ಜಿಮ್ ನಲ್ಲಿ ಬಾಲಿವುಡ್ ಸೂಪರ್ ಹಿಟ್ ಸಾಂಗ್ ಗೆ ಸ್ಟೆಪ್ ಹಾಕಿದ ಸಾರಾ ಆಲಿ ಖಾನ್: ವೀಡಿಯೋ ನೋಡಿ ‘ಸೂಪರ್’ ಎಂದ ಅಭಿಮಾನಿಗಳು
ಬಾಲಿವುಡ್ ನ ಉದಯೋನ್ಮುಖ ನಟಿಯರಲ್ಲಿ ಒಬ್ಬರು ನಟಿ ಸಾರಾ ಆಲೀ ಖಾನ್ . ಬಾಲಿವುಡ್ ನಟ ಸೈಫ್ ಆಲಿ ಖಾನ್ ಹಾಗೂ ಅವರ ಮೊದಲ ಪತ್ನಿ ಅಮೃತ ಸಿಂಗ್ ಅವರ ಮಗಳು. ತಂದೆ ತಾಯಿ ಇಬ್ಬರೂ ಬಾಲಿವುಡ್ ನ ಸ್ಟಾರ್ ನಟರು, ಈಗ ಅದೇ ರೀತಿ ಸಾರಾ ಕೂಡಾ ಬಾಲಿವುಡ್ ನ ಸ್ಟಾರ್ ನಟಿಯಾಗಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದು, ನಟನೆಯಲ್ಲಿ ಕೂಡಾ ಬಹಳ ಉತ್ತಮವಾದ ಹೆಸರನ್ನು ತನ್ನದಾಗಿಸಿಕೊಂಡಿರುವ ನಟಿ ಕೂಡಾ ಆಗಿದ್ದಾರೆ ಸಾರಾ. ಈ ಯುವ ನಟಿಯು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದು, ಸೋಶಿಯಲ್ ಮೀಡಿಯಾಗಳ ವಿವಿಧ ಫ್ಲಾಟ್ ಫಾರ್ಮ್ ಗಳಲ್ಲಿ ಸಾರಾ ಗೆ ದೊಡ್ಡ ಸಂಖ್ಯೆಯ ಹಿಂಬಾಲಕರು ಹಾಗೂ ಅಭಿಮಾನಿಗಳು ಕೂಡಾ ಇದ್ದಾರೆ.
ನಟಿ ಸಾರಾ ಆಲಿ ಖಾನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತನ್ನ ಸುಂದರವಾದ ಫೋಟೋಗಳನ್ನು ಹಾಗೂ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಆ ಮೂಲಕ ಅವರು ಅಭಿಮಾನಿಗಳ ಜೊತೆಗೆ ಸಂಪರ್ಕ ದಲ್ಲಿರುತ್ತಾರೆ. ಸಾರಾ ಅವರ ಹೊಸ ಸಿನಿಮಾ ಬಾಲಿವುಡ್ ನಟ ವರುಣ್ ಧವನ್ ಅವರ ಜೊತೆಗಿನ ಕೂಲಿ ನಂ 1. ಈ ಹಿಂದೆ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ದಶಕಗಳ ಹಿಂದೆ ನಟಿಸಿದ್ದ ಸೂಪರ್ ಹಿಟ್ ಸಿನಿಮಾದ ಹೆಸರಿನಲ್ಲೇ ಈಗಿನ ಹೊಸ ಸಿನಿಮಾ ಇರುವುದು ಕೂಡಾ ವಿಶೇಷ. ಇನ್ನು ಈ ಸಿನಿಮಾದ ತನ್ನ ಪಾತ್ರಕ್ಕಾಗಿ ಸಾರಾ ಕೂಡಾ ಸಾಕಷ್ಟು ಶ್ರಮ ಪಟ್ಟಿದ್ದಾರೆ.
ಸಾರಾ ಕೆಲವು ದಿನಗಳ ಹಿಂದೆ ಒಂದು ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಸಾರಾ ವರ್ಕೌಟ್ ಮಾಡುತ್ತಿದ್ದು, ಅದರ ನಡುವೆಯೇ ಸಾರಾ ಬಾಲಿವುಡ್ ನ ಸ್ಟಾರ್ ಮಟ ಚಿಚಿ ಎಂದೇ ಖ್ಯಾತರಾದ ಗೋವಿಂದ ಅವರ ಹಾಡಿಗೆ ಭರ್ಜರಿ ಸ್ಟೆಪ್ ಗಳನ್ನು ಕೂಡಾ ಹಾಕಿ ಗಮನ ಸೆಳೆದಿದ್ದಾರೆ. ಸಾರಾ ಈ ವೀಡಿಯೋದಲ್ಲಿ ಗೋವಿಂದ ಹಾಗೂ ಕರಿಷ್ಮಾ ಕಪೂರ್ ಅವರ ಸೂಪರ್ ಹಿಟ್ ಸಾಂಗ್ ಜೇಠ್ ಕಿ ದುಪಹರಿ ಮೇ ಪಾವ್ ಜಲೇ ಹೈ ಸೈಯ್ಯಾ ಪಾವ್ ಜಲೇ ಹೈ ಹಾಡಿಗೆ ಸ್ಟೆಪ್ ಗಳನ್ನು ಹಾಕಿದ್ದಾರೆ. ಸಾರಾ ಡಾನ್ಸ್ ವೀಡಿಯೋ ಅಭಿಮಾನಿಗಳು ಮಾತ್ರವೇ ಅಲ್ಲದೇ ಬಾಲಿವುಡ್ ಸೆಲೆಬ್ರಿಟಿಗಳು ಕೂಡಾ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಸಾರಾ ಈ ವೀಡಿಯೋ ಶೇರ್ ಮಾಡಿಕೊಂಡು ಶೀರ್ಷಿಕೆಯಲ್ಲಿ ಸುನೇಹ್ರಿ, ದುಪಹ್ರೀ ಎಂದು ಬರೆದುಕೊಂಡಿದ್ದಾರೆ. ಸಾರಾ ವೀಡಿಯೋಗೆ ಬಾಲಿವುಡ್ ಸೆಲೆಬ್ರಿಟಿ ಆದಂತಹ ಮನೀಶ್ ಮಲ್ಹೋತ್ರ ಕೂಡಾ ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ಸೂಚಿಸುತ್ತಾ ಜಿಮ್ ನಲ್ಲಿ ಬಾಲಿವುಡ್ ಸ್ಟೈಲ್ ಡಾನ್ಸ್ ಎಂದು ಬರೆದಿದ್ದಾರೆ. ಅಭಿಮಾನಿಗಳಂತೂ ಸಾರಾ ಡಾನ್ಸ್ ಗೆ ಫಿದಾ ಆಗಿದ್ದು ಕಾಮೆಂಟ್ ಗಳ ಮೂಲಕ ಮೆಚ್ಚುಗೆಯ ಪ್ರವಾಹವನ್ನು ಹರಿಸುತ್ತಿದ್ದಾರೆ. ಪ್ರಸ್ತುತ ಬಾಲಿವುಡ್ ನಲ್ಲಿ ಸಾರಾ ವರುಣ್ ಧವನ್ ಜೊತೆ ಕೂಲಿ ನಂ 1 ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲೆಡೆ ಈಗಾಗಲೇ ಸಾಕಷ್ಟು ಸುದ್ದಿಯಾಗಿರುವ ವಿಷಯವಾಗಿದೆ.
ವಿಡಿಯೋ ನೋಡಿ
ಸಾರಾ ಕೂಡಾ ಸಿನಿಮಾಕ್ಕೆ ಸಂಬಂಧಿಸಿದಂತೆ ವರುಣ್ ಧವನ್ ಅವರ ಜೊತೆಗಿನ ಫೋಟೋ ಗಳು ಹಾಗೂ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಸಿನಿಮಾ ಕುರಿತಾಗಿ ಆಸಕ್ತಿಯನ್ನು ಹಾಗೂ ಕುತೂಹಲವನ್ನು ಉಂಟು ಮಾಡುತ್ತಲೇ ಇರುತ್ತಾರೆ. ಸಾರಾ ಹಂಚಿಕೊಂಡಿರುವ ಫೋಟೋಗಳಲ್ಲಿ ವರುಣ್ ಧವನ್ ವಿವಿಧ ಲುಕ್ ಗಳಲ್ಲಿ ಕಾಣಿಸಿಕೊಂಡಿದ್ದರೆ ಸಾರಾ ಮರಾಠಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಸಾರಾ ಅವರ ಅತ್ರಂಗಿ ಸಿನಿಮಾ ಕೂಡಾ ಆರಂಭವಾಗಲಿದ್ದು, ಇದರಲ್ಲಿ ಸಾರಾ ನಟ ಅಕ್ಷಯ್ ಕುಮಾರ್ ಹಾಗೂ ಧನುಷ್ ಅವರ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.