ಪೆಟ್ರೋಲ್ ಅಷ್ಟೇ ಯಾಕೆ ಚಾರ್ಜಿಂಗ ಕೂಡ ಅವಶ್ಯಕತೆ ಇಲ್ಲ ಈ ಎಲೆಕ್ಟ್ರಿಕ್ ಕಾರು ಚಲಿಸಲು; ಕೇವಲ 24 ಗಂಟೆಗಳಲ್ಲೇ ಎಲ್ಲ ಕಾರು ಸೋಲ್ಡ್ ಔಟ್!
ದಿನದಿಂದ ದಿನಕ್ಕೆ 4 ವ್ಹೀಲರ್ ವಾಹನ ಸವಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಹನಗಳಲ್ಲಿ ಇಂಧನದ ಬದಲಾಗಿ ಬೇರೆ ಬೇರೆ ಪರ್ಯಾಯಗಳ ಬಗ್ಗೆ ಸಂಶೋಧನೆಗಳು ನಡೆದೇ ಇವೆ. ಇದಕ್ಕೆ ಕಾರು ಕಂಪನಿಗಳು ತಕ್ಕಮಟ್ಟಿಗೆ ಯಶಸ್ವಿಯೂ ಆಗುತ್ತಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಆಗುತ್ತಿರುವ ಹೆಚ್ಚಳದಿಂದಾಗಿ ಕಾರು ಕಂಪನಿಗಳು ಈಗ ಇಲೆಕ್ಟ್ರಿಕ್ ಸಹಾಯದಿಂದ ಕಾರುಗಳನ್ನು ಓಡಿಸಲು ಮಹತ್ವ ಕೊಡುತ್ತಿದ್ದಾರೆ. ಇದರಲ್ಲಿ ಕಾರುಗಳನ್ನು ಚಾರ್ಜ್ ಮಾಡುವುದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಅಮೆರಿಕೆಯ ಇಲೆಕ್ಟ್ರಿಕ್ ವಾಹನ ಸ್ಟಾರ್ಟ್ ಅಪ್ ಕಂಪನಿ ಈ ಸಮಸ್ಯೆಯ ಮೇಲೂ ಉಪಾಯವನ್ನು ಶೋಧಿಸಿದೆ. ಈ ಕಂಪನಿಯು 3 ಚಕ್ರಗಳ ಕಾರನ್ನು ತಯಾರಿಸಿದೆ. ಇದನ್ನು ನಡೆಸಲು ಯಾವುದೇ ಇಂಧನ ಮತ್ತು ಚಾರ್ಜಿಂಗ್ ಅವಶ್ಯಕತೆ ಇಲ್ಲ. Aptera Motors ಹೆಸರಿನ ಈ ಸ್ಟಾರ್ಟ್ ಅಪ್ ಕಂಪನಿಯು ತಯಾರಿಸಿದ ಮೊದಲ ಸೋಲಾರ್ ಇಲೆಕ್ಟ್ರಿಕ್ (sEV) ಕಾರನ್ನು ಲಾಂಚ್ ಮಾಡಿದೆ. ಇದಕ್ಕೆ ಪ್ರತಿನಿತ್ಯ ಕಾರನ್ನು ಚಾರ್ಜ್ ಮಾಡುವ ಅವಶ್ಯಕತೆ ಇಲ್ಲ. ಕಾರಣ ಇದು ಸೋಲಾರ್ ಪಾವರ್ ಮೇಲೆ ಚಾರ್ಜ್ ಆಗುತ್ತೆ. ಒಮ್ಮೆ ಚಾರ್ಜ್ ಆದರೆ ಕಾರು 1600 ಕಿಲೋಮೀಟರ್ ಗಳವರೆಗೆ ಚಲಿಸುತ್ತದೆ ಎಂದು ಕಂಪನಿಯು ಭರವಸೆ ನೀಡಿದೆ. ಈ ಅಂತರವು ಯಾವುದೇ ಇಲೆಕ್ಟ್ರಿಕ್ ಕಾರಿನ ತುಲನೆಯಲ್ಲಿ ಅಧಿಕವಾಗಿದೆ.
ಈ ಕಂಪನಿಯ ಸಹ-ಸಂಸ್ಥಾಪಕ ಕ್ರಿಸ್ ಎಂಥನಿಯವರು ಹೇಳುವ ಪ್ರಕಾರ ಕಾರಿನ ಈ ಟೆಕ್ನಾಲಜಿ ಸಲುವಾಗಿ ಸೂರ್ಯನ ಶಕ್ತಿಯ ಬಳಕೆ ಮಾಡಲಾಗಿದೆ. ಮತ್ತು ಕಾರಿನಲ್ಲಿ ಬಿಲ್ಟ್ ಇನ್ ಸಿಸ್ಟಮ್ ತನ್ನ ಚಾರ್ಜಿಂಗ್ ಯಾವತ್ತೂ ಮೆಂಟೇನ್ ಮಾಡಿಕೊಳ್ಳುತ್ತದೆ. ಇದು ಸುಮಾರು ಗಂಟೆಗೆ 500 ಮೈಲಿ ವೇಗದಲ್ಲಿ ಆಗುತ್ತದೆ. Aptera ಕಂಪನಿಯು ಈಗಷ್ಟೇ ತನ್ನ Solar Powered Electric Vehicle ನ ಪ್ರೀ ಆರ್ಡರ್ ಸೇಲ್ ಪ್ರಾರಂಭಿಸಿದೆ. ಇದನ್ನು ಪ್ರಾರಂಭಿಸುವದಷ್ಟೇ ತಡ ಕೇವಲ 24 ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಎಲ್ಲ ಕಾರುಗಳು ಮಾರಾಟವಾಗಿವೆ.