ಕಾಲುಷ್ಯದ ಪರಿಣಾಮವಾಗಿ ಆವಾಸ ಸ್ಥಾನ ಕಳೆದುಕೊಂಡ ಜೀವಿಗಳು: ಭಯಾನಕ ಚಿತ್ರಣವೊಂದು ಕಂಡು ಬೆರಗಾದ ವಿಜ್ಞಾನಿಗಳು

ವಿಶ್ವದ ಅತ್ಯಂತ ಶೀತ ಪ್ರದೇಶಗಳಲ್ಲಿ ವಾಸಿಸುವ ಮುದ್ದಾದ ಹಾಗೂ ಮುಗ್ಧ ಜೀವಿಗಳಾಗಿರುವ ವಾಲ್ರಸ್ ಗಳು ಅಕ್ಷರಶಃ ನಿರಾಶ್ರಿತವಾಗುತ್ತಿವೆ‌. ಈ ಜೀವಿಗಳು ತಮ್ಮ ಮೂಲಸ್ಥಾನವನ್ನು ಬಿಟ್ಟು ಆಶ್ರಯಕ್ಕಾಗಿ ಹೊಸ ಜಾಗವನ್ನು ಹುಡುಕಿಕೊಂಡು ಬರುವಂತಾಗಿದೆ. ಇತ್ತೀಚಿಗೆ ರಷ್ಯಾದ ವಿಜ್ಞಾನಿಗಳು ಶೀತ ಪ್ರದೇಶದ ಜೀವಿಗಳಾದ ವಾಲ್ರಸ್ ಗಳ ಒಂದು ವಸಾಹತುವನ್ನೇ ಕಂಡುಹಿಡಿದಿದ್ದಾರೆ. ಈ ಪ್ರದೇಶವು ವಾಲ್ರಸ್ ಗಳ ಮೂಲಸ್ಥಾನದಿಂದ ಬಹಳ ದೂರದಲ್ಲಿದ್ದು, ಇಲ್ಲಿ ಸುಮಾರು 3000 ವಾಲ್ರಸ್ ಗಳು ಹೊಸ ಜಾಗವನ್ನು ಹುಡುಕಿ ಕೊಂಡು ಆಶ್ರಯಕ್ಕಾಗಿ ಬಂದಿವೆ. ಇದ್ದಕ್ಕಿದ್ದಂತೆ ಎಷ್ಟು ದೊಡ್ಡ ಪ್ರಮಾಣದಲ್ಲಿ ವಾಲ್ರಸ್ ಗಳು ತಮ್ಮ ಆವಾಸ ಸ್ಥಾನವನ್ನು ಬಿಟ್ಟು ಬಂದಿರುವುದನ್ನು ನೋಡಿ ಆಶ್ಚರ್ಯಚಕಿತರಾದ ವಿಜ್ಞಾನಿಗಳು ಈ ಕುರಿತಾಗಿ ಹೆಚ್ಚಿನ ಸಂಶೋಧನೆಯನ್ನು ನಡೆಸಿದ್ದಾರೆ.

ರಷ್ಯಾದ ವಿಜ್ಞಾನಿಗಳು ಗಮನಿಸಿದಾಗ ಒಂದಲ್ಲ ಎರಡಲ್ಲ ಬರೋಬ್ಬರಿ 3000 ವಾಲ್ರಸ್ ಗಳು ರಷ್ಯಾದ ಎಮೆಲ್ ಪರ್ಯಾಯ ದ್ವೀಪ ದ ಸುಂದರ ಹಾಗೂ ಶಾಂತವಾದ ಸಮುದ್ರತೀರದಲ್ಲಿ ಬಂದು ನೆಲೆಸಿದೆ. ಇಲ್ಲಿ ಈ ಜೀವಿಗಳು ತಮಗೆ ಅಗತ್ಯವಿರುವ ಸಾಮಾಜಿಕ ಮೈತ್ರಿಯನ್ನು ಆರಂಭಿಸಿದ್ದು ಮಾತ್ರವೇ ಅಲ್ಲದೇ, ಅವು ಸಂತಾನೋತ್ಪತ್ತಿಯ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿವೆ ಎನ್ನಲಾಗಿದೆ. ಸಾಮಾನ್ಯವಾಗಿ ಈ ಜೀವಿಗಳು ಸಂತಾನೋತ್ಪತ್ತಿಯ ವೇಳೆಯಲ್ಲಿ ಶೀತ ಪ್ರದೇಶದ ಸಾಗರಗಳ ನೀರಿನ ಮೇಲೆ ತೇಲುವ ದೊಡ್ಡ ದೊಡ್ಡ ಮಂಜುಗಡ್ಡೆ ಅಂದರೆ ನೀರ್ಗಲ್ಲುಗಳ ಪ್ರದೇಶಗಳ ಕಡೆಗೆ ಹೋಗುತ್ತವೆ. ಆದರೆ ಈ ಬಾರಿ ಅವುಗಳು ಸುಮಾರು ತಮ್ಮ ಮೂಲಸ್ಥಾನದಿಂದ 600 ಕಿಲೋಮೀಟರ್ ದೂರವಿರುವ ಸಮುದ್ರ ತೀರಕ್ಕೆ ಬಂದ ನೆಲೆಸಿವೆ.

ಆರ್ಕಟಿಕ್ ವೃತ್ತದ ಬಳಿ ಸಂಶೋಧನೆಯನ್ನು ನಡೆಸುತ್ತಿದ್ದ ವಿಜ್ಞಾನಿ ಅಲೆಗ್ಸಾಂಡರ್ ಸೊಕೊಲೊವ ಅವರು ವಂತೆ ವಾಲ್ರಸ್ ಗಳು ಈ ರೀತಿ ಬಂದಿರುವುದು ನೋಡಲು ಬಹಳ ಅದ್ಭುತವಾದ ದೃಶ್ಯವಾಗಿದೆ, ಆದರೆ ಅದೇ ಸಮಯದಲ್ಲಿ ಅವು ಸಾಮಾನ್ಯವಾಗಿ ಸಾಗರದಲ್ಲಿರುವ ನೀರ್ಗಲ್ಲುಗಳ ಮೇಲೆ ಸಂಗಾತಿಗಳೊಡನೆ ಕೂಡಲು ಹಾಗೂ ಸಂತೋನೋತ್ಪತ್ತಿ ಮಾಡಲು ಹೋಗುತ್ತದೆ ಆದರೆ ಈ ಬಾರಿ ಸಾಗರ ತೀರಕ್ಕೆ ಬಂದಿರುವ ಕಾರಣ ಬಹುಶಃ ಸಾಗರದಲ್ಲಿ ಅವುಗಳು ವಾಸಿಸಲು ಯೋಗ್ಯವಾದ ನೀರ್ಗಲ್ಲುಗಳು ಉಳಿದಿಲ್ಲದೇ ಇರುವ ಪರಿಸ್ಥಿತಿ ಕೂಡಾ ಎದುರಾಗಿರಬಹುದು ಎನ್ನುನ ಅನುಮಾನವನ್ನು ಕೂಡಾ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ವಿಜ್ಞಾನಿ ಆಂದ್ರೇಯಿ ಈ ವಿಚಾರವಾಗಿ ಮಾತನಾಡಿ, ಜಾಗತಿಕ ತಾಪಮಾನ ಏರಿಕೆ ಹಾಗೂ ಮಾನವನ ಚಟುವಟಿಕೆಗಳಿಂದಾಗಿ ಧೃವ ಪ್ರದೇಶಗಳಲ್ಲಿ ಸಾಗರದಲ್ಲಿನ ನೀರ್ಗಲ್ಲುಗಳು ಕರಗುತ್ತಿರುವ ಕಾರಣದಿಂದ ವಾಲ್ರಸ್ ಗಳು ಬೇರೆ ದಾರಿ ಇಲ್ಲದೆ, ತಮ್ಮ ಸಂತಾನೋತ್ಪತ್ತಿಯನ್ನು ಮಾಡಿಕೊಳ್ಳಲು ಹೀಗೆ ದೂರ ದೂರದ ಸಾಗರ ತೀರಗಳಿಗೆ ವಲಸೆ ಬರಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ವಿವರಿಸಿದ್ದಾರೆ. ಪ್ರಸ್ತುತ ಕೆಲವು ವಾಲ್ರಸ್ ಗಳ ಡಿಎನ್ಎ ಸ್ಯಾಂಪಲ್ ಪಡೆದು ಅವುಗಳ ಪರೀಕ್ಷೆ ನಡೆಸಲಾಗುತ್ತಿದೆ ಎಂದಿದ್ದಾರೆ. ದ್ವೀಪದಲ್ಲಿ ಬಂದಿರುವ ವಾಲ್ರಸ್ ಗಳಲ್ಲಿ ದೊಡ್ಡವು, ಚಿಕ್ಕವು ಹೀಗೆ ಎಲ್ಲಾ ವಯೋಮಾನದ ವಾಲ್ರಸ್ ಗಳು ಇವೆ ಎನ್ನಲಾಗಿದೆ.

ವಾಸ್ತವವಾಗಿ ವಾಲ್ರಸ್ ಗಳು ಎಮೆಲ್ ಪರ್ಯಾಯ ದ್ವೀಪವನ್ನೇ ಏಕೆ ಇಷ್ಟಪಡುತ್ತಿವೆ ಹಾಗೂ ಅವು ಈ ದ್ವೀಪದಲ್ಲಿ ಶಾಶ್ವತವಾಗಿ ನೆಲೆಸುವವೋ ಅಥವಾ ಸಂತಾನೋತ್ಪತ್ತಿಯ ಕಾರ್ಯ ಮುಗಿದ ಮೇಲೆ ಇಲ್ಲಿಂದ ಹೊರಡುವವೋ? ಎಂಬುದನ್ನು ಕೂಡ ಕಾದು ನೋಡಬೇಕಿದೆ ಎಂದಿದ್ದಾರೆ. ಇನ್ನು ವಾಲ್ರಸ್ ಗಳು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ 2016 ರಲ್ಲಿ ವಾಲ್ರಸ್ ಗಳನ್ನು ಅಳಿವಿನ ಅಂಚಿನಲ್ಲಿರುವ ಜೀವಿಗಳೆಂದು ಗುರ್ತಿಸಿದ್ದು, ಪ್ರಸ್ತುತ ಅವುಗಳ ಸಂಖ್ಯೆ 12,500 ಮಾತ್ರ ಎನ್ನಲಾಗಿದೆ. ವಾಲ್ರಸ್ ಗಳನ್ನು ಕೊ ಲ್ಲು ವುದು ಅ ಪ ರಾಧ ಎಂದು ಪರಿಗಣಿಸಲಾಗಿದೆ ಕೂಡಾ.