ಅನಿರೀಕ್ಷಿತವಾಗಿ ಹಳ್ಳಕ್ಕೆ ಬಿದ್ದ ನರಿ, ರಕ್ಷಣೆ ಮಾಡಲು ಹಾಕಿದ ಹಗ್ಗ ನೋಡಿ ನರಿ ತೋರಿದ ಚಾಣಾಕ್ಷತನಕ್ಕೆ ಬೆರಗಾದರು ನೆಟ್ಟಿಗರು
ವನ್ಯಜೀವಿಗಳು ಕಾಡನ್ನು ತೊರೆದು ನಾಡಿನೊಳಕ್ಕೆ ಏನಾದರೂ ಬಂದರೆ ಅನೇಕ ಸಂದರ್ಭಗಳಲ್ಲಿ ಅವು ಅನಿರೀಕ್ಷಿತ ಅ ಪಾ ಯಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆಗಳು ಬಹಳಷ್ಟು ಇರುತ್ತವೆ. ಕೆಲವೊಮ್ಮೆ ಪ್ರಾಣಿಗಳು ನಗರ ಪ್ರದೇಶಗಳಿಗೆ ಬಂದಾಗ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತಗುಲಿ ಅಪಘಾತಕ್ಕೀಡಾಗುವ , ವಿದ್ಯುತ್ ತಂತಿಗಳಿಗೆ ಸಿಲುಕಿ ಪ್ರಾಣವನ್ನು ಕಳೆದುಕೊಳ್ಳುವ, ನೀರಿಲ್ಲದ ಬಾವಿಗಳು ಅಥವಾ ಹಳ್ಳಗಳು ಇಲ್ಲವೇ ತೊಟ್ಟಿಯೊಳಗೆ ಬಿದ್ದು, ಮೇಲೆ ಬರಲಾರದೆ ಅವು ಪರದಾಡುವಂತಹ ಪರಿಸ್ಥಿತಿಗಳನ್ನು ಎದುರಿಸುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯ ಎನಿಸಿ ಹೋಗಿದೆ.
ಅಲ್ಲದೇ ಹೀಗೆ ಕಾಡಿನಿಂದ ನಾಡಿಗೆ ಬಂದು ಅಪಾಯಗಳಲ್ಲಿ ಸಿಲುಕಿರುವ ಪ್ರಾಣಿಗಳ ದೃಶ್ಯಗಳಯ ಸಿಸಿ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಕೂಡಾ ಆಗುತ್ತವೆ.
ಅಂತಹ ವೀಡಿಯೋಗಳನ್ನು ನೋಡಿದಾಗ ಪ್ರಾಣಿಗಳ ಆ ದಯನೀಯ ಪರಿಸ್ಥಿತಿ ಅ ಸಹನೀಯ ಎನಿಸುವುದಾದರೂ, ಅದಕ್ಕೆ ಪರೋಕ್ಷವಾಗಿ ನಾವೇ ಕಾರಣ ಎನ್ನುವುದನ್ನು ಮಾತ್ರ ನಾವು ಮರೆತು ಬಿಡುತ್ತೇವೆ. ಆದರೆ ಕೆಲವು ಸಂದರ್ಭಗಳಲ್ಲಿ ಅಪಾಯಕ್ಕೆ ಸಿಲುಕಿದ ಅಂತಹ ಪ್ರಾಣಿಗಳನ್ನು ರಕ್ಷಣೆ ಮಾಡುವಂತಹ ಕೆಲಸಕ್ಕೆ ಕೆಲವರು ಕೈ ಹಾಕುತ್ತಾರೆ. ಹೀಗೆ ಪ್ರಾಣ ರಕ್ಷಣೆಗೆ ಮುಂದಾದಾಗ ವನ್ಯ ಜೀವಿಗಳು ಅದನ್ನು ಕಂಡು ಮೊದಲಿಗೆ ಭ ಯ ಭೀ ತ ವಾಗುತ್ತವೆ. ಆದರೆ ಕೆಲವೊಮ್ಮೆ ಅವುಗಳಿಗೂ ಕೂಡಾ ಮನುಷ್ಯರು ತಮ್ಮನ್ನು ಬದುಕಿಸಲು ಪ್ರಯತ್ನ ಪಡುತ್ತಿದ್ದಾರೆ ಎಂಬ ವಿಷಯವು ಅವಗಾಹನೆಗೆ ಬಂದು ಕೂಡ ತಮ್ಮನ್ನು ಕಾಪಾಡಲು ಪ್ರಯತ್ನ ಮಾಡುವವರಿಗೆ ಅವು ಸಹಕಾರವನ್ನು ಕೂಡ ನೀಡುತ್ತವೆ.
ಐಎಫ್ಎಸ್ ಅಧಿಕಾರಿ ಆದಂತಹ ಸುಶಾಂತ್ ನಂದ ಅವರ್ ವೀಡಿಯೋ ಒಂದನ್ನು ಶೇರ್ ಮಾಡಿ ಕೊಂಡಿದ್ದು, ಈ ವಿಡಿಯೋದಲ್ಲಿ ದೊಡ್ಡ ಹಳ್ಳ ಒಂದರಲ್ಲಿ ಬಿದ್ದಿರುವಂತಹ ನರಿಯೊಂದನ್ನು ಕಾಪಾಡಲು ಇಬ್ಬರು ವ್ಯಕ್ತಿಗಳು ಪ್ರಯತ್ನ ಪಟ್ಟಿರುವ ಒಂದು ಸನ್ನಿವೇಶವನ್ನು ನಾವು ನೋಡಬಹುದಾಗಿದೆ. ಪಾಪ ಎಲ್ಲಿಂದಲೋ ಬಂದಂತಹ ನರಿಯೊಂದು ಅನಿರೀಕ್ಷಿತ ಎಂಬಂತೆ ಕಟ್ಟಡವೊಂದರ ಪಕ್ಕ ಇರುವ ಬಹು ದೊಡ್ಡ ತೊಟ್ಟಿಯಂತಹ ಹಳ್ಳ ಒಂದರಲ್ಲಿ ಬಿದ್ದು ಹೋಗಿದೆ. ಅದು ಆ ಹಳ್ಳದಿಂದ ಹೊರಬರಲು ಬಹಳಷ್ಟು ಪ್ರಯತ್ನವನ್ನು ಕೂಡಾ ಮಾಡಿದೆ. ನರಿಯು ಹಳ್ಳದಲ್ಲಿ ಬಿದ್ದಿರುವುದನ್ನು ಗಮನಿಸಿರುವ ಕೆಲವರು ಅದನ್ನು ಕಾಪಾಡಲು ಬಂದಿದ್ದಾರೆ. ಹಾಗೆ ನರಿಯನ್ನು ಅ ಪಾ ಯದಿಂದ ಕಾಪಾಡಲು ಬಂದವರಲ್ಲೊಬ್ಬರು ಹಳ್ಳದ ಒಳಕ್ಕೆ ಒಂದು ಹಗ್ಗವನ್ನು ಬಿಟ್ಟು ನರಿಯನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದ್ದಾರೆ.
ಆದರೆ ಮೊದಲಿಗೆ ನರಿಯು ಅದಕ್ಕೆ ಭಯ ಪಟ್ಟು ತಾನೇ ಹೊರಗೆ ಪ್ರಯತ್ನವನ್ನು ಮಾಡಿದೆ. ಅದು ನೆಲದಿಖದ ಬಹಳಷ್ಟು ಎತ್ತರಕ್ಕೆ ನೆಗೆದಿದೆ. ಆದರೆ ಅದರ ನೆಗೆತ ನಿಜಕ್ಕೂ ಅದ್ಭುತ ಎನಿಸುತ್ತದೆ ಆದರೆ ಅದರ ಪ್ರಯತ್ನ ಸಫಲವಾಗಿಲ್ಲ. ಅನಂತರ ಬುದ್ಧಿಮತ್ತೆಗೆ, ಚಾಣಾಕ್ಷತನಕ್ಕೆ ಹೆಸರಾದಂತಹ ನರಿಗೆ ಅವರು ಹಗ್ಗ ಒಳಗೆ ಎಸೆದಿರುವುದು ತನ್ನ ರಕ್ಷಣೆಗೆ ಎಂಬ ಅರಿವು ಮೂಡಿದೆ. ಕೂಡಲೇ ಅದು ತನ್ನ ಬುದ್ಧಿಯನ್ನು ಉಪಯೋಗಿಸಿ ಹಗ್ಗವನ್ನು ತನ್ನ ಹಲ್ಲಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದೆ. ಆಗ ಹಗ್ಗವನ್ನು ಹಿಡಿದ ವ್ಯಕ್ತಿ ಮೇಲಕ್ಕೆ ಎಳೆದಾಗ ನರಿ ಹಗ್ಗವನ್ನು ಕಚ್ಚಿಕೊಂಡು ಮೇಲೆ ಬಂದು ಓಡಿ ಹೋಗಿದೆ.
ವಿಡಿಯೋ ನೋಡಿ
The fox changes his fur,
— Susanta Nanda IFS (@susantananda3) December 8, 2020
But not his tricks…
This clever little fox panics at first, but uses its tricks to be rescued. pic.twitter.com/9TBXSmKfdz
ವೈರಲ್ ಆದ ಈ ವೀಡಿಯೋವನ್ನು ಈಗಾಗಲೇ ಹನ್ನೊಂದು ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ, ಒಂದೂವರೆ ಸಾವಿರ ದಾಟಿದ ಲೈಕ್ ಗಳು ಬಂದಿವೆ. ಕಾಮೆಂಟ್ ನಲ್ಲಿ ಪ್ರತಿಕ್ರಿಯೆ ನೀಡಿದ ಅನೇಕರು ನರಿಯ ಬುದ್ದಿಮತ್ತೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ನರಿಯು ನೆಲದಿಂದ ಬಹಳ ಎತ್ತರಕ್ಕೆ ಜಿಗಿದಿದ್ದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನರಿಯನ್ನು ಬುದ್ಧಿವಂತ ಎಂದು ಏಕೆ ಕರೆಯುತ್ತಾರೆ ಎನ್ನುವುದು ಈಗ ತಿಳಿಯಿತು ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ. ವಾಸ್ತವವಾಗಿ ನರಿ ಅಷ್ಟು ಬೇಗ ಪರಿಸ್ಥಿತಿ ಅರಿತುಕೊಂಡು ಹಗ್ಗವನ್ನು ಕಚ್ಚಿಕೊಂಡು ಮೇಲೆ ಬಂದಿದ್ದು ಅದರ ಬುದ್ಧಿವಂತಿಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.