ಠಾಣೆಯಲ್ಲಿ ಕುಳಿತಿದ್ದ ವ್ಯಕ್ತಿಯ ಕಡೆ ನಿಶ್ಯಬ್ದವಾಗಿ ಹರಿದು ಬಂತು ಹಾವು: ಮುಂದೆ ಆಗಿದ್ದು ಮಾತ್ರ ಭ ಯಾ ನಕ
ಹಾವು ಎನ್ನುವ ಶಬ್ದ ಕೇಳಿದರೆ ಸಾಕು ಬೆಚ್ಚಿ ಬೀಳುವುದು ಖಚಿತ, ಹಾಗೇನಾದರೂ ಹಾವು ಎದುರಿಗೆ ಕಂಡರೆ ಕಾಲಿಗೆ ಬುದ್ಧಿ ಹೇಳುವುದು ಕೂಡ ವಾಸ್ತವ. ಹಾವು ಎಂದರೆ ಮನಸ್ಸಿನಲ್ಲಿ ಇರುವಂತಹ ಭ ಯ ವೇ ಇದಕ್ಕೆ ಪ್ರಮುಖ ಕಾರಣ. ಹಾವನ್ನು ಕಂಡರೆ ಭಯಪಡುವವರೇ ಹೆಚ್ಚು , ಅಲ್ಲದೇ ಅದನ್ನು ಧೈರ್ಯವಾಗಿ ಹಿಡಿಯಬೇಕಾದರೆ ಸೂಕ್ತವಾದ ತರಬೇತಿಯನ್ನು ಪಡೆದಿರುವವರಾಗಿರಬೇಕು ಇಲ್ಲದೇ ಹೋದರೆ ಹಾವನ್ನು ಹಿಡಿಯುವುದು ಅಸಾಧ್ಯ. ಅದಕ್ಕೆ ಹಾವೇನಾದರೂ ಕಂಡರೆ ಮೊದಲು ದೂರ ಹೋಗುವುದು ಒಂದೇ ಸುರಕ್ಷಿವಾದ ಮಾರ್ಗ. ಆದರೆ ಕೆಲವು ಸಂದರ್ಭಗಳಲ್ಲಿ ಸದ್ದಿಲ್ಲದೆ ನೆಲದ ಮೇಲೆ ಹರಿದು ಬರುವ ಹಾವುಗಳು ನಮ್ಮ ಹತ್ತಿರಕ್ಕೆ ಬರುವವರೆಗೂ ಅವುಗಳ ಸುಳಿವು ಕೂಡ ಸಿಗದೇ ಇದ್ದು, ಹತ್ತಿರಕ್ಕೆ ಬಂದ ಮೇಲೆ ಅದು ತಿಳಿದರೆ ಪರಿಸ್ಥಿತಿ ಹೇಗಿರಬೇಡ? ಊಹಿಸಿಕೊಂಡರೇನೇ ನಡುಕ ಉಂಟಾಗುವುದು.
ಹಾಗಿದ್ದರೆ ಇಲ್ಲೊಂದು ವೈರಲ್ ವಿಡಿಯೋದಲ್ಲಿ ಇಂತಹದೇ ಒಂದು ಭ ಯಾ ನ ಕ ಎನಿಸುವ ಸನ್ನಿವೇಶವು ಸಿಸಿ ಕ್ಯಾಮೆರಾ ಗಳಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ನೋಡುವಾಗ ಒಂದು ಕ್ಷಣ ನಮಗೇ ಭ ಯ ವಾಗುತ್ತದೆ. ಈ ವೀಡಿಯೋದಲ್ಲಿ ಹಾವು ಹೇಗೆ ಸದ್ದಿಲ್ಲದೆ ಬಂದು, ಅದನ್ನು ನಿರೀಕ್ಷೆ ಮಾಡಿರದ ವ್ಯಕ್ತಿಯೊಬ್ಬನಿಗೆ ಅದು ಹೇಗೆ ಭ ಯ ಹುಟ್ಟಿಸುತ್ತದೆ, ಹಾವು ಕೂಡಾ ಹೇಗೆ ಭ ಯ ಪಡುತ್ತದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಇನ್ನು ಇಂತಹದೊಂದು ರೋ ಚ ಕ ಘಟನೆ ನಡೆದಿರುವುದು ಥೈಲ್ಯಾಂಡಿನಲ್ಲಿ ಎನ್ನಲಾಗಿದೆ. 45 ವರ್ಷ ವಯಸ್ಸಿನ ಅಪಿಚಾಟ್ ಚಿಟೋಂಗ್ ಎನ್ನುವ ವ್ಯಕ್ತಿಯೊಬ್ಬರು ಪೊಲೀಸ್ ಠಾ ಣೆಯಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ವರದಿಯನ್ನು ನೀಡಲು ಬಂದಿದ್ದಾರೆ.
ಈ ವೇಳೆ ಅವರು ಠಾಣೆಯ ಕಛೇರಿಯ ಹಾಲ್ ನಲ್ಲಿ ಚೇರ್ ಮೇಲೆ ಕುಳಿತುಕೊಂಡು ಒಳಗೆ ಇದ್ದವರ ಬಳಿ ಏನೋ ಮಾತನಾಡುತ್ತಿರುವಂತೆ ಕಾಣುತ್ತಿದೆ. ಅವರ ಗಮನ ಹೊರಗಿನ ಕಡೆಗೆ ಇರಲಿಲ್ಲ. ಆಗ ಅದೇ ಸಂದರ್ಭದಲ್ಲಿ ಕಚೇರಿಯ ಹೊರಗಿನಿಂದ ವಿಶೇಷ ಚೇತನರಿಗಾಗಿ ಮೆಟ್ಟಿಲುಗಳ ಬದಲಾಗಿ, ಅವರು ಏರಿ ಬರಲು ಅನುಕೂಲವಾಗುವಂತೆ ನಿರ್ಮಾಣ ಮಾಡಿರುವ ಇಳಿಜಾರಿನಂತಹುದರ ಮೇಲೆ ಹಾವೊಂದು ಬಹಳ ಸುಲಭವಾಗಿ ಹರಿದುಕೊಂಡು ಪೊಲೀಸ್ ಠಾಣೆ ಒಳಕ್ಕೆ ಬಂದಿದೆ. ಆದರೆ ಈ ವ್ಯಕ್ತಿ ಹಾವು ಒಳಗೆ ಬಂದಿರುವುದನ್ನು ಗಮನಿಸಿಲ್ಲ, ಸುತ್ತಮುತ್ತ ಯಾರೂ ಇಲ್ಲದ್ದರಿಂದ ಹಾವು ಯಾರ ಕಣ್ಣಿಗೂ ಕಂಡಿಲ್ಲ. ಹಾಗೆ ಹರಿದುಕೊಂಡು ಆತನ ಬಳಿ ಬರುವಾಗ, ಇನ್ನೇನು ಕೆಲವೇ ಇಂಚುಗಳಷ್ಟು ದೂರದಲ್ಲಿರುವಾಗ ಆತನ ಸಿಕ್ಸ್ತ್ ಸೆನ್ಸ್ ಅ ಪಾ ಯದ ಸೂಚನೆ ನೀಡಿತೇನೋ ಎಂಬಂತೆ ಆತ ಹಾವನ್ನು ಗಮನಿಸಿದ್ದಾರೆ.
ಹಾವನ್ನು ನೋಡಿದ ಆತ ಒಂದು ಕ್ಷಣ ಬೆ ಚ್ಚಿ ದ್ದಾರೆ. ಅಲ್ಲದೇ ಆತನ ಪ್ರತಿಕ್ರಿಯೆ ನೋಡಿದ ಹಾವು ಕೂಡಾ ಬೆಚ್ಚಿ ಬಿದ್ದಿತೇನೋ ಎನ್ನುವಂತೆ ಅದು ಕೂಡ ಕ್ಷಣ ಮಾತ್ರದಲ್ಲೇ ಆ ವ್ಯಕ್ತಿಯ ಕಾಲಿನ ಮೇಲೆ ಹಾರಿದೆ. ಆರು ಅಡಿ ಉದ್ದದ ರ್ಯಾಟ್ ಸ್ನೇಕ್ ನಿಂದ ತಪ್ಪಿಸಿಕೊಳ್ಳಲು ಆತ ಕೂಡಾ ಬಹಳ ಪ್ರಯತ್ನ ಪಡುತ್ತಾ, ಅದನ್ನು ಕಾಲಿನಿಂದ ತುಳಿದು ಬಲವಾಗಿ ಕಾಲಿನಲ್ಲೇ ಹಿಡಿದು, ಅನಂತರ ಅದರ ತಲೆ ಮತ್ತು ಬಾಲದ ಭಾಗವನ್ನು ಕೈಗಳಿಂದ ಹಿಡಿದುಕೊಂಡಿದ್ದಾರೆ.
ಹೊರಗಡೆ ಆದ ಶಬ್ದವನ್ನು ಗಮನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಹೊರಕ್ಕೆ ಬಂದು ಅಲ್ಲಿ ನಡೆಯುತ್ತಿದ್ದ ದೃಶ್ಯವನ್ನು ನೋಡಿ ಭ ಯ ಭೀ ತ ರಾಗಿದ್ದಾರೆ.
ವಿಡಿಯೋ ನೋಡಿ
ಅಪಿಚಾಟ್ ತಾನು ಹಿಡಿದ ಹಾವನ್ನು ಪೋಲಿಸ್ ಅಧಿಕಾರಿಯ ಕೈಗೆ ಕೊಡಲು ಹೋದಾಗ ಅಧಿಕಾರಿ ಅದನ್ನು ಕಂಡು ಬೆ ಚ್ಚಿ ದ ಅವರ ಮುಖಭಾವ ವೀಡಿಯೋದಲ್ಲಿ ಕಾಣುತ್ತದೆ. ಕೊನೆಗೆ ಅಪಿಚಾಟ್ ಅದನ್ನು ಹೊರಗೆ ಪೊದೆಗಳಿರುವ ಕಡೆಗೆ ಬಿಟ್ಟು ಬಂದಿದ್ದಾನೆ. ಈ ವೀಡಿಯೋ ಲಕ್ಷಗಳ ಸಂಖ್ಯೆಯಲ್ಲಿ ವೀಕ್ಷಣೆ ಮಾಡಲ್ಪಟ್ಟಿದ್ದರು, ನೆಟ್ಟಿಗರು ವೀಡಿಯೋ ನೋಡಿ ಭ ಯಾ ನ ಕವಾಗಿದೆ ಎಂದಿದ್ದು, ಹಾವನ್ನು ಆ ವ್ಯಕ್ತಿ ಡೀಲ್ ಮಾಡಿದ ವಿಧಾನವನ್ನು ಹೊಗಳತ್ತಾ ಆತನ ಧೈರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಹಾವನ್ನು ಆತನ ಬಹಳ ಚಾಕಚಾಕ್ಯತೆಯಿಂದ ನಿಭಾಯಿಸಿದ್ದು ಜನರ ಅಪಾರ ಮೆಚ್ಚುಗೆ ಗಳಿಸಿದೆ.