ವಿಚಿತ್ರ ಘಟನೆ: ಶ್ರೀಮಂತಳಾಗಲು ತನ್ನ ಗಂಡನನ್ನೇ 10 ಲಕ್ಷಕ್ಕೆ ಮಾರಾಟ ಮಾಡಿದ ಮಹಿಳೆ, ರೋಸಿ ಹೋದ ಗಂಡ!

ವರ್ಷಗಳ ಹಿಂದೆ ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಮಾಲಾಶ್ರೀ ನಟನೆಯ ಗಂಗಾಯಮುನಾ ಎನ್ನುವ ಸಿನಿಮಾವೊಂದು ಬಂದಿತ್ತು. ಈ ಸಿನಿಮಾದಲ್ಲಿ ನಾಯಕಿ ಮಾಲಾಶ್ರೀ ಶ್ರೀಮಂತಳಾಗುವ ಆಸೆಯಿಂದ ತನ್ನ ಗಂಡ ಶಿವರಾಜ್ ಕುಮಾರ್ ಅವರನ್ನು ಇಷ್ಟಪಟ್ಟ ಶ್ರೀಮಂತ ಯುವತಿಯೊಬ್ಬಳಿಗೆ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿ ಎರಡನೇ ಮದುವೆಯಾಗುವಂತೆ ಮಾಡುತ್ತಾಳೆ. ಇಂತಹುದೇ ಒಂದು ಘಟನೆ ಜಬಲ್ ಪುರದಲ್ಲಿ ನಡೆದಿದ್ದು ಇದು ಗಂಡನಾದವನಿಗೆ ತನ್ನ ಹೆಂಡತಿ ಯಾವಾಗ ತನ್ನನ್ನು ಮಾರಾಟ ಮಾಡಿದಳು, ಎನ್ನುವ ವಿಷಯವೇ ತಿಳಿಯದಂತಹ ವಿಚಿತ್ರ ಸನ್ನಿವೇಶ ಎದುರಾಗಿ ಕಡೆಗೆ ಹೆಂಡತಿಯಿಂದ ವೇ ದ ನೆ ತಡೆಯಲಾಗದೆ ಫ್ಯಾಮಿಲಿ ಕೌನ್ಸಿಲಿಂಗ್ ಎದುರು ತನಗೊಂದು ಪರಿಹಾರ ನೀಡುವಂತೆ ಮನವಿಯನ್ನು ಮಾಡಿಕೊಂಡಿರುವ ವಿಚಿತ್ರವಾದ ಘಟನೆಯು ನಡೆದಿದೆ.‌

ಸಿನಿಮಾದಲ್ಲಿ ಹೆಂಡತಿ ಗಂಡನನ್ನು ಮತ್ತೊಬ್ಬ ಹೆಣ್ಣಿಗೆ ಮಾರಾಟ ಮಾಡಿದಂತೆ, ಇಲ್ಲಿ ಕೂಡಾ ಮಹಿಳೆಯೊಬ್ಬಳು, ತನ್ನ ಗಂಡನನ್ನು ಆತನಿಗೆ ತಿಳಿಯದಂತೆ 10 ಲಕ್ಷ ರೂಪಾಯಿಗಳಿಗೆ ತನ್ನ ಗಂಡನನ್ನು ಇಷ್ಟ ಪಟ್ಟ ಇನ್ನೊಬ್ಬ ಹೆಣ್ಣಿಗೆ ಮಾರಾಟ ಮಾಡಿ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾಳೆ. ಈ ವಿಷಯದ ಕುರಿತಾಗಿ ಫ್ಯಾಮಿಲಿ ಕೌನ್ಸಲಿಂಗ್ ಬಳಿ ಆಕೆಯ ಪತಿ ಬಂದಾಗ ಅಲ್ಲಿನ ಅಧಿಕಾರಿಗಳಿಗೆ ಕೂಡ ಒಂದು ಕ್ಷಣ ತಲೆ ತಿರುಗುವಂತಾಗಿದೆ. ಕಾರಣ ಆ ವ್ಯಕ್ತಿಯು ತನ್ನ ಪತ್ನಿ ತನ್ನನ್ನೇ ವ್ಯಾಪಾರ ಮಾಡುತ್ತಿರುವ ವಿಷಯ ತಿಳಿಸಿ ಅದನ್ನು ತಡೆಯಬೇಕೆಂದು, ಈಗಾಗಲೇ ತನಗೆ ಎರಡು ವರ್ಷದ ಮಗಳಿದ್ದು, ಪತ್ನಿ ಮಾಡಿರುವ ಕೆಲಸದಿಂದ ರೋ ಸಿ ಹೋಗಿರುವುದಾಗಿ ಗೋಗರೆದಿದ್ದಾನೆ.

ಆ ವ್ಯಕ್ತಿಯು ನೀಡಿದ ಮನವಿಯಲ್ಲಿ ಈಗಾಗಲೇ ಆತನ ಪತ್ನಿಯು ತನಗೆ ಇನ್ನೊಬ್ಬ ಹೆಣ್ಣಿನ ಜೊತೆ ಮದುವೆ ಮಾಡಿಸಲು, ಆ ಯುವತಿಯೊಬ್ಬಳ ಬಳಿ 10 ಲಕ್ಷ ರೂಪಾಯಿಗಳಿಗೆ ವ್ಯವಹಾರ ಕುದುರಿಸಿ, ಒಂದು ಲಕ್ಷ ರೂಪಾಯಿಯನ್ನು ಅಡ್ವಾನ್ಸ್ ಕೂಡಾ ಪಡೆದಿರುವ ವಿಷಯವನ್ನು ತಿಳಿಸಿದ್ದಾನೆ. ವರದಿಗಳ ಪ್ರಕಾರ ವ್ಯಕ್ತಿಯ ಹೆಸರು ಲಖನ್ ಲಾಲ್ ಎನ್ನಲಾಗಿದ್ದು, ಹಾಸ್ಟೆಲ್ ಕ್ಯಾಂಟೀನ್ ಒಂದರಲ್ಲಿ ಅಡುಗೆ ಮಾಡುವ ಕೆಲಸವನ್ನು ಮಾಡುತ್ತಾನೆ. ಅದೇ ಹಾಸ್ಟೆಲ್ ನಲ್ಲಿ ಇರುವ ಯುವತಿಯೊಬ್ಬಳು ಈತನನ್ನು ನೋಡಿ ಇಷ್ಟಪಟ್ಟಿದ್ದು ಆತನನ್ನೇ ಮದುವೆಯಾಗಬೇಕೆಂದು ನಿರ್ಧಾರ ಮಾಡಿದ್ದಾಳೆ. ಅಲ್ಲದೇ ಆತನನ್ನು ಪಡೆಯಲು ತಾನು ಏನೇ ಆದರೂ ಮಾಡಲು ಸಿದ್ಧವಾಗಿದ್ದಳು ಎನ್ನಲಾಗಿದೆ.‌

ಇತ್ತ ಲಖನ್ ಲಾಲ್ ಪತ್ನಿಗೆ ತನ್ನ ಪತಿಯನ್ನು ಯುವತಿಯೊಬ್ಬಳು ಇಷ್ಟಪಡುತ್ತಿರುವ ವಿಷಯ ಹೇಗೋ ಗೊತ್ತಾಗಿದೆ. ಆಕೆ ಆಗ ಹಿಡಿದಿದ್ದು ಅದನ್ನೇ ಬಳಸಿಕೊಂಡು ತಾನು ಶ್ರೀಮಂತಳಾಗಲು ಯೋಜನೆಯನ್ನು ರೂಪಿಸಿದ್ದಾಳೆ. ಆ ಹುಡುಗಿ ಲಖನ್ ಲಾಲ್ ಗೆ ಆಗಾಗ ಮೆಸೇಜುಗಳನ್ನು ಮಾಡುತ್ತಿದ್ದಳು ಎನ್ನಲಾಗಿದ್ದು, ಲಖನ್ ಲಾಲ್ ಪತ್ನಿ ಗಂಡನ ಫೋನಿನಲ್ಲಿ ಯುವತಿಯ ನಂಬರನ್ನು ಸಂಗ್ರಹಿಸಿದ್ದಾಳೆ. ನಂತರ ಗಂಡನಿಗೆ ತಿಳಿಯದ ಹಾಗೆ 2 ತಿಂಗಳ ಹಿಂದೆ ಆ ಯುವತಿಯ ಜೊತೆ ಮಾತನಾಡಿ ಮದುವೆಯ ವ್ಯವಹಾರವನ್ನು ಕುದುರಿಸಿದ್ದಾಳೆ.

ಇದಾದ ನಂತರ ಆಕೆ ತನ್ನ ಪತಿ ಲಖನ್ ಲಾಲ್ ನನ್ನು ಎರಡನೇ ಮದುವೆ ಆಗುವಂತೆ ಪೀಡಿಸುತ್ತಿದ್ದಳು. ಸಿನಿಮಾದ ರೀತಿಯಲ್ಲಿ ಗಂಡನಿಗೆ ತೊಂದರೆ ಕೊಟ್ಟರೆ ಒಂದಲ್ಲ ಒಂದು ದಿನ ಗಂಡ ಒಪ್ಪಿಕೊಳ್ಳುತ್ತಾನೆ ಎನ್ನುವ ಆಲೋಚನೆ ಆಕೆಯದಾಗಿತ್ತು ಎನ್ನಲಾಗಿದೆ. ಇನ್ನು ಲಖನ್ ಲಾಲ್ ನನ್ನು ಇಷ್ಟಪಟ್ಟ ಯುವತಿ ಆತ ಅಡುಗೆ ತಯಾರು ಮಾಡುತ್ತಿದ್ದೆ ಕ್ಯಾಂಟೀನ್ಗೆ ತಿಂಡಿ ತಿನ್ನಲು ಬರುತ್ತಿದ್ದಳು ಎನ್ನಲಾಗಿದ್ದು, ಹಾಗೆ ಬಂದವಳು ಇವತ್ತು ತನಗಿಷ್ಟವಾದ ತಿಂಡಿಗಳನ್ನು ಮಾಡಿಸಿಕೊಂಡು ತಿನ್ನುತ್ತಿದ್ದಳು. ಅಲ್ಲಿ ಅಡುಗೆ ಮಾಡುವವನು ಲಖನ್ ಲಾಲ್ ಎಂಬುದನ್ನು ತಿಳಿದ ಯುವತಿ ಆತನನ್ನೇ ಮದುವೆಯಾಗಬೇಕೆಂದು ನಿರ್ಧರಿಸಿದ್ದಳು.

ಇದಕ್ಕೆ ಮುಖ್ಯ ಕಾರಣ ಯುವತಿಗೆ ಸ್ವತಃ ಹಾಗೆ ರುಚಿ ರುಚಿಯಾದ ಅಡುಗೆಗಳನ್ನು ಮಾಡಲು ಬರುತ್ತಿರಲಿಲ್ಲ ಎನ್ನಲಾಗಿದೆ. ಹೀಗೆ ರುಚಿಯಾದ ಅಡುಗೆಗಳ ಆಸೆಗೆ ಬಿದ್ದು ಯುವತಿಯೊಬ್ಬಳು ಮತ್ತೊಬ್ಬ ಮಹಿಳೆಯ ಗಂಡನನ್ನು 10 ಲಕ್ಷ ರೂಪಾಯಿಗಳಿಗೆ ಖರೀದಿಸಲು ಸಿದ್ಧವಾಗಿದ್ದು ಮಾತ್ರ ಆಶ್ಚರ್ಯ ಹಾಗೂ ವಿಚಿತ್ರ ಕೂಡ ಆಗಿದ್ದು ಈಗ ಈ ವಿಷಯವು ಒಂದು ದೊಡ್ಡ ಸುದ್ದಿಯಾಗಿದೆ.