Video: ಹೃದಯಸ್ತಂಭಿಸುವಂತಹ ದೃಶ್ಯ: ಹುಳು ಎಂದು ಹಕ್ಕಿ ಹಿಡಿಯಲು ಬಂತು, ಆದರೆ ಅಲ್ಲಿ ಇದ್ದದ್ದು ಮಾತ್ರ ಭ*ಯಾನಕ ಜೀವಿ!

ಜೀವ ಜಗತ್ತನ್ನು ನಾವು ತಿಳಿಯುತ್ತಾ ಹೋದಷ್ಟು ಕೂಡ ಅದರ ಆಳ ಅಗಲಗಳು ಕೂಡ ಅಷ್ಟೇ ವಿಸ್ತಾರವಾಗುತ್ತಾ ಹೋಗುತ್ತದೆ. ಜೀವ ವೈವಿದ್ಯಗಳ ಬಗ್ಗೆ ನಾವು ಊಹಿಸಲೂ ಆಗದಂತಹ ಅನೇಕ ವಿಷಯಗಳು ನಮ್ಮ ಕಣ್ಮುಂದೆ ಒಂದರ ನಂತರ ಮತ್ತೊಂದು ಎನ್ನುವ ಹಾಗೆ ಅನಾವರಣಗೊಳ್ಳುತ್ತಾ ಸಾಗುತ್ತದೆ. ಈ ವಿಶ್ವದಲ್ಲಿ ಪ್ರತಿಯೊಂದು ಜೀವಿಯೂ ಕೂಡ ವಿಶಿಷ್ಟವಾಗಿದೆ ಹಾಗೂ ಅವು ವಾಸಿಸುವ ಸ್ಥಳಗಳಿಗೆ ಅನುಗುಣವಾಗಿ ಅವುಗಳ ರಚನೆ ಕೂಡ ಆಗಿದೆ. ಆದರೆ ಕೆಲವು ಜೀವಿಗಳ ರಚನೆಯಂತೂ ವಿಸ್ಮಯವನ್ನು ಹುಟ್ಟಿಸುತ್ತದೆ ಹಾಗೂ ಈ ಜೀವಿಗಳ ಜೀವನ ವಿಧಾನವನ್ನು ನೋಡಿದಾಗ ಅದ್ಭುತ ಎನಿಸುತ್ತದೆ ಆದರೆ ಇಂತಹ ವಿಸ್ಮಯಗಳನ್ನು ಪ್ರಸ್ತುತ ನಾವು ವೈಲ್ಡ್ ಲೈಫ್ ವಿಡಿಯೋಗಳ ಸಹಾಯದಿಂದ ನೋಡಬಹುದಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಇಂತಹ ರೋಚಕ ಹಾಗೂ ವಿಸ್ಮಯ ಮಾತ್ರವಲ್ಲದೆ ಅದ್ಭುತ ಎನಿಸುವಂತಹ ವಿಡಿಯೋಗಳು ದಿನ-ಪ್ರತಿದಿನ ವೈರಲ್ ಆಗುತ್ತಲೇ ಇರುತ್ತವೆ. ಈ ವಿಡಿಯೋಗಳನ್ನು ನೋಡಿದಾಗ ಒಂದು ಕ್ಷಣ ನಮ್ಮ ಕಣ್ಣನ್ನು ನಾವೇ ನಂಬಲು ಕೂಡ ಸಾಧ್ಯವಾಗುವುದಿಲ್ಲ. ಏನಿದು ಆಶ್ಚರ್ಯ!! ಎಂತಹ ಅದ್ಭುತ ಜಗತ್ತು ! ಎಂದು ನಾವು ಅಂದುಕೊಳ್ಳುವುದು ಕೂಡ ಸಹಜ. ಇಂತಹುದೇ ರೋಚಕ ಎನಿಸುವ ವಿಡಿಯೋಗಳಲ್ಲಿ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡಿದೆ. ಈ ವಿಡಿಯೋ ನೋಡಿದಾಗ ನಿಜಕ್ಕೂ ಅನಿರೀಕ್ಷಿತ ಹಾಗೂ ದಿ ಗ್ಭ್ರ ಮೆ ಹುಟ್ಟಿಸುವ ಸನ್ನಿವೇಶವೊಂದು ನಮ್ಮ ಕಣ್ಮುಂದೆ ಬರುತ್ತದೆ.

ಅಕ್ಷರಶಃ ಈ ವಿಡಿಯೋ ನೋಡಿದಾಗ ಒಂದು ಕ್ಷಣ ನಾವು ಕೂಡ ಶಾ ಕ್ ಆಗಿತ್ತೇವೆ. ಅದಕ್ಕೆ ಕಾರಣ ಅಲ್ಲಿ ನಡೆಯುವ ಊಹೆಗೂ ನಿಲುಕದ ಸನ್ನಿವೇಶ. ಹಾಗಾದರೆ ಏನಂತ ರೋಚಕ ಸನ್ನಿವೇಶ ಎನ್ನುವುದಾದರೆ, ವೈರಲ್ ಆಗಿರುವ ವಿಡಿಯೋದಲ್ಲಿ ದೂರದ ಮರದ ಮೇಲೊಂದು ಹಕ್ಕಿಯು ಕುಳಿತು ಸುತ್ತಲೂ ನೋಡುವಾಗ, ಅದಕ್ಕೆ ಒಂದು ಹುಳುವಿನಂತಹ ಜೀವಿಯೊಂದು ಒಂದು ಬಿಲದಂತಹ ಜಾಗದ ಹೊರಗೆ ಓಡಾಡುತ್ತಿರುವುದು ಕಾಣಿಸುತ್ತದೆ. ಆಗ ಹಕ್ಕಿಯು ಆ ಹುಳುವನ್ನು ಹಿಡಿಯುವ ಸಲುವಾಗಿ ಹಾರಿ ಬಂದು ಆ ಹುಳುವನ್ನು ಹಿಡಿದ ಮರುಕ್ಷಣ ಅಲ್ಲಿ ಎದೆ ನಡುಗಿಸುವಂತಹ ಜೀವಿಯೊಂದು ಆ ಹಕ್ಕಿಯನ್ನೇ ಹಿಡಿದುಬಿಡುತ್ತದೆ.

ದೂರದಿಂದ ನೋಡಿದಾಗ ಅಲ್ಲಿದ್ದ ಹುಳು ಹಾಗೂ ಆದರೆ ಹಿಂದೆ ಇದ್ದ ಕಲ್ಲಿನಂತಹ ರಚನೆ ವಾಸ್ತವವಾಗಿ ಒಂದು ಬೃಹದಾಕಾರದ ಹಾವಿನಂತಹ ಜೀವಿಯಾಗಿರುತ್ತದೆ.‌ ಯಾವಾಗ ಹಕ್ಕಿಯು ಹುಳುವನ್ನು ಹಿಡಿಯುತ್ತದೆಯೋ, ಕೂಡಲೇ ಆ ಹಾವಿನಂತಹ ಜೀವಿ ಹಕ್ಕಿಯನ್ನು ಸುತ್ತಿಕೊಂಡು ತನ್ನ ಆಹಾರವನ್ನಾಗಿ ಮಾಡಿಕೊಂಡಿದೆ. ಕಲ್ಲುಗಳ ಮೇಲೆ ಕುಳಿತ ಅದು ಅಲ್ಲಿನ ಪರಿಸರದ ಅದೇ ಬಣ್ಣದಲ್ಲಿ ಇರುವುದರಿಂದ ಅಲ್ಲೊಂದು ಅ ಪಾ ಯ ಇದೆ ಎಂದು ನಮಗೂ ತಿಳಿಯುವುದಿಲ್ಲ. ಅದೇ ಕಾರಣದಿಂದ ಆ ಹಕ್ಕಿಗೂ ಕೂಡ ಸುಲಭವಾಗಿ ಹಾವಿನಂತಹ ಆ ಜೀವಿ ಇರುವುದು ತಿಳಿದಿಲ್ಲ‌. ಅದು ಸುಲಭವಾಗಿ ಅದರ ಬಲೆಗೆ ಬಿದ್ದು ಅದಕ್ಕೆ ಆಹಾರವಾಗಿದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ಇನಂದ ಅವರು ಶೇರ್ ಮಾಡಿಕೊಂಡ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನ ಕರೆ ಮಾಡಿದ್ದಾರೆ ಅನೇಕರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ವಿಡಿಯೋ ನೋಡಿ

ಸುಶಾಂತ್ ಅವರು ಇದರ ಬಗ್ಗೆ ವಿವರಣೆ ಕೂಡಾ ನೀಡಿದ್ದು, ಹಾವಿನಂತಿರುವ ಇದು ಇರಾನಿನ ಸ್ಪೈಡರ್-ಟೈಲ್ಡ್ ವೈಪರ್. ಇದು ವಿಶಿಷ್ಟವಾದ ಹಾಗೂ ವಿಸ್ತಾರವಾದ ಅರಾಕ್ನಿಡ್ ತರಹದ ಕಾಡಲ್ ರಚನೆಯನ್ನು ಹೊಂದಿದೆ. ಇದುವರೆಗೆ ಈ ಜೀವಿ ಪಶ್ಚಿಮ ಇರಾನ್‌ನಲ್ಲಿ ಮಾತ್ರ ವರದಿಯಾಗಿದೆ, ಇದು ತನ್ನ ಬಾಲ ಚಲನೆಯನ್ನು ತನ್ನ ರಕ್ಷಣೆ ಮತ್ತು ಬೇಟೆಯಾಡಲು ಬಳಸುತ್ತದೆ. ಬಾಲದ ತುದಿಯನ್ನು ಚಲಿಸುವ ಮೂಲಕ, ಅದು ಯಾವುದೋ ಹುಳು ಅಥವಾ ಚಲಿಸುವ ಜೇಡದಂತೆ ಕಾಣುತ್ತದೆ, ಆಗ ಅದು ತನ್ನ, ಸಂಭಾವ್ಯ ಬೇಟೆಗೆ ಆಮಿಷ ಒಡ್ಡಿ ಅದು ಹತ್ತಿರ ಬಂದ ಕೂಡಲೇ ಅದನ್ನು ಚಾಣಾಕ್ಷತನದಿಂದ ಹಿಡಿದು ಬಿಡುತ್ತದೆ.