72 ರೂಪಾಯಿಗಳಿಗೆ ಮಾರಾಟವಾಯ್ತು 2 ಬಿಲಿಯನ್ ಡಾಲರ್ ಮೌಲ್ಯದ ಕಂಪನಿ; ಭಾರತೀಯ ಉದ್ಯಮಿ BR Shetty ಆಗಸದಿಂದ ಭೂಮಿಗೆ ಕುಸಿದಿದ್ದು ಹೇಗೆ?

ಯುಎಇ ಬೇಸ್ಡ್, ಭಾರತೀಯ ಮೂಲದ ಕೋಟ್ಯಾಧಿಪತಿ ಬಿ.ಆರ್ ಶೆಟ್ಟಿ ತಮ್ಮ ಫಿನ್ ಬ್ಲರ್ ಪಿ ಎಲ್ ಸಿ ವ್ಯವಹಾರವನ್ನು ಇಸ್ರೇಲ್ ‌ನ ಯುಎಇ ಕನ್ಸೋರ್ಟಿಯಂಗೆ ಕೇವಲ ಬಂದು ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 73.52 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷದಿಂದಲೇ ಬಿ ಆರ್ ಶೆಟ್ಟಿ ಅವರ ಉದ್ಯಮದ ಸ್ಟಾರ್ ವ್ಯಾಲ್ಯೂ ಕುಸಿಯುತ್ತ ಬಂದಿತ್ತು ಎನ್ನಲಾಗಿದೆ. ಬಿ ಆರ್ ಶೆಟ್ಟಿ ಅವರ ಕಂಪನಿಗಳ ಮೇಲೆ ಬಹುಕೋಟಿ ಮೌಲ್ಯದ ಸಾಲಗಳು ಇರುವುದು ಮಾತ್ರವಲ್ಲದೇ, ಶೆಟ್ಟಿಯವರ ಮೇಲೆ ಕೂಡ ವಂಚನೆಯ ಆ ರೋ ಪ ವನ್ನು ಸಲ್ಲಿಸಲಾಗಿದ್ದು, ಅದರ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಕಳೆದ ಡಿಸೆಂಬರ್ ನಲ್ಲಿ ಅವರ ವ್ಯವಹಾರವು 1.5 ಬಿಲಿಯನ್ ಪೌಂಡುಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿತ್ತು, ಆದರೆ ಅದೇ ಸಂದರ್ಭದಲ್ಲಿ ಅವರ ಕಂಪನಿಯ ಮೇಲೆ ಶತಕೋಟಿ ಡಾಲರ್ ಮೌಲ್ಯದ ಸಾಲವನ್ನು ಕೂಡಾ ಹೊಂದಿದ್ದರು ಎನ್ನಲಾಗಿದೆ.

ಬಿ.ಆರ್.ಶೆಟ್ಟಿ ಅವರ ಫೈನಾನ್ಷಿಯಲ್ ಕಂಪನಿಯಾದಂತಹ ಫಿನ್ ಬ್ಲರ್ ಪಿಎಲ್ಸಿ ತಾನು ಗ್ಲೋಬಲ್ ಫಿನ್ ಟೆಕ್ ಇನ್ವೆಸ್ಟ್ ಮೆಂಟ್ ಹೋಲ್ಡಿಂಗ್ ಜೊತೆ ಒಂದು ಒಪ್ಪಂದವನ್ನು ಮಾಡಿಕೊಳ್ಳುತ್ತಿರುವುದಾಗಿ ಘೋಷಣೆಯನ್ನು ಮಾಡಿತ್ತು. ಆದರೆ ಬಿ.ಆರ್.ಶೆಟ್ಟಿ ತಮ್ಮ ಫಿನ್ ಬ್ಲರ್ ಪಿಎಲ್ಸಿ ಯ ಎಲ್ಲಾ ಸಂಪತ್ತನ್ನು ಕೂಡಾ ಇಸ್ರೇಲ್ ನ ಪ್ರಿಸ್ಮ್ ಗ್ರೂಪ್ ನ ಸಹಭಾಗಿತ್ವ ಕಂಪನಿಯಾದ GFIH ಗೆ ಮಾರಾಟ ಮಾಡುತ್ತಿದ್ದಾರೆ.‌ ಆಸಕ್ತಿಕರ ವಿಷಯವೇನೆಂದರೆ ಇಸ್ರೇಲ್ ನ ಮಾಜಿ ಪ್ರಧಾನ ಮಂತ್ರಿ ಎಹುದ್ ಓಲ್ ಮರ್ಟ್ ಅವರಿಗೆ ಸಂಬಂಧಿಸಿದ ಪ್ರಿಜ್ಮ್ ಗ್ರೂಪ್ ಕೊಡು ಕೊಳ್ಳುವಿಕೆಯ ವ್ಯವಹಾರಗಳಿಗಾಗಿ ಅಬುದಾಬಿಯ ರಾಯಲ್ ಸ್ಟ್ರಾಟಜಿಕ್ ಪಾರ್ಟ್ನರ್ಸ್ ಜೊತೆಗೆ ಒಂದು ಸಂಯೋಜನೆಯನ್ನು ಸ್ಥಾಪನೆ ಮಾಡಿದ್ದಾರೆ.

ಕಳೆದ ವರ್ಷ ಕಳೆದ ವರ್ಷ ಫಿನ್ ಬ್ಲರ್ ನ ಮಾರುಕಟ್ಟೆ ಮೌಲ್ಯ 2 ಬಿಲಿಯನ್ ಡಾಲರ್ ಗಳಾಗಿತ್ತು. ಅದೇ ಸಂದರ್ಭದಲ್ಲಿ ದೊರೆತಂತಹ ಮಾಹಿತಿಯ ಪ್ರಕಾರ ಕಂಪನಿಯ ಮೇಲೆ ಒಂದು ಶತಕೋಟಿ ಗಿಂತ ಹೆಚ್ಚಿನ ಮೌಲ್ಯದ ಸಾಲದ ಹೊರೆ ಇದೆ ಎನ್ನಲಾಗಿತ್ತು. ಈಗ ನಡೆಯುತ್ತಿರುವ ಒಪ್ಪಂದವು ಯುನೈಟೆಡ್ ಅರಬ್ ಎಮಿರೇಟ್ ಮತ್ತು ಇಸ್ರೇಲ್ ಗಳ ನಡುವಿನ ವಾಣಿಜ್ಯ ವ್ಯವಹಾರಗಳಿಗೆ ಬಹಳ ಪ್ರಮುಖವಾದದ್ದು ಎನ್ನಲಾಗುತ್ತಿದೆ. ಏಕೆಂದರೆ ಈ ವರ್ಷದ ಆರಂಭದಲ್ಲಿ ಈ ಎರಡು ದೇಶಗಳು ಕೂಡ ಸಾಮಾನ್ಯೀಕರಣದ ಒಪ್ಪಂದಕ್ಕೆ ಸಹಿ ಹಾಕಿದ್ದವು, ಇದೇ ಹಿನ್ನೆಲೆಯಲ್ಲಿ ಬ್ಯಾಂಕಿನಿಂದ ಹಿಡಿದು ಮೊಬೈಲ್ ಸೇವೆಯವರೆಗೂ ಎಲ್ಲಾ ಒಪ್ಪಂದಗಳಲ್ಲಿ ಕೂಡಾ ಈ ಎರಡು ದೇಶಗಳ ಸಹಿ ಇದೆ ಎನ್ನಲಾಗಿದೆ.

ಫಿನ್ ಬ್ಲರ್ ಪಿಎಲ್ಸಿ ಮಾತ್ರವೇ ಅಲ್ಲದೇ ಶೆಟ್ಟಿಯವರ ಅಬುದಾಬಿಯಲ್ಲಿರುವ ಕಂಪನಿ ಎನ್ ಎಂ ಸಿ ಹೆಲ್ತ್ ನ ಶೇರ್ ಮೌಲ್ಯ ಕಳೆದ ವರ್ಷ 70% ನಷ್ಟು ಕುಸಿಯ ತೊಡಗಿತ್ತು. ಅಲ್ಲದೇ ಅವರ ಕಂಪನಿಗಳ ಮೇಲೆ ವಂ ಚನೆಯ ಆರೋಪ ಕೇಳಿ ಬಂದು ತನಿಖೆ ಆರಂಭವಾದ ಹಿನ್ನೆಲೆಯಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಅವರ ಕಂಪನಿಗಳ ಶೇರ್ ವ್ಯವಹಾರದ ಮೇಲೆ ಸಂಪೂರ್ಣವಾಗಿ ನಿಷೇಧವನ್ನು ಹೇರಲಾಗಿತ್ತು. ಇದರಿಂದಾಗಿ ಕೆಲವೇ ದಿನಗಳಲ್ಲಿ ಅವರ ಉದ್ಯಮವು ತೀವ್ರವಾದ ಆರ್ಥಿಕ ಹಿನ್ನಡೆಯನ್ನು ಅನುಭವಿಸಿದ್ದರಿಂದ ಬೇರಾವುದೇ ಕಂಪನಿಗಳು ಇಲ್ಲಿ ಹೂಡಿಕೆ ಮಾಡಲು ಮುಂದೆ ಬಾರದ ಕಾರಣ ಎರಡೂ ದೇಶಗಳ ನಡುವಿನ ಕನ್ಸೋರ್ಟಿಯಂ ನಷ್ಟಕ್ಕೆ ಗುರಿಯಾಗಿರುವ ಈ ಕಂಪನಿಗಳನ್ನು ಕೊಳ್ಳಲು ಮುಂದಾಗಿದೆ.

ಹೆಲ್ತ್ ಕೇರ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಪಾದನೆಯನ್ನು ಮಾಡಿದಂತಹ ಭಾರತೀಯ ಈ 77 ವರ್ಷದ ಬಿ.ಆರ್. ಶೆಟ್ಟಿ ಅವರು ಎನ್ನಲಾಗಿದೆ. ಇವರು 1970 ರಲ್ಲಿ ಎನ್ಎಂಸಿ ಹೆಲ್ತ್ ಅನ್ನು ಆರಂಭಿಸಿದರು. ಅನಂತರ ಇದು 2012 ರಲ್ಲಿ ಲಂಡನ್ ಸ್ಟಾರ್ ಎಕ್ಸ್ಚೇಂಜ್ ಪಟ್ಟಿಯನ್ನು ಸೇರಿತು. ಹೀಗೆ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಸ್ಥಾನ ಪಡೆದ ಮೊದಲ ದೇಶಿಯ ಕಂಪನಿ ಕೂಡ ಇದೆ ಆಯಿತು. ಶೆಟ್ಟಿಯವರು ಎಪ್ಪತ್ತರ ದಶಕದಲ್ಲಿ ಕೇವಲ $8 ಹಣದೊಂದಿಗೆ ಇಸ್ರೇಲ್ ಪ್ರವೇಶ ಮಾಡಿದವರು. ಆರಂಭದಲ್ಲಿ ಅವರು ಅಲ್ಲಿ ಒಬ್ಬ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಶೆಟ್ಟಿ ಅವರು 1980 ರಲ್ಲಿ ಬಹಳ ಹಳೆಯದಾದ ಎಮಿರೇಟ್ ನ ರೆಮಿಟೆನ್ಸ್ ವ್ಯವಹಾರ ಯುಎಇ ಎಕ್ಸ್ಚೇಂಜ್ ನ ಆರಂಭ ಮಾಡಿದ್ದರು.

ಯುಎಇ ಎಕ್ಸ್ಚೇಂಜ್, ಯುಕೆ ಎಕ್ಸ್ಚೇಂಜ್ ಕಂಪನಿ ಟ್ರೆವೆಲೆಕ್ಸ್ ಗಳ ಜೊತೆಗೆ ಸಣ್ಣ ಸಣ್ಣ ಪೇಮೆಂಟ್ ಸೆಲ್ಯೂಷನ್ ಪ್ರೊವೈಡರ್ಸ್ ಶೆಟ್ಟಿಯವರ ಫಿನ್ ಬ್ಲರ್ ನ ಜೊತೆ ಸೇರಿ 2018 ರಲ್ಲಿ ಸಾರ್ವಜನಕವಾಗಿದ್ದವು.
ಶೆಟ್ಟಿಯವರು ಹೆಲ್ತ್ ಕೇರ್ ಮತ್ತು ಫೈನಾನ್ಷಿಯಲ್ ಮಾತ್ರವೇ ಅಲ್ಲದೇ ಹಾಸ್ಪಿಟಾಲಿಟಿ, ಆಹಾರ ಮತ್ತು ಪಾನೀಯಗಳು, ರಾಸಾಯನಿಕ ಔಷಧಿಗಳ ಉತ್ಪಾದ‌ನೆ ಹಾಗೂ ರಿಯಲ್ ಎಸ್ಟೇಟ್ ನಲ್ಲಿ ಕೂಡಾ ಕೈಯಾಡಿಸಿದ್ದ ಉದ್ಯಮಿಯಾಗಿದ್ದಾರೆ.