ವಿಶಾಲಬಾದ ಬ್ಲಾಕ್ ಹೋಲ್ ಗೆ ಹತ್ತಿರವಾಗುತ್ತಿದೆ ಭೂಮಿ: ಇಡೀ ವಿಶ್ವ ಸರ್ವನಾಶ ಆಗಲಿದೆಯೇ?

ಭೂಮಿ ಹಾಗೂ ಬ್ಲಾಕ್ ಹೋಲ್ ವಿಚಾರವಾಗಿ ಹೊಸದೊಂದು ಸುದ್ದಿ ಈಗ ಹೊರಬಂದಿದೆ. ಬ್ಲಾಕ್ ಹೋಲ್ ಅನೇಕ ವರ್ಷಗಳಿಂದಲೂ ಕೂಡಾ‌ ಅನೇಕರ ಪಾಲಿಗೆ ಒಂದು ಆಸಕ್ತಿಯ ಹಾಗೂ ರೋಚಕತೆಯ ವಿಷಯವಾಗಿರುವುದು ಕೂಡಾ ನಿಜ. ಈಗ ನಡೆಸಲಾಗಿರುವ ಸಂಶೋಧನೆಗಳ ಪ್ರಕಾರ, ವಿಜ್ಞಾನಿಗಳು ಹೇಳುವಂತೆ ಭೂಮಿ ಮತ್ತು ಬ್ಲಾಕ್ ಹೋಲ್ ನಡುವಿನ ದೂರದ ಬಗ್ಗೆ ಮೊದಲು ವಿವರಿಸಿದ್ದ ಸಿದ್ಧಾಂತಕ್ಕೂ ಈಗ ಹೊರಬಂದಿರುವ ಮಾಹಿತಿಗಳಿಗೂ ಬಹಳಷ್ಟು ವ್ಯತ್ಯಾಸವಿದೆ ಎನ್ನಲಾಗಿದೆ. ಜಪಾನಿನ ರೇಡಿಯೋ ಖಗೋಳ ವಿಜ್ಞಾನ ಯೋಜನೆಯಾದ ವೆರಾ ಒಂದು ನಕ್ಷೆಯನ್ನು ಸಿದ್ಧಪಡಿಸಿದ್ದು, ಈ ನಕ್ಷೆಯ ಪ್ರಕಾರ ಕ್ಷೀರಪಥ ಗೆಲಾಕ್ಸಿ ಅಥವಾ ನಕ್ಷತ್ರಪುಂಜದ ಮಧ್ಯಭಾಗದಲ್ಲಿರುವ ವಿಶಾಲವಾದ ಬ್ಲಾಕ್ ಹೋಲ್ ಗೆ ಭೂಮಿ ಮೊದಲಿಗಿಂತಲೂ ಹತ್ತಿರವಾಗಿದೆ ಎನ್ನಲಾಗುತ್ತಿದೆ‌.

ಸಂಶೋಧನೆಯಲ್ಲಿ ಮತ್ತೊಂದು ಮಹತ್ವದ ವಿಚಾರ ಕೂಡ ತಿಳಿದು ಬಂದಿದ್ದು ನಮ್ಮ ಸೌರಮಂಡಲ ಧನು ರಾಶಿ ಎ ಹೆಸರಿನ ಈ ಬ್ಲಾಕ್ ಹೋಲ್ ಸುತ್ತಲೂ ಬಹಳ ವೇಗವಾಗಿ ಗೊತ್ತಿದೆ ಎನ್ನಲಾಗಿದೆ. ಸೌರಮಂಡಲ ಪರಿಕ್ರಮ ಹಾಕುತ್ತಿರುವ ವೇಗ ಪ್ರತಿ ಸೆಕೆಂಡಿಗೆ ಏಳ ಕಿಲೋಮೀಟರ್ಗಳು ಎನ್ನಲಾಗಿದೆ. ವಿಎಲ್ಬಿಐ ಎಕ್ಸ್‌ಪ್ಲೋರೇಶನ್ ಆಫ್ ರೇಡಿಯೊ ಆಸ್ಟ್ರೋಮೆಟ್ರಿ ಸಿದ್ಧಪಡಿಸಿರುವ ಮಾಹಿತಿಯ ಪ್ರಕಾರ ಸೂಪರ್ ಮ್ಯಾಸಿವ್ ಬ್ಲಾಕ್ ಹೋಲ್ ಭೂಮಿಯಿಂದ 25, 800 ಜ್ಯೋತಿರ್ವರ್ಷಗಳ ದೂರದಲ್ಲಿ ಇದೆ ಎನ್ನಲಾಗಿದೆ. ಆದರೆ 1985 ರಲ್ಲಿನ ಅಂತರರಾಷ್ಟ್ರೀಯ ಖಗೋಳ ಶಾಸ್ತ್ರಜ್ಞರ ಒಕ್ಕೂಟದ ಪ್ರಕಾರ ಅಂದಿನ ವರದಿಯಲ್ಲಿ ಈ ದೂರವನ್ನು 27,700 ಜ್ಯೋತಿರ್ವರ್ಷಗಳು ಎಂದು ತಿಳಿಸಲಾಗಿದೆ.

ಮತ್ತೊಂದು ಅಧಿಕೃತವಾದ ಹೇಳಿಕೆಯಲ್ಲಿ ಜಪಾನಿನ ರಾಷ್ಟ್ರೀಯ ಖಗೋಳ ವೀಕ್ಷಣಾಲಯವು, ಬಾಹ್ಯಾಕಾಶ ಸಂಶೋಧಕರು ವೆರಿ ಲಾಂಗ್ ಬೇಸ್ ಲೈನ್ ಇಂಟರ್ ಫೆರೋಮೆಟ್ರಿಯನ್ನು ಬಳಸಿಕೊಂಡು 2000 ರಲ್ಲಿ ಕ್ಷೀರ ಪಥದಲ್ಲಿ ಮೂರು ಆಯಾಮಗಳ ವೇಗ ಮತ್ತು ಪ್ರಾದೇಶಿಕ ರಚನೆಗಳನ್ನು ಅಳೆಯುವ ಸಲುವಾಗಿ ಯೋಜನೆಯೊಂದನ್ನು ಆರಂಭಿಸಿದ್ದರು ಎಂದು ತಿಳಿಸಿದೆ. ನಾಸಾದ ಜೆಟ್ ಪ್ರೊಪಲ್ಶ‌ನ್ ಲ್ಯಾಬೋರೇಟರಿ ಯ ಪ್ರಕಾರ ಸ್ಪೇಸ್ ಜಿಯೋಡಿಕ್ ತಂತ್ರಜ್ಞಾನವು ಸೆಲೆಸ್ಟಿಯಲ್ ರೇಡಿಯೋ ತರಂಗಗಳ ಮೂಲಕ ಅಂತರಿಕ್ಷದ ಸಿಗ್ನಲ್ ಗಳನ್ನು ಸಂಗ್ರಹ ಮಾಡುತ್ತದೆ. ಜಪಾನಿನ ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳು ಒಟ್ಟಾಗಿ ಭೂಮಿಯ ಮೂರು ಆಯಾಮಗಳ ವೇಗ ಹಾಗೂ ಪ್ರಾದೇಶಿಕ ಸಂರಚನೆಗಳ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.

VERA ದ ಎಸ್ಟ್ರೋ ಮೆಟ್ರಿ ಕ್ಯಾಟಲಾಗ್ ನಲ್ಲಿ ಈ ನಕ್ಷೆಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ 99 ಇತರೆ ಖಗೋಳ ವಸ್ತುಗಳ ಮಾಹಿತಿ ಕೂಡಾ ಇದೆ ಎನ್ನಲಾಗಿದೆ‌. ಈ ವಿಶಾಲ ಕಾಯ ಬ್ಲಾಕ್ ಹೋಲನ್ನು ಧನು ರಾಶಿ ಎ ಎಂದು ಹೆಸರಿಸಲಾಗಿದ್ದು, ಇದರ ಆಕಾರ ಸೂರ್ಯನಿಗಿಂತ 4.2 ಮಿಲಿಯನ ಪಟ್ಟು ಅಧಿಕವಾಗಿದೆ ಎನ್ನಲಾಗಿದೆ. ಇದನ್ನು ಮೊಟ್ಟಮೊದಲ ಬಾರಿಗೆ ರೆಸಾರ್ಡ್ ಜೆನೆಝ್ ಮತ್ತು ಆಂಡ್ರಿಯಾ ಘೆಝ್ ಎಂಬ ಹೆಸರಿನ ವಿಜ್ಞಾನಿಗಳು ನಾಸಾದ ಚಂದ್ರ x-ray observatory ಬಳಸಿ ನೋಡಿದ್ದರು ಎನ್ನಲಾಗಿದೆ. ವೆರಾ ದೈತ್ಯಾಕಾರದ ಬ್ಲಾಕ್ ಹೋಲ್ ಸುತ್ತಲಿನ ವಸ್ತುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯುವ ಗುರಿಯನ್ನು ಹೊಂದಿದೆ.

ವಿಜ್ಞಾನಿಗಳ ಪ್ರಕಾರ ನಮ್ಮ ಸೌರ ಮಂಡಲವು ಈ ಬ್ಲಾಕ್ ಹೋಲ್ ಕಡೆಗೆ ಹೋಗುತ್ತಿಲ್ಲ ಎನ್ನಲಾಗಿದ್ದು ಆದ ಕಾರಣ ಭೂಮಿಗೆ ಹೆಚ್ಚೇನು ತೊಂದರೆಯಾಗುವ ಸಾಧ್ಯತೆಗಳು ಇಲ್ಲ ಎನ್ನುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಮೂರು ಆಯಾಮಗಳ ವೇಗದ ಆಧಾರದಲ್ಲಿ ಮಿಲ್ಕಿ ವೇ ಅಥವಾ ಕ್ಷೀರಪಥದ ಸ್ಪಷ್ಟವಾದ ನಕ್ಷೆಯನ್ನು ಸಿದ್ಧಪಡಿಸುವುದು ಬಹಳ ಕಷ್ಟವಾದ ಕೆಲಸವಾಗಿತ್ತು ಎಂದಿರುವ ಅವರು, ಬಾಹ್ಯಾಕಾಶದಲ್ಲಿನ ಎರಡು ಆಯಾಮಗಳ ವೇಗದ ಆಧಾರದಲ್ಲಿ ನಕ್ಷತ್ರಗಳು ಹಾಗೂ ಅನ್ಯ ಆಕಾಶ ಕಾಯಗಳ ನಕ್ಷೆಯನ್ನು ಸಿದ್ಧಪಡಿಸುವುದು ಸುಲಭ ಆದರೆ ಅವುಗಳ ನಡುವಿನ ದೂರವನ್ನು ಅಳೆಯುವುದು ಕಷ್ಟ ಎಂದಿದ್ದಾರೆ.