ರೆನೋ ಕಂಪನಿ ನೀಡುತ್ತಿದೆ ಭರ್ಜರಿ ಆಫರ್! ಕೇವಲ 1403 ರೂ. ಗಳ EMI ನಲ್ಲಿ ಮನೆಗೆ ತೆಗೆದುಕೊಂಡು ಹೋಗಿ ರೆನೋ ಕ್ವಿಡ್!

ನವದೆಹಲಿ:- ಮೊದಲು ಒಂದು ಸಮಯದಲ್ಲಿ ಇನ್ನೊಬ್ಬರ ಕಾರುಗಳನ್ನು ತುಂಬ ಕುತೂಹಲದಿಂದ ನೋಡಲಾಗುತ್ತಿತ್ತು. ಈಗ ಕಾಲ ಬದಲಾದಂತೆ ಕಾರು ಕಂಪನಿಗಳು ಮತ್ತು ಬ್ಯಾಂಕಿನವರು ಅನೇಕ ಸೌಲಭ್ಯಗಳನ್ನು ನೀಡಿ ಗ್ರಾಹಕರಿಗೆ ಕಾರು ಖರೀದಿಸಿ ಎಂದು ಬೇತಾಳದಂತೆ ಬೆನ್ನಟ್ಟಿ ಬರುತ್ತಿದ್ದಾರೆ.

ಒಂದು ವೇಳೆ ನೀವು ಕಾರು ಖರೀದಿಸುವ ಯೋಚನೆ ಮಾಡುತ್ತಿದ್ದರೆ, ರೇನೊ ಕಂಪನಿಯು ಗ್ರಾಹಕರಿಗಾಗಿ ಭರ್ಜರಿ ಆಫರನ್ನು ತಂದಿದೆ. ಈ ಆಫರ್ ನ ಮುಖಾಂತರ ರೇನೊ ಕಂಪನಿಯ ಕ್ವಿಡ್ ಗಾಡಿಯನ್ನು ಬರೀ 1503 ರೂಪಾಯಿಗಳ ಪ್ರೀಮಿಯಂ ನಲ್ಲಿ ಮನೆಗೆ ತೆಗೆದುಕೊಂಡು ಹೋಗಬಹುದು.

ಈ ಕಾರಿನ ಪ್ರಾರಂಭದ ಬೆಲೆ 2.99 ಲಕ್ಷ ರೂಪಾಯಿಗಳಷ್ಟಿದೆ. ಈ ಗಾಡಿಯ ಟಾಪ್ ಮಾಡೆಲ್ ಬೆಲೆ 5.12 ಲಕ್ಷ ರೂಪಾಯಿಗಳಿದೆ. ಕಂಪನಿಯು ನೀಡಿದ ಈ ಹೊಸ ಆಫರ್ ಪ್ರಕಾರ ಈ ಕಾರನ್ನು ಖರೀದಿಸಲು ನಿಮಗೆ 1 ಲಕ್ಷ 99 ಸಾವಿರ 800 ರೂಪಾಯಿಗಳ ಡೌನ್ ಪೇಮೆಂಟ್ ಮಾಡಬೇಕಾಗುವುದು.

ತದನಂತರ ಪ್ರತಿ ತಿಂಗಳು 1403 ರೂಪಾಯಿಗಳ ಕಂತನ್ನು ತುಂಬ ಬೇಕಾಗುವುದು. ಈ ಆಫರ್ ಜೊತೆಗೆ 1 ಲಕ್ಷ ರೂಪಾಯಿಗಳ ಫೈನಾನ್ಸ್ ಸಹ ನೀಡಲಾಗುವುದು. ಇದು 4.91 ಪ್ರತಿಶತ ಬಡ್ಡಿದರದಲ್ಲಿ ಲಭ್ಯವಿದೆ. 1 ಲಕ್ಷ 99 ಸಾವಿರ 800 ರೂಪಾಯಿಗಳ ಡೌನ್ ಪೇಮೆಂಟ್ ಮಾಡಿದ ನಂತರ ನಿಮಗೆ ಏಳು ವರ್ಷ ಅಂದರೆ 84 ತಿಂಗಳುಗಳವರೆಗೆ 1403 ರೂಪಾಯಿಗಳ ಪ್ರೀಮಿಯಂ ತುಂಬ ಬೇಕಾಗುವುದು.

ಈ ಕಾರನ್ನು ಖರೀದಿಸುವ ಮುನ್ನ ಕಾರಿನ ವೈಶಿಷ್ಟತೆಗಳು ಬಗ್ಗೆ ತಿಳಿದುಕೊಳ್ಳುವುದು ಸಹ ಅಷ್ಟೇ ಪ್ರಾಮುಖ್ಯವಾಗಿದೆ. ಈ ಗಾಡಿಯಲ್ಲಿ ಎಲ್ಲಕ್ಕೂ ಅಗ್ಗದ ಆಟೋಮ್ಯಾಟಿಕ್ ಮಾಡೆಲ್ ನಲ್ಲಿ ಒಂದು ಲೀಟರ್ ನ ಪೆಟ್ರೋಲ್ ಎಂಜಿನ್ ಕೊಡಲಾಗಿದೆ. ಎಂಜಿನ್ 68 ಪಿ ಎಸ್ ನ ಪವರ್ ಮತ್ತು 91 ಎನ್ ಎಮ್ ಟಾರ್ಕ್ ನಿರ್ಮಾಣ ಮಾಡುತ್ತದೆ. 5 ಸ್ಪೀಡ್ ಆಟೋಮೆಟಿಕ್ ಎಂಜಿನ್ ಇದೆ.

ಸುರಕ್ಷತೆಯ ಸಲುವಾಗಿ ಗಾಡಿಯಲ್ಲಿ ಡ್ರೈವರ್ ರಿಯರ್ ಪಾರ್ಕಿಂಗ್ ಸೆನ್ಸರ್, ABS, EBD, ಸೀಟ್ ಬೆಲ್ಟ್ ರಿಮೈಂಡರ್, ಓವರ್ಸ್ಪೀಡ್ ಅಲರ್ಟ್, ರಿಯರ್ ಡೋರ್ ಚೈಲ್ಡ್ ಲಾಕ್, ಹಾಯ್ ಮೌಂಟೆಡ್ ಸ್ಟಾಪ್ ಲ್ಯಾಂಪ್ ಮತ್ತು ಸೆಂಟ್ರಲ್ ಲಾಕಿಂಗ್ ಹೀಗೆ ಅನೇಕ ಸೌಲಭ್ಯಗಳನ್ನು ಕೊಡಲಾಗಿದೆ. ಹಾಗೆಯೇ ಕಿ ಲೆಸ್ ಎಂಟ್ರಿ ತರದ ಅಡ್ವಾನ್ಸ್ ಫೀಚರ್ಸ್ ಗಳನ್ನು ಇದರಲ್ಲಿ ಅಳವಡಿಸಿದ್ದಾರೆ.