ನೀರೆಂದರೆ ಕಷ್ಟ, ಆದ್ರೆ ಮೀನು ಬಲು ಇಷ್ಟ: ಕೊಳದ ಬಳಿ ಕುಳಿತು ಮೀನು ಹಿಡಿದ ಬೆಕ್ಕಿನ ಚಾಕಚಕ್ಯತೆ ನೋಡಿದ್ರೆ ಶಬ್ಬಾಶ್ ಅಂತೀರಾ
ಮೀನು ಹಿಡಿಯೋದನ್ನು ಬಹುಶಃ ಎಲ್ಲರೂ ಕೂಡಾ ನೋಡೇ ಇರ್ತೀವಿ. ಇದು ಕೆಲವರಿಗೆ ಜೀವನೋಪಾಯ ಅಥವಾ ಅವರ ಉದ್ಯೋಗ ಆದ್ರೆ ಇನ್ನೂ ಕೆಲವರಿಗೆ ಇದೊಂದು ಹವ್ಯಾಸ ಅಷ್ಟೇ ಅಂತ ಕೂಡಾ ನಾವು ಹೇಳಬಹುದು. ಇನ್ನು ಮೀನು ಹಿಡಿಯೋದೆ ಉದ್ಯೋಗ ಆಗಿರುವವರು ದೊಡ್ಡ ಬಲೆಯನ್ನು ನೀರಿಗೆ ಬೀಸಿ ಮೀನುಗಳನ್ನು ಹಿಡಿದರೆ, ಹವ್ಯಾಸಕ್ಕಾಗಿ ಮೀನು ಹಿಡಿಯುವವರಾದರೆ ಗಾಳ ಹಾಕಿ ಮೀನನ್ನು ಒಂದು ಮೋಜಿಗಾಗಿ ಹಿಡಿದು ಖುಷಿ ಪಡುತ್ತಾರೆ. ಇದು ಮನುಷ್ಯರ ವಿಷಯ ಆಯ್ತು ಅಲ್ಲದೇ ಗಾಳ ಹಿಡಿದು ಮೀನು ಹಿಡಿಯೋದು ಕೂಡಾ ಸುಲಭದ ಕೆಲಸವೇನೂ ಅಲ್ಲ, ತಾಳ್ಮೇ ಅನ್ನೋದು ಕೂಡಾ ಸಾಕಷ್ಟು ಇರಬೇಕಾದ ಅವಶ್ಯಕತೆ ಇದ್ದೇ ಇರುತ್ತೆ. ಹಾಗಾದ್ರೆ ಪ್ರಾಣಿಗಳು ಮೀನು ಹಿಡಿಯಬೇಕಾದ್ರೆ ಹೇಗೆ? ಅನ್ನೋ ಪ್ರಶ್ನೆ ಒಂದ್ಸಲ ಮಾಡಿಕೊಂಡು ನೋಡಿ.
ಮನುಷ್ಯ ಏನೋ ಬಲೆ ಬೀಸಿ, ಗಾಳ ಹಾಕಿ ಮೀನುಗಳನ್ನು ಹಿಡಿದು ಬಿಡ್ತಾರೆ, ಆದ್ರೆ ಪ್ರಾಣಿಗಳಿಗೆ ಇಂತಹ ಅವಕಾಶ ಅಂತೂ ಖಂಡಿತ ಇಲ್ಲ. ಆದರೆ ಪ್ರಕೃತಿಯಲ್ಲಿ ಜೀವಿಗಳಿಗೆ ಪ್ರಕೃತಿಯೇ ಇವುಗಳಿಗೆ ಬೇಟೆಯಾಡುವ ಜಾಣ್ಮೆಯನ್ನು ಹಾಗೂ ಕೌಶಲವನ್ನು ಬೆಳೆಸಿರುತ್ತದೆ. ಆದರೆ ಮೀನು ಹಿಡಿಯುವುದಕ್ಕೂ ಬೇಟೆಯಾಡುವುದಕ್ಕೂ ಅಜಗಜಾಂತರ ವ್ಯತ್ಯಾಸ ಕೂಡಾ ಇರುತ್ತದೆ. ಏಕೆಂದರೆ ಬೇಟೆಯಾಡಲು ಪ್ರಾಣಿಗಳ ಬೆನ್ನು ಹತ್ತಿ ಓಡಿ ಹಿಡಿಯಬೇಕು. ಆದರೆ ಮೀನು ಹಿಡಿಯಲು ನೀರಿಗೆ ಇಳಿಯುವುದಂತೂ ಸಾಧ್ಯವೇ ಇಲ್ಲ ಅಲ್ಲವೇ? ಹಾಗಾದರೆ ಹೇಗೆ ಮೀನು ಹಿಡಿಯುತ್ತೆ ಎನ್ನುವ ಪ್ರಶ್ನೆ ಮೂಡಿತೆ? ಉತ್ತರ ಇಲ್ಲಿದೆ.
ಸೋಶಿಯಲ್ ಮೀಡಿಯಾದಲ್ಲಿ ಒಂದು ಬಹಳ ಆಸಕ್ತಿಕರ ಹಾಗೂ ಆಶ್ಚರ್ಯ ಎರಡನ್ನೂ ಉಂಟು ಮಾಡೋ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ಒಂದು ಬೆಕ್ಕು ನೀರಿನ ಕೊಳವೊಂದರ ಪಕ್ಕ ಕುಳಿತು ನೀರಿನೊಳಗೆ ಇರುವ ಗುಂಪಾದ ಕೆಂಪು ಮೀನುಗಳ ಕಡೆ ತನ್ನ ದೃಷ್ಟಿ ಹಾಕಿದೆ. ಆದರೆ ನೀರೋಳಗೆ ಹೋಗಿ ಮೀನು ಹಿಡಿಯೋಕಂತೂ ಸಾಧ್ಯ ಇಲ್ಲ. ಅದಕ್ಕೆ ಅಲ್ಲೇ ಕುಳಿತು ಹೊಂಚು ಹಾಕಿದೆ. ಎಷ್ಟು ಹೊತ್ತಿಗೂ ಮೀನುಗಳು ಹತ್ತಿರ ಬರಲಿಲ್ಲವೆಂದು ತನ್ನ ಜಾಗವನ್ನು ಕೂಡಾ ಬದಲಿಸಿ ಮತ್ತೊಂದು ಕಡೆ ಹೋಗಿ ಕುಳಿತು ಹೊಂಚು ಹಾಕಿದೆ.
ಹಾಗೆ ಹೊಂಚು ಹಾಕಿದ ಬೆಕ್ಕು ಅಲ್ಲಿ ಕೂಡಾ ಫಲ ಸಿಗದೆ ಮತ್ತೆ ತನ್ನ ಜಾಗಕ್ಕೆ ಬಂದು ಕುಳಿತಿದೆ. ಆಗ ಬೆಕ್ಕಿನ ಅದೃಷ್ಟ ಹಾಗೂ ತಾಳ್ಮೆಗೆ ತಕ್ಕ ಪ್ರತಿಫಲ ಹೊಳೆದಂತೆ ಅಲ್ಲಿಗೆ ಮೀನುಗಳು ಬಂದಾಗ ಬೆಕ್ಕು ತಡಮಾಡದೇ ಬಹಳ ಚಾಕಚಾಕ್ಯತೆಯಿಂದ ಮೀನನ್ನು ತನ್ನ ಬಾಯಲ್ಲಿ ಹಿಡಿದು, ನೀರಿನಿಂದ ಹೊರಗೆ ಎಳೆದು, ಬಾಯಲ್ಲಿ ಕಚ್ಚಿಕೊಂಡು, ವಿಜಯವನ್ನು ಸಾಧಿಸಿದ ಖುಷಿ ಹಾಗೂ ಹೆಮ್ಮೆಯಿಂದು ಅದು ರಸ್ತೆಯಲ್ಲಿ ನಡೆದು ಹೋಗಿದೆ. ನಿಜಕ್ಕೂ ಬೆಕ್ಕು ಬಹಳ ತಾಳ್ಮೆಯಿಂದ, ತನ್ನ ಕೌಶಲ್ಯ ವನ್ನು ಬಳಸಿ ಮೀನು ಹಿಡಿದಾಗ ವಾರೆವ್ಹಾ ಅನ್ನದೇ ಇರುವುದಿಲ್ಲ ವೀಡಿಯೋ ನೋಡುವವರು.
ವಿಡಿಯೋ ನೋಡಿ
ಈಗಾಗಲೇ ಬಹುಸಂಖ್ಯಾತ ಜನರು ನೋಡಿರುವ ಈ ವೀಡಿಯೋಗೆ ನೂರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಬೆಕ್ಕಿಗೆ ನೀರು ಎಂದರೆ ಬಲು ಕಷ್ಟ, ಆದ್ರೆ ಮೀನು ಅಂದ್ರೆ ಮಾತ್ರ ಬಹಳ ಇಷ್ಟ ಎಂದರೆ, ಮತ್ತೊಬ್ಬರು ಬೆಕ್ಕು ಬಹಳ ತಾಳ್ಮೆಯಿಂದ ತನ್ನ ಗುರಿಯನ್ನು ತಲುಪಲು ಬಳಸಿದ ವಿಧಾನ ನಿಜಕ್ಕೂ ಅದ್ಭುತ ಎಂದಿದ್ದಾರೆ. ಕೆಲವರು ಬೆಕ್ಕು ತಾಳ್ಮೆಯಿಂದ ಕಾಯುತ್ತಾ ಕುಳಿತಿದ್ದು ಸಾರ್ಥಕ ವಾಯಿತು ಅದಕ್ಕೆ ಒಂದು ದೊಡ್ಡ ಮೀನೇ ಸಿಕ್ಕಿತು ಎಂದಿದ್ದಾರೆ. ಒಟ್ಟಾರೆ ಪ್ರತಿಕ್ರಿಯೆ ನೀಡಿದವರೆಲ್ಲರೂ ಕೂಡಾ ಮೀನಿನ ಈ ಚಾಣಾಕ್ಷತನಕ್ಕೆ ಸಿಕ್ಕಾಪಟ್ಟೆ ಮೆಚ್ಚುಗೆ ನೀಡಿದ್ದಾರೆ.