ಕೊರೊನಾ ಸೋಂಕು ಮುಕ್ತಾಯವಾಗುವವರೆಗೂ ಸಂಬಳ ತೆಗೆದುಕೊಳ್ಳುವದಿಲ್ಲವಂತೆ ಮುಕೇಶ್ ಅಂಬಾನಿ!
ರಿಲಾಯನ್ಸ್ ಇಂಡಸ್ಟ್ರಿಜ್ ಚೇರಮನ್ ರಾದ ಮುಕೇಶ್ ಅಂಬಾನಿಯವರು ಕೋರೊನಾ ವೈರಸ್ ಮಹಾಮಾರಿ ಮುಕ್ತಾಯವಾಗುವವರೆಗೂ ಯಾವುದೇ ಸಂಬಳ ತಗೆದುಕೊಳ್ಳುವದಿಲ್ಲ ಎಂದು ತೀರ್ಮಾನ ತಗೆದುಕೊಂಡಿದ್ದಾರೆ. ಅಂಬಾನಿಯವರ ಸಂಬಳ ವರ್ಷಕ್ಕೆ 15 ಕೋಟಿ ರೂಪಾಯಿ ಇದೆ, ಇದರಲ್ಲಿ 2008-09 ರ ನಂತರ ಹೆಚ್ಚಳ ವಾಗಿಲ್ಲ.
ಕಂಪನಿಯ ಒಂದು ತೀರ್ಪಿನಲ್ಲಿ ಹೇಳಿದ್ದೇನೆಂದರೆ, ಕೋವಿಡ್-19 ರ ಪ್ರಭಾವ ಕಡಿಮೆ ಯಾಗುವವರೆಗೂ ಸ್ಯಾಲರಿ ತಗೆದುಕೊಳ್ಳುವದಿಲ್ಲ ಎಂಬ ಮುಕೇಶ್ ಅಂಬಾನಿಯವರ ಪ್ರಸ್ತಾವನೆಗೆ ಬೋರ್ಡ್ ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ. ಭಾರತದಲ್ಲಿಯ ಕೋವಿಡ್-19 ರ ಪ್ರಕೋಪವು ರಾಷ್ಟ್ರದ ಸಾಮಾಜಿಕ, ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ತುಂಬಾ ಹಾನಿಯುಂಟು ಮಾಡಿದೆ. ಆದುದರಿಂದ ಮುಕೇಶ ಅಂಬಾನಿಯವರು ತಮ್ಮ ವೇತನ ಯಾಗೆದುಕೊಳ್ಳುವದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ.

ಅಲ್ಲದೆ ಅದರ ಜೊತೆಗೆ ಇನ್ನೊಂದು ನಿರ್ಧಾರ ತಗೆದುಕೊಂಡಿದ್ದಾರೆ, ಅದೇನೆಂದರೆ ಎಲ್ಲಿಯವರೆಗೆ ತಮ್ಮ ಕಂಪನಿ ಹಾಗೂ ತಮ್ಮ ಬಿಜನೆಸ್ ಸಂಪೂರ್ಣವಾಗಿ ಗಳಿಸುವ ಕ್ಷಮತೆ ಬರುವದಿಲ್ಲವೋ ಅಲ್ಲಿಯವರೆಗೆ ನಾನು ವೇತನ ತಗೆದುಕೊಳ್ಳುವದಿಲ್ಲ ಎಂದು ಹೇಳಿದ್ದಾರೆ.
ದೊರೆತ ಮಾಹಿತಿಯ ಅನುಸಾರ ಅಂಬಾನಿಯವರ ಅಧ್ಯಕ್ಷತೆಯಲ್ಲಿರುವ ರಿಲಾಯನ್ಸ್ ಇಂಡಸ್ಟ್ರಿ ಲಿಮಿಟೆಡ್(RIL) ಬಹಳ ವೇಗದಿಂದ ಪೆಟ್ರೋಕೆಮಿಕಲ್ ಬಿಜನೆಸ್ ತಗೆದುಹಾಕಿ ಕಂಜೂಮರ್ ಬಿಜನೆಸ್ ಕ್ಷೇತ್ರದಲ್ಲಿ ತುಂಬಾ ವಿಕಾಸ ಮಾಡಿದೆ. ಯಾವ ಪ್ರಕಾರವಾಗಿ ಜಿಯೋ ಡಿಜಿಟಲ್ ಕ್ಷೇತ್ರದಲ್ಲಿ ತನ್ನ ಹೆಸರು ಗಳಿಸಿಕೊಂಡು ಅಪಾರವಾದ ಯಶಸ್ಸು ಕಂಡಿದೆಯೋ ಆದುದರಿಂದಲೇ ಇಂದು ಮುಕೇಶ್ ಅಂಬಾನಿ ಯವರು ಏಷಿಯಾ ಖಂಡದಲ್ಲಿಯ ಎಲ್ಲಕ್ಕಿಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ಜಿಯೋ-ಫೇಸ್ಬುಕ್ ಡೀಲ್ ಮುಕೇಶ್ ಅಂಬಾನಿಯವರಿಗೆ ಇನ್ನಷ್ಟು ಹೆಚ್ಚು ಲಾಭ ತಂದು ಕೊಟ್ಟಿದೆ. ಫೇಸ್ಬುಕ್ ಜೊತೆಗೆ ನಡೆದ ಒಪ್ಪಂದದ ನಂತರ ಅವರ ಸಂಪತ್ತು 4 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. ಅಂದರೆ ಈಗ ಅವರ ಸಂಪತ್ತು 49.5 ಬಿಲಿಯನ್ ಡಾಲರ್ ಅಂದರೆ ಸುಮಾರು 3.77 ಲಕ್ಷ ಕೋಟಿ ರೂಪಾಯಿ ಇದೆ. ಫೇಸ್ಬುಕ್ ಅಂಬಾನಿಯವರ ಜಿಯೋ ನಲ್ಲಿ 43,574 ಕೋಟಿ ರೂಪಾಯಿಯ ಹೂಡಿಕೆ ಮಾಡುತ್ತದೆ. ಈ ಹೂಡಿಕೆಯ ನಂತರ ಜಿಯೋ ನಲ್ಲಿ ಫೇಸ್ಬುಕ್ ಪಾಲು 9.99% ರಷ್ಟಾಗುವದು.

ಜಿಯೋ-ಫೇಸ್ಬುಕ್ ಒಪ್ಪಂದದಿಂದ ಕಂಪನಿಗೆ ತನ್ನ ಎಲ್ಲ ತರಹದ ಸಾಲಗಳನ್ನು ತೀರಿಸಲು ಸಹಾಯವಾಗುವದು. ಇದರಿಂದ ಕಂಪನಿಯಲ್ಲಿಯ ಹೂಡಿಕೆದಾರರ ವಿಶ್ವಾಸ ಇನ್ನಷ್ಟು ಹೆಚ್ಚಾಗುವದು. ಮುಕೇಶ್ ಅಂಬಾನಿಯವರು ಜಿಯೋ ಡಿಜಿಟಲ್ ವ್ಯಾಪಾರ ಮುಖಾಂತರ ಒಂದು ಬೇರೆ ಪ್ರಕಾರದ ಎನ್ ಟಿ ಟಿ ನಿರ್ಮಾಣ ಮಾಡುವ ಯೋಚನೆ ಇದೆಯಂತೆ.
ಜಿಯೋ ಯಶಸ್ಸು ಕಾಣಲು ಅಂಬಾನಿಯವರ ನೇತೃತ್ವ ತುಂಬಾ ಮಹತ್ವದ ಪಾತ್ರವಾಗಿದೆ. ತಮ್ಮ ಬಿಜನೆಸ್ ಯಶಸ್ಸು ಕಾಣಲು ಅಂಬಾನಿಯವರು ಸದಾ ಬೇರೆ ಬೇರೆಯಾದ ಪ್ರಯತ್ನ ಮಾಡುತ್ತಲಿರುತ್ತಾರೆ. ಈ ಯಶಸ್ಸು ಲಕ್ಷದಲ್ಲಿಟ್ಟುಕೊಂಡು ಕೋರೊನಾ ಮಹಾಮಾರಿ ಹೋಗುವ ವರೆಗೂ ಯಾವುದೇಪ್ರಕಾರದ ಸಂಬಳ ತಗೆದುಕೊಳ್ಳುವದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ.