ನಕ್ಕು ನಗಿಸುವ ಜೋಕ್ ಗಳು: ಬಾಯ್ ಫ್ರೆಂಡ್ ಜೊತೆ ಸುತ್ತಾಡಲು ಹೋಗಿದ್ದ ಮಹಿಳೆ ಮುಂದೆ ಅನಿರೀಕ್ಷಿತವಾಗಿ ಅವಳ ಗಂಡ ಬಂದ

ಸದಾ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿಕೊಂಡಿರುವ ಜನರು ಇಂದಿನ ದಿನಗಳಲ್ಲಿ ಸದಾ ಒಂದು ರೀತಿಯ ಒತ್ತಡದಲ್ಲಿ ಇರುತ್ತಾರೆ. ಈ ಒತ್ತಡದ ಪರಿಣಾಮವಾಗಿ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಕೂಡಾ ಎದುರಿಸುವಂತಹ ಪರಿಸ್ಥಿತಿ ಎದುರಾಗಿದೆ. ವೈದ್ಯರು ಕೂಡಾ ಮನುಷ್ಯ ಮನಸ್ಸಿನಿಂದ ಸಂತೋಷವಾಗಿದ್ದರೆ ಮಾತ್ರ ಆರೋಗ್ಯವಾಗಿರುತ್ತಾನೆ. ಅಲ್ಲದೇ ಇದಕ್ಕಾಗಿ ನಗುವೊಂದೇ ಸಿದ್ಧೌಷಧ ಎನ್ನಲಾಗಿದೆ. ಅಂತಹ ಒಂದು ನಗುವನ್ನು ನಿಮ್ಮಲ್ಲಿ ಮೂಡಿಸಲು ಸೋಶಿಯಲ್ ಮೀಡಿಯಾಗಳಲ್ಲಿ ಇತ್ತೀಚಿನ ದಿನಗಳಲ್ಲಿ ವೈರಲ್ ಆಗಿರುವ ಕೆಲವು ಸುಪ್ರಸಿದ್ಧ ನಗೆ ಹನಿಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ಇವುಗಳನ್ನು ಓದಿದ ಮೇಲೆ ಖಚಿತವಾಗಿ ನೀವು ನಗುವಿರಿ. ಹಾಗಾದರೆ ಇನ್ನೇಕೆ ತಡ, ಬನ್ನಿ ನಗೆ ಹನಿಗಳ ಕಡೆ ಗಮನ ನೀಡೋಣ.

ಜೋಕ್ ೧
ಮೇಡಂ ಕೇಳಿದರು: ಈ ಪುಸ್ತಕ ಯಾರದ್ದು?
ಚಿಂಟು : ಈ ಪುಸ್ತಕ ಪೇಪರ್ ದು
ಮೇಡಂ : ಅದು ನನಗೂ ಗೊತ್ತು ಈ ಪುಸ್ತಕ ಪೇಪರ್ ದು ಅಂತ.
ಚಿಂಟು: ಗೊತ್ತಿದ್ದ ಮೇಲೆ ಮತ್ತೆ ಕೇಳಿದ್ದು ಯಾಕೆ ಮೇಡಂ?

ಜೋಕ್ ೨.

ಪತ್ನಿ ಇಂಗ್ಲೀಷ್ ಪುಸ್ತಕವನ್ನು ಓದುತ್ತಿದ್ದಳು. ಆಗ ಆಕೆ ತನ್ನ ಪತಿಯನ್ನು ಏನ್ರೀ Complete ಮತ್ತು Finish ಈ ಎರಡು ಪದಗಳ ನಡುವಿನ ವ್ಯತ್ಯಾಸ ಏನು ಎಂದು ಕೇಳಿದಳು.

ಆಗ ಪತಿ, ಮದುವೆ ಒಳ್ಳೆ ಹುಡುಗಿ ಜೊತೆ ಆದ್ರೆ ಜೀವನ Complete ಅಂತ ಅದೇ ಒಳ್ಳೆಯವಳು ಆಗಿಲ್ಲದವಳ ಜೊತೆ ಆದ್ರೆ ಜೀವನ Finish ಎಂದ.

ಜೋಕ್ ೩ .

ಇಲಿಗಳ ಗುಂಪು ಕೈಯಲ್ಲಿ ಕತ್ತಿಗಳನ್ನು ಹಿಡಿದು ಕೋಪದಿಂದ ಓಡುತ್ತಿದ್ದವು..

ಅದನ್ನು ನೋಡಿದ ಸಿಂಹ : ಎಲ್ಲಿಗೆ ಇಷ್ಟು ಕೋಪದಿಂದ ಹೋಗ್ತಾ ಇದ್ದೀರಿ?

ಇಲಿಗಳು: ಆನೆಗಳ ಹುಡುಗಿಗೆ ಯಾರೋ ಲವ್ ಪ್ರಪೋಸ್ ಮಾಡಿದ್ರಂತೆ, ಆದರೆ ಹೆಸರು ಇಲಿಗಳದ್ದು ಬಂದಿದ್ದೆ, ಅದಕ್ಕೆ ಹೆಣಗಳು ಉರುಳಿಸೋಕೆ ಹೋಗ್ತಾ ಇದ್ದೀವಿ..

ಈ ಮಾತು ಕೇಳಿ ಸಿಂಹ ಶಾ ಕ್

ಜೋಕ್ ೪

ಮನೆಗೆ ಹೋಗುವಾಗ ವಾಟ್ಸಾಪ್ ನೋಡ್ಕೊಂಡು ಯಾವುದೋ ಧ್ಯಾನದಲ್ಲಿ ಅವನು ಪಕ್ಕದ ಮನೆಗೆ ಹೋಗಿ ಬಿಟ್ಟ.

ಇನ್ನು ಆ ಮನೆ ಆಕೆ ಸೀರಿಯಲ್ ನೋಡ್ಕೊಂಡು ಬಂದಿದ್ದು ಯಾರು ಅಂತ ಗಮನ ಕೊಡ್ದೇ ಕಾಫಿ ತಂದು ಕೊಟ್ಟಳು…

ಆದ್ರೆ ಎಲ್ಲದಕ್ಕಿಂತ ವಿಪರೀತ ಏನಂದ್ರೆ ಆಕೆ ಗಂಡ ಮನೆಗೆ ಬಂದವನೇ, ಅವನನ್ನು ನೋಡಿ ಅಯ್ಯೋ ಸಾರಿ ಬೇರೆ ಅವರ ಮನೆಗೆ ಬಂದ್ಬಿಟ್ಟೆ ಅಂದ ಪಾಪ ಅವನು ಫೇಸ್ಬುಕ್ಕಲ್ಲಿ ಬ್ಯುಸಿ ಇದ್ದ.

ಜೋಕ್ ೫

ಗಂಡ ಹೆಂಡತಿ ಇಬ್ಬರೂ ಮಲಗಿದ್ದರು. ಆಗ ಕಟ ಕಟ ಎನ್ನುವ ಶಬ್ದ ಕೇಳಿಸಿತು.

ಹೆಂಡತಿ: ರೀ ಏನೋ ಕಟ ಕಟ ಅನ್ನೋ ಶಬ್ದ ಕೇಳಿಸ್ತಾ ಇದೆ ನೋಡಿ,ಬಹುಶಃ ಇಲಿ ಬಂದಿರಬೇಕು

ಗಂಡ: ಅದು ಇಲಿ ಅಲ್ಲ, ಪೂರ್ತಿ ಹೊದಿಕೆ ನೀನೇ ಎಳ್ಕೊಂಡಿದ್ದೀಯಾ, ಅದಕ್ಕೆ ಚಳಿಗೆ ನನ್ನ ಹಲ್ಲು ನಡುಗ್ತಾ ಇರೋ ಶಬ್ದ ಅಂದ..

ಜೋಕ್ ೬

ಅಕ್ಬರ್ : ಬೀರಬಲ್ ನನಗೆ ಒಂದು ಮಾತು ಹೇಳು, ನಮ್ಮ ಸ್ಟಾಫ್ ನಲ್ಲಿ ತುಂಬಾ ಶ್ರಮ ಪಟ್ಟು ಕೆಲಸ ಮಾಡೋರನ್ನು ಹೇಗೆ ಕಂಡು ಹಿಡಿಯೋದು?

ಬೀರಬಲ್: ಬಹಳ ಸುಲಭ ಮಹಾರಾಜರೇ ಇರಿ ಈಗಲೇ ತೋರಿಸ್ತೀನಿ.

ಬೀರಬಲ್ ಹೋಗಿ ಎಲ್ಲಾ ಸ್ಟಾಫ್ ನ ಕರ್ಕೊಂಡು ಬಂದು ಚೆಕ್ ಮಾಡಿದ.

ಬೀರಬಲ್: ಮಹಾರಾಜರೇ ನೋಡಿ ಅವನೇ ಶ್ರಮ ಪಟ್ಟು ಕೆಲಸ ಮಾಡೋದು ಅಂತ ಒಬ್ಬ ವ್ಯಕ್ತಿಯನ್ನು ತೋರಿಸಿದ

ಅಕ್ಬರ್: ಅವನೇ ಅಂತ ನಿನಗೆ ಹೇಗೆ ಗೊತ್ತಾಯಿತು?

ಬೀರಬಲ್: ಅವನ ಮೊಬೈಲ್ ನಲ್ಲಿ 98% ಬ್ಯಾಟರಿ ಇದೆ ಮಹಾರಾಜರೇ, ಉಳಿದವರದ್ದೆಲ್ಲಾ ಕಡಿಮೆ ಆಗಿದೆ.

ಜೋಕ್ ೭

ಗಂಡ: ಇವತ್ತು ಊಟಕ್ಕೆ ಏನು ವಿಶೇಷ?

ಹೆಂಡತಿ: ಆಲೂಗಡ್ಡೆ ಪಲ್ಯ… ಆದ್ರೆ ಯಾಕೋ ಆಲೂಗಡ್ಡೆ ಬೇಗ ಬೇಯ್ತಾನೇ ಇಲ್ಲ.

ಗಂಡ: ಅದಕ್ಕೊಂದು ಉಪಾಯ ಇದೆ ಹಾಗೆ ಮಾಡು.

ಹೆಂಡತಿ: ಏನು ಅಂತ ಉಪಾಯ?

ಗಂಡ: ಹೋಗಿ ಆಲೂಗಡ್ಡೆ ಜೊತೆ ಮಾತಾಡು, ನಿನ್ನ ಮಾತು ಕೇಳಿದ್ರೆ ಸಾಕು ಬೆಂದು ಹೋಗುತ್ತೆ.

ಜೋಕ್ ೮

ಹುಡುಗಿ ಮನೆ ಅವರು ಹುಡುಗನ್ನ ನೋಡೋಕೆ ಬರ್ತಾ ಇದ್ರು..

ಹುಡುಗನ ತಂದೆ ಮಗನ್ನ ಕರೆದು ನೋಡೋ ಹುಡುಗಿ ಮನೆಯವರು ಬಂದಾಗ ಅವರ ಮುಂದೆ ಸ್ವಲ್ಪ ಎಕ್ಸ್ ಟ್ರಾ ಗಳನ್ನು ಹೇಳಿ ಅವರನ್ನು ಇಂಪ್ರೆಸ್ ಮಾಡೋ..

ಈ ಮಾತು ಕೇಳಿದ ಮಗ, ಸರಿ ಅಪ್ಪ ಈಗ ಕೀ ಕೊಡಿ ಹೊರಗೆ ಬಿಸಿಲಲ್ಲಿ ಇರೋ ರೈಲನ್ನು ತಂದು ಒಳಗೆ ಬಿಡ್ತೀನಿ ಅಂದ…

ಆ ಮಾತು ಕೇಳಿ ಅಪ್ಪಾ ಪ್ರಜ್ಞೆ ಕಳ್ಕೊಂಡ

ಜೋಕ್ : ೯

ಮಹಿಳೆ ತನ್ನ ಬಾಯ್ ಫ್ರೆಂಡ್ ಜೊತೆ ಸುತ್ತಾಡ್ತಾ ಇದ್ದಳು. ಆಗ ಅನಿರೀಕ್ಷಿತವಾಗಿ ಆಕೆಯ ಗಂಡ ಎದುರಿಗೆ ಬಂದು ಬಿಟ್ಟ.

ಹೆಂಡತಿಯನ್ನು ಬಾಯ್ ಫ್ರೆಂಡ್ ಜೊತೆ ನೋಡಿ ಕೋಪದಿಂದ ಗಂಡ ಅವನನ್ನು ಹೊಡೆಯೋಕೆ ಸ್ಟಾರ್ಟ್ ಮಾಡಿದ

ಆಗ ಹೆಂಡತಿ ಹೊಡೀರಿ ಹೊಡೀರಿ ಅವನ ಹೆಂಡ್ತೀನಾ ಸುತ್ತಾಡಿಸೋಕೆ ಆಗಲ್ಲ, ಬೇರೆ ಅವರ ಹೆಂಡ್ತಿಯರನ್ನು ಸುತ್ತಾಡಿಸ್ತಾನೆ ಅಂದ್ಲು..

ಆ ಮಾತು ಕೇಳಿ ಜೋಷ್ ಬಂದವನ ಹಾಗೆ ಆಕೆಯ ಬಾಯ್ ಫ್ರೆಂಡ್ ಅವಳ ಗಂಡನ್ನ ಹೊಡೆಯೋಕೆ ಆರಂಭ ಮಾಡಿದ.