ಮುಂಬೈ ಮಹಾನಗರದಲ್ಲಿ ತನ್ನ ಕನಸಿನ ಐಶಾರಾಮೀ ರೆಸ್ಟೋರೆಂಟ್ ತೆರೆದ ಶಿಲ್ಪಾ ಶೆಟ್ಟಿ: ಒಮ್ಮೆ ನೋಡಿ ಐಷಾರಾಮಿ ಹೋಟೆಲಿನ ಫೋಟೋಗಳು
ಬಾಲಿವುಡ್ ನಲ್ಲಿನ ಫಿಟ್ ಅಂಡ್ ಫೈನ್ ನಟಿ ಎಂಬ ಹೆಗ್ಗಳಿಗೆ ಪಡೆದಿರುವ ನಟಿ, ಶಿಲ್ಪಾ ಶೆಟ್ಟಿ ಜನಪ್ರಿಯ ನಟಿಯಾಗಿ, ಕಲಾವಿದೆಯಾಗಿ ಮಾತ್ರವೇ ಅಲ್ಲದೇ ವ್ಯಾಪಾರ ಜಗತ್ತಿನಲ್ಲಿ ಕೂಡಾ ಶಿಲ್ಪಾ ಶೆಟ್ಟಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಶಿಲ್ಪಾ ಶೆಟ್ಟಿ ಐಪಿಎಸ್ ಕ್ರಿಕೆಟ್ ಗಾಗಿ ರಾಜಸ್ಥಾನ್ ರಾಯಲ್ ಕ್ರಿಕೆಟ್ ತಂಡವನ್ನು ಖರೀದಿ ಮಾಡುವ ಮೂಲಕ ಎಲ್ಲೆಡೆ ಒಂದು ಸಂಚಲವನ್ನು ಸೃಷ್ಟಿಸಿದ್ದರು. ಈಗ ಇದೆಲ್ಲದರ ನಡುವೆ ಶಿಲ್ಪಾ ಶೆಟ್ಟಿ ತಮ್ಮ ಮತ್ತೊಂದು ಹೊಸ ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ. ಶಿಲ್ಪಾ ಶೆಟ್ಟಿ ಮುಂಬೈ ಮಹಾನಗರದಲ್ಲಿ ತನ್ನದೇ ಆದ ಒಂದು ಹೊಸ ರೆಸ್ಟೋರೆಂಟ್ ಅನ್ನು ಆರಂಭ ಮಾಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಶಿಲ್ಪಾ ತಮ್ಮ ಹೊಸ ರೆಸ್ಟೋರೆಂಟ್ ಅನ್ನು ತೆರೆದಿದ್ದು, ಅದರ ಫೋಟೋಗಳು ಎಲ್ಲೆಡೆ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆದಿದೆ.

ಶಿಲ್ಪಾ ಶೆಟ್ಟಿ ತೆರೆದಿರುವ ತಮ್ಮ ಈ ಹೊಸ ರೆಸ್ಟೋರೆಂಟ್ ಹೆಸರು ಈಗಾಗಲೇ ವಿಶ್ವ ಪ್ರಸಿದ್ಧ ಆಗಿರುವ ಬಾಸ್ಟಿಯನ್ ಚೈನ್ ಹೊಟೇಲ್ ಗಳ ಒಂದು ಬ್ರಾಂಡ್ ರೆಸ್ಟೋರೆಂಟ್ ತೆರೆದಿದ್ದಾರೆ. ವಿಶೇಷ ಏನೆಂದರೆ ಬಾಲಿವುಡ್ ನ ಪ್ರತಿಯೊಬ್ಬ ಸ್ಟಾರ್ ಕೂಡಾ ಶಿಲ್ಪಾ ರ ಈ ಹೊಸ ರೆಸ್ಟೋರೆಂಟ್ ಬಾಸ್ಟಿಯನ್ ಚೈನ್ ಗೆ ಭೇಟಿ ನೀಡುತ್ತಾರೆ ಎನ್ನುವುದು ಕೂಡಾ ವಿಶೇಷ. ಮುಂಬೈ ಬಾಂದ್ರಾ ದಲ್ಲಿ ತಾನೊಂದು ರೆಸ್ಟೋರೆಂಟ್ ತೆರೆಯುವ ಕನಸನ್ನು ಹೊಂದಿದ್ದ ಶಿಲ್ಪಾ ಶೆಟ್ಟಿ ತನ್ನ ಈ ಕನಸನ್ನು ನನಸು ಮಾಡಿಕೊಂಡಿದ್ದು, ಈ ಸಂತೋಷ ಹಾಗೂ ಸಂಭ್ರಮದ ಕ್ಷಣಗಳ ಅನೇಕ ಫೋಟೋಗಳನ್ನು ಶಿಲ್ಪಾ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಫೋಟೋಗಳಿಗೆ ಮೆಚ್ಚುಗೆಗಳು ಹರಿದು ಬರುತ್ತಿದೆ.

ತನ್ನ ಹೊಸ ರೆಸ್ಟೋರೆಂಟ್ ಸಿದ್ಧವಾಗಿ ಉದ್ಘಾಟನೆ ಆದ ಹಿನ್ನೆಲೆಯಲ್ಲಿ ಶಿಲ್ಪಾ ಶೆಟ್ಟಿ ಮೊದಲಿಗೆ ರಿತೇಶ್ ದೇಶ್ ಮುಖ್ ಅವರ ಕುಟುಂಬಕ್ಕೆ ತಮ್ಮ ರೆಸ್ಟೋರೆಂಟ್ ಗೆ ಆಹ್ವಾನವನ್ನು ನೀಡಿದ್ದರು. ರಿತೇಶ್ ಅವರು ತಮ್ಮ ಪತ್ನಿ ನಟಿ ಜೆನಿಲಿಯಾ ಜೊತೆಗೆ ಶಿಲ್ಪಾ ಅವರ ಈ ಹೊಸ ರೆಸ್ಟೋರೆಂಟ್ ಗೆ ಭೇಟಿ ನೀಡಿ ಇಲ್ಲಿನ ಆಹಾರಗಳ ರುಚಿಯನ್ನು ಸವಿದಿದ್ದಾರೆ. ಅಲ್ಲದೇ ಅವರು ರೆಸ್ಟೋರೆಂಟ್ ಗೆ ಬಂದಾಗ ಅವರೊಟ್ಟಿಗೆ ತಾನು ತೆಗೆಸಿಕೊಂಡಿರುವ ಫೋಟೋಗಳನ್ನು ಶಿಲ್ಪಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಈ ಸಂದರ್ಭದಲ್ಲಿ ಶಿಲ್ಪ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರು ಕೂಡಾ ಉಪಸ್ಥಿತರಿದ್ದು, ತಮ್ಮ ಪತ್ನಿಯ ಸಂತೋಷದಲ್ಲಿ ಭಾಗಿಯಾಗಿದ್ದಾರೆ. ಅವರು ಕೂಡಾ ಸೋಶಿಯಲ್ ಮೀಡಿಯಾಗಳ ಮೂಲಕ ಫೋಟೋಗಳನ್ನು ಹಂಚಿಕೊಂಡು ಶೀರ್ಷಿಕೆಯಲ್ಲಿ, ಸುಂದರವಾದ ಸಂಜೆಯಲ್ಲಿ ಈ ಹೊಸ ರೆಸ್ಟೋರೆಂಟ್ ನ ಮೆನುವನ್ನು ಟೇಸ್ಟ್ ಮಾಡಿದೆ, ಈ ಕಂಪನಿ ಬಹಳ ಚೆನ್ನಾಗಿದೆ ಎಂದು ಅವರು ಬರೆದುಕೊಂಡು ಪತ್ನಿಯ ರೆಸ್ಟೋರೆಂಟ್ ಬಗ್ಗೆ ಹಾಡಿ ಹೊಗಳಿದ್ದಾರೆ. ಇನ್ನೊಂದು ಫೋಟೋ ಕೂಡಾ ವೈರಲ್ ಆಗಿದ್ದು ಅದು ಕೂಡಾ ಎಲ್ಲರ ಗಮನವನ್ನು ಸೆಳೆಯುತ್ತಿದೆ.


ವೈರಲ್ ಆದ ಮತ್ತೊಂದು ಫೋಟೋದಲ್ಲಿ ಶಿಲ್ಪಾ ಮತ್ತು ಅವರ ಪತಿ ರಾಜ್ ಕುಂದ್ರಾ ಹೊಸ ರೆಸ್ಟೋರೆಂಟ್ ಉದ್ಘಾಟನೆಯ ಸಂತೋಷವನ್ನು ಶ್ಯಾಂ ಪೇ ನ್ ಓಪನ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದು, ಇಬ್ಬರ ಮುಖದಲ್ಲಿ ಕೂಡಾ ಸಂತೋಷವನ್ನು ನೋಡಬಹುದಾಗಿದೆ. ಈಗಾಗಲೇ ಫೇಮಸ್ ಆಗಿರುವ ಬ್ಯಾಸ್ಟಿಯನ್ ಚೈನ್ ಹೊಟೇಲ್ ನಲ್ಲಿ, ಶಿಲ್ಪ ಹೊಸ ಹೊಸ ಮೆನುವನ್ನು ಕೂಡಾ ಸೇರಿಸಿದ್ದು, ಈಗಾಗಲೇ ಶಿಲ್ಪ ತಮ್ಮ ಇನ್ಸ್ಟಾಗ್ರಾಂ ನಲ್ಲಿ ತಮ್ಮ ರೆಸಪಿಗಳ ಫೋಟೋಗಳನ್ನು ಕೂಡಾ ಶೇರ್ ಮಾಡಿಕೊಂಡಿದ್ದಾರೆ. ಬಾಸ್ಟಿಯನ್ ರೆಸ್ಟೋರೆಂಟ್ ಗಳು ಬೇಕರಿ ಐಟಂ ಗಳಿಗೂ ಕೂಡಾ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.

