ಮೃಗಾಲಯದಲ್ಲಿ ಮನುಷ್ಯನ ಮನರಂಜನೆಗೆ ಪಂಜರದೊಳಗಿರುವ ತೋಳದ ಸಂಕಷ್ಟ: ವೈರಲ್ ವೀಡಿಯೋ ನೋಡಿ ಮರುಗಿದ ಜನ!
ಸ್ವತಂತ್ರವಾಗಿ ಬದುಕುವುದು ಪ್ರತಿಯೊಂದು ಜೀವಿಯ ಹಕ್ಕು ಎಂದು ಹಲವು ಸಂದರ್ಭಗಳಲ್ಲಿ, ಹಲವು ಕಡೆ ಹೇಳುವುದನ್ನು ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಅಲ್ಲದೆ ಪತ್ರಿಕೆಗಳು ಹಾಗೂ ಇನ್ನಿತರೆ ಮಾಧ್ಯಮಗಳಲ್ಲಿ ಕೂಡಾ ಈ ವಿಷಯಗಳು ಆಗಾಗ ಪ್ರಸ್ತಾಪಕ್ಕೆ ಬರುತ್ತಲೇ ಇರುತ್ತವೆ. ಆದರೆ ಇದನ್ನು ಪಾಲನೆ ಮಾಡುವ ವಿಷಯಕ್ಕೆ ಬಂದಾಗ ಎಲ್ಲೋ ಒಂದು ಕಡೆ ನಾವು ಎಡವಿದ್ದೇವೆ ಎನಿಸುತ್ತದೆ, ಏಕೆಂದರೆ ಪ್ರಾಣಿ ಸಂಗ್ರಹಾಲಯಗಳಲ್ಲಿ ಮನುಷ್ಯನ ಮನರಂಜನೆಗಾಗಿ ವನ್ಯಜೀವಿಗಳನ್ನು ಪಂಜರಗಳಲ್ಲಿ ಇಟ್ಟಿರುವುದನ್ನು ನೋಡಿದಾಗ ಅವುಗಳಿಗೆ ಸ್ವತಂತ್ರ ಎಲ್ಲಿದೆ? ಎನ್ನುವ ಪ್ರಶ್ನೆ ಮೂಡುತ್ತದೆ. ವನ್ಯಜೀವಿಗಳು ವಿಶಾಲವಾದ ಅರಣ್ಯದಲ್ಲಿ ಸ್ವಚ್ಛಂದವಾಗಿ ಓಡಾಡುತ್ತವೆ, ಸ್ವತಂತ್ರದ ಬದುಕನ್ನು ಬದುಕುತ್ತಿರುತ್ತವೆ. ಆದರೆ ಅಂತಹ ಜೀವಿಗಳನ್ನು ಪಂಜರದೊಳಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಇಟ್ಟು ಅವುಗಳಿಗೆ ಊಟ, ವಸತಿಯ ಸೌಲಭ್ಯವನ್ನು ನೀಡಿದರೂ ಕೂಡ ಅವುಗಳಿಂದ ಕಿತ್ತುಕೊಂಡ ಸ್ವಾತಂತ್ರ್ಯಕ್ಕೆ ಅದು ಎಂದೂ ಸಮನಾಗುವುದಿಲ್ಲ.
ಸೋಶಿಯಲ್ ಮೀಡಿಯಾ ದ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಸ್ವತಂತ್ರ ಕಳೆದುಕೊಂಡ ತೋಳವೊಂದು ಪ್ರಾಣಿಸಂಗ್ರಹಾಲಯದ ಪಂಜರದೊಳಗೆ ಕಾಡಿನ ಜೀವನದಲ್ಲಿ ರೂಢಿಯಾದ ಅಭ್ಯಾಸವನ್ನು ಮುಂದುವರಿಸಲು ಪಡುತ್ತಿರುವ ಪಾಡನ್ನು ಈ ವಿಡಿಯೋ ಎಲ್ಲರ ಮುಂದೆ ಇಟ್ಟಿದೆ. ವೀಡಿಯೋ ನೋಡಿದಾಗ ತೋಳ ಎಷ್ಟು ಬುದ್ಧಿವಂತಿಕೆ ಹಾಗೂ ಕ್ರಿಯಾಶೀಲವಾಗಿದೆ ಎನಿಸಬಹುದು. ಆದರೆ ಸರಿಯಾಗಿ ನೋಡಿದಾಗ ಅದು ಎಂತಹ ಕಷ್ಟ ಅನುಭವಿಸುತ್ತಿದೆ ಎಂಬುದರ ಅರಿವು ಕೂಡಾ ನಮಗೆ ಆಗುತ್ತದೆ.
ಸುಶಾಂತ್ ನಂದಾ ಅವರು ವಿಡಿಯೋ ಶೇರ್ ಮಾಡಿಕೊಂಡು ಶೀರ್ಷಿಕೆಯಲ್ಲಿ , ಇದು ಅತ್ಯಂತ ನೋ ವ ನ್ನು ನೀಡುವ ದೃಶ್ಯ. ಟರ್ಕಿಯ ಮೃಗಾಲಯದಲ್ಲಿ ತೋಳ ಹಿಂದೆ ಮುಂದೆ ಹೆಜ್ಜೆ ಹಾಕುತ್ತಿದೆ ಎಕೆಂದರೆ ಸಾಮಾನ್ಯವಾಗಿ ಅರಣ್ಯದಲ್ಲಿ ತೋಳಗಳು ದಿನವೊಂದಕ್ಕೆ ಸುಮಾರು 25 ಕಿಲೋಮೀಟರುಗಳ ಪ್ರಯಾಣ ಮಾಡುತ್ತವೆ. ಆದರೆ ಪಂಜರದಲ್ಲಿ ಅದು ಸಾಧ್ಯವಾಗದ ಕಾರಣ ಇರುವ ಜಾಗದಲ್ಲೇ ತೋಳ ಸಾಧ್ಯವಾದಷ್ಟು ನಡೆಯುವ ಪ್ರಯತ್ನ ಮಾಡುತ್ತಿದೆ ಎಂದು ವಿವರಿಸಿದ್ದಾರೆ. ಈ ದೃಶ್ಯ ನೋಡಿದಾಗ ಮನರಂಜನೆಗಿಂತ ವನ್ಯ ಜೀವಿಗಳ ಬಗ್ಗೆ ಮರುಕ ಹುಟ್ಟುತ್ತದೆ.
ಸ್ವತಂತ್ರವಾಗಿ ವಿಹರಿಸುವ ವನ್ಯಜೀವಿಗಳನ್ನು ಈ ರೀತಿ ಮೃಗಾಲಯಗಳಲ್ಲಿ ಬಂ ಧಿ ಸಿದಾಗ ಅವು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಪಡುವ ಕಷ್ಟ ಏನೆಂಬುದನ್ನು ಈ ವೀಡಿಯೋದಲ್ಲಿ ನಾವು ಕಾಣಬಹುದಾಗಿದೆ. ಸುಶಾಂತ್ ಅವರು ಶೇರ್ ಮಾಡಿರುವ ಈ ವಿಡಿಯೋವನ್ನು ಈಗಾಗಲೇ 14 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಜನ ಓಕೆ ಮೆಚ್ಚುಗೆಯನ್ನುನೀಡಿರುವುದರ ಜೊತೆಗೆ ರಿಟ್ವೀಟ್ ಕೂಡ ಮಾಡಿದ್ದಾರೆ. ಆದರೆ ಪ್ರತಿಕ್ರಿಯೆಗಳಲ್ಲಿ ಮಾತ್ರ ಅನೇಕ ಮಂದಿ ನೆಟ್ಟಿಗರು ತೋಳದ ಅ ಸ ಹಾ ಯಕತೆಯನ್ನು ನೋಡಿ ಮರುಕ ಪಟ್ಟಿದ್ದಾರೆ.
ವಿಡಿಯೋ ನೋಡಿ
Pain of infinity😟
— Susanta Nanda (@susantananda3) December 1, 2020
Wolf pacing back and forth making an infinity sign pattern at a Zoo in Turkey.
Wild animals don’t deserve to be locked up in small prisons. Wolves travel 25kms/day & here, it is desperately trying to “travel” as much as possible in this small confined space. pic.twitter.com/oQ00i512uU
ಮನುಷ್ಯನ ಮನರಂಜನೆಗೆ ವನ್ಯಜೀವಿಗಳು ಹೇಗೆ ಬ ಲಿ ಯಾಗುತ್ತಿದೆ ಎಂದು ಅ ಸಮಾಧಾನ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರಲ್ಲಿ ಅನೇಕರು ಪ್ರಾಣಿಗಳನ್ನು ಈ ರೀತಿ ಬಂ ಧ ನದಲ್ಲಿ ಇಡುವುದು ಸರಿಯಲ್ಲ ಇದರ ವಿ ರು ದ್ಧ ಧ್ವನಿ ಎತ್ತಿ ಪ್ರಾಣಿಗಳಿಗೆ ಮತ್ತೊಮ್ಮೆ ಸ್ವಾತಂತ್ರ್ಯದ ಬದುಕನ್ನು ನೀಡಬೇಕು ಎಂದಿದ್ದಾರೆ. ಇನ್ನು ಕೆಲವರು ಇದು ಕೇವಲ ಟರ್ಕಿಯಲ್ಲಿ ಮಾತ್ರವಲ್ಲ ಭಾರತದಲ್ಲಿ ಕೂಡ ಮೃಗಾಲಯಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಬಂ ಧ ನ ದ ಸಂಕಷ್ಟ ಏನೆಂದು ಮನುಷ್ಯರಿಗೆ ಕ್ವಾರಂಟೈನ್ ಟೈಮ್ನಲ್ಲಿ ಅರ್ಥವಾಗಿದೆ ಇನ್ನಾದರೂ ಪ್ರಾಣಿಗಳಿಗೆ ಸ್ವತಂತ್ರವನ್ನು ನೀಡಲೆಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.