ಮಹಾ ನಾಯಕ ಅಮಿತಾಭ್ ಬಚ್ಚನ್ ಸೊಸೆ ಐಶ್ವರ್ಯ ರೈ ಅವರ ಪ್ರಾಪರ್ಟಿ ಎಷ್ಟು ಗೊತ್ತಾ? ‘ಇಷ್ಟು’ ಕೋಟಿ ರೂಪಾಯಿಗಳ ಒಡತಿ ಐಶ್ವರ್ಯ!

ಬಾಲಿವುಡ್ ನಲ್ಲಿ ಕೆಲಸ ಮಾಡುವವರ ಸಂಖ್ಯೆಯನೂ ಕಡಿಮೆ ಇಲ್ಲ. ಆದರೆ ಅಲ್ಲಿ ಎಲ್ಲರೂ ಶ್ರೀಮಂತರಿಲ್ಲ. ಯಾರ ಅದೃಷ್ಟ ಒಂದೇ ರಾತ್ರಿಯಲ್ಲಿ ಮಿನುಗುತ್ತದೆ ಮತ್ತು ಯಾರ ದುರದೃಷ್ಟ ಒಂದೇ ರಾತ್ರಿಯಲ್ಲಿ ಕಳಪೆಯಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ.

ಇಲ್ಲಿಯ ಅನೇಕ ದಿಗ್ಗಜರು ಕೋಟ್ಯಾವಧಿ ರೂಪಾಯಿಗಳ ಮಾಲೀಕರಾಗಿದ್ದಾರೆ. ಅನೇಕರು ಕೋಟ್ಯಾವಧಿ ರೂಪಾಯಿಗಳಿಂದ ಕೆಳಗೆಯು ಬಂದಿದ್ದಾರೆ. ಹಣದ ವಿಷಯದಲ್ಲಿ ಬರೀ ನಟರು ಮಾತ್ರ ಮುಂದಿಲ್ಲ, ನಟಿಯರು ಸಹಿತ ಸಿಕ್ಕಾಪಟ್ಟೆ ಹಣ ಗಳಿಸಿದ್ದಾರೆ.

ಈ ಲೇಖನದಲ್ಲಿ ನಾವು ಹೇಳುತ್ತಿರುವುದು ಅಮಿತಾಭ್ ಬಚ್ಚನ್ ಅವರ ಸೊಸೆಯಾದ ಐಶ್ವರ್ಯ ರೈ ಬಚ್ಚನ್ ಅವರ ಒಟ್ಟು ಆಸ್ತಿಯ ಬಗ್ಗೆ. ಬಾಲಿವುಡ್ ನ ಎಲ್ಲಕ್ಕೂ ಸುಂದರ ನಟಿಯರಲ್ಲಿ ಇವರ ಗಣನೆಯಾಗುತ್ತದೆ.

1994 ರಲ್ಲಿ ಐಶ್ವರ್ಯ ರಾಯ್ ಅವರು ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಮೊದಲ ಕ್ರಮಾಂಕದ ಗೆಲವು ದಾಖಲಿಸಿ ಮುಕುಟವನ್ನು ತಮ್ಮ ಹಣೆಗೇರಿಸಿಕೊಂಡಿದ್ದರು. ಅದಾದನಂತರ ಐಶ್ವರ್ಯ ಅವರು ಯಾವತ್ತೂ ಹಿಂದೆ ಹೊರಳಿ ನೋಡಿಲ್ಲ. ಮಿಸ್ ವರ್ಲ್ಡ್ ಸ್ಪರ್ಧೆ ಗೆದ್ದ ನಂತರ ಚಿತ್ರರಂಗದಲ್ಲಿ ಆಫರ್ ಗಳ ಮೇಲೆ ಆಫರ್ ಗಳು ಬಂದೇಬಿಟ್ಟವು. ಮೊದಲು ತೆಲುಗು ಚಿತ್ರರಂಗದಲ್ಲಿ ನಟಿಸಿ ಆಮೇಲೆ ಬಾಲಿವುಡ್ನಲ್ಲಿ ತಮ್ಮ ನೆಲೆಯನ್ನು ಊರಿದರು. ಐಶ್ವರ್ಯ ರೈ ಅವರಿಗೆ ಟಾಪ್ ನಟಿಯರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ. ತಮ್ಮಲ್ಲಿರುವ ಕಲಾ ಗುಣಗಳಿಂದ ಬಹುಬೇಗನೆ ಫಿಲಂ ಇಂಡಸ್ಟ್ರಿಯಲ್ಲಿ ಮತ್ತು ಪ್ರೇಕ್ಷಕರಲ್ಲಿ ಮನೆ ಮಾಡಿದರು.

ತಮ್ಮ ಚಿತ್ರಜಗತ್ತಿನ ಕೆರಿಯರ್ ನಲ್ಲಿ ಅನೇಕ ದೊಡ್ಡ ದೊಡ್ಡ ಸ್ಟಾರ್ ಗಳೊಂದಿಗೆ ತೆರೆಯನ್ನು ಹಂಚಿಕೊಂಡರು. ಅಷ್ಟೇ ಅಲ್ಲದೆ ಅನೇಕ ಚಿತ್ರಗಳಿಗಾಗಿ ಅವಾರ್ಡ್ಸ್ ಗಳನ್ನು ಪಡೆದರು.

ಐಶ್ವರ್ಯ ಅವರು 2007ರಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಮದುವೆಯಾದರು. ಮದುವೆಯಾದ ನಂತರ ಚಿತ್ರ ಜಗತ್ತಿನಿಂದ ಸ್ವಲ್ಪ ದೂರವೇ ಉಳಿದರು. ಆದರೂ ಅವರ ಗಳಿಕೆಯಲ್ಲಿ ಹೆಚ್ಚುಕಡಿಮೆ ಏನು ಆಗಿಲ್ಲ. ಇಷ್ಟಾದರೂ ವರ್ಷಕ್ಕೆ ಕೋಟ್ಯಾವಧಿ ರೂಪಾಯಿಗಳನ್ನು ಗಳಿಸುವ ಐಶ್ವರ್ಯ ಅವರ ಒಟ್ಟು ಸಂಪತ್ತು 258 ಕೋಟಿ ರೂಪಾಯಿಗಳಷ್ಟಿದೆ. ಈಗಲೂ ಐಶ್ವರ್ಯ ಅವರು ಒಂದು ಚಿತ್ರಕ್ಕಾಗಿ 9 ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ಇದರ ಜೊತೆಗೆ ಅನೇಕ ಬ್ರ್ಯಾಂಡ್ ಗಳ ಮುಖ್ಯಸ್ಥರಾಗಿದ್ದಾರೆ.

ಕೆಲವೇ ವರ್ಷಗಳ ಹಿಂದೆ ದುಬೈನಲ್ಲಿ ಒಂದು ಬಂಗಲೆಯನ್ನು ಖರೀದಿಸಿದ್ದಾರೆ. ಇದು ಐಶ್ವರ್ಯ ರೈ ಅವರ ಹೆಸರಿನಲ್ಲಿ ಇದೆ. ಈ ಬಂಗಲೆಯ ಬೆಲೆ ಸುಮಾರು 16 ಕೋಟಿ ರೂಪಾಯಿಗಳಷ್ಟಿದೆ. ಸದ್ಯ ಈ ಬಂಗಲೆಯ ಬೆಲೆ ಎರಡು ಪಟ್ಟಾಗಿದೆ. ಎಷ್ಟೋ ಸಲ ಅವರು ತಮ್ಮ ಕುಟುಂಬದ ಜೊತೆಗೆ ದುಬೈಗೆ ತಿರುಗಾಡಲು ಹೋಗುವುದುಂಟು.

ದುಬೈ ಹಾಗೆ ಮುಂಬೈಯಲ್ಲಿ ಒಂದು ದೊಡ್ಡದಾದ ಬಂಗಲೆಯನ್ನು ಹೊಂದಿದ್ದಾರೆ. ಇದು 5 BHK ಫ್ಲಾಟ್ ಇದೆ. ಈ ಮನೆಯ ಬೆಲೆ 23 ಕೋಟಿ ರೂಪಾಯಿಗಳು. ಈ ಮನೆಯು ಎಲ್ಲ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದೆ.

ಐಶ್ವರ್ಯ ರೈ ಅವರಿಗೆ ವಾಹನಗಳ ಹವ್ಯಾಸವಿದೆ. ಹೀಗಾಗಿ ಅವರ ಹತ್ತಿರವಿರುವ ನಾಲ್ಕು ವಾಹನಗಳ ಬೆಲೆ ಎರಡರಿಂದ ಮೂರು ಕೋಟಿ ರೂಪಾಯಿಗಳವರೆಗೆ ಇದೆ. ಇವುಗಳ ಹೊರತಾಗಿ ಅವರ ಗ್ಯಾರೇಜಿನಲ್ಲಿ ಅನೇಕ ದುಬಾರಿ ಬೆಲೆಯ ಕಾರುಗಳು ಇವೆ.

ಐಶ್ವರ್ಯ ಅವರು ತಮ್ಮ ಮದುವೆಯಲ್ಲಿ 75 ಲಕ್ಷ ರೂಪಾಯಿಗಳ ಸೀರೆಯನ್ನು ಖರೀದಿಸಿದ್ದರು. ಆ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅವರ ಸೀರೆಯ ಬಗ್ಗೆ ತುಂಬಾ ತುಂಬಾ ಚರ್ಚೆಯಾಗಿತ್ತು. ಅವರ ಬೆರಳಿನಲ್ಲಿ 50 ಲಕ್ಷ ರೂಪಾಯಿಗಳ ವಜ್ರದ ಉಂಗುರವಿದೆ. ಇದರ ಜೊತೆಗೆ ಅವರ ಕೊರಳಲ್ಲಿರುವ ಮಾಂಗಲ್ಯದ ಬೆಲೆ ಎರಡು ಕೋಟಿ ರೂಪಾಯಿಗಳಷ್ಟು ಇದೆ.

ಇಂದು ಐಶ್ವರ್ಯ ಅವರು ಚಲನಚಿತ್ರದಿಂದ ಸ್ವಲ್ಪ ದೂರವಿದ್ದರೂ ಅವರು ಮಾಡುವ ಅನೇಕ ಜಾಹೀರಾತುಗಳಿಂದ ವರ್ಷಕ್ಕೆ ಕೋಟ್ಯಾವಧಿ ರೂಪಾಯಿಗಳ ಗಳಿಕೆ ಇದೆ. ಆದ್ದರಿಂದಲೇ ಬಾಲಿವುಡ್ ನ ಶ್ರೀಮಂತರ ಪಟ್ಟಿಯಲ್ಲಿ ಐಶ್ವರ್ಯ ರೈ ಅವರ ಹೆಸರು ಮಿನುಗುತ್ತಿರುತ್ತದೆ.