ಇಂಜಿನಿಯರ್ ಆಗಲು ಮುಂಬೈಗೆ ಬಂದು ನಟನೆಗೆ ಕಾಲಿಟ್ಟ: ಜನರ ಟೀಕೆಗೆ ಗುರಿಯಾದರೂ ಸಾಧನೆ ಮಾಡಿ ದಿಗ್ಗಜ ನಟ ಎನಿಸಿಕೊಂಡ

ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ಜೀವನದಲ್ಲಿ ಅನೇಕ ಕನಸುಗಳನ್ನು ಹೊತ್ತಿರುತ್ತಾನೆ. ತನ್ನ ಭವಿಷ್ಯದ ಬಗ್ಗೆ ತನ್ನದೇ ಆದಂತಹ ಆಲೋಚನೆಗಳನ್ನು ಹೊಂದಿರುತ್ತಾನೆ. ಅದರಲ್ಲಿ ಅನೇಕ ಜನರು ಭವಿಷ್ಯದಲ್ಲಿ ತಾವು ಏನಾಗಬೇಕೆಂಬ ಆಸೆಯನ್ನು ಕೂಡಾ ಹೊಂದಿರುತ್ತಾರೆ. ಕೆಲವರು ಡಾಕ್ಟರ್ ಗಳು, ಇನ್ನೂ ಕೆಲವರು ಇಂಜಿನಿಯರ್ಗಳು, ಕಲಾವಿದರು ಕ್ರೀಡಾಪಟುಗಳು, ಐ ಎ ಎಸ್, ಐಪಿಎಸ್ ಅಧಿಕಾರಿಗಳಾಗಬೇಕೆಂಬ ಹತ್ತು ಹಲವು ಆಸೆಗಳನ್ನು, ಕನಸುಗಳನ್ನು ಹಾಗೂ ಗುರಿ ಸಾಧನೆಯ ಧ್ಯೇಯವನ್ನು ಹೊಂದಿರುತ್ತಾರೆ. ಅನೇಕರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಯಶಸ್ವಿ ಕೂಡಾ ಆಗುತ್ತಾರೆ. ಇನ್ನೂ ಕೆಲವರು ತಮ್ಮ ಗುರಿ ಸಾಧನೆಯ ಹಾದಿಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿ ಜಗತ್ತಿನ ಗಮನವನ್ನು ಕೂಡಾ ಸೆಳೆಯುತ್ತಾರೆ.

ಆದರೆ ನಾವಿಂದು ಹೇಳಲು ಹೊರಟಿರುವ ವ್ಯಕ್ತಿಯ ಕಥೆಯು ಇವೆಲ್ಲವುಗಳಿಗಿಂತ ವಿಭಿನ್ನವಾದುದು. ಏಕೆಂದರೆ ಅವರು ಮುಂಬೈ ನಗರಕ್ಕೆ ಬಂದಿದ್ದು ಇಂಜಿನಿಯರ್ ಆಗಿ ತಮ್ಮ ಕೆಲಸವನ್ನು ಮಾಡುವುದಕ್ಕಾಗಿ. ಆದರೆ ಇಲ್ಲಿ ಅವರ ಅದೃಷ್ಟ ಅವರನ್ನು ಬೇರೆ ಕಡೆಗೆ ನಡೆಸಿತ್ತು. ಅವರು ಇಂಜಿನಿಯರ್ ಅಂತೂ ಆಗಲಿಲ್ಲ. ಆದರೆ ಅವರಿಂದು ಪ್ರಸಿದ್ಧವಾಗಿರುವುದು, ಇಡೀ ದೇಶದಲ್ಲಿ ಹೆಸರನ್ನು ಮಾಡಿರುವುದು ಮಾತ್ರ ದೇಶದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿ. ಅವರು ಕೇವಲ ಬಾಲಿವುಡ್ ಮಾತ್ರವೇ ಅಲ್ಲದೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೂಡಾ ವಿಶೇಷವಾಗಿ ತೆಲುಗು ಸಿನಿಮಾ ಗಳಲ್ಲಿ ನಟಿಸಿ ತನ್ನ ಛಾಪನ್ನು ಮೂಡಿಸಿರುವ ಪ್ರತಿಭಾವಂತ ನಟ ಅವರು. ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಮಿಂಚಿದ ಅವರು ತಮ್ಮ ಯಾವುದೇ ಪಾತ್ರಕ್ಕಾದರೂ ಜೀವ ತುಂಬುವ ಸಾಮರ್ಥ್ಯವನ್ನು ಹೊಂದಿರುವ ದಿಟ್ಟ ಹಾಗೂ ಚಾಣಾಕ್ಷ ನಟ ಎಂದರೆ ಅತಿಶಯೋಕ್ತಿ ಏನಲ್ಲ.

ಹೀಗೆ ಮುಂಬೈ ಮಹಾನಗರಕ್ಕೆ ಬಂದು ಇಂಜಿನಿಯರಿಂಗ್ ತ್ಯಜಿಸಿ ನಟನಾ ಕ್ಷೇತ್ರಕ್ಕೆ ಇಳಿದ ಈ ನಟ ಮತ್ತಾರೂ ಅಲ್ಲ, ಅವರೇ ಪರೇಶ್ ರಾವಲ್.‌ ವಿಪರ್ಯಾಸವೆಂದರೆ ಇಂದು ದೊಡ್ಡ ಹೆಸರನ್ನು ಮಾಡಿದ ಈ ನಟ, ಅಂದು ನಟನೆಗೆ ಅಡಿಯಿಟ್ಟಾಗ ಜನರು ನಿಂ ದ ನೆ ಮಾಡಿದ್ದರು. ಆದರೆ ಕಾಲಕಳೆದಂತೆ, ವರ್ಷಗಳು ಉರುಳಿದಂತೆ ಯಾವ ಜನರಿಂದ ನಿಂ ದ ನೆಗೆ ಒಳಗಾಗಿದ್ದರೋ, ಅದೇ ಜನರಿಂದ ಅವರೊಬ್ಬ ಅತ್ಯುತ್ತಮ ನಟ ಎನ್ನುವ ಹೊಗಳಿಕೆಯನ್ನು ಕೂಡಾ ಪಡೆದರು ಪರೇಶ್ ರಾವಲ್ ಅವರು. ಸಿನಿಮಾ ರಂಗದಲ್ಲಿ ತನ್ನ ಕೃಷಿಯಿಂದಲೇ ತನ್ನದೇ ಆದ ಸ್ಥಾನವನ್ನು ಪಡೆದಿರುವ ಈ ಬಾಲಿವುಡ್ ನ ಹಿರಿಯ ನಟ ಕಳೆದ ನಾಲ್ಕು ದಶಕಗಳಿಂದಲೂ ಸಿನಿಮಾಗಳ ಮೂಲಕ ಜನರನ್ನು ರಂಜಿಸುತ್ತಿದ್ದಾರೆ.

ಪರೇಶ್ ರಾವಲ್ ತಮ್ಮ 22ನೇ ವಯಸ್ಸಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ, ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಕನಸಿನ ನಗರಿ ಎಂದೇ ಹೆಸರಾಗಿರುವ ಮುಂಬೈ ಮಹಾನಗರಕ್ಕೆ ಉದ್ಯೋಗವನ್ನು ಅರಸಿಕೊಂಡು ಅಡಿ ಇಟ್ಟರು. ಆದರೆ ಅವರ ಹಣೆಬರಹದಲ್ಲಿ ಬೇರೆಯದೇ ಒಂದು ವಿಧಿಯನ್ನ ಬರೆಯಲಾಗಿತ್ತು. ಏಕೆಂದರೆ ಇಂಜಿನಿಯರ್ ಆಗಲು ಬಂದವರು ಅಡಿ ಇಟ್ಟಿದ್ದು ಮಾತ್ರ ಒಂದು ವಿಭಿನ್ನವಾದ ಹಾಗೂ ತನಗೆ ಯಾವುದೇ ರೀತಿಯ ಪರಿಚಯವಿಲ್ಲದ ಕ್ಷೇತ್ರಕ್ಕೆ. 1984 ರಲ್ಲಿ ಬಿಡುಗಡೆ ಆದಂತಹ ಬಾಲಿವುಡ್ ಸಿನಿಮಾ ಹೋಳಿ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು ನಟ ಪರೇಶ್ ರಾವಲ್ ಅವರು.

ಮೊದಲ ಸಿನಿಮಾ ಬಿಡುಗಡೆಯ ನಂತರ ಇವರ ನಟನೆಯನ್ನು ನೋಡಿ ಅನೇಕರು ನಟನಾಗಿ ನೀನು ಈ ಇಂಡಸ್ಟ್ರಿಯಲ್ಲಿ ಉಳಿಯುವುದು ಸಾಧ್ಯವಿಲ್ಲ ಎಂದಿದ್ದರಂತೆ. ಆದರೆ ಅದಾದ ನಂತರ 1986 ಬಂದಂತಹ ನಾಮ್ ಎಂಬ ಸಿನಿಮಾದಲ್ಲಿ ಖ ಳ ನಾಯಕಮ ಪಾತ್ರವನ್ನು ಮಾಡಿದ ಪರೇಶ್ ಅವರ ಪಾತ್ರಕ್ಕೆ ಯಶಸ್ಸು ದೊರೆತಿತ್ತು. ಹೀಗೆ ಪರೇಶ್ ರಾವಲ್ ಅವರ ಸಿನಿ ಜೀವನ ಟೇಕಾಫ್ ಆಯಿತು. 1993 ರ ವೇಳೆಗೆ ಅವರೊಬ್ಬ ಜನಪ್ರಿಯ ನಟನಾಗಿ ಹೆಸರನ್ನು ಮಾಡಿಕೊಂಡಿದ್ದರು. ಬಾಲಿವುಡ್ ನ ದಿಗ್ಗಜ ನಟರ ಸಿನಿಮಾ ಗಳಲ್ಲಿ ಪ್ರಮುಖ ಪಾತ್ರಗಳು ಇವರನ್ನು ಅರಸಿ ಬಂದವು. ಟಾಲಿವುಡ್ ಅಂಗಳದಲ್ಲಿ ಕೂಡಾ ಪರೇಶ್ ತಮ್ಮ ಛಾಪನ್ನು ಮೂಡಿಸಿದ್ದಾರೆ.