“ಮ್ಯಾಕ್ಸ್ ವೆಲ್ IPL ಗೆ ಕೇವಲ ಮನರಂಜನೆ ಮತ್ತು ಪುಕ್ಕಟೆ ‘ಎಣ್ಣೆ’ ಕುಡಿಯಲು ಬರುತ್ತಾನೆ!”
ಕಳೆದ ಐಪಿಎಲ್ ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ ಅವರ ಆಟ ಅಷ್ಟೇನು ಗಮನ ಸೆಳೆಯುವಂತದ್ದು ಇರಲಿಲ್ಲ. ಏಕೆಂದರೆ ಅವರ ಆಟವೇ ಅದ್ಭುತವಾಗಿದೆ. ಆ ಆಟದ 20 ಪ್ರತಿಶತವೂ ದುಬೈಯ ಮೈದಾನಗಳಲ್ಲಿ ಕಂಡುಬರಲಿಲ್ಲ. ಹೀಗಾಗಿ ಸೆಹ್ವಾಗ್ ಹಿಡಿದು ಅನೇಕರು ಮ್ಯಾಕ್ಸ್ವೆಲ್ ಮೇಲೆ ಟೀಕೆ ಮಾಡಿದರು.
ಸದ್ಯ ಭಾರತದ ವಿರುದ್ಧ ಆಡುತ್ತಿರುವ ಅವರ ಆಟವನ್ನು ಗಮನಿಸಿದರೆ ಐಪಿಎಲ್ ನಲ್ಲಿ ಮ್ಯಾಕ್ಸ್ವೆಲ್ ಅವರು ಸ್ವಲ್ಪವೂ ಒತ್ತಡವನ್ನು ತೆಗೆದುಕೊಳ್ಳದೆ ಆರಾಮಾಗಿ ಇರುತ್ತಾರೆ. ಹೀಗಾಗಿ ಮ್ಯಾಕ್ಸ್ವೆಲ್ ಅವರು ಐಪಿಎಲ್ ಗೆ ಬರೀ ಮನೋರಂಜನೆಗಾಗಿ ಬರುತ್ತಾರೆ. ಈ ಮಧ್ಯೆ ಅವರು ಆಟದ ಮೈದಾನದಲ್ಲಿ ತಿರುಗಾಡುತ್ತಾರೆ, ಎಲ್ಲರಿಗೂ ಸ್ಫೂರ್ತಿಯನ್ನು ತುಂಬುತ್ತಾರೆ, ಡ್ಯಾನ್ಸ್ ಸಹಿತ ಮಾಡುತ್ತಾರೆ, ಬ್ಯಾಟಿಂಗ್ ಮಾಡುತ್ತಾರೆ ಆದರೆ ರನ್ ಗಳನ್ನು ಮಾತ್ರ ತೆಗೆಯುವುದಿಲ್ಲ. ಪಂದ್ಯ ಮುಗಿದ ನಂತರ ಪುಕ್ಕಟ್ಟೆ ಎಣ್ಣೆ ದೊರೆತರೆ ಅದನ್ನು ತೆಗೆದುಕೊಂಡು ತಮ್ಮ ರೂಮಿಗೆ ಹೋಗಲು ಇಷ್ಟಪಡುತ್ತಾರೆ. ಐಪಿಎಲ್ ನಲ್ಲಿ ಅವರ ಮಾಡುವುದು ಇಷ್ಟೇ.
ಮೊನ್ನೆ ವೀರೇಂದ್ರ ಸೆಹ್ವಾಗ್ ಅವರು ಮ್ಯಾಕ್ಸ್ವೆಲ್ ಅವರಿಗೆ ಟೀಕೆ ಮಾಡುವಾಗ 10 ಕೋಟಿ ರೂಪಾಯಿಗಳ ಚಿಯರ್ ಲೀಡರ್ ಎಂದು ಕಾಲೆಳೆದಿದ್ದರು. ಈ ಮಾತಿಗೆ ಮ್ಯಾಕ್ಸ್ವೆಲ್ ಅವರು ವೀರೇಂದ್ರ ಸೆಹ್ವಾಗ್ ಮೀಡಿಯಾದಲ್ಲಿ ಚರ್ಚೆಯಲ್ಲಿ ಇರುವುದಕ್ಕಾಗಿ ರೀತಿ ಮಾತನಾಡುತ್ತಿರುತ್ತಾರೆ ಎಂದು ಪ್ರತ್ಯುತ್ತರವನ್ನು ಕೊಟ್ಟಿದ್ದರು.

ಈಗ ಮೂರನೇ ಟಿ 20 ಪಂದ್ಯದ ನಂತರ ಸೆಹ್ವಾಗ್ ಅವರು ಮತ್ತೆ ಟೀಕೆ ಮಾಡಿದ್ದಾರೆ. ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಮ್ಯಾಕ್ಸ್ವೆಲ್ ಅವರಲ್ಲಿ ಆಟದ ಪ್ರತಿ ಇರುವ ಗಂಭೀರತೆ ಎಲ್ಲಿಯೂ ಕಂಡು ಬರಲಿಲ್ಲ. ನೀವು ನಿಮ್ಮ ಕೆಲಸದ ಬಗ್ಗೆ ಗಂಭೀರವಾಗಿದ್ದರೆ ಅದು ನಿಮ್ಮ ಪ್ರಯತ್ನದಲ್ಲಿ ಕಂಡುಬರುತ್ತದೆ ಎಂದು ಸೆಹ್ವಾಗ್ ಅವರು ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ್ದಾರೆ. ಭಾರತದ ವಿರುದ್ಧ ನಿಮ್ಮ ರೆಕಾರ್ಡ್ ಚೆನ್ನಾಗಿ ಆಗುತ್ತದೆ. ಅಂದಾಗ ಐಪಿಎಲ್ ನಲ್ಲಿ ಹೀಗೇಕೆ ಎಂದು ಸೆಹ್ವಾಗ್ ಮ್ಯಾಕ್ಸ್ವೆಲ್ ಅವರಿಗೆ ಪ್ರಶ್ನೆ ಹಾಕಿದ್ದಾರೆ.
ಹೀಗಾಗಿ ಈಗ ಇಬ್ಬರ ವಾಕ್ಸಮರ ಪ್ರಾರಂಭವಾಗಿದೆ ಅಂತಲೇ ಹೇಳಬಹುದು. ಇದಕ್ಕೆ ಮ್ಯಾಕ್ಸ್ವೆಲ್ ಅವರು ಯಾವ ಉತ್ತರ ನೀಡುತ್ತಾರೆ ಕಾದುನೋಡಬೇಕಷ್ಟೇ.