ಹುಲಿ ವೇಷ ಧರಿಸಿ ಮಾಡಿದ ಪ್ರಾಂಕ್ ವೀಡಿಯೋ: ನಾಯಿಗಳು ಕೊಟ್ಟ ರಿಯಾಕ್ಷನ್ ಆಯ್ತು ಭರ್ಜರಿ ವೈರಲ್

ಪ್ರಾಂಕ್ ವಿಡಿಯೋಗಳು ಎಂದರೆ ಜನರಿಗೆ ಬಹಳ ಇಷ್ಟ, ಇತ್ತೀಚಿನ ದಿನಗಳಲ್ಲಂತೂ ಈ ಪ್ರಾಂಕ್ ವೀಡಿಯೋಗಳ ಕ್ರೇಜ್ ಕೂಡಾ ಸಿಕ್ಕಾಪಟ್ಟೆ ಹೆಚ್ಚಾಗ್ತಾ ಇದೆ ಕೂಡಾ. ಅದರಲ್ಲೂ ವಿಶೇಷವಾಗಿ ಹೆಚ್ಚು ತೊಂದರೆ ಉಂಟು ಮಾಡದ, ಸರಳವಾದ ಆದರೆ ಸಿಕ್ಕಾಪಟ್ಟೆ ನಕ್ಕು ನಗಿಸುವ ಹಾಗೆ ಮಾಡುವ ಪ್ರಾಂಕ್ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ಬೇಗ ವೈರಲ್ ಆಗ್ತಾ ಇವೆ ಕೂಡಾ. ವಿಶೇಷ ಎಂದರೆ ಈ ಪ್ರಾಂಕ್ ವಿಡಿಯೋಗಳು ಶೇರ್ ಆದ ಎರಡು-ಮೂರು ದಿನಗಳಲ್ಲೇ ಲಕ್ಷ-ಲಕ್ಷ ವೀಕ್ಷಣೆಗಳನ್ನು ತನ್ನದಾಗಿಸಿಕೊಳ್ಳುತ್ತದೆ. ಕಳೆದ ಕೆಲವು ದಿನಗಳಿಂದ ಇಂತಹ ಪ್ರಾಂಕ್ ವೀಡಿಯೋಗಳ ಕ್ಯಾಟ್ಲಗರಿಯಲ್ಲಿ ಫೇಕ್ ಟೈಗರ್ ಪ್ರಾಂಕ್ ಹೆಸರಿನಲ್ಲಿ ಮೂಡಿ ಬರುತ್ತಿರುವ ವಿಡಿಯೋಗಳು ಎಲ್ಲರ ಗಮನವನ್ನು ಸೆಳೆಯುತ್ತಿವೆ. ಈಗಾಗಲೇ ಹಲವು ಫೇಕ್ ಟೈಗರ್ ವಿಡಿಯೋಗಳು ವೈರಲ್ ಕೂಡಾ ಆಗಿವೆ. ಈಗ ಅದೇ ಕ್ಯಾಟಗರಿಯಲ್ಲಿ ಮತ್ತೊಂದು ವೀಡಿಯೋ ವೈರಲ್ ಆಗಿ ಎಲ್ಲರನ್ನೂ ನಕ್ಕು ನಗಿಸುತ್ತಿದೆ.

ಲಾಯ್ ಕೊಬ್ ಎನ್ನುವ ಚಾನೆಲ್ ನ ಯೂಟ್ಯೂಬರ್ ಒಬ್ಬರು ಈಗಾಗಲೇ ಫೇಕ್ ಟೈಗರ್ ಪ್ರಾಂಕ್ ಎಂಬ ಕೆಲವು ವಿಡಿಯೋಗಳನ್ನು ಮಾಡಿ, ತನ್ನ ಚಾನೆಲ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವು ಭರ್ಜರಿ ವೈರಲ್ ಕೂಡಾ ಆಗಿವೆ. ಅವರ ತಮ್ಮ ವೀಡಿಯೋಗಳಲ್ಲಿ ಹುಲಿಯ ಬೊಂಬೆಗಳನ್ನು ಬಳಸಿಕೊಂಡು ನಾಯಿಗಳು ಇರುವ ಕಡೆ ಆ ಬೊಂಬೆ ಹುಲಿಯನ್ನು ಇಟ್ಟು, ಅದನ್ನು ನೋಡಿದ ನಾಯಿಗಳ ರಿಯಾಕ್ಷನ್ ಹೇಗಿರುತ್ತದೆ ಎಂಬುದನ್ನು ವೀಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದರು. ಅದಾದ ನಂತರ ಒಂದು ಹೆಜ್ಜೆ ಮುಂದೆ ಹೋಗಿ ನಾಯಿಯೊಂದಕ್ಕೆ ಹುಲಿಯಂತೆ ವೇಷವನ್ನು ಹಾಕಿ ಬೇರೆ ನಾಯಿಗಳು ಇರುವ ಕಡೆ ಹುಲಿಯಂತೆ ಕಾಣುವ ಆ ನಾಯಿಯನ್ನು ಬಿಟ್ಟು ಆಗ ನಾಯಿಗಳು ಹೇಗೆ ರಿಯಾಕ್ಷನ್ ನೀಡುತ್ತವೆ ಎಂಬುದನ್ನು ಕೂಡಾ ವಿಡಿಯೋ ಮಾಡಿ ಹಂಚಿಕೊಂಡಿದ್ದರು.

ವಿಶೇಷ ಎಂದರೆ ಆ ಎಲ್ಲಾ ವೀಡಿಯೋಗಳು ಕೂಡಾ ಲಕ್ಷ ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿರುವುದ. ಇನ್ನು ಕೆಲವು ವೀಡಿಯೋಗಳಲ್ಲಿ ಆತನ ವಿಡಿಯೋಗಳನ್ನು ನೋಡಿದ್ದ ಕೆಲವರು ಕಮೆಂಟ್ ಗಳಲ್ಲಿ, ನೀನೇ ಹುಲಿಯ ವೇಷವನ್ನು ಧರಿಸಿ ಫ್ರಾಂಕ್ ವಿಡಿಯೋ ಏಕೆ ಮಾಡಬಾರದು? ಎಂದು ಕೂಡಾ ಸಲಹೆಯನ್ನು ನೀಡಿದ್ದರು. ಬಹುಶಃ ಅದನ್ನೇ ಸೀರಿಯಸ್ಸಾಗಿ ತೆಗೆದುಕೊಂಡ ಯೂಟ್ಯೂಬರ್ ಇದೀಗ ಹೊಸ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಆದರೆ ಈ ಬಾರಿಯ ವಿಡಿಯೋದಲ್ಲಿ ಅವರು ಫೇಕ್ ಟೈಗರ್ ಆಗಿ ಯಾವುದೇ ಬೊಂಬೆಯನ್ನು ಅಥವಾ ಇನ್ಯಾವುದೋ ನಾಯಿಗೆ ಹುಲಿಯ ಮುಖವಾಡವನ್ನು ಹಾಕಿಲ್ಲ ಬದಲಾಗಿ, ಒಬ್ಬ ಮನುಷ್ಯನೇ ಹುಲಿಯಂತೆ ವೇಷವನ್ನು ಧರಿಸಿ ನಾಯಿಗಳು ಮಲಗಿರುವ ಕಡೆ, ಕುಳಿತಿರುವ ಕಡೆ ಹೋಗಿದ್ದು, ಆಗ ನಾಯಿಗಳು ನೀಡಿದ ರಿಯಾಕ್ಷನ್ ವಿಡಿಯೋ ಮಾಡಿಕೊಂಡಿದ್ದು ಅದನ್ನು ಶೇರ್ ಮಾಡಿದ್ದಾರೆ.

ಈ ಬಾರಿ ಈ ಹೊಸ ಫೇಕ್ ಟೈಗರ್ ಫ್ರಾಂಕ್ ವಿಡಿಯೋ ಕೂಡ ಭರ್ಜರಿ ವೈರಲ್ ಆಗಿದೆ.‌ವಿಡಿಯೋ ಶೇರ್ ಆದ ಮೂರು ದಿನಗಳಲ್ಲೇ ಎಂಟು ಲಕ್ಷ ದಾಟಿದ ವೀಕ್ಷಣೆಗಳನ್ನು ಪಡೆದುಕೊಂಡಿದೆ ಈಗಾಗಲೇ ಸುಮಾರು ಒಂಬತ್ತು ಸಾವಿರ ಜನ ಈ ವಿಡಿಯೋಗೆ ತಮ್ಮ ಮೆಚ್ಚುಗೆಯನ್ನು ನೀಡಿದರೆ, ನೂರಾರು ಜನ ಫ್ರಾಂಕ್ ವಿಡಿಯೋ ನೋಡಿ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಬಂದ ಹುಲಿಯನ್ನು ನೋಡಿದ ನಾಯಿಗಳು ನೀಡುವ ರಿಯಾಕ್ಷನ್ ನಿಜಕ್ಕೂ ನೋಡುಗನನ್ನು ನಕ್ಕು ನಗಿಸುತ್ತಿದೆ. ಈ ಬಾರಿ ಕಾಮೆಂಟ್ ಮಾಡಿರುವವರು ಮನುಷ್ಯರ ಮೇಲೆ ಪ್ರಾಂಕ್ ಮಾಡುವುದು ಹಳೆಯ ವಿಚಾರ ಈಗ ಪ್ರಾಣಿಗಳ ಪ್ರಾಂಕ್ ಮಾಡುವುದು ಹೊಸ ವಿಚಾರ ಎಂದಿದ್ದಾರೆ.

ವಿಡಿಯೋ ನೋಡಿ

ಇನ್ನೊಬ್ಬರು ನಾಯಿಗಳ ರಿಯಾಕ್ಷನ್ ಅಮೇಜಿಂಗ್ ಎಂದಿದ್ದಾರೆ. ಮತ್ತೊಬ್ಬರು ನಮ್ಮ ಊರಿಗೆ ಬಂದು ಇಂತ ಪ್ರಾಂಕ್ ಮಾಡು, ಇಲ್ಲಿನ ನಾಯಿಗಳು ನಿನ್ನನ್ನು ಸಿ ಗಿ ದು ಹಾಕುತ್ತವೆ ಎಂದರೆ, ಮತ್ತೆ ಕೆಲವರು ಒಂದು ವೇಳೆ ನಿನ್ನ ಹಿಂದೆ ನಿಜವಾದ ಹುಲಿ ಬಂದರೆ ಏನು ಮಾಡುವೆ? ಎಂದು ಪ್ರಶ್ನೆ ಕೇಳಿದ್ದಾರೆ. ಒಬ್ಬರಂತೂ ನಿಮಗೆ ವೀಡಿಯೋ ಮಾಡಲು ಇಷ್ಟೊಂದು ನಿದ್ದೆ ಮಾಡುವ ನಾಯಿಗಳು ಎಲ್ಲಿ ಸಿಗುತ್ತವೆ ಎಂದಿದ್ದಾರೆ. ಒಂದಿಬ್ಬರು ಪ್ರಾಣಿಗಳನ್ನು ಗೌರವಿಸಿ, ಒಂದು ವೇಳೆ ನಿನಗೆ ಈ ತರದ ಪರಿಸ್ಥಿತಿ ಎದುರಾದರೆ ಹೇಗಿರುತ್ತದೆ ಎಂದು ಆಲೋಚನೆ ಮಾಡು ಎಂದು ಸಲಹೆಯನ್ನು ಕೂಡಾ ನೀಡಿದ್ದಾರೆ.