ನೀಲಿ ಹಾಗೂ ಕೆಂಪು ಬಣ್ಣದ ರೈಲ್ವೆ ಕೋಚ್ ಗಳನ್ನು ನೋಡಿದ್ದೀರಲ್ಲವೇ? ಹಾಗಿದ್ದರೆ ಅವುಗಳ ನಡುವಿನ ವ್ಯತ್ಯಾಸ ಗೊತ್ತಾ?

ರೈಲುಗಳು ನಮ್ಮ ಜೀವನದ ಒಂದು ಮಹತ್ವವಾದ ಭಾಗವಾಗಿದೆ ರೈಲ್ವೆಯು ಜನಸಂಚಾರದ ಬಹುದೊಡ್ಡ ವ್ಯವಸ್ಥೆ ಕೂಡ ಆಗಿದೆ. ಬಹುಶಃ ರೈಲಿನಲ್ಲಿ ಸಂಚರಿಸುವಷ್ಟು ಜನರು ಬೇರಾವುದೇ ಸಾರಿಗೆ ಮಾಧ್ಯಮಗಳ ಮೂಲಕ ಸಂಚರಿಸುವುದಿಲ್ಲ ಎಂದೇ ಹೇಳಬಹುದು. ಇಷ್ಟೊಂದು ಮಹತ್ವಪೂರ್ಣವಾದ ರೈಲುಗಾಡಿಗಳ ಬಗ್ಗೆ ನಮಗೆ ಇನ್ನೂ ಕೂಡ ಅನೇಕ ವಿಚಾರಗಳು ತಿಳಿದಿಲ್ಲ. ರೈಲುಗಳಲ್ಲಿ ಸಾಮಾನ್ಯವಾಗಿ ನೀಲಿ ಬಣ್ಣದ ಹಾಗೂ ಕೆಂಪು ಬಣ್ಣದ ಕೋಚ್ ಗಳನ್ನು ಗಮನಿಸಿದ್ದೇವೆ, ಅದರಲ್ಲಿ ಪಯಣಿಸಿದ್ದೇವೆ ಆದರೆ ಈ ಎರಡು ಬಣ್ಣಗಳ ಕೋಚ್ ಗಳ ನಡುವಿನ ವ್ಯತ್ಯಾಸವೇನು? ಎಂಬುದು ಮಾತ್ರ ನಮಗೆ ತಿಳಿದಿಲ್ಲ. ಹಾಗಾದರೆ ಬನ್ನಿ ನಾವಿಂದು ಈ ನೀಲಿ ಮತ್ತು ಕೆಂಪು ರೈಲ್ವೆ ಕೋಚ್ ಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ

ನೀಲಿಬಣ್ಣದ ಕೋಚ್ ಗಳನ್ನು ಐಸಿಎಫ್ ಗಳೆಂದು (integral coach factory) ಎಂದೂ ಕೆಂಪು ಬಣ್ಣದ ಅನ್ನು ಎಲ್ ಹೆಚ್ ಬಿ ಅಂದರೆ (Linke Hofmann Busch) ಎಂದು ಕರೆಯಲಾಗುತ್ತದೆ.

  1. ಐಸಿಎಫ್ ತಮಿಳುನಾಡಿನ ಚೆನ್ನೈನಲ್ಲಿದೆ.
  2. ಇದರ ಸ್ಥಾಪನೆಯು 1952 ರಲ್ಲಿ ಆಗಿದೆ.
  3. ಇ-ಕೋಚ್ ಗಳನ್ನು ಕಬ್ಬಿಣದಿಂದ ತಯಾರುಮಾಡುವ ಕಾರಣದಿಂದ ಇದರ ತೂಕ ಹೆಚ್ಚಾಗಿರುತ್ತದೆ.
  4. ಇದರಲ್ಲಿ ಏರ್ ಬ್ರೇಕ್ ನ ಉಪಯೋಗ ಮಾಡಲಾಗುತ್ತದೆ.
  5. ಇದರ ವೇಗ 110 ಕಿಮೀ ಪ್ರತಿ ಗಂಟೆಗೆ ಎನ್ನಲಾಗಿದೆ.
  6. ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಹೆಚ್ಚಿನ ಹಣವು ಖರ್ಚಾಗುತ್ತದೆ.
  7. ಇದರಲ್ಲಿ ಕೂರುವ ಸಾಮರ್ಥ್ಯ ಕಡಿಮೆಯಿದ್ದು, ಇದು ಎಲ್.ಹೆಚ್.ಬಿ. ಕೋಚ್ ಗಳಿಗಿಂತಲೂ 1.7 ಮೀಟರ್ ಗಳಷ್ಟು ಕಡಿಮೆ ಇರುತ್ತದೆ.
  8. ಅಪಘಾತ ಸಂಭವಿಸಿದರೆ ಇವುಗಳ ಕೋಚ್ ಗಳು ಒಂದರ ಮೇಲೆ ಒಂದರಂತೆ ಕೂರುತ್ತವೆ. ಇದಕ್ಕೆ
    ಪ್ರಮುಖ ಕಾರಣ ಇದರಲ್ಲಿ ಅಳವಡಿಸಲಾಗಿರುವ ಡ್ಯುಯಲ್ ಬಫರ್ ಸಿಸ್ಟಂ ಎನ್ನಲಾಗಿದೆ.
  9. ಇದರ ರೈಡ್ ಇಂಡೆಕ್ಸ್ 3.25 ಆಗಿರುತ್ತದೆ.
  10. ಪ್ರತಿ 18 ತಿಂಗಳಿಗೊಮ್ಮೆ ಈ ಕೋಚ್ ಗಳ ಕೂಲಂಕುಷವಾದ ಪರಿಶೀಲನೆ ಅಗತ್ಯವಾಗಿರುತ್ತದೆ.

ಎಲ್.ಹೆಚ್.ಬಿ. ಕೋಚ್ ಗಳ ಬಗ್ಗೆ ತಿಳಿಯುವುದಾದರೆ,

  1. ಎಲ್.ಹೆಚ್.ಬಿ. ಕೋಚ್ ಗಳನ್ನು ಉತ್ಪಾದನೆ ಮಾಡುವ ಫ್ಯಾಕ್ಟರಿಯು ಪಂಜಾಬಿನ ಕಪೂರ್ತಲ ಎಂಬಲ್ಲಿ ಇದ್ದು, ಈ ಕೋಚ್ ಗಳನ್ನು ಜರ್ಮನಿಯಿಂದ ಭಾರತಕ್ಕೆ ತರಿಸಲಾಗುತ್ತದೆ.
  2. ಇವುಗಳನ್ನು 2000 ದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ‌.
  3. ಇದು ಸ್ಟೈನ್ ಲೆಸ್ ಸ್ಟೀಲ್ ನಿಂದ ತಯಾರಿಸಲ್ಪಟ್ಟಿರುವುದರಿಂದ ಹಗುರವಾಗಿ ಇರುತ್ತದೆ.
  4. ಇದರಲ್ಲಿ ಡಿಸ್ಕ್ ಬ್ರೇಕ್ ಅನ್ನು ಬಳಸಲಾಗುತ್ತದೆ.
  5. ಇವುಗಳ ಗರಿಷ್ಠ ವೇಗ ಗಂಟೆಗೆ 200 ಕಿಮೀ ಇದ್ದರೆ, ಕಾರ್ಯಾಚರಣೆಯಲ್ಲಿ ಇದು 160 ಕಿಮೀ ಆಗಿರುತ್ತದೆ.
  6. ಇವುಗಳ ನಿರ್ವಹಣೆಗೆ ಕೂಡಾ ಅಧಿಕ ಖರ್ಚಾಗುವುದಿಲ್ಲ.
  7. ಇದರಲ್ಲಿ ಪ್ರಯಾಣಿಕರು ಕೂರುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಇದು ಐಸಿಎಫ್ ಕೋಚ್ ಗಿಂತಲೂ 1.7 ಮೀಟರ್ ಹೆಚ್ಚಾಗಿರುತ್ತದೆ.
  8. ಅ ಪ ಘಾ ತ ಸಂಭವಿಸಿದರೆ ಈ ಕೋಚ್ ಗಳು ಒಂದರ ಮೇಲೊಂದು ಬಂದು ಕೂರುವುದಿಲ್ಲ. ಏಕೆಂದರೆ ಇದರಲ್ಲಿ ಸೆಂಟರ್ ಬಫರ್ ಕೌಲಿಂಗ್ ಅಳವಡಿಸಲಾಗಿದೆ.
  9. ಇದರ ರೈಡ್ ಇಂಡೆಕ್ಸ್ 2.5-2.75 ಆಗಿದೆ.
  10. ಎಲ್.ಹೆಚ್.ಬಿ. ಕೋಚ್ ಗಳನ್ನು ಪ್ರತಿ 24 ತಿಂಗಳುಗಳಿಗೊಮ್ಮೆ ಕೂಲಂಕುಷವಾದ ಪರಿಶೀಲನೆಯನ್ನು ಮಾಡುವ ಅವಶ್ಯಕತೆ ಇರುತ್ತದೆ.

ಈ ಹಿಂದೆ ಎಲ್.ಹೆಚ್.ಬಿ. ಕೋಚ್ ಗಳನ್ನು ವೇಗವಾಗಿ ಚಲಿಸುವ ರೈಲುಗಳಿಗೆ ಬಳಸಲಾಗುತ್ತಿತ್ತು. ಅಂದರೆ ಗತಿಮಾನ್ ಎಕ್ಸ್‌ಪ್ರೆಸ್‌, ಶತಾಬ್ದಿ ಎಕ್ಸ್‌ಪ್ರೆಸ್‌ ಹಾಗೂ ರಾಜಧಾನಿ ಎಕ್ಸ್‌ಪ್ರೆಸ್‌ ಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಭಾರತೀಯ ರೈಲ್ವೆ ಯು ಎಲ್ಲಾ ಐಸಿಎಫ್ ಕೋಚ್ ಗಳನ್ನು ಎಲ್‌.ಹೆಚ್.ಬಿ. ಕೋಚ್ ಗಳಿಗೆ ಉನ್ನತೀಕರಣಗೊಳಿಸಲು ನಿರ್ಧಾರವೊಂದನ್ನು ಮಾಡಿದೆ ಎನ್ನಲಾಗಿದೆ. ಇಂತಹುದೊಂದು ನಿರ್ಧಾರಕ್ಕೆ ಕಾರಣ ಎಲ್.ಹೆಚ್.ಬಿ. ಕೋಚ್ ಗಳು ಸುರಕ್ಷತೆ, ವೇಗ, ಸಾಮರ್ಥ್ಯ, ಆರಾಮದಾಯಕ ಹೀಗೆ ಹಲವು ವಿಷಯಗಳಲ್ಲಿ ಐಸಿಎಫ್ ಕೋಚ್ ಗಳಿಗಿಂತಲೂ ಉತ್ತಮವಾಗಿರುವುದು ಎನ್ನಲಾಗಿದೆ.