ಸ್ವಲ್ಪ ಸ್ವಲ್ಪ ಹಣ ಕೂಡಿಟ್ಟು 7೦ ಲಕ್ಷ ರೂ.ಗಳ ಒಡೆಯರಾಗಿ: ಭವಿಷ್ಯ ಭದ್ರಪಡಿಸಿಕೊಳ್ಳ ಬಯಸಿದರೆ ಒಮ್ಮೆ ಓದಲೇಬೇಕಾದ ಮಾಹಿತಿ ಇದು

“ಕೂತು ಉಂಡರೆ ಕುಡಿಕೆ ಹೊನ್ನು ಸಾಲದು” ಗಾದೆ ಮಾತನ್ನು ಎಲ್ಲರೂ ಕೇಳಿಯೇ ಇದ್ದೇವೆ. ಅಂದರೆ ಯಾವುದೇ ವರಮಾನವಿಲ್ಲದೆ ಇರುವುದನ್ನೆಲ್ಲ ಖಾಲಿ ಮಾಡುತ್ತಾ ಹೋದರೆ ಎಷ್ಟು ಆಸ್ತಿಯಿದ್ದರೂ ಕರಗಿ ಹೋಗುವುದು ಖಚಿತ. ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಾನೆ. ಯಾರು ಭವಿಷ್ಯದ ಬಗ್ಗೆ ಆಲೋಚನೆ ಮಾಡುವರೋ ಆ ವ್ಯಕ್ತಿಗಳು ತಮ್ಮ ಆದಾಯದಲ್ಲಿ ಸ್ವಲ್ಪ ಭಾಗವನ್ನಾದರೂ ಉಳಿತಾಯ ಮಾಡಲು ಬಯಸುತ್ತಾರೆ. ಹಾಗೆ ಉಳಿತಾಯ ಮಾಡಿದ ಹಣವನ್ನು ಸುರಕ್ಷಿತವಾದ ಸ್ಥಳಗಳಲ್ಲಿ ಹೂಡಿಕೆ ಮಾಡಿ, ಅವಶ್ಯಕತೆ ಇದ್ದಾಗ ಹಿಂಪಡೆದು ಅದನ್ನು ತನ್ನ ಅಗತ್ಯಗಳಿಗೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಇದರಿಂದ ಅನಿವಾರ್ಯ ಪರಿಸ್ಥಿತಿಗಳಲ್ಲಿ ಹಣಕ್ಕಾಗಿ ಇನ್ನೊಬ್ಬರ ಮುಂದೆ ಕೈಚಾಚುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ನೀವು ಕೂಡ ನಿಮ್ಮ ಆದಾಯದಲ್ಲಿ ಸ್ವಲ್ಪ ಭಾಗವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಲು ಬಯಸಿದ್ದರೆ ಚಿಂತೆ ಬೇಡ.

ಏಕೆಂದರೆ ಅದಕ್ಕೊಂದು ಸರಿಯಾದ ಯೋಜನೆಯ ಬಗ್ಗೆ ಇಲ್ಲಿ ಮಾಹಿತಿ ಇದೆ. ಕಡಿಮೆ ಹೂಡಿಕೆಯಲ್ಲಿ ಪಾಲಿಸಿಯ ಮೂಲಕ ಹೆಚ್ಚು ಲಾಭವನ್ನು ಪಡೆಯುವ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ನೀವಿಲ್ಲಿ ಪಡೆಯಬಹುದು. ಎಲ್ಐಸಿಯು ಕೆಲವೇ ದಿನಗಳ ಹಿಂದೆ ಒಂದು ಬಹಳ ಅದ್ಭುತವಾದಂತಹ ವಾದಂತಹ ಪಾಲಿಸಿಯನ್ನು ಪರಿಚಯ ಮಾಡಿದೆ. ಇದರ ಹೆಸರು ಎಸ್ಎಸ್ಐಪಿ (ಸಿಪ್), ಈ ವಿಮಾ ಯೋಜನೆಯನ್ನು ವಿಮೆಯನ್ನು ಕವರ್ ಮಾಡುವ ಜೊತೆಗೆ ಹೂಡಿಕೆಯ ಲಾಭವನ್ನು ಕೂಡ ನೀಡುತ್ತದೆ. ಇದೊಂದು ಯೂನಿಟ್ ಲಿಂಕ್ಡ್, ನಾನ್ ಪಾರ್ಟಿಸಿಪೆಂಟಿಂಗ್ ರೆಗ್ಯುಲರ್ ಪ್ರೀಮಿಯಂ ಅಂದರೆ ವ್ಯಕ್ತಿಗತ ಜೀವನ ವಿಮೆಯ ಪ್ಲಾನ್ ಆಗಿದೆ. ಈ ಪಾಲಿಸಿಯ ಪೂರ್ಣ ಅವಧಿಯಲ್ಲಿ ಪೂರ್ಣ ವಿಮೆ ಮಾಡಲಾಗುತ್ತದೆ. ಇದನ್ನು ಆನ್ಲೈನ್ ಮತ್ತು ಆಫ್ಲೈನ್ ಗಳಲ್ಲಿ ಖರೀದಿ ಮಾಡಬಹುದಾಗಿದೆ. ‌

ಈ ಯೋಜನೆಯ ಮೂಲಕ ಪಾಲಿಸಿದಾರನು ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಹಾಗೂ ಮಾಸಿಕ ಅವಧಿಯ ಆಧಾರದ ಮೇಲೆ ಪ್ರೀಮಿಯಂ ಪಾವತಿಸುವ ಅವಕಾಶವನ್ನು ಪಡೆಯುತ್ತಾನೆ. ಅದೇ ಸಮಯದಲ್ಲಿ ವಾರ್ಷಿಕ, ಅರ್ಧವಾರ್ಷಿಕ ಹಾಗೂ ತ್ರೈ ಮಾಸಿಕ ಅವಧಿಯನ್ನು ಆರಿಸಿಕೊಂಡವರಿಗೆ ಗ್ರೇಸ್ ಪೀರಿಯಡ್ 30 ದಿನಗಳಾದರೆ, ಮಾಸಿಕ ಪ್ರೀಮಿಯಂ ಪಾವತಿ ಮಾಡುವವರಿಗೆ ಈ ಅವಧಿ 15 ದಿನಗಳಾಗಿರುತ್ತವೆ. ಈ ವಿಮಾ ಯೋಜನೆಯಲ್ಲಿ ಗರಿಷ್ಠ ವಿಮೆಗೆ ಯಾವುದೇ ಮಿತಿಯಲ್ಲ ಮತ್ತು ಪ್ರೀಮಿಯಂ ತುಂಬಲು ಕೂಡಾ ಯಾವುದೇ ನಿರ್ದಿಷ್ಟ ಮಿತಿ ಎನ್ನುವುದು ಇಲ್ಲ. ಕನಿಷ್ಠ ಪ್ರೀಮಿಯಂ ನ ಬಗ್ಗೆ ತಿಳಿಯುವುದಾದರೆ ಅದಕ್ಕೆ ಪಟ್ಟಿಯನ್ನು ನೀಡಲಾಗಿದೆ.

ವಾರ್ಷಿಕ 40,000, ಅರ್ಧವಾರ್ಷಿಕ 22,000, ತ್ರೈಮಾಸಿಕ 12,000, ಮತ್ತು ಮಾಸಿಕ 4,000 ರೂಪಾಯಿಗಳಿಗಿಂತ ಕಡಿಮೆ ಇರುವಂತಿಲ್ಲ ಎನ್ನಲಾಗಿದೆ. ಈ ಪಾಲಿಸಿಯನ್ನು ಪಡೆಯಲು ಕನಿಷ್ಠ 90 ದಿನಗಳು ಹಾಗೂ ಗರಿಷ್ಠ 65 ವರ್ಷ ವಯಸ್ಸಾಗಿರಬೇಕು. ಪಾಲಿಸಿಯ ಕನಿಷ್ಠ ಪ್ರಬುದ್ಧ ವಯಸ್ಸು 18 ಆಗಿರುತ್ತದೆ. ಗರಿಷ್ಠ ಮೆಚ್ಯುರಿಟಿ ವಯಸ್ಸು 85 ಆಗಿರುತ್ತದೆ. ಈ ವಿಮಾ ಯೋಜನೆಯಲ್ಲಿ ಹತ್ತು ವರ್ಷಗಳಿಂದ ಹಿಡಿದು 25 ವರ್ಷಗಳ ವರೆಗೆ ಪ್ರೀಮಿಯಂ ಅನ್ನು ಪಾವತಿ ಮಾಡಲು ಅವಕಾಶವನ್ನು ನೀಡಲಾಗಿದ್ದು, ಈ ಹೊಸ ಯೋಜನೆ ಬಹಳ ಆಕರ್ಷಕವಾಗಿದೆ.

ಭವಿಷ್ಯ ಎನ್ನುವುದು ಹೇಗಿರುತ್ತದೆ ಎಂದು ಯಾರೊಬ್ಬರೂ ಕೂಡಾ ಊಹಿಸುವುದು ಅಸಾಧ್ಯ. ಆದರೆ ಭವಿಷ್ಯದಲ್ಲಿ ಎದುರಾಗುವ ಸಂಕಷ್ಟಗಳನ್ನು ಎದುರಿಸಲು ನಾವು ಸಜ್ಜಾಗಬೇಕೆಂದರೆ ಅದರಲ್ಲೂ ವಿಶೇಷವಾಗಿ ತಿಂಗಳ ಸಂಬಳ ನಂಬಿರುವವರು ಹಾಗೂ ಮದ್ಯಮ ವರ್ಗದ ಜನರಿಗೆ ಇರುವ ಒಂದೇ ದಾರಿ ಎಂದರೆ ಅದು ಉಳಿತಾಯ. ಹಣವನ್ನು ಉಳಿತಾಯ ಮಾಡಲು ಸರಿಯಾದ ವಿಮಾ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಸಮಸ್ಯೆಗಳು ಎದುರಾದರೂ ಕೂಡಾ ಹಣಕ್ಕಾಗಿ ಪರದಾಡುವಂತಹ ಸ್ಥಿತಿ ಎದುರಾಗುವುದಿಲ್ಲ. ಆ ನಿಟ್ಟಿನಲ್ಲಿ ವಿಮಾ ಯೋಜನೆಗಳು ನಮಗೆ ಭದ್ರತೆ ನೀಡುವುದು ಸಾಧ್ಯವಿದೆ.