ರಕ್ತದಲ್ಲಿಯ ಹಿಮೋಗ್ಲೋಬಿನ್ ಪ್ರಮಾಣವನ್ನು ವೃದ್ಧಿಯಾಗಬೇಕೆಂದರೆ ಈ ’10’ ಪದಾರ್ಥಗಳು ತಿನ್ನಿ!
ಯೋಗ್ಯ ಸಮತೋಲಿತ ಆಹಾರವು ಮನುಷ್ಯನನ್ನು ಅನೇಕ ರೋಗಗಳಿಂದ ದೂರವಿಡುತ್ತದೆ. ಅದೇ ಆಹಾರವನ್ನು ಬೇಕಾಬಿಟ್ಟಿಯಾಗಿ ಅಸಮತೋಲನದಿಂದ ಸೇವಿಸಿದರೆ ಇಲ್ಲದ ರೋಗಗಳನ್ನು ದೇಹದಲ್ಲಿ ಹುಟ್ಟು ಹಾಕುವದು.
ಆರೋಗ್ಯಕರ ದೇಹವನ್ನು ಪಡೆಯಬೇಕಾದರೆ ನಿಯಮಿತ ವ್ಯಾಯಾಮದ ಜೊತೆಗೆ ಸಮತೋಲಿತ ಆಹಾರವು ಮಹತ್ವದ ಪಾತ್ರ ವಹಿಸುತ್ತದೆ. ಇಷ್ಟಾದರೂ ಕೆಲವರಿಗೆ ರಕ್ತಹೀನತೆಯ ಸಮಸ್ಯೆ ಕಾಡುತ್ತಿರುತ್ತದೆ. ರಕದಲ್ಲಿಯ ಹಿಮೋಗ್ಲೋಬಿನ್ ಪ್ರಮಾಣವು ಸರಿಯಾಗಿ ಇರಬೇಕಾದರೆ, ನಾವು ಸೇವಿಸುವ ಆಹಾರವು ಈ ರೀತಿಯಾಗಿರಬೇಕು.
ಹಿಮೋಗ್ಲೋಬಿನ್ ರಕ್ತದಲ್ಲಿಯ ಮಹತ್ವದ ಘಟಕವಾಗಿದೆ. ನಮ್ಮ ರಕ್ತದಲ್ಲಿ 12 ರಿಂದ 14.5 ರಷ್ಟು ಹಿಮೋಗ್ಲೋಬಿನ್ ಪ್ರಮಾಣ ಇರುವದು ಆವಶ್ಯಕ. ಅನೇಕರಲ್ಲಿ ಈ ಪ್ರಮಾಣಕ್ಕಿಂತಲೂ ಕಡಿಮೆ ಹಿಮೋಗ್ಲೋಬಿನ್ ಇರುವದರಿಂದ ಎನೀಮಿಯಾಗೆ ಬಲಿಯಾಗುತ್ತಾರೆ.
ಈ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ರೋಗಿಗೆ ಡಾಕ್ಟರ್ ಕೆಲವು ಟ್ಯಾಬಲೆಟ್ಸ್, ಟಾನಿಕ್ ಗಳನ್ನು ಕೊಡುತ್ತಾರೆ. ಆದರೆ ಇದು ತಾತ್ಪೂರ್ತಿಕ ಸಹಾಯವಾಗುವದು.
ಆದರೆ ಇಲ್ಲಿ ಉಲ್ಲೇಖಿಸಿದ ಆಹಾರ ಘಟಕಗಳ ಸೇವನೆಯಿಂದ ರೋಗಿಯ ದೇಹದಲ್ಲಿಯ ಹಿಮೋಗ್ಲೋಬಿನ್ ನೈಸರ್ಗಿಕವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.

- ಬೆಲ್ಲ: ಯುರ್ವೇದದಲ್ಲಿ ಬೆಲ್ಲಕ್ಕೆ ಔಷಧೀಯ ಶರ್ಕರಾ ಎಂದು ಸಂಬೋಧಿಸಲಾಗುತ್ತದೆ. ಇದು ಲೋಹ ವರ್ಧಕವಾಗಿದ್ದು ಉತ್ತಮವಾದ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಆಹಾರದಲ್ಲಿ ಇದು ಹಿಂದಿನಿಂದಲೂ ಮಹತ್ವ ಪಡೆದುಕೊಂಡಿದೆ. ಆದ್ದರಿಂದಲೇ ಇದು ಅಡುಗೆ ಮನೆಯಲ್ಲಿ ಸಹಜವಾಗಿ ದೊರೆಯುವ ಆಹಾರ ಪದಾರ್ಥವಾಗಿದೆ. ನಿಯಮಿತವಾಗಿ ಯೋಗ್ಯ ಪ್ರಮಾಣದಲ್ಲಿ ಇದರ ಸೇವನೆಯನ್ನು ಮಾಡಿದರೆ ದೇಹದಲ್ಲಿ ಹಿಮೋಗ್ಲೋಬಿನ್ ಜೊತೆಗೆ ರಕ್ತದ ಪ್ರಮಾಣವು ಸಹ ಹೆಚ್ಚಿಸಲು ಸಹಾಯವಾಗುತ್ತದೆ. ಆದ್ದರಿಂದ ಪ್ರತಿದಿನ ಊಟದಲ್ಲಿ ಸಕ್ಕರೆಯ ಬದಲಾಗಿ ಬೆಲ್ಲವನ್ನು ಉಪಯೋಗಿಸುವುದು ಒಳ್ಳೆಯದು.
2 ಖರ್ಜೂರ:-

ಕಪ್ಪು ಮತ್ತು ಕೆಂಪು ಹೀಗೆ ಎರಡು ಬಣ್ಣಗಳಲ್ಲಿ ಖರ್ಜೂರವು ಮಾರ್ಕೆಟ್ ನಲ್ಲಿ ದೊರೆಯುವುದು. ಇದು ದೇಹದಲ್ಲಿ ಕಬ್ಬಿಣಾಂಶದ ಜೊತೆಗೆ ವಿಟಮಿನ್ ಸಿ ಮತ್ತು ಬಿ ಎರಡನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಖರ್ಜೂರದ ಸೇವನೆಯಿಂದ ಕೆಂಪು ರಕ್ತಕಣಗಳು ಹೆಚ್ಚಾಗುವವು. ಅದರಿಂದ ಹಿಮೋಗ್ಲೋಬಿನ್ ಸಹ ಹೆಚ್ಚಾಗುವುದು. ಬರೀ ಖರ್ಜೂರವು ಕೆಲವರಿಗೆ ತಿನ್ನಲು ಹಿಡಿಸದಿದ್ದರೆ ಅದರಿಂದ ತಯಾರಾದ ಲಡ್ಡು, ಬರ್ಫಿ ಹೀಗೆ ಏನನ್ನು ಸೇವಿಸಬಹುದು.
3 ಪಾಲಕ್:-

ಹಿಮೋಗ್ಲೋಬಿನ್ ಕಡಿಮೆ ಇದ್ದವರ ಆಹಾರದಲ್ಲಿ ಪಾಲಕ್ ಸೊಪ್ಪು ಇರಲೇಬೇಕು. ಪಾಲಕ್ ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಲು ಸಹಾಯ ಮಾಡುತ್ತದೆ. ಇದರಿಂದ ಪಲ್ಲೆ, ಸೂಪ್, ಸಾರು, ಭಜಿ, ಸಲಾಡ್ ಹೀಗೆ ವಿವಿಧ ರೀತಿಯಲ್ಲಿ ಪದಾರ್ಥಗಳನ್ನು ತಯಾರಿಸಿ ಸೇವಿಸಬಹುದು.
4.ಕಿತ್ತಳೆ:-

ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 ಇವೆರಡು ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ದಿನಂಪ್ರತಿ ಎರಡು ಗ್ಲಾಸ್ ಕಿತ್ತಳೆಹಣ್ಣಿನ ರಸವನ್ನು ಸೇವಿಸುವುದರಿಂದ ಲಾಭ ಬೇಗ ಕಂಡುಬರುವುದು. ಇದರಲ್ಲಿ ಸಕ್ಕರೆ ಮಿಶ್ರಣ ಮಾಡಬೇಡಿ.
5 ಹಾಲು ಮತ್ತು ಹಾಲಿನಿಂದ ತಯಾರಾದ ಪದಾರ್ಥಗಳು:-

ಆಹಾರದಲ್ಲಿ ಹಾಲಿನ ಉಪಯೋಗವನ್ನು ಮಾಡುವುದು ದೇಹಕ್ಕೆ ಒಳ್ಳೆಯದು. ಹಾಲಿನಲ್ಲಿ ಶರೀರಕ್ಕೆ ಬೇಕಾಗುವ ಅನೇಕ ಪೂರಕ ಮಿನರಲ್ಸ್ ಮತ್ತು ವಿಟಮಿನ್ಸ್ ಗಳು ಹೇರಳವಾಗಿರುತ್ತವೆ. ಆದ್ದರಿಂದಲೇ ಹಾಲಿಗೆ ಪೂರ್ಣಾನ್ನ ವೆಂದು ಕರೆಯುತ್ತಾರೆ. ಆದ್ದರಿಂದ ಹಾಲು ಮತ್ತು ಹಾಲಿನಿಂದ ತಯಾರಾದ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುವುದು.
6 ದಾಳಿಂಬೆ ಹಣ್ಣು:-

ದೈಹಿಕ ಆರೋಗ್ಯದ ಜೊತೆಗೆ ಸೌಂದರ್ಯದ ದೃಷ್ಠಿಯಿಂದಲೂ ದಾಳಿಂಬೆ ಹಣ್ಣು ಆಹಾರದಲ್ಲಿ ಹೆಚ್ಚಾಗಿ ಉಪಯೋಗ ಮಾಡಲಾಗುತ್ತದೆ. ದಾಳಿಂಬೆಯಲ್ಲಿ ಐರನ್ ಹೇರಳವಾಗಿದೆ. ಇದರಲ್ಲಿರುವ ವಿಟಮಿನ್ ಸಿ ರಕ್ತದಲ್ಲಿಯ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ವಾರದಲ್ಲಿ ಮೂರರಿಂದ ನಾಲ್ಕು ಬಾರಿ ದಾಳಿಂಬೆ ಹಣ್ಣಿನ ರಸವನ್ನು ಸೇವಿಸುವುದರಿಂದ ಹಿಮೋಗ್ಲೋಬಿನ್ ಪ್ರಮಾಣವು ಬೇಗ ಹೆಚ್ಚುವುದು.
7 ಬೀನ್ಸ್:-

ಬೀನ್ಸ್ ನಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಐರನ್, ಸ್ವಲ್ಪರ್, ಫಾಸ್ಫರಸ್, ವಿಟಮಿನ್-ಎ ಇವೆಲ್ಲವುಗಳ ಮಿಶ್ರಣ ಹೇರಳವಾಗಿದ್ದು ಪೋಷಕತ್ವದ ದೃಷ್ಟಿಯಿಂದ ಒಳ್ಳೆಯ ಪಲ್ಯೆ ಆಗಿದೆ. ಇದರಲ್ಲಿರುವ ಫೋಲಿಕ್ ಆಸಿಡ್ ನಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವು ಯೋಗ್ಯ ರೀತಿಯಲ್ಲಿ ಇರಲು ಸಹಾಯ ವಾಗುತ್ತದೆ. ವಾರದಲ್ಲಿ ಸುಮಾರು ಎರಡು ಸಲವಾದರೂ ಇದರ ಪಲ್ಯೆಯ ಸೇವನೆ ಮಾಡುವದು ಉತ್ತಮ.
8 ಮಾಂಸಾಹಾರ:-

ಸಸ್ಯಾಹಾರದ ಹಾಗೆ ಮಾಂಸಾಹಾರವೂ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಚಿಕನ್, ಮಟನ್, ಮೊಟ್ಟೆ ಮತ್ತು ಮೀನು ಇವುಗಳಲ್ಲಿರುವ ಬಿ12 ಮತ್ತು ವಿಟಮಿನ್ ಬಿ 6 ರಕ್ತದಲ್ಲಿಯ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯಮಾಡುತ್ತವೆ. ಆದರೆ ಮಾಂಸಾಹಾರವು ಸೇವಿಸುವ ಮೊದಲು ಅದನ್ನು ಯೋಗ್ಯವಾಗಿ ಬೇಯಿಸಿ ಯೋಗ್ಯ ಪ್ರಮಾಣದಲ್ಲಿ ತಿನ್ನಬೇಕು.
9 ಪಿಸ್ತಾ:–

ಒಣ ಫಲಗಳಲ್ಲಿ ವಿಟಮಿನ್ ಬಿ 6 ಪ್ರಮಾಣವು ಅಧಿಕವಾಗಿರುತ್ತದೆ. ಅದರಲ್ಲಿಯೇ ಪಿಸ್ತಾ ಇದು ವಿಶೇಷವಾಗಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ನೀಡುವುದು. ಆದ್ದರಿಂದ ಲಡ್ಡು, ಚೌಚೌ ಬಾತ್, ಹಲ್ವಾ, ಪಾಯಸ ಮುಂತಾದವುಗಳಲ್ಲಿ ಪಿಸ್ತಾ ಉಪಯೋಗ ಮಾಡಬಹುದು. ಇದರಲ್ಲಿರುವ ವಿಟಮಿನ್ ಬಿ 6 ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಸರಿಯಾದ ಪ್ರಮಾಣದಲ್ಲಿ ಇಡುವುದು.
10 ಗರಂ ಮಸಾಲ:-

ಭಾರತೀಯ ಪಾಕಶಾಸ್ತ್ರದಲ್ಲಿ ಮಸಾಲೆಗಳ ಉಪಯೋಗ ತುಂಬಾ ಮಹತ್ವದ್ದಾಗಿದೆ. ಮಸಾಲೆ ಪದಾರ್ಥಗಳಲ್ಲಿ ಗಣನೆ ಯಾಗುವ ಬೆ ಲೀಫ್, ಕೊತ್ತಂಬರಿ, ಪುದಿನ, ತುಳಸಿ ಎಲೆ ಇವುಗಳ ಉಪಯೋಗ ಯೋಗ್ಯ ಪ್ರಮಾಣದಲ್ಲಿ ಮಾಡಬೇಕು. ಈ ಮಸಾಲೆ ಪದಾರ್ಥಗಳು ಆಹಾರದಲ್ಲಿಯ ಲೋಹವನ್ನು ಯೋಗ್ಯ ಪ್ರಮಾಣದಲ್ಲಿ ಗ್ರಹಣ ಮಾಡುತ್ತವೆ. ಇದರಿಂದ ರಕ್ತದಲ್ಲಿಯ ಹಿಮೋಗ್ಲೋಬಿನ್ ಪ್ರಮಾಣವು ಸಂತುಲಿತವಾಗಿರಲು ಸಹಾಯವಾಗುತ್ತದೆ.