ಸುರಿದ ಹಿಮದ ನಡುವೆಯೇ ತನ್ನ ಮೊಟ್ಟೆಗಳಿಗೆ ಶಾಖ ಕೊಡುತ್ತಿರುವ ಹದ್ದು: ತಾಯಿಯಲ್ಲದೇ ಇನ್ನಾರು ಮಾಡಲು ಸಾಧ್ಯ ಎಂದ ನೆಟ್ಟಿಗರು! ನೋಡಿ ಈ Video
ತಾಯಿಯ ಪ್ರೇಮಕ್ಕೆ ಮಿಗಿಲಾದುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದು ಇಡೀ ಜಗತ್ತೇ ಒಪ್ಪಿಕೊಳ್ಳುವಂತಹ ಸತ್ಯವಾಗಿದೆ. ಈ ಪ್ರೇಮ ಪ್ರಾಣಿಗಳು ಅಥವಾ ಮನುಷ್ಯರು ಎನ್ನುವಂತಹ ಭೇದವನ್ನು ಎಂದು ಕೂಡ ಹೊಂದಿಲ್ಲ. ನಿಸ್ವಾರ್ಥ ಪ್ರೇಮಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಅದು ತಾಯಿ ಮಾತ್ರ. ಈ ಪ್ರೇಮಕ್ಕೆ ಪ್ರಾಣಿಗಳಲ್ಲಿ ಅಥವಾ ಮನುಷ್ಯರಲ್ಲಿ ಆಗಲಿ ವ್ಯತ್ಯಾಸ ಎಂಬುದು ಇಲ್ಲ. ಮಾತೃ ಪ್ರೇಮಕ್ಕೆ ಸ್ವಾರ್ಥ ಎನ್ನುವುದಿಲ್ಲ. ನಿಷ್ಕಲ್ಮಶವಾದ ಆ ಮಮಕಾರಕ್ಕೆ ಸರಿಸಾಟಿ ಬೇರಾವುದೂ ಇಲ್ಲ. ಕಷ್ಟಗಳು ಎದುರಾದರೂ ಅದನ್ನು ಎದುರಿಸಿ ತನ್ನ ಸಂತಾನವನ್ನು ಸುರಕ್ಷಿತವಾಗಿಡಲು ಬಯಸುವಳು ತಾಯಿ. ಹಸಿವಿನಿಂದ ತಾನು ಕಂಗಾಲಾದರೂ ಕೂಡ ತನ್ನ ಮಕ್ಕಳು ಹಸಿದು ಮಲಗಬಾರದು ಎನ್ನುವುದು ಆಕೆಯ ಆಶಯ.
ತಾಯಿಯ ಪ್ರೀತಿ, ಮಮತೆ, ಕರುಣೆ ಇತ್ಯಾದಿಗಳನ್ನು ವರ್ಣಿಸಲು ಪದಗಳು ಸಾಲವು ಆದರೆ ಹಲವು ಸಂದರ್ಭಗಳಲ್ಲಿ ಆ ಪ್ರೀತಿ ಎಂಥದ್ದು ಎನ್ನುವುದನ್ನು ಕಣ್ಣಮುಂದೆ ತರುವ ಘಟನೆಗಳು ನಡೆಯುತ್ತಲೇ ಇರುತ್ತವೆ. ವನ್ಯ ಜೀವಿಗಳಾದ ಪ್ರಾಣಿ ಪಕ್ಷಿಗಳು ಕೂಡ ತಮ್ಮ ಸಂತಾನದ ರಕ್ಷಣೆ ಹಾಗೂ ಪೋಷಣೆಯ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸುತ್ತದೆ ಮಾತ್ರವಲ್ಲದೆ ಅ ಪಾ ಯ ಎನ್ನುವುದು ಎದುರಾದರೆ ಅವು ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸದೆ ಸಂತಾನದ ರಕ್ಷಣೆಗೆ ನಿಲ್ಲುವುದು ಕೂಡ ವಾಸ್ತವ. ತಾಯಿಯ ಪ್ರೇಮವನ್ನು ವ್ಯಾಖ್ಯಾನಿಸುವ ಒಂದು ವೀಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ ನಂದ ಅವರು ಶೇರ್ ಮಾಡಿಕೊಂಡಿದ್ದು ಈ ವಿಡಿಯೋ ಕೂಡ ತಾಯಿಯ ಪ್ರೇಮ ಎಂಥದ್ದು ಎನ್ನುವುದನ್ನು ಸ್ಪಷ್ಟವಾಗಿ ನಮ್ಮ ಕಣ್ಣಮುಂದೆ ತಂದಿಡುವಂತೆ ಇದೆ.
ಈ ಸುಂದರವಾದ ವಿಡಿಯೋದಲ್ಲಿ ಶೀತ ಪ್ರದೇಶವೊಂದರಲ್ಲಿ, ಸುತ್ತಮುತ್ತಲ ಪ್ರದೇಶವೆಲ್ಲಾ ಕೂಡಾ ಹಿಮದಿಂದ ಆವೃತವಾಗಿದೆ. ಅಲ್ಲಿನ ಹಿಮದ ನಡುವೆ ಒಂದು ಕದಲಾಟ ನಮ್ಮನ್ನು ಸೆಳೆಯುತ್ತದೆ. ನಾವು ಅದನ್ನು ನೋಡಿದಾಗ ಆಶ್ಚರ್ಯವಾಗುವಂತೆ ಆ ಹಿಮದ ನಡುವಿನಿಂದ, ತನ್ನ ಮೈಮೇಲಿನ ಹಿಮವನ್ನು ಕೊಡವಿಕೊಂಡು ವಿಶಾಲ ಕಾಯದ ಹದ್ದು ಮೇಲೆ ಏಳುವುದನ್ನು ನಾವು ಗಮನಿಸಬಹುದು. ವಿಡಿಯೋ ಶೇರ್ ಮಾಡಿಕೊಂಡಿರುವ ಸುಶಾಂತ್ ನಂದ ಅವರು ಆ ಸಂದರ್ಭದ ವಿವರಣೆ ನೀಡುತ್ತಾ ಬಾಲ್ಡ್ ಈಗಲ್ ತನ್ನ ಮೊಟ್ಟೆಗಳನ್ನು ಬೆಚ್ಚಗಿಡಲು ಹಿಮವನ್ನು ಕೂಡಾ ಲೆಕ್ಕಿಸದೆ ಅವುಗಳಿಗೆ ಕಾವು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಹೀಗೆ ವಿಡಿಯೋ ಬಗ್ಗೆ ವಿವರಣೆಯನ್ನು ನೀಡಿರುವ ಅವರು ಶೀರ್ಷಿಕೆಯ ಸಾಲುಗಳಲ್ಲಿ ತಾಯಿಯಲ್ಲದೇ, ಇಂತಹ ಕಾರ್ಯವನ್ನು ಇನ್ನಾರು ಮಾಡಲು ಸಾಧ್ಯ ಎಂದು ಕೂಡ ಬರೆದುಕೊಂಡು, ಮಾತೃ ಪ್ರೇಮ ಎಂತಹುದು ಎಂಬುದನ್ನು ಹೇಳಿದ್ದಾರೆ. ಅವರು ಹಂಚಿಕೊಂಡ ಈ ಸುಂದರವಾದ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರು ವೀಕ್ಷಣೆ ಮಾಡಿದ್ದರೆ, ನೂರಾರು ಜನರು ವಿಡಿಯೋವನ್ನು ಹಂಚಿ ಕೊಂಡಿದ್ದಾರೆ ಮತ್ತು ಲೈಕ್ ನೀಡಿದ್ದಾರೆ. ಇನ್ನೂ ಕೆಲವರು ವಿಡಿಯೋವನ್ನು ನೋಡಿ ತಮ್ಮ ಮನಸ್ಸಿನ ಮಾತುಗಳನ್ನು ಪ್ರತಿಕ್ರಿಯೆಗಳ ಮೂಲಕ ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿ
Who it can be other than the Mother🙏
— Susanta Nanda (@susantananda3) December 4, 2020
Bald Eagle emerging from a snowy slumber after keeping her eggs warm. pic.twitter.com/ek9FFBqiVO
ನೆಟ್ಟಿಗರೊಬ್ಬರು ಈ ಸುಂದರವಾದ ವಿಡಿಯೋವನ್ನು ನೋಡಿ ಜೀವ ಸಂಕುಲದಲ್ಲಿ ತಾಯಿಗೆ ಮಿಗಿಲಾದವರು ಇನ್ನಾರೂ ಇಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು ಸುಶಾಂತ್ ಅವರು ತಾಯಿಯ ಬಗ್ಗೆ ಶೀರ್ಷಿಕೆಯಲ್ಲಿ ಬರೆದಿರುವ ಮಾತುಗಳು ಸತ್ಯವೆಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ನೆಟ್ಟಿಗರು ಅಲ್ಲಿ ಮೊಟ್ಟೆಗಳಿಗೆ ಶಾಖ ಕೊಡುವ ಹದ್ದು ತಂದೆ ಕೂಡ ಆಗಿರಬಹುದಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ ಇನ್ನೂ ಅನೇಕರು ಎಮೋಜಿಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಒಟ್ಟಾರೆ ವೀಡಿಯೋ ಅನೇಕರ ಮೆಚ್ಚುಗೆ ಪಡೆದಿದೆ.