಶಿಸಿಯೇ ಬಿಟ್ಟರು. ಅವರ ನಿರೀಕ್ಷೆ ಸುಳ್ಳಾಗಿರಲಿಲ್ಲ ಆ ಪ್ರದೇಶದಲ್ಲಿ ಅವರಿಗೆ ಅವರ ತಾತ ಹೇಳಿದ ಆದಿ ಕಡೆಗೂ ಸಿಕ್ಕಿತು. ಅಲ್ಲದೆ ಆ ನದಿ ಪ್ರದೇಶದಲ್ಲಿ ಅಶಾನಿಂಕ ಎನ್ನುವ ಜನಾಂಗ ಕೂಡ ವಾಸಿಸುತ್ತಿರುವುದು ತಿಳಿದುಬಂದಿತ್ತು. ಆ್ಯಂಡ್ರೂ ಅವರ ಪ್ರಯತ್ನ ಫಲಿಸಿದ್ದು ಮಾತ್ರವೇ ಅಲ್ಲದೇ ಕಲ್ಪನೆಯಲ್ಲಿದ್ದ ನದಿ ವಾಸ್ತವವಾಗಿ ಇದೆ ಎಂಬುದನ್ನು ಸಾಬೀತು ಮಾಡಿದರು.

ಸಾಂಕೇತಿಕ ಫೋಟೋ

ಈ ಕುದಿಯುವ ನೀರಿನ ನದಿ ಸರಿಸುಮಾರು 4 ಮೈಲಿಗಳವರೆಗೆ ಹಬ್ಬಿದ್ದು, ಈ ನದಿಯ ನೀರು ಹೀಗೆ ಇಷ್ಟೊಂದು ಬಿಸಿಯಾಗಿರಲು ಕಾರಣ ಏನು ಎಂಬುದನ್ನು ತಿಳಿಯಲು ವಿಜ್ಞಾನಿಗಳು ಪ್ರಯತ್ನವನ್ನು ಮುಂದುವರಿಸಿದ್ದಾರೆ. ಅಗ್ನಿ ಪರ್ವತದ ಜ್ವಾಲಾಮುಖಿಯ ಪರಿಣಾಮ ನೀರು ಬಿಸಿಯಾಗಿರಬಹುದು ಎನ್ನುವುದು ಮೊದಲ ನಂಬಿಕೆಯಾಗಿದ್ದರೂ, ಈ ನದಿಯಿಂದ ಸುಮಾರು 700 ಕಿಮೀ ದೂರದಲ್ಲಿ ಅಗ್ನಿ ಪರ್ವತ ಇರುವುದರಿಂದ ಅದರ ಪರಿಣಾಮದಿಂದ ನೀರು ಬಿಸಿಯಾಗುತ್ತದೆ ಎನ್ನುವುದು ತಪ್ಪು ಎನ್ನಲಾಗಿದ್ದು, ನಿಜವಾದ ಕಾರಣ ತಿಳಿಯುವ ಪ್ರಯತ್ನ ನಡೆಯುತ್ತಿದೆ.