ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗುವುದು ಎಂದರೆ ಇದೇನಾ? ರೋಚಕ ವೀಡಿಯೋ ನೋಡಿದರೆ ರೋಮಾಂಚನ ಆಗೋದು ಖಂಡಿತ
ಅ ಪಾ ಯ ಎನ್ನುವುದು ಎಲ್ಲಿ? ಹೇಗೆ? ಯಾವಾಗ? ಬರುತ್ತದೆ ಎಂಬುದನ್ನು ಯಾರೊಬ್ಬರಿಂದಲೂ ಕೂಡಾ ಊಹೆ ಮಾಡುವುದು ಸಾಧ್ಯವಿಲ್ಲ. ಹಾಗೇನಾದರೂ ಇದ್ದಿದ್ದರೆ ಬಹುಶಃ ಜಗತ್ತಿನಲ್ಲಿ ಅನಿರೀಕ್ಷಿತ ಅ ಪಾ ಯ ಗಳು ಎಂಬುದೇ ಇರುತ್ತಲೇ ಇರಲಿಲ್ಲ. ಆದರೆ ಹಲವು ಸಂದರ್ಭಗಳಲ್ಲಿ ನಾವು ಕೆಲವು ವ್ಯಕ್ತಿಗಳು ಮಾತನಾಡುತ್ತಾ ತಾವು ಹೇಗೆ ಕೂದಲೆಳೆಯ ಅಂತರದಲ್ಲಿ ಪ್ರಾ ಣಾ ಪಾ ಯದಿಂದ ಪಾರಾದೆವು ಎನ್ನುವಂತಹ ಘಟನೆಗಳ ವಿವರಿಸಿ ಹೇಳಿದಾಗ ಅದನ್ನು ಕೇಳುವ ನಮಗೆ ಒಂದು ರೀತಿಯ ರೋಮಾಂಚನದ ಅನುಭವ ಮಾತ್ರವೇ ಅಲ್ಲದೇ, ಮನಸ್ಸಿನಲ್ಲಿ ಒಂದು ತಲ್ಲಣ ಕೂಡಾ ಉಂಟಾಗುತ್ತದೆ. ಆ ಪರಿಸ್ಥಿತಿಯನ್ನು ನಾವು ಊಹೆ ಮಾಡಿಕೊಂಡರೂ ನಮ್ಮ ಮೈ ಜುಮ್ಮೆನ್ನುತ್ತದೆ. ಅಂತಹ ವಿಚಾರಗಳು ಮತ್ತೆ ಮತ್ತೆ ನಮ್ಮನ್ನು ಕಾಡುವುದು ಕೂಡಾ ಉಂಟು.
ಇಂತಹ ಅಪಾಯಕಾರಿ ಪರಿಸ್ಥಿತಿಯಿಂದ ಪಾರಾದವರ ಅನುಭವ ನಿಜಕ್ಕೂ ಸಾ ವ ನ್ನು ಗೆದ್ದುಬಂದಂತೆಯೇ ಸರಿ. ಆದರೆ ನಾವು ಅವರ ಅನುಭವಗಳನ್ನು ಕೇಳಬಹುದು, ಅನುಭವಗಳ ಆಧಾರದ ಮೇಲೆ ಅವರ ವಿವರಣೆಯನ್ನು ಆಧರಿಸಿ ನಾವು ಆ ಸನ್ನಿವೇಶವನ್ನು ಊಹೆ ಮಾಡಿಕೊಳ್ಳಬಹುದು. ಆದರೆ ವಾಸ್ತವವಾಗಿ ಏನು ನಡೆದಿತ್ತು? ಎಂಬುದನ್ನು ಕಣ್ಣಿಂದ ನೋಡಿದವರಿಗೆ, ಅಲ್ಲಿ ಆ ಪರಿಸ್ಥಿತಿಯನ್ನು ಎದುರಿಸಿ ದವರಿಗೆ ಮಾತ್ರವೇ ತಿಳಿದಿರುತ್ತದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಅಕ್ಷರಶಃ ವ್ಯಕ್ತಿಯೊಬ್ಬರ ಹತ್ತಿರದಲ್ಲೇ ಅಲ್ಲ ಅವರ ಪಕ್ಕದಲ್ಲೇ ಸಾ ವು ಸಾಗಿ ಮುಂದೆ ಹೋಗಿರುವುದನ್ನು ನಾವು ನೋಡಬಹುದು.
ಈ ಘಟನೆ ಏನು ಎನ್ನುವುದಾದರೆ, ವಿದೇಶದಲ್ಲಿ ನಡೆದಂತಹ ಈ ಘಟನೆಯಲ್ಲಿ ಕೆಲವರು ತಮ್ಮ ಕ್ಯಾಮೆರಾಗಳನ್ನು ಸಿದ್ಧಪಡಿಸಿಕೊಂಡು ಒಂದು ರೈಲ್ವೆ ನಿಲ್ದಾಣದಲ್ಲಿ ತಮ್ಮ ಎದುರು ದಿಕ್ಕಿನಿಂದ ಬರುವ ರೈಲಿನ ಫೋಟೋ ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಎಲ್ಲರೂ ಅವರವರ ಆ ಕೆಲಸದಲ್ಲಿ ಮಗ್ನರಾಗಿದ್ದಾರೆ. ಹಾಗೆ ಎದುರು ನೋಡುವಾಗಲೇ ಎದುರಿನಿಂದ ರೈಲು ಬಂದಿದೆ. ಎಲ್ಲರೂ ಫೋಟೋ ತೆಗೆಯುವಾಗಲೇ ಅಲ್ಲಿ ಕ್ಯಾಮೆರಾದೊಂದಿಗೆ ಸಿದ್ಧರಿದ್ದ ಮತ್ತೋರ್ವ ವ್ಯಕ್ತಿ ಕೂಡಾ ಫೋಟೋ ತೆಗೆದಿದ್ದಾರೆ. ಹಾಗೆ ಫೋಟೋ ತೆಗೆಯುವ ಕೆಲಸದಲ್ಲಿ ಲೀನರಾಗಿದ್ದ ಅವರಿಗೆ ತಮ್ಮ ಹಿಂದಿನ ದಿಕ್ಕಿನಿಂದ ಬರುವ ರೈಲಿನ ಕಡೆಗೆ ಅವರ ಗಮನ ಕೂಡ ಹರಿದಿಲ್ಲ. ತನ್ನೆದುರಿಗೆ ಬರುವ ರೈಲಿನ ಸುಂದರವಾದ ಫೋಟೋ ತೆಗೆಯಬೇಕೆಂಬ ತವಕದಲ್ಲಿ ಮೈಮರೆತಿದ್ದಾರೆ.
ಹೀಗೆ ಅವರು ಫೋಟೋ ತೆಗೆಯುವಾಗಲೇ ಅವರ ಮುಂದಿನಿಂದ ಹಾದು ಹೋದ ರೈಲು ದಟ್ಟವಾದ ಹೊಗೆಯನ್ನು ಹರಡಿ ಹೋಗಿದೆ. ಆ ಹೊಗೆ ಮರೆಯಾಗುವ ವೇಳೆಗೆ ಹೊಗೆಯನ್ನೇ ಸೀಳಿಕೊಂಡು ಬಂದಂತೆ ಹಿಂದಿನಿಂದ ಒಂದು ಸೂಪರ್ ಫಾಸ್ಟ್ ರೈಲು ಸಿಕ್ಕಾಪಟ್ಟೆ ರಭಸವಾಗಿ ಕೂದಲೆಳೆಯ ಅಂತರದಲ್ಲಿ ಅವರ ಪಕ್ಕ ಹಾದುಹೋಗಿದೆ. ಅದೃಷ್ಟವಶಾತ್ ಆ ವ್ಯಕ್ತಿಯ ದೇಹ ರೈಲಿಗೆ ತಾಗಿಲ್ಲ, ಹಾಗೇನಾದರೂ ರೈಲಿಗೆ ತಾಕಿದ್ದರೆ ನಿಜಕ್ಕೂ ಅಲ್ಲೊಂದು ಅ ನಾ ಹು ತ ನಡೆದೆ ಹೋಗಿರುತ್ತಿತ್ತು. ಆದರೆ ಅದೃಷ್ಟ ಎಂಬಂತೆ ಅದೇನೂ ಆಗಿಲ್ಲ. ಆದರೆ ತನ್ನ ಪಕ್ಕ ಅಷ್ಟು ಹತ್ತಿರದಲ್ಲಿ ಸಾಗಿ ಹೋದ ರೈಲನ್ನು ನೋಡಿ ಆ ವ್ಯಕ್ತಿ ಒಂದು ಕ್ಷಣ ಅವಕ್ಕಾಗಿದ್ದಾರೆ.
ವಿಡಿಯೋ ನೋಡಿ
ಮನಸ್ಸಿನಲ್ಲಿ ಬದುಕಿದೆಯಾ ಬಡ ಜೀವ ಎನ್ನುವ ಆಲೋಚನೆ ಕೂಡಾ ಬಂದಿರಬಹುದು. ಇನ್ನು ಇಂತಹ ದೃಶ್ಯವನ್ನು ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡವರು ಕೂಡ ಈ ವ್ಯಕ್ತಿಯೊಬ್ಬ ಅದೃಷ್ಟವಂತ ಮೂರ್ಖ ಎಂದು ಬರೆದುಕೊಂಡಿದ್ದಾರೆ. ವೀಡಿಯೋ ನೋಡಿದ ಅನೇಕರು ಆತನನ್ನು ಅದೃಷ್ಟವಂತ ಎಂದು ಪ್ರತಿಕ್ರಿಯೆ ನೀಡಿದ್ದರೆ, ಕೆಲವರು ವೀಡಿಯೋ ಮಾಡಿದ ವ್ಯಕ್ತಿ ಅ ಪಾ ಯದ ಬಗ್ಗೆ ಸೂಚನೆ ನೀಡದೆ ಹೀಗೆ ವೀಡಿಯೋ ಮಾಡಿದ್ದನ್ನು ನಿಂ ದ ನೆ ಮಾಡಿದ್ದಾರೆ. ಏನೇ ಆದರೂ ಅನಿರೀಕ್ಷಿತ ಅ ವ ಘ ಡದಿಂದ ಆತ ಪಾರಾಗಿದ್ದು ಮಾತ್ರ ಅದೃಷ್ಟವೇ ಸರಿ.