ನಿಮ್ಮ ಮನೆಯಲ್ಲಿ ಫ್ರಿಜ್ ಇದ್ದರೆ ಈ ಸಂಗತಿಗಳು ನಿಮಗೆ ಗೊತ್ತಿರಲೇಬೇಕು ಇಲ್ಲಾಂದ್ರೆ
ಪಟ್ಟಣ ಬಿಡಿ ಸದ್ಯ ಹಳ್ಳಿಗಳಲ್ಲಿಯೂ ಸಹ 90% ಜನರ ಮನೆಯಲ್ಲಿ ಪ್ರೀಜ್ ಗಳು ಕಂಡುಬರುತ್ತವೆ. ಫ್ರಿಜ್ ಇದು ಅಡುಗೆ ಮನೆಯಲ್ಲಿಯ ಅವಿಭಾಜ್ಯ ಅಂಗವಾಗಿದೆ. ಈ ಲೇಖನದಲ್ಲಿ ನೀಡಿದ ಮಾಹಿತಿಯನ್ನು ಓದಿ ಅದರಂತೆ ಪಾಲಿಸಿದರೆ ನಿಮ್ಮ ಮನೆಯಲ್ಲಿರುವ ಫ್ರಿಡ್ಜ್ ದೀರ್ಘಕಾಲದವರೆಗೆ ಸೇವೆ ನೀಡುತ್ತದೆ. ಮತ್ತು ಬಹಳ ದಿನಗಳವರೆಗೆ ಚೆನ್ನಾಗಿ ಬಾಳುವುದು. ಅಂದರೆ ಅದರ ಮೆಂಟೇನೆನ್ಸ್ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿಲ್ಲ. ತುಂಬಾ ಜನರಿಗೆ ಗೊತ್ತಿರದ ಸಂಗತಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ ನೋಡಿ ಅವು ಯಾವವು ಅಂತ….

- ಸಮತಟ್ಟಾದ ಸ್ಥಳ:- ಮನೆಯಲ್ಲಿಯ ಫ್ರಿಡ್ಜ್ ಸಮತಟ್ಟಾದ ನೆಲದ ಮೇಲೆ ಇದೆಯೋ ಇಲ್ಲವೋ ಎಂಬುದನ್ನು ಒಮ್ಮೆ ಚೆಕ್ ಮಾಡಿ. ಯಾಕೆಂದರೆ ಸಮತಟ್ಟಾದ ನೆಲದ ಮೇಲೆ ಇರುವುದರಿಂದ ಫ್ರಿಡ್ಜ್ ನ ಕಂಪ್ರೆಸರ್ ಚೆನ್ನಾಗಿ ಕೆಲಸ ಮಾಡುತ್ತದೆ. ಕಂಪ್ರೆಸರ್ ಚೆನ್ನಾಗಿದ್ದರೆ ಮಾತ್ರ ಫ್ರಿಡ್ಜ್ ಚೆನ್ನಾಗಿ ಕೆಲಸ ಕೊಡಲು ಸಾಧ್ಯ. ಮೆಂಟೆನೆನ್ಸ್ ನ ಯಾವುದೇ ಸಮಸ್ಯೆ ಮೇಲಿಂದ ಮೇಲೆ ಬರುವುದಿಲ್ಲ.
- ಹವೆ ಆಡುವ ಸ್ಥಳ:- ಫ್ರಿಡ್ಜ್ ನ್ನು ಗೋಡೆಗೆ ಆನಿಸದೇ ಗೋಡೆಯಿಂದ ಸುಮಾರು 30 ಸೆಂಟಿಮೀಟರ್ ಗಳ ಅಂತರದಲ್ಲಿ ಇಡಿ. ಕಾರಣ ಕಂಪ್ರೆಸರ್ ನಿಂದ ಸತತವಾಗಿ ಬೆಚ್ಚಗಿನ ಹವೆ ಹೊರಹೊಮ್ಮುವದರಿಂದ ಆ ಹವೆ ಗೋಡೆಗೆ ಬಡಿದು ಮರಳಿ ಕಂಪ್ರೆಸರ್ ಗೆ ತಗಲುತ್ತದೆ. ಇದರಿಂದ ಕಂಪ್ರೆಸರ್ ದ ಟೆಂಪರೇಚರ್ ಹೆಚ್ಚಾಗುವುದು. ಆಮೇಲೆ ಫ್ರಿಡ್ಜ್ ಮೆಂಟೇನೆನ್ಸ್ ಗೆ ಕಾರಣವಾಗುತ್ತದೆ.
- ಬೆಚ್ಚಗಿನ ಸ್ಥಳದಿಂದ ದೂರ:- ಫ್ರಿಡ್ಜ್ ನ್ನು ಯಾವತ್ತೂ ಬೆಚ್ಚಗಿನ ಸ್ಥಳದಲ್ಲಿ ಇಡಬೇಡಿ. ನಿಮ್ಮ ಮನೆಯಲ್ಲಿ ಬೇರೆ ಯಾವುದಾದರೂ ಮಷೀನ್ ಇದ್ದರೆ ಅದು ಬೆಚ್ಚಗಿನ ಹವೆಯನ್ನು ಹೊರ ಹಾಕುತ್ತಿದ್ದರೆ ಅಂತ ಸ್ಥಳದಲ್ಲಿ ಫ್ರೀಜ್ ಇಡುವುದರಿಂದ ಮೇಲಿಂದ ಮೇಲೆ ರಿಪೇರಿಗೆ ಬರುವುದು.
- ಬೆಚ್ಚಗಿನ ಪದಾರ್ಥಗಳು:- ಫ್ರಿಜ್ನಲ್ಲಿ ಬೆಚ್ಚಗಿನ, ಸುಡುತ್ತಿರುವ ಯಾವುದೇ ಆಹಾರ ಪದಾರ್ಥಗಳನ್ನು ಇಡಬಾರದು. ಇದರಿಂದ ಫ್ರಿಡ್ಜ್ ಬಾಳಿಕೆ ಕಡಿಮೆಯಾಗುವುದರೊಂದಿಗೆ ಆಹಾರ ಪದಾರ್ಥಗಳಲ್ಲಿ ಪೋಷಕ ಘಟಕಗಳು ಬೇಗನೆ ನಷ್ಟವಾಗುತ್ತದೆ.
- ಫ್ರಿಜ್ ಬಾಗಿಲು:- ಫ್ರಿಜ್ ಬಾಗಿಲು ಸತತವಾಗಿ ತೆರೆಯುವುದು, ಮುಚ್ಚುವುದು ಮಾಡಬಾರದು. ಹಾಗೂ ಬಹಳ ಹೊತ್ತಿನವರೆಗೆ ಓಪನ್ ಆಗಿಯೂ ಇಡಬಾರದು. ಇದರಿಂದ ಫ್ರಿಜ್ಜಿನಲ್ಲಿಯ ತಾಪಮಾನ ವೇಗದಲ್ಲಿ ಹೆಚ್ಚಿಸುವದು. ಹೊರಗಿನ ಹವೆ ಒಳಗೆ ಪ್ರವೇಶಿಸುವುದರಿಂದ ಆ ಹವೆಯನ್ನು ತಂಪು ಮಾಡಲು ಹೆಚ್ಚುವರಿ ವಿದ್ಯುತ್ ಖರ್ಚಾಗುವುದರೊಂದಿಗೆ ಫ್ರಿಡ್ಜ್ ನ ಕೆಲಸವು ಹೆಚ್ಚಿಸುವುದು. ಮತ್ತು ಅದರಲ್ಲಿಯ ಗ್ಯಾಸ್ ಮುಗಿಯಲು ಕಾರಣವಾಗುತ್ತದೆ.
- ಡಿಫ್ರಾಸ್ಟ್ :- ಡಿಫ್ರಾಸ್ಟ್ ಹೆಸರಿನ ಒಂದು ಬಟನ್ ಇರುತ್ತದೆ. 99% ಜನರು ಈ ಬಟನ್ ನ ಉಪಯೋಗವನ್ನು ಮಾಡುವುದಿಲ್ಲ. ಇದರ ಉಪಯೋಗ ವಾರದಲ್ಲಿ ಒಂದು ಸಲವಾದರೂ ಮಾಡಲೇಬೇಕು. ಡಿಫ್ರಾಸ್ಟ್ ಮಾಡುವುದರಿಂದ ಫ್ರಿಡ್ಜ್ ಮತ್ತೆ ಮೂಲಸ್ಥಿತಿಗೆ ಮರಳುವದು. ಒಳಗೆ ಶೇಖರಿಸಿದ ಹಿಮವೆಲ್ಲ ಕರಗಿ ನೀರಾಗುವುದು. ಈ ರೀತಿಯಾಗಿ ಮಾಡುವುದರಿಂದ ಫ್ರಿಡ್ಜ್ ಮತ್ತೊಮ್ಮೆ ಹೊಸದಾಗಿ ಉತ್ಸಾಹದಿಂದ ಕೆಲಸವನ್ನು ಶುರು ಮಾಡುತ್ತದೆ. ಉದಾಹರಣೆಗಾಗಿ ನಾವು ಮೊಬೈಲ್ ಹೇಗೆ ರೀಸ್ಟಾರ್ಟ್ ಅಥವಾ ರೀಬೂಟ್ ಮಾಡುತ್ತೇವೆಯೋ ಹಾಗೆ ಫ್ರಿಡ್ಜ್ ಸಹಿತ ವಾರದಲ್ಲಿ ಒಂದು ಬಾರಿಯಾದರೂ ಡಿಫ್ರಾಸ್ಟ್ ಮಾಡಬೇಕು. ಈ ರೀತಿಯಾಗಿ ಮಾಡಿದರೆ ನಿಮ್ಮ ಫ್ರಿಡ್ಜ್ ಯಾವತ್ತೂ ರಿಪೇರಿಗೆ ಬರುವುದಿಲ್ಲ.
- ಫ್ರಿಜ್ ನಲ್ಲಿ ಆಲೂಗಡ್ಡೆ ಇಡಬೇಡಿ:– ಫ್ರಿಜ್ಜಿನಲ್ಲಿ ಒಂದು ವೇಳೆ ಆಲೂಗಡ್ಡೆಯನ್ನು ಇಡುತ್ತಿದ್ದರೆ ಮೊದಲು ಆ ಕೆಲಸವನ್ನು ನಿಲ್ಲಿಸಿ. ಯಾಕೆಂದರೆ ಫ್ರಿಡ್ಜ್ ನಲ್ಲಿ ಇಡುವ ಆಲೂಗಡ್ಡೆಗಳನ್ನು ಆಹಾರಕ್ಕಾಗಿ ಉಪಯೋಗಿಸುವದರಿಂದ ದೇಹ ಆರೋಗ್ಯಕ್ಕೆ ಋಣಾತ್ಮಕ ಪರಿಣಾಮವಾಗುತ್ತದೆ.
- ಫ್ರಿಜ್ ನಿಂದ ಆಹಾರ ಪದಾರ್ಥಗಳನ್ನು ತೆಗೆದ ನಂತರ:- ಫ್ರಿಜ್ ನಿಂದ ಆಹಾರ ಪದಾರ್ಥಗಳನ್ನು ತೆಗೆದ ನಂತರ ತಕ್ಷಣ ಅವುಗಳನ್ನು ಬಿಸಿಮಾಡಲು ಪ್ರಯತ್ನಿಸಬೇಡಿ. ಸುಮಾರು 10 ರಿಂದ 15 ನಿಮಿಷವಾದರೂ ಬಿಡಿ. ಯಾವಾಗ ಆಹಾರ ಪದಾರ್ಥವು ಸಹಜ ಸ್ಥಿತಿಗೆ ಬರುತ್ತದೆಯೋ ಆಗ ಅದನ್ನು ಬಿಸಿ ಮಾಡಿ ಊಟ ಮಾಡಬೇಕು.