ಕೇವಲ ‘ಈ’ ವ್ಯಕ್ತಿಗಾಗಿ ಕ್ರಿಕೆಟ್ ನೋಡಲು ಇಷ್ಟ ಪಡುತ್ತಾರೆ ಅನುಷ್ಕಾ ಶೆಟ್ಟಿ; ಯಾರು ನೋಡಿ..

ಕ್ರಿಕೆಟ್ ಮತ್ತು ಚಿತ್ರರಂಗ ಒಂದೇ ನಾಣ್ಯದ ಎರಡು ಬದಿಗಳಿದ್ದಂತೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಪರಸ್ಪರರ ಫೀಲ್ಡ್ ಗಳನ್ನು ತುಂಬಾ ಗೌರವಿಸುತ್ತಾರೆ.

ಅಷ್ಟೇ ಅಲ್ಲ, ಪ್ರೀತಿ, ಪ್ರೇಮ, ಪ್ರಣಯವಂತೂ ಇಲ್ಲಿ ಕಡಿಮೆ ಇಲ್ಲ. ಹೀಗಾಗಿ ಬಾಲಿವುಡ್ ನವರು ಕ್ರಿಕೆಟ್ ನ್ನು ಮತ್ತು ಕ್ರಿಕೆಟ್ ನವರು ಚಿತ್ರರಂಗವನ್ನು ಮೊದಲಿನಿಂದಲೂ ಇಷ್ಟ ಪಡುತ್ತಾರೆ.

ನಮ್ಮೆಲ್ಲರಿಗೂ ಗೊತ್ತಿದ್ದ ಹಾಗೆ ಅನುಷ್ಕಾ ಶೆಟ್ಟಿ ಅವರು ಬಾಹುಬಲಿ ಚಿತ್ರದಿಂದಾಗಿ ಭಾರತದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿಯೇ ಮನೆ ಮಾತಾಗಿದ್ದಾರೆ.

ಇವರು ಕ್ರಿಕೆಟ್ ಭಾರತ ತಂಡದ ಕ್ರಿಕೆಟ್ ಮ್ಯಾಚ್ ನೋಡಲು ತುಂಬಾ ಇಷ್ಟ ಪಡುತ್ತಾರೆ, ಆದರೆ ಇವರು ನೋಡುವಾಗ ಅಲ್ಲಿ ಒಬ್ಬ ಆಟಗಾರನ ಬ್ಯಾಟಿಂಗ್ ನಡೆದಿರಬೇಕು. ಅವರು ಯಾರು ಓದಿ ಗೊತ್ತಾಗುತ್ತೆ.

ಒಂದು ಸಂದರ್ಶನದಲ್ಲಿ ರಾಹುಲ್ ದ್ರಾವಿಡ್ ಇವರ ಮೊದಲ ಪ್ರೀತಿ ಎಂದಿದ್ದರು. ಚಿಕ್ಕವರಿದ್ದಾಗ ರಾಹುಲ್ ದ್ರಾವಿಡ್ ಇವರಿಗೆ ತುಂಬಾ ಇಷ್ಟವಾಗುತ್ತಿದ್ದರಂತೆ. ಅನುಷ್ಕಾ ಅವರ ದುರದೃಷ್ಟವೆಂದರೆ ರಾಹುಲ್ ಅವರಿಗೆ ಇನ್ನೂ ಒಮ್ಮೆಯೂ ಭೇಟಿಯಾಗಿಲ್ಲವಂತೆ.

ಇರಲಿ ಈಗ ಸದ್ಯದ ಪ್ರಕಾರ ಅನುಷ್ಕಾ ಅವರು ಕ್ರಿಕೆಟ್ ನೋಡುವದು ಬರೀ ವಿರಾಟ್ ಅವರ ಕಾರಣದಿಂದಾಗಿ ಎಂದು ಸುದ್ದಿಯೊಂದು ಬಂದಿದೆ. ಚಿತ್ರರಂಗದ ಅನೇಕ ಖ್ಯಾತಿಗಳು ಕ್ರಿಕೆಟ್ ನ್ನು ತುಂಬಾ ಇಷ್ಟ ಪಡುತ್ತಾರೆ. ಅದರಲ್ಲಿ ಅನುಷ್ಕಾ ಅವರೂ ಒಬ್ಬರು. ಆದರೆ ಅನುಷ್ಕಾ ಅವರಿಗೆ ವಿರಾಟ್ ಅವರ ಬ್ಯಾಟಿಂಗ್ ನೋಡುವುದೆಂದರೆ ತುಂಬಾ ಇಷ್ಟವಂತೆ. ಆದ್ದರಿಂದ ಅನುಷ್ಕಾ ಅವರು ಕ್ರಿಕೆಟ್ ನೋಡುವುದೇ ವಿರಾಟ್ ಅವರ ಬ್ಯಾಟಿಂಗ್ ನೋಡಲು ಎಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.