IND VS AUS: ರೋಹಿತ್ ಶರ್ಮಾ ನಾಯಕ ಮತ್ತು ಧೋನಿಯವರಿಗೆ ಕೋಚ್ ನೇಮಿಸುವ ಸಮಯ ಬಂತು, ವಿರಾಟ್-ಶಾಸ್ತ್ರಿ ಸಮಯ ಖಲಾಸ್.

ಆಸ್ಟ್ರೇಲಿಯಾದಲ್ಲಿ ಮುಖಭಂಗವನ್ನು ಅನುಭವಿಸುತ್ತಿರುವ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಕಾಲೆಳೆಯಲು ಶುರುವಾಗಿದೆ. ಸರಣಿ ಸೋಲಿನಿಂದಾಗಿ ವಿರಾಟ್ ಮತ್ತು ಶಾಸ್ತ್ರಿ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿರಾಟ್ ಬದಲಾಗಿ ರೋಹಿತ್ ಶರ್ಮಾ ಅವರನ್ನು ನಾಯಕ ಮತ್ತು ರವಿ ಶಾಸ್ತ್ರೀಯವರ ಬದಲಾಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೋಚ್ ನೇಮಿಸುವ ಬಗ್ಗೆ ಡಿಮಾಂಡ್ ನಡೆದಿದೆ.

ಸತತ ಎರಡು ಸೋಲುಗಳಿಂದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಕಳೆದುಕೊಂಡಿತು. ಟೀಮ್ ಇಂಡಿಯಾದ ಈ ಕಳಪೆ ಪ್ರದರ್ಶನದಿಂದಾಗಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಇಬ್ಬರು ಎಂದಿನಂತೆ ಟ್ರೋಲಿಗರಿಗೆ ಗುರಿಯಾಗಿದ್ದಾರೆ.

ಟ್ರೋಲಿಗರು ತಮ್ಮ ಬೇಡಿಕೆಯಲ್ಲಿ ವಿರಾಟ್ ಅವರನ್ನು ನಾಯಕತ್ವದಿಂದ ಮತ್ತು ರವಿ ಶಾಸ್ತ್ರಿಯವರನ್ನು ಕೋಚ್ ಸ್ಥಾನದಿಂದ ಕೆಳಗಿಳಸಲು ಡಿಮಾಂಡ್ ಮಾಡುತ್ತಿದ್ದಾರೆ. ಇದರ ಜೊತೆಗೆ ಇನ್ನೊಂದು ವಿಶೇಷತೆ ಏನೆಂದರೆ, ಅವರ ಸ್ಥಾನದಲ್ಲಿ ರೋಹಿತ್ ಶರ್ಮಾ ಅವರಿಗೆ ನಾಯಕ ಮತ್ತು ಮಹೇಂದ್ರಸಿಂಗ್ ಧೋನಿ ಯವರಿಗೆ ಕೋಚ್ ಮಾಡುವ ಸಲಹೆಯನ್ನು ಸಹಿತ ನೀಡುತ್ತಿದ್ದಾರೆ.

ಧೋನಿ ಮತ್ತು ರೋಹಿತ್ ಅವರಿಗೆ ನೀಡಿ ಈ ಜವಾಬ್ದಾರಿ; ಫ್ಯಾನ್ಸ್ ಗಳ ಬೇಡಿಕೆ…

ಸಿಡ್ನಿಯಲ್ಲಾದ ಸತತ ಎರಡನೆಯ ಸೋಲಿನಿಂದ ಭಾರತದ ಕ್ರಿಕೆಟ್ ಪ್ರೇಮಿಗಳು ನಾಯಕ್ ವಿರಾಟ್ ಮತ್ತು ಕೋಚ್ ರವಿ ಶಾಸ್ತ್ರಿಯವರ ಮೇಲೆ ರೊಚ್ಚಿಗೆದ್ದಿದ್ದಾರೆ.

ರವಿ ಶಾಸ್ತ್ರಿಯವರ ರಣನೀತಿಗಳ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಅಸಮಾಧಾನ ಗೊಂಡಿದ್ದಾರೆ.ಆದಷ್ಟು ಬೇಗ ಅವರನ್ನು ಈ ಸ್ಥಾನದಿಂದ ಕೆಳಗಿಸಬೇಕು ಎಂಬ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ರೋಹಿತ್ ಶರ್ಮಾ ಮತ್ತು ಧೋನಿಯವರ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಲು ಪ್ರಾರಂಭಿಸಿದವು. ಅದರಲ್ಲಿ ಫ್ಯಾನ್ಸ್ ಗಳು ರೋಹಿತ್ ಶರ್ಮಾ ಅವರು ನಾಯಕನಾಗುವ ಸಮಯ ಬಂದಿದೆ. ಅವರ ಜೊತೆಗೆ ಧೋನಿಯವರಿಗೆ ಟೀಮ್ ಇಂಡಿಯಾದ ಮೆಂಟರ್ ಅಥವಾ ಕೋಚ್ ನನ್ನಾಗಿ ಆದಷ್ಟು ಬೇಗ ಮಾಡಬೇಕು. ಇಲ್ಲವಾದರೆ ಟೀಮ್ ಇಂಡಿಯಾದ ಅವಸ್ಥೆ ಇನ್ನಷ್ಟು ಹದಗೆಡುವದು ಎಂದು ಅಭಿಪ್ರಾಯ ಪಡುತ್ತಿದ್ದಾರೆ.

ಭಾರತದ ಸತತ ಸೋಲಿನಿಂದಾಗಿ ಫ್ಯಾನ್ಸ್ ಗಳು ರೋಹಿತ್ ಶರ್ಮಾ ಮತ್ತು ಧೋನಿಯವರನ್ನು ಬಹಳೇ ನೆನಪಿಸಿಕೊಳ್ಳುತ್ತಾರೆ. ಕಾರಣ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಧೋನಿಯವರು ಒಳ್ಳೆಯ ಪ್ರದರ್ಶನವನ್ನು ತೋರಿ ತಂಡವನ್ನು ಗೆಲ್ಲಿಸಿದ್ದರು. ಇನ್ನು ರೋಹಿತ್ ಅವರು ಫಿಟ್ ನೆಸ್ ಕಾರಣದಿಂದಾಗಿ ಏಕದಿನ ಮತ್ತು ಟಿ 20 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಆದರೆ ತಂಡದಿಂದ ಹೊರಗುಳಿದ ಕಾರಣಗಳೇ ಬೇರೆಯಾಗಿವೆ ಎಂದು ಹೇಳಲಾಗುತ್ತಿದೆ.