ಜ್ಯೂ ಧರ್ಮಿಯರು ವಿಶ್ವದಲ್ಲೇ ಎಲ್ಲಕ್ಕೂ ಯಶಸ್ವಿ ಹಾಗೂ ಶ್ರೀಮಂತರಾಗಿರಲು ಕಾರಣವೇನು?
ಭಾರತದಲ್ಲಿ ಹೆಚ್ಚು ಶ್ರೀಮಂತರು ಯಾರು ಎಂದರೆ ನಮ್ಮೆಲ್ಲರ ಕಣ್ಣುಗಳ ಮುಂದೆ ಥಟ್ಟನೆ ಮಾರವಾಡಿ ಮತ್ತು ಪಾರಸಿಗಳೇ ಬಂದು ನಿಲ್ಲುತ್ತಾರೆ. ಇವರು ಸ್ವಯಂ ಕಷ್ಟದಿಂದ ತಮ್ಮ ಬಿಜಿನೆಸ್ ನಲ್ಲಿ ಒಳ್ಳೆಯ ಸ್ಥಾನವನ್ನು ಪ್ರಸ್ತಾಪಿಸುತ್ತಾರೆ. ಹಾಗೆಯೇ ದೇಶದ ತುಂಬೆಲ್ಲ ಜನರು ಇವರ ಯಶಸ್ವಿ ಬಿಜಿನೆಸ್ ಬಗ್ಗೆ ಮಾತನಾಡುತ್ತಾರೆ.
ಆದರೆ ಜಗತ್ತಿನ ವಿಚಾರ ಮಾಡಲಾಗಿ ಜ್ಯೂ ಜನರು (ಯಹೂದಿಗಳು) ಬಿಜಿನೆಸ್ ನಲ್ಲಿ ತುಂಬಾ ಯಶಸ್ವಿಯಾಗಿದ್ದಾರೆ. ಇವರ ಯಶಸ್ಸಿನ ಹಿಂದೆ ಇರುವ ಕಾರಣಗಳೇನು ಎಂಬುದು ನಿಮಗೆ ಏನಾದರೂ ಗೊತ್ತಾ, ಒಂದು ವೇಳೆ ಗೊತ್ತಿಲ್ಲದಿದ್ದರೆ ಈ ಲೇಖನವನ್ನು ಓದಿ. ಈ ಲೇಖನದಲ್ಲಿ ಅವರ ಯಶಸ್ಸಿನ ಕಾರಣಗಳನ್ನು ನೀಡಲಾಗಿದೆ, ಓದಿ ಒಮ್ಮೆ…..
ಜ್ಯೂ ಜನರು ಮುಖ್ಯವಾಗಿ ಇಸ್ರೇಲ್ ಅಮೆರಿಕ ಮತ್ತು ಯುರೋಪ್ ನಲ್ಲಿ ಕಂಡುಬರುತ್ತಾರೆ. ಇವರು ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ 0.2 ಪ್ರತಿಶತರಿದ್ದಾರೆ. ಜಗತ್ತಿನಲ್ಲಿ ಇಷ್ಟೊಂದು ಕಡಿಮೆ ಸಂಖ್ಯೆಯಲ್ಲಿದ್ದರೂ ಜಗತ್ತಿನ 70% ಅರ್ಥವ್ಯವಸ್ಥೆ, ಮೀಡಿಯಾ, ಯುದ್ಧ ಸಾಮಗ್ರಿಗಳನ್ನು ತಯಾರಿಸುವಂತಹ ಮಹತ್ವದ ಕೆಲಸಗಳ ಮೇಲೆ ಇವರ ಹಿಡಿತವಿದೆ. ವಿಶೇಷವಾಗಿ ಅಮೆರಿಕೆಯಲ್ಲಿ ರಾಜಕೀಯ ದೃಷ್ಟಿಯಿಂದ ಈ ಜನ ತುಂಬಾ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ.
ಕೆಲವು ಪ್ರಸಿದ್ಧ ಜ್ಯೂ ಜನರ ಹೆಸರುಗಳು ಈ ಕೆಳಗಿನಂತಿವೆ. ಆಲ್ಬರ್ಟ್ ಐನ್ಸ್ಟೈನ್(ಶಾಸ್ತ್ರಜ್ಞ), ಲ್ಯಾರಿ ಪೇಜ್, ಸೇರ್ಜೆ ಬ್ರೈನ್ (ಗೂಗಲ್ ಸಂಸ್ಥಾಪಕ), ಮಾರ್ಕ್ ಜುಕರ್ ಬರ್ಗ್( ಫೇಸ್ಬುಕ್ ಸಂಸ್ಥಾಪಕ) ಜಾಕೋಬ್ (ಜೆಪಿ ಮಾರ್ಗನ್) ರಾಬರ್ಟ್ (ಸಿಟಿಬ್ಯಾಂಕ್ ಸಂಸ್ಥಾಪಕ) ಅಡಾಲ್ಫ್ (ನ್ಯೂಯಾರ್ಕ ಟೈಮ್) ಜಿಮ್ಮಿ (ವಿಕಿಪೀಡಿಯ ಸಂಸ್ಥಾಪಕ) ಮೈಕೆಲ್ (ಡಿಸ್ನಿ ಕಾರ್ಟೂನ್) ಸ್ಟೀವನ್ ಸ್ಪೀಲ್ಬರ್ಗ್ (ಜುರಾಸಿಕ್ ಪಾರ್ಕ್) ಆಲ್ಬರ್ಟ್ (ಆರೆನ್ ಬ್ರದರ್ಸ್).

ಅಮೆರಿಕೆಯ ಒಟ್ಟು ಅಬ್ಜಾಧೀಶರಲ್ಲಿ ಸುಮಾರು 48 ಪ್ರತಿಶತ ಅಬ್ಜಾಧೀಶರು ಬರೀ ಜ್ಯೂ ಗಳಾಗಿದ್ದಾರೆ. ಅಷ್ಟೇ ಅಲ್ಲ ಜಗತ್ತಿನ 40 ಪ್ರತಿಶತ ಕ್ಕೂ ಹೆಚ್ಚು ಪೇಟೆಂಟ್ ಮತ್ತು ನೊಬೆಲ್ ಪುರಸ್ಕಾರಗಳು ಜ್ಯೂ ಜನರಿಗೆ ಲಭಿಸಿವೆ. ಜೊತೆಗೆ ಬರಾಕ್ ಒಬಾಮಾ ಅವರ ಸಚಿವ ಸಂಪುಟದಲ್ಲಿಯ ಅತೀ ಹೆಚ್ಚು ಮಂತ್ರಿಗಳು ಜ್ಯೂ ಗಳೇ ಆಗಿದ್ದರು.
ಜ್ಯೂ ಜನರp ವೈಶಿಷ್ಟ್ಯಗಳು…
- ದೈಹಿಕ ಸದೃಢತೆ:– ಈ ಜನರ ಸರಾಸರಿ ಎತ್ತರ 6.2 ಇದೆ. ಈ ಜನರು ಶರೀರದಿಂದ ದಷ್ಟಪುಷ್ಟವಾಗಿರುತ್ತಾರೆ. ತಂದೆ-ತಾಯಿಯರ ಮುಖಾಂತರ ಮಕ್ಕಳ ಸಂಗೋಪನೆ ತುಂಬಾ ಚೆನ್ನಾಗಿ ಆಗಿರುತ್ತದೆ. ಈ ಕಾರಣದಿಂದ ಅವರ ಮೆದುಳು ಚೆನ್ನಾಗಿ ವಿಕಸಿತವಾಗಿರುತ್ತದೆ.
- ಉಚ್ಚ ದರ್ಜೆಯ ಐಕ್ಯೂ:- ಜ್ಯೂ ಜನರ ಐಕ್ಯು ಜಗತ್ತಿನ ಯಾವುದೇ ಬೇರೆ ಜಾತಿ ಧರ್ಮದ ಜನರಿಗಿಂತ ಹೆಚ್ಚಿರುತ್ತದೆ. ಜಗತ್ತಿನ ಎಲ್ಲ ಉಳಿದ ಜನರ ಐಕ್ಯು ಲೆವಲ್ ಪ್ರತಿಶತ 79.1 ಇದ್ದರೆ ಈ ಜ್ಯೂ ಜನರ ಐಕ್ಯೂ 140 ಕ್ಕೂ ಮೇಲ್ಪಟ್ಟು ಇರುತ್ತದೆ. ಸರಳವಾಗಿ ಹೇಳಬೇಕೆಂದರೆ, ನಮ್ಮಲ್ಲಿ Phd. ವ್ಯಕ್ತಿಯಲ್ಲಿ ಇರುವಷ್ಟು ಜ್ಞಾನ ಜ್ಯೂ ಜನರಲ್ಲಿಯ PUC ಕಲಿಯುವ ಹುಡುಗನಿಗೆ ಇರುತ್ತದೆ.
- ಶಿಖರವನ್ನು ಮುಟ್ಟುವ ಹವ್ಯಾಸ:– ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುವ ಹವ್ಯಾಸವನ್ನು ಇವರು ಹೊಂದಿರುತ್ತಾರೆ. ಕೈಗೆತ್ತಿದ ಕೆಲಸಕ್ಕೆ ತಮ್ಮನ್ನು ತಾವು ಸಂಪೂರ್ಣವಾಗಿ ಮೀಸಲಿಡುತ್ತಾರೆ. ಆದ್ದರಿಂದಲೇ ಇಂಥವರ ಕೈಯಿಂದಲೆ ಗೂಗಲ್, ಫೇಸ್ಬುಕ್, ಹಾಲಿವುಡ್ ಚಿತ್ರಗಳು ನಿರ್ಮಾಣವಾಗಿವೆ ಮತ್ತು ನೊಬೆಲ್ ಪುರಸ್ಕಾರಗಳು ಇವರಿಗೆ ಬೆನ್ನಟ್ಟಿ ಬರುತ್ತವೆ.
- ಜಗತ್ತಿನಗಿಂತ 25 ವರ್ಷಗಳು ಯಾವತ್ತೂ ಮುಂದೆ ಇರುತ್ತಾರೆ:- ನಿಜ ಹೇಳಬೇಕೆಂದರೆ ನಾವು ಕನಸಿನಲ್ಲಿ ವಿಚಾರ ಮಾಡಲಿಕ್ಕಿಲ್ಲ ಅಂತ ಪ್ರೊಜೆಕ್ಟ್ ಗಳ ಮೇಲೆ ಇವರು ನಿರಂತರ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಯಾವತ್ತೂ ಇವರು ಜಗತ್ತಿಗಿಂತ ಸುಮಾರು 25 ವರ್ಷ ಮುಂದೆ ನಡೆಯುತ್ತಿರುತ್ತಾರೆ.
5.ನೆಟ್ವರ್ಕ್:- ವ್ಯಾಪಾರದ ಕಾರಣದಿಂದಾಗಿ ಜ್ಯೂ ಜನರು ಜಗತ್ತಿನಾದ್ಯಂತ ಪಸರಿಸಿದ್ದಾರೆ. ಹೀಗಾಗಿ ಒಬ್ಬರಿಗೊಬ್ಬರ ಸಹಾಯದಿಂದ ತುಂಬಾ ವೇಗದಲ್ಲಿ ಜಗತ್ತಿನ ಮೇಲೆ ತಮ್ಮ ಬುದ್ಧಿಶಕ್ತಿಯಿಂದ ರಾಜ್ಯ ಮಾಡುತ್ತಿದ್ದಾರೆ.
- ಸದೃಢ ಹಸುಗೂಸು:- ಈ ಜನರ ಹುಟ್ಟಿದ ಮಕ್ಕಳು ತುಂಬಾ ಸದೃಢವಾಗಿರುತ್ತವೆ. ಈ ಮಕ್ಕಳ ತಲೆಯ ಮಧ್ಯಭಾಗ ಮೊದಲೇ ಪರಿಪೂರ್ಣವಾಗಿ ತುಂಬಿದ್ದು ಇರುತ್ತದೆ. ನಮ್ಮ ಕಡೆಗೆ ಈ ತಲೆಯ ಮಧ್ಯಭಾಗವನ್ನು ತುಂಬಲು ತಿಂಗಳು ಗಟ್ಟಲೆ ಎಣ್ಣೆ ಹಾಕುತ್ತಾರೆ. ಇದಕ್ಕೆ ಕಾರಣ ನಮ್ಮಲ್ಲಿ ಗರ್ಭವತಿ ಮಹಿಳೆಯ ಮಾನಸಿಕ ಮತ್ತು ಶಾರೀರಿಕ ಶುಶ್ರೂಷೆ ಅಷ್ಟೊಂದು ಚೆನ್ನಾಗಿ ಆಗಿರುವುದಿಲ್ಲ. ಹಾಗೂ ನಾವು ಹೆಚ್ಚಾಗಿ ಕುಲ ಉದ್ಧಾರಕನ, ವಂಶದ ಕುಡಿಯ ಬಗ್ಗೆ ಅಷ್ಟೇ ವಿಚಾರ ಜಾಸ್ತಿ ಮಾಡುತ್ತೇವೆ.
- ಮದುವೆಯ ಚಿಂತೆ ಇಲ್ಲ:- ಜ್ಯೂ ಧರ್ಮದಲ್ಲಿ ಯುವಕ ಯುವತಿಯರಿಗೆ ಮದುವೆಯ ಚಿಂತೆ ಎಳ್ಳಷ್ಟೂ ಇರುವದಿಲ್ಲ. ತಮ್ಮ ಇಚ್ಛೆಯ ಅನುಸಾರವಾಗಿ ಯಾವಾಗ ಯಾವುದೆ ವ್ಯಕ್ತಿಯ ಜೊತೆಗೆ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಇವರ ಮನೆಯಲ್ಲಿ ತಮ್ಮ ಹುಡುಗ ಹುಡುಗಿಯರ ಮದುವೆಯ ಚರ್ಚೆ ಆಗುವುದೇ ಇಲ್ಲ. ಒಂದು ವೇಳೆ ಆದರೆ ಅದು ತುಂಬಾ ಕಡಿಮೆ ಎನ್ನಬಹುದು. ಆದರೆ ನಮ್ಮ ಕಡೆ ಕೆಲಸ, ನೌಕರಿಗಿಂತ ಮದುವೆಯ ಚರ್ಚೆಯೇ ಜಾಸ್ತಿಯಾಗಿರುತ್ತದೆ.
- ಸೆಲ್ಫ್ ರಿಸ್ಪೆಕ್ಟ್:- ಜ್ಯೂ ಧರ್ಮೀಯರ ಧರ್ಮ ಸಾಹಿತ್ಯದಲ್ಲಿ ಬರೆದಿರುವ ಪ್ರಕಾರ ಅವರ ಪ್ರತಿಯೊಂದು ವ್ಯಕ್ತಿಯ ಹತ್ತಿರ ಸ್ವಾಭಿಮಾನವಿರುವದು ತುಂಬಾ ಮಹತ್ವದ್ದಾಗಿದೆ. ಚಿಕ್ಕಂದಿನಿಂದಲೇ ಸ್ವಾಭಿಮಾನದ ಗುಣಗಳನ್ನು ಬಿತ್ತಿರುವುದರಿಂದ ಅವರು ಹೆಚ್ಚಾಗಿ ಯಾರ ಕೈ ಕೆಳಗೆ ಕೆಲಸ ಮಾಡುವುದಿಲ್ಲ.
- ಜ್ಯೂ ಜನರೆಲ್ಲರೂ ಪಟ್ಟಣದಲ್ಲಿ ವಾಸಿಸುತ್ತಾರೆ:- ಕಳೆದ ನೂರಾರು ವರ್ಷಗಳಿಂದ ಜ್ಯೂ ಜನರು ಪಟ್ಟಣಗಳಲ್ಲಿ ಸ್ಥಳಾಂತರ ಹೊಂದಿದ್ದಾರೆ. ಇವರು ಹಳ್ಳಿಯಲ್ಲಿ ಕಂಡು ಬರುವುದಿಲ್ಲ. ಪಟ್ಟಣಗಳಲ್ಲಿಯೇ ಇರುವದರಿಂದ ಆಧುನಿಕ ಜೀವನಶೈಲಿ ಮತ್ತು ಅವಕಾಶಕ್ಕೆ ಬಹುಬೇಗನೆ ಅಪ್ಡೇಟ್ ಮಾಡಿಕೊಳ್ಳುತ್ತಾರೆ.
- ಇಷ್ಟವಿರುವ ಕೆಲಸವನ್ನೇ ಮಾಡಿ:– ಜ್ಯೂ ಮಕ್ಕಳಿಗೆ ಅವರಿಗೆ ಇಷ್ಟವಿರುವ ಕೆಲಸವನ್ನು ಮಾಡಲು ಪೋಷಕರು ಅನುಮತಿ ನೀಡುತ್ತಾರೆ. ನಮ್ಮ ಹಾಗೆ ಇಂಜಿನಿಯರ್, ಡಾಕ್ಟರ್, ಪ್ರೊಫೆಸರ್ ಆಗಬೇಕೆಂಬ ಕುಟುಂಬದ ಯಾವುದೇ ಒತ್ತಡ ಈ ಮಕ್ಕಳಿಗೆ ಇರುವದಿಲ್ಲ.