ಭಿಕಾರಿಯೆಂದು ತಿಳಿದು ಶೋ ರೂಂನಿಂದ ಹೊರ ಹಾಕಲು ಮುಂದಾದಾಗ, ಆ ವ್ಯಕ್ತಿ 12 ಲಕ್ಷ ನೀಡಿ ಬೈಕ್ ಖರೀದಿಸಿ ಶೋ ರೂಂ ನವರಿಗೆ ಕಲಿಸಿದ ಪಾಠ

ಯಾವುದೇ ಒಬ್ಬ ವ್ಯಕ್ತಿಯ ಯೋಗ್ಯತೆ, ಆತನ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಆತ ಧರಿಸಿರುವ ಬಟ್ಟೆಗಳನ್ನು ನೋಡಿ ಎಂದೂ ಕೂಡಾ ನಿರ್ಧರಿಸಬಾರದೆಂಬ ಈ ಮಾತನ್ನು ನಾವು ಹಲವು ಬಾರಿ ಕೇಳಿದ್ದೇವೆ. ಆದರೂ ಕೂಡ ನಮ್ಮ ಸಮಾಜದಲ್ಲಿನ ವಾಸ್ತವ ಏನೆಂದರೆ ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಆತ ಧರಿಸಿರುವ ಬಟ್ಟೆಯಿಂದಲೇ ನಿರ್ಧರಿಸುವುದು. ಇದು ಸಾಮಾನ್ಯವಾಗಿ ಎಲ್ಲೆಡೆ ಕೂಡಾ ನಡೆಯುತ್ತಿದೆ. ಇಂತಹದೇ ಒಂದು ಘಟನೆ ಥೈಲ್ಯಾಂಡಿನಲ್ಲಿ ಕೂಡ ನಡೆದಿದ್ದು , ಇಲ್ಲಿ ಹಿರಿಯ ವ್ಯಕ್ತಿಯೊಬ್ಬರ ಫೋಟೋಗಳು ವೈರಲ್ ಆಗಿದ್ದು ಅವರು ಧರಿಸಿದ್ದ ಹಳೆಯ ಬಟ್ಟೆಯನ್ನು ನೋಡಿ ಆತನ ಬಗ್ಗೆ ಕೇವಲವಾಗಿ ಮಾತನಾಡಿ, ಕೀ ಳಾ ಗಿ ಕಂಡವರೆ ನಂತರ ತಾವು ಮಾಡಿದ್ದು ತಪ್ಪು ಎಂದು ತಿಳಿದುಕೊಳ್ಳುವಂತಹ ಘಟನೆ ನಡೆದಿದೆ.

ಥೈಲ್ಯಾಂಡ್ ನ ಲುಂಗ ಚೇಡ ಎನ್ನುವ ಹೆಸರಿನ ಹಿರಿಯ ವ್ಯಕ್ತಿಯೊಬ್ಬರು ತೊಟ್ಟ ಬಟ್ಟೆಯಿಂದ ನೋಡಲು ಭಿ ಕ್ಷು ಕ ಅಥವಾ ಕೂಲಿಕಾರ್ಮಿಕ ನಂತೆ ಕಾಣುತ್ತಾರೆ. ಆದರೆ ಆಸಕ್ತಿಕರ ವಿಷಯ ಏನೆಂದರೆ ಭಿ ಕಾ ರಿ ಯಂತೆ ಕಂಡ ಆ ವ್ಯಕ್ತಿ 12 ಲಕ್ಷ ರೂಪಾಯಿಗಳನ್ನು ನೀಡಿ ಶೋ ರೂಮ್ ಒಂದರಲ್ಲಿ ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಅನ್ನು ಖರೀದಿ ಮಾಡಿದ್ದು. ಆದರೆ ಖರೀದಿಗೂ ಮೊದಲು ನಡೆದ ಘಟನೆ ನಿಜಕ್ಕೂ ಬಹಳ ಆಸಕ್ತಿಕರವಾಗಿದ್ದು, ನಮ್ಮ ಸಮಾಜದಲ್ಲಿನ ಅನೇಕರ ದೃಷ್ಟಿ ಕೋನ ಹೇಗಿದೆ ಎನ್ನುವುದನ್ನು ಅನಾವರಣ ಮಾಡಿದೆ. ಲುಂಗ ಒಂದು ಬೈಕ್ ಶೋರೂಮ್ ಬಳಿ ಹೋಗಿ, ಹೊರಗೆ ನಿಂತು ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ಶೋರೂಮ್ ಒಳಗಿನ ಬೈಕುಗಳನ್ನು ಗಮನಿಸಿದ್ದಾರೆ.

ಅನಂತರ ಶೋರೂಮ್ ಒಳಗೆ ಹೋದ ಲುಂಗಾ, ತಾನೊಂದು ಬೈಕ್ ಅನ್ನು ಖರೀದಿಸಬೇಕು ಎಂದು ಹೇಳಿದ್ದಾರೆ.‌ ಆದರೆ ನೋಡಲು ಭಿ ಕಾ ರಿಯಂತೆ ಕಂಡ ಲುಂಗ ಅವರ ಮಾತನ್ನು ಅಲ್ಲಿನ ಸೇಲ್ಸ್ ಪರ್ಸನ್ ನಂಬದೇ ಆತನನ್ನು, ಆತನ ಮಾತನ್ನು ನಿರ್ಲಕ್ಷ್ಯ ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೆ ಆತ ಅ ಸ ಮಾ ಧಾ ನ ದಿಂದ ಲುಂಗ ಅವರನ್ನು ಶೋರೂಮ್ ನಿಂದ ಹೊರಗೆ ಹೋಗು ಎಂದು ಸ್ವಲ್ಪ ಸಿ ಟ್ಟಿ ನಿಂದಲೇ ಆದೇಶ ನೀಡುತ್ತಾನೆ. ಆದರೆ ಲಂಗಾ ಮಾತ್ರ ತಾನು ಬಂದಿರುವುದು ಬೈಕ್ ಖರೀದಿಸಲು ಹಾಗೂ ಖರೀದಿ ಮಾಡದೆ ತಾನು ಅಲ್ಲಿಂದ ಹೊರಗೆ ಹೋಗುವುದಿಲ್ಲ ಎಂದು ಹ ಠ ಹಿಡಿದು ಅಲ್ಲೇ ನಿಲ್ಲುತ್ತಾರೆ. ಆಗ ಲುಂಗಾ ಆಡುತ್ತಿರುವ ಮಾತುಗಳನ್ನು ಕೇಳಿ ಅಲ್ಲಿದ್ದ ಇನ್ನಿತರೆ ಕೆಲಸಗಾರು ಕೂಡಾ ಬಂದು ಅವರ ಸುತ್ತ ಗುಂಪು ಸೇರುತ್ತಾರೆ.

ಭಿ ಕಾ ರಿ ಯಂತಿರುವ ಲುಂಗ ಬೈಕ್ ಖರೀದಿಸುವ ವಿಚಾರವನ್ನು ಕೇಳಿ ಎಲ್ಲರೂ ಅ ಪ ಹಾಸ್ಯ ಮಾಡುತ್ತಾ ನಗಲು ಆರಂಭಿಸುತ್ತಾರೆ. ಆಗ ಲುಂಗಾ ಗಟ್ಟಿಯಾಗಿ ತಾನು ಶೋ ರೂಂ ಮ್ಯಾನೇಜರ್ ಬಳಿ ಮಾತನಾಡಬೇಕೆಂದು ಹೇಳುತ್ತಾರೆ. ಆದರೆ ಶೋ ರೂಮ್ನಲ್ಲಿ ಯಾರೊಬ್ಬರಿಗೂ ಕೂಡ ಲುಂಗಾ ಅವರ ಮಾತನ್ನು ಕೇಳುವಷ್ಟು ತಾಳ್ಮೆಯಾಗಲೀ ಅಥವಾ ಸಹನೆಯಾಗಲಿ ಇರಲಿಲ್ಲ. ಕಡೆಗೆ ಶೋ ರೂಂನಲ್ಲಿ ಉಂಟಾಗುತ್ತಿದ್ದ ಸದ್ದುಗದ್ದಲವನ್ನು ಕೇಳಿ ಮಾಲೀಕರೇ ಹೊರಗೆ ಬಂದು, ಲುಂಗಾ ಇದ್ದ ಕಡೆಗೆ ಬಂದು ವಿಚಾರಿಸಿದಾಗ ಶೋರೂಮ್ ನ ಕೆಲಸದವರು ಎಲ್ಲ ವಿಷಯವನ್ನು ಮಾಲೀಕರಿಗೆ ತಿಳಿಸಿದ್ದಾರೆ.

ಆಗ ಶೋರೂಮ್ ನ ಮಾಲೀಕ ಕೂಡ ಲುಂಗಾರನ್ನು ಭಿ ಕಾ ರಿಯೆಂದೇ ಭಾವಿಸಿ ಅವರಿಗೆ ಬುದ್ಧಿ ಮಾತನ್ನು ಹೇಳಿದ್ದಾರೆ ಕೂಡಾ. ಲುಂಗ ಮಾತ್ರ ಆಗ ಕೂಡಾ ತಾನು ಬೈಕ್ ಖರೀದಿ ಮಾಡಲು ಬಂದಿರುವುದಾಗಿ ಹೇಳಿದಾಗ, ಬೇರೆ ದಾರಿಯಿಲ್ಲದೇ ಶೋರೂಮ್ ಮಾಲೀಕರು ಆತನಿಗೆ ಬೈಕನ್ನು ತೋರಿಸಿದ್ದಾರೆ. ಬೈಕನ್ನು ನೋಡಿದ ನಂತರ ಲುಂಗ ತನ್ನ ಬ್ಯಾಗ್ ನಿಂದ 12 ಲಕ್ಷ ರೂಪಾಯಿಗಳನ್ನು ತೆಗೆದು ಅವರಿಗೆ ನೀಡಿ ಬೈಕ್ ಖರೀದಿ ಮಾಡಿದ್ದಾರೆ. ಆ ಕ್ಷಣ ಶೋರೂಂನಲ್ಲಿ ಇದ್ದವರಿಗೆಲ್ಲ ಆಶ್ಚರ್ಯವಾಗಿದೆ. ಲುಂಗಾ ಧರಿಸಿದ್ದ ವಸ್ತ್ರ ನೋಡಿ ಆತನ ಬಗ್ಗೆ ಲಘುವಾಗಿ ಮಾತನಾಡಿ, ಅ ಪ ಹಾಸ್ಯ ಮಾಡಿದ ಮಂದಿಗೆ ತಾವು ಮಾಡಿದ ತಪ್ಪಿನ ಅರಿವು ಆಗಿದೆ.