ರಿಷಿ ಕಪೂರ್ ಮಗಳು ರಿಧಿಮಾ, ತಂದೆಗಾಗಿ ಮಾಡಿರುವ ಭಾವನಾತ್ಮಕ ಪೋಸ್ಟ್ ….
ಬಾಲಿವುಡ್ ನ ಚಾಕಲೇಟ್ ಹೀರೊ ಎಂದೇ ಪ್ರಸಿದ್ಧಿ ಪಡೆದಿರುವ ರಿಷಿ ಕಪೂರ್ ಅವರು ನಿನ್ನೆ ಮುಂಬೈನ ಹೆಚ್ ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಕೊನೆಯ ಉಸಿರು ತಗೆದುಕೊಂಡಿದ್ದಾರೆ. ಬಾಲಿವುಡ್ ನಟ ಇರಫಾನ್ಖಾನ್ ನಂತರ ಇವರ ನಿಧನ ವಾದುದರಿಂದ ಬಾಲಿವುಡ್ ಗೆ ದೊಡ್ಡ ಆಘಾತ ವಾಗಿದೆ.
ರಿಷಿ ಕಪೂರ್ ಅವರಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳು ಇದ್ದಾಳೆ. ಇವರ ಮಗ ರಣಬೀರ್ ಕಪೂರ್ ಹಾಗೂ ಮಗಳು ರಿಧಿಮಾ ಅವರ ತುಂಬಾ ಮುದ್ದಿನ ಮಗಳಾಗಿದ್ದಳು. ಅಲ್ಲದೆ ಅವಳ ಕುರಿತು ರಿಷಿ ಕಪೂರ್ ಅವರು ಹಲವಾರು ಸಂದರ್ಶನ ದಲ್ಲಿ ತಿಳಿಸಿದ್ದಾರೆ.

ಮೊನ್ನೆ ರಾತ್ರಿ ಆಕಸ್ಮಿಕವಾಗಿ ರಿಷಿ ಕಪೂರ್ ಅವರ ಆರೋಗ್ಯ ಹದಗೆಟ್ಟ ಕಾರಣದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ಅವರ ಜೊತೆಗೆ ಅವರ ಪತ್ನಿ ನೀತು ಸಿಂಗ್ ಮತ್ತು ಮಗ ರಣಬೀರ್ ಕಪೂರ್ ಉಪಸ್ಥಿತರಿದ್ದರು. ಆದರೆ ಅವರ ಮುದ್ದಿನ ಮಗಳು ರಿಧಿಮಾ ಆ ಸಮಯದಲ್ಲಿ ದಿಲ್ಲಿಯಲ್ಲಿ ಇದ್ದರು. ಆದ್ದರಿಂದ ಅವರು ಬರಲು ಸಾಧ್ಯವಾಗಿಲ್ಲ. ನಿನ್ನೆ ನಡೆದ ಅವರ ಕೊನೆಯ ಅಂತ್ಯಕ್ರಿಯೆಗೂ ಸಹ ಅವರು ಉಪಸ್ಥಿತ ರಾಗಲು ಸಾಧ್ಯವಾಗಿಲ್ಲ. ಏಕೆಂದರೆ ಲಾಕ್ಡೌನ್ ನಿಂದಾಗಿ ವಿಮಾನ ಹಾಗೂ ರೈಲ್ವೆ ಸೇವೆಗಳು ಬಂದಾಗಿವೆ ಆದುದರಿಂದ ಅವರು ಬರಲು ಆಗಲಿಲ್ಲ. ಆದರೆ ನಿನ್ನೆ ಸರಕಾರ ಅವರನ್ನು ಮುಂಬೈ ಗೆ ಬರಲು ಅನುಮತಿ ನೀಡಿದೆ. ಅಂದರೆ ದಿಲ್ಲಿಯಿಂದ ಮುಂಬೈಗೆ 1400 ಕಿ ಮಿ ಬರಲು ಸುಮಾರು 13 ಗಂಟೆಗಳ ಪ್ರವಾಸ ಮಾಡಬೇಕಾಗುವದು.
ರಿಧಿಮಾ ತನ್ನ ಮುದ್ದಿನ ತಂದೆಯ ನಿಧನದ ನಂತರ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ ಮಾಡಿದ್ದಾರೆ ಅವರ ನೆನಪಿನ ಅಲೆಯಲ್ಲಿ ಒಂದು ಫೋಟೋ ದ ಜೊತೆಗೆ ಭಾವನಿಕ ಪೋಸ್ಟ್ ಶೇರ್ ಮಾಡಿದ್ದಾರೆ. ಆ ಪೋಸ್ಟನಲ್ಲಿ ಬರೆದಿದ್ದು ಏನೆಂದರೆ, ‘ ಪಾಪಾ ಐ ಲವ್ ಯು……ನಾನು ಸದಾ ನಿಮ್ಮನ್ನು ಪ್ರೀತಿಸುವೆ……ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ……ನೀವು ನನಗೆ ಒಬ್ಬ ಯೋಧನ ಹಾಗೆ ಇದ್ದಿದಿರಿ…..ನಾನು ದಿನಾಲು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುವೆ…..ನಿಮ್ಮ ದೈನಂದಿನ ಫೇಸ್ ಟೈಮದ್ ಕಾಲ್ ಮಿಸ್ ಮಾಡಿಕೊಳ್ಳುವೆ……..ನಿಮಗೆ ನಾನು ಮತ್ತೆ ಎಲ್ಲಿಯವರೆಗೆ ಭೇಟಿಯಾಗುವದಿಲ್ಲವೋ ಅಲ್ಲಿಯವರೆಗೆ ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುವೆ…ಪಾಪಾ ಐ ಲವ್ ಯು…..
ಈ ರೀತಿಯಲ್ಲಿ ರಿಧಿಮಾ ಅವರು ತಮ್ಮ ತಂದೆಯ ನಿಧನದ ನಂತರ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.