ಮೀನು ಹಿಡಿಯಲು ಹೊಸ ತಂತ್ರ ಬಳಸಿದ ಚಾಣಾಕ್ಷ ನಾಯಿ: ವೀಡಿಯೋ ನೋಡಿ ನಾಯಿಯ ತಂತ್ರಕ್ಕೆ ಮನಸೋತ ನೆಟ್ಟಿಗರು

ಮನುಷ್ಯನಿಗೆ ಅನಾದಿಕಾಲದಿಂದಲೂ ಆತನ ಜೊತೆಯಾಗಿರುವ ಸಾಕುಪ್ರಾಣಿ ಎಂದರೆ ಅದು ನಾಯಿ. ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ ಎಂದು ಕೂಡ ಹೇಳುತ್ತೇವೆ. ನಿಷ್ಠೆ ಮತ್ತು ಪ್ರಾಮಾಣಿಕತೆಯ ವಿಷಯ ಬಂದಾಗಲೂ ನಾಯಿಗೆ ಬೇರೆಲ್ಲ ಪ್ರಾಣಿಗಳಿಗಿಂತ ಅಗ್ರಸ್ಥಾನವನ್ನು ನಾವು ನೀಡುವುದು ಸಹಜ. ನಾಯಿಗಳನ್ನು ಪೊಲೀಸ್ ವ್ಯವಸ್ಥೆಯಲ್ಲಿ, ರಕ್ಷಣಾ ವ್ಯವಸ್ಥೆಯಲ್ಲಿ ಅವುಗಳಿಗೆ ತರಬೇತಿ ನೀಡಿ ಬಳಸಿಕೊಳ್ಳಲಾಗುತ್ತದೆ. ಅಲ್ಲದೆ ಸೂಕ್ತವಾದ ತರಬೇತಿಯನ್ನು ಪಡೆದುಕೊಂಡಂತಹ ನಾಯಿಗಳು ಅಪಾರ ಬುದ್ಧಿವಂತಿಕೆಯನ್ನು ಹಾಗೂ ಹೇಳಿದ ಮಾತು, ನೀಡುವ ನಿರ್ದೇಶನಗಳನ್ನು ಸಮರ್ಪಕವಾಗಿ ಪಾಲನೆ ಮಾಡುತ್ತವೆ.‌

ನಾಯಿಗಳಿಗೆ ಸೂಕ್ತವಾದ ತರಬೇತಿಯನ್ನು ನೀಡಿದರೆ ಅವು ಹೇಳಿದ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತವೆ ಎಂಬುದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೆ ಇವೆ. ಮನೆಯಲ್ಲಿ ಸಾಕಿದ ನಾಯಿಗಳೇ ನಮ್ಮ ಮಾತನ್ನು ಕೇಳುವುದನ್ನು ನಾವೆಲ್ಲಾ ಗಮನಿಸಿಯೇ ಇದ್ದೇವೆ. ಈಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವಿಡಿಯೋ ಬಹಳಷ್ಟು ವೈರಲ್ ಆಗುತ್ತಿದ್ದು, ಇದರಲ್ಲಿ ನಾಯಿಯೊಂದು ಬಹಳ ಚಾಕಚಕ್ಯತೆಯಿಂದ ಮೀನನ್ನು ಹಿಡಿಯುವ ತನ್ನ ಚಾಣಾಕ್ಷತನವನ್ನು ಪ್ರದರ್ಶಿಸಿದ್ದು, ನಾಯಿಯು ಮೀನನ್ನು ಹಿಡಿಯುವ ವಿಧಾನ ವನ್ನು ನೋಡಿ ನೆಟ್ಟಿಗರು ಕೂಡ ಬಹಳ ಆಶ್ಚರ್ಯ ಪಟ್ಟು, ಬೆರಗುಗಣ್ಣುಗಳಿಂದ ನೋಡುತ್ತಿದ್ದಾರೆ.

ಇಲ್ಲಿ ನಾಯಿ ಮೀನು ಹಿಡಿಯುವ ವಿಧಾನವನ್ನು ಗಮನಿಸಿದಾಗ ಅದು ಖಚಿತವಾಗಿ ತರಬೇತಿಯನ್ನು ಪಡೆದಿದೆ ಎಂಬುದು ನಮಗೆ ಸ್ಪಷ್ಟವಾಗುತ್ತದೆ.‌ ವೈರಲ್ ಆಗಿರುವ ವಿಡಿಯೋದಲ್ಲಿ ಗಮನಿಸಿದಾಗ, ನಾಯಿಯೊಂದು ನೀರಿನ ಕೊಳದೊಳಗೆ ಇಳಿದಿದೆ, ಅಲ್ಲಿ ಕದಲದೆ ಸುಮ್ಮನೇ ನಿಂತು ಬಿಟ್ಟಿದೆ.‌ ಆಗ ಸ್ವಲ್ಪ ದೊಡ್ಡ ಗಾತ್ರದ ಮೂರ್ನಾಲ್ಕು ಮೀನುಗಳು ಈಜುತ್ತ ನಾಯಿಯ ಬಳಿ ಬಂದಿದ್ದು, ಮೀನುಗಳು ಬಂದಾಗ ನಾಯಿ ಯಾವುದೇ ರೀತಿಯ ಚಲನೆಯನ್ನು ತೋರದೆ ತನ್ನ ಪಾಡಿಗೆ ತಾನು ಶಿಲೆಯಂತೆ ನಿಂತುಕೊಂಡಿದ್ದು, ಸುಮ್ಮನೆ ನಿಂತಿರುವ ನಾಯಿಯನ್ನು ನೋಡಿ ಒಂದು ಮೀನು ಅದರ ಹತ್ತಿರಕ್ಕೆ ಬಂದಿದೆ.

ಮೀನು ತನ್ನ ಬಾಯನ್ನು ತೆರೆದು ನಾಯಿಯನ್ನು ಅಮಾಯಕನೆಂದು ತಿಳಿದು ಹತ್ತಿರ ಬಂದಾಗ, ಅದೇ ಸರಿಯಾದ ಸಮಯವೆಂದು ಬಗೆದ ನಾಯಿ ತಡಮಾಡದೆ ತನ್ನ ಎದುರಿಗಿದ್ದ ಬೇ ಟೆಯನ್ನು ಗಟ್ಟಿಯಾಗಿ ತನ್ನ ಹಲ್ಲಿನಿಂದ ಕಚ್ಚಿ ಹಿಡಿದಿದೆ. ಪಾಪ ಮೀನು ಇಂತಹುದೊಂದು ಅನಿರೀಕ್ಷಿತ ಆ ಕ್ರ ಮ ಣ ವನ್ನು ಊಹಿಸಿ ಕೂಡಾ ಇರದು. ಅದು ನಾಯಿಯ ಹಿಡಿತದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟಿದೆ. ಆದರೆ ತನ್ನ ಪಟ್ಟು ಬಿಡದ ನಾಯಿ ಮೀನನ್ನು ಕೊಳದಿಂದ ಎತ್ತಿಕೊಂಡು ಬಂದು ಹೊರಹಾಕಿದ್ದು, ಮೀನನ್ನು ಹಿಡಿಯುವ ನಾಯಿಯೇ ಈ ಕಲೆ ನೋಡುಗರಿಗೆ ಹೊಸ ಅನುಭವವನ್ನು ನೀಡಿದೆ.

ವಿಡಿಯೋ ನೋಡಿ

ನವೆಂಬರ್ 30 ರಂದು ಶೇರ್ ಆದ ಈ ವೀಡಿಯೋವನ್ನು ಈಗಾಗಲೇ 6 ಲಕ್ಷಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದು, ನೆಟ್ಟಿಗರೊಬ್ಬರು ಬಹಳ ಚಾಣಾಕ್ಷತನದಿಂದ ತಂತ್ರ ಹೂಡಿದ ನಾಯಿ ಸರಿಯಾದ ಸಮಯಕ್ಕೆ ಮೀನನ್ನು ಹಿಡಿಯಿತು ಎಂದರೆ, ಮತ್ತೊಬ್ಬರು ಆ ಮೀನು ಪಾಪ ತನ್ನ ಟೀಂ ಗೆ ನಾಯಿಯನ್ನು ಕೂಡಾ ಸೇರಿಸಿಕೊಳ್ಳುವ ಪ್ರಯತ್ನ ಮಾಡಲು ಹೋಗಿ ಪ್ರಾಣವನ್ನು ಕಳೆದು ಕೊಂಡಿತು ಎಂದು ಮೀನಿನ ಬಗ್ಗೆ ಸಿಂಪಥಿ ತೋರಿದ್ದಾರೆ. ನಾಯಿ ಮುಗ್ಧತೆಯನ್ನು ಪ್ರದರ್ಶನ ಮಾಡುತ್ತಾ ಮೀನನ್ನು ಹಿಡಿದಿದ್ದು ಮಾತ್ರ ಮೀನು ಹಿಡಿಯುವ ಯಾರೂ ಊಹಿಸಿರದ ಹೊಸ ವಿಧಾನ ಎಂದೇ ಹೇಳಬಹುದು.