“ಅರ್ಜುನ್ ಕಪೂರ್ ಅವರ ಮಗುವಿಗೆ ತಾಯಿಯಾಗುವಳೆ 47 ವರ್ಷದ ಮಲೈಕಾ?” ಎಂದು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಬಾಲಿವುಡ್ ನಟಿ ಮಲೈಕಾ ಅರೋರಾ
ಬಾಲಿವುಡ್ ನಲ್ಲಿ ಹಳೆಯ ಸಂಬಂಧಗಳು ಬ್ರೇಕ್ ಅಪ್ ಆಗುವದು, ಮತ್ತು ಹೊಸ ಸಂಬಂಧಗಳು ಪ್ಯಾಚ್ ಅಪ್ ಆಗುವದು ಸದಾ ನಡೆದೇ ಇರುತ್ತದೆ. ಒಬ್ಬರ ಹೆಂಡತಿ ಇನ್ನೊಬ್ಬರಿಗೆ, ಒಬ್ಬಳ ಗಂಡ ಇನ್ನೊಬ್ಬಳ ಜೊತೆಗೂಡುವದು ಅಲ್ಲಿ ಹೊಸ ವಿಷಯಗಳೇನಲ್ಲ.
ಬಾಲಿವುಡ್ ಹಾಟ್ ಗರ್ಲ್ ಮಲೈಕ ಅರೋರ ಅವರು ಸಲ್ಮಾನ್ ಖಾನ್ ಅವರ ಸೋದರ ಅರ್ಬಾಜ್ ಖಾನ್ ಅವರ ಜೊತೆಗೆ 1998 ರಲ್ಲಿ ಮದುವೆಯಾಗಿ ಸುಮಾರು ಇಪ್ಪತ್ತು ವರ್ಷಗಳ ವೈವಾಹಿಕ ಜೀವನ ನಡೆಸಿ ಕೊನೆಗೆ 2017 ರಲ್ಲಿ ಅವರಿಂದ ವಿಚ್ಛೇದನ ಪಡೆದರು.
ಸದ್ಯ ತನಗಿಂತ 11 ವರ್ಷ ಚಿಕ್ಕವರಾದ ಅರ್ಜುನ್ ಕಪೂರ್ ಅವರೊಂದಿಗೆ ರಿಲೇಶನ್ ಶಿಪ್ ನಲ್ಲಿ ಇದ್ದಾರೆ. ಮೊದಮೊದಲು ಇಬ್ಬರೂ ಸಂಬಂಧವನ್ನು ಜಗತ್ತಿನಿಂದ ಮುಚ್ಚುಮರೆ ಮಾಡಿದರು. ಕೊನೆಗೆ 2019 ರಲ್ಲಿ ಮಲೈಕ ಅವರು ತಮ್ಮ ಹುಟ್ಟುಹಬ್ಬದ ದಿನದಂದು ತಮ್ಮಿಬ್ಬರ ಸಂಬಂಧದ ಬಗ್ಗೆ ಮೊದಲ ಬಾರಿಗೆ ಒಪ್ಪಿಕೊಂಡರು.
ಈಗೀಗಂತೂ ಮಲೈಕ ಅವರ 17 ವರ್ಷದ ಮಗನಾದ ಅರಹನ್ ಸಹ ತನ್ನ ತಾಯಿ ಮಲೈಕಾ ಮತ್ತು ಅರ್ಜುನ್ ಕಪೂರ್ ಅವರ ಸಂಬಂಧಕ್ಕೆ ಒಪ್ಪಿಕೊಂಡಿದ್ದಾನೆ. ಹಾಗೂ ಇವರಿಬ್ಬರಲ್ಲಿ ಬೊಂಡಿಂಗ್ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾನೆ.

ಒಂದು ಸಂದರ್ಶನದಲ್ಲಿ, ನೀವು ಅರ್ಜುನ್ ಕಪೂರ್ ಅವರೊಂದಿಗೆ ಮದುವೆಯಾಗುತ್ತೀರಾ ಎಂದು ಕೇಳಿದ್ದಕ್ಕೆ ಮಲೈಕ ಅವರು, ಸಮಯಕ್ಕೆ ತಕ್ಕಂತೆ ನಾವು ಮುಂದೆ ಹೋಗುತ್ತಾ ಇರಬೇಕು. ನಮ್ಮಿಬ್ಬರ ಮದುವೆಯ ಬಗ್ಗೆ ಸದ್ಯದಲ್ಲೇ ಏನನ್ನು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಮದುವೆಯಾಗುವುದಾದರೆ ಮೊದಲು ನಿಮಗೆ ಹೇಳುತ್ತೇವೆ ಎಂದು ಹೇಳಿದ್ದಾರೆ.
ಇನ್ನೊಂದು ಪ್ರಶ್ನೆಯಲ್ಲಿ ನೀವು ಅರ್ಜುನ್ ಕಪೂರ್ ಅವರ ಮಗುವಿಗೆ ತಾಯಿಯಾಗುವಿರಾ ಎಂದು ಕೇಳಿದಾಗ ಅವರ ಉತ್ತರ ಹೀಗಿತ್ತು.. ಪರಿಸ್ಥಿತಿಗೆ ನಾವು ಪ್ರಾಮಾಣಿಕತನದಿಂದ ಎದುರಾಗಬೇಕು. ನಾವಿಬ್ಬರು ನಮ್ಮ ಸಂಬಂಧದಲ್ಲಿ ತುಂಬಾ ಪ್ರಾಮಾಣಿಕತನದಿಂದ ಮುಂದುವರಿಯುತ್ತಿದ್ದೇವೆ. ಸಮಯಕ್ಕೆ ತಕ್ಕಂತೆ ಒಂದೊಂದು ಸಂಗತಿಗಳು ಆಗುತ್ತ ಹೋಗುತ್ತವೆ. ಹಾಗೆಯೇ ಒಂದೊಂದು ಮೆಟ್ಟಿಲನ್ನು ಏರುತ್ತಿದ್ದೇವೆ. ಯಾವ ರೀತಿ ನಮ್ಮ ಸಂಬಂಧವು ಮುಂದೆ ಮುಂದೆ ಸಾಗುತ್ತದೆ ಆಗ ಎಲ್ಲವೂ ತಾನಾಗಿಯೇ ಘಟಿಸುತ್ತದೆ, ಮತ್ತು ಅದರ ಬಗ್ಗೆ ನಿಮಗೆ ಹೇಳಿಯೇ ಹೇಳುತ್ತೇವೆ ಎಂಬ ಮಾತನ್ನು ಆಡಿದರು.