ಲಾಕ್ ಡೌನ್ ಮುರಿದು ಪಕ್ಕದ ಮನೆ ಆಂಟಿಗೆ ಬೈಕ್ ಕಲಿಸುತ್ತಿದ್ದ , 3500 ರೂಪಾಯಿ ದಂಡ ಕಟ್ಟಿದ ಪೊಲೀಸರು!

ಲಾಕ್ ಡೌನ್ ನಲ್ಲಿ ಪೊಲೀಸರು ಎಷ್ಟೇ ಯಾವ ರೀತಿಯಲ್ಲಿ ತಿಳಿಸಿ ಹೇಳಿದರೂ ಜನ ತಮ್ಮ ಕೆಟ್ಟ ಚಾಳಿಯನ್ನು ಬಿಡಲು ತಯಾರಿಲ್ಲ.

ಕೇಂದ್ರ, ರಾಜ್ಯ, ಮತ್ತು ಪೊಲೀಸ್ ಘಟಕ ಹೀಗೆ ಎಲ್ಲರೂ ಮನೆಯಲ್ಲೇ ಇರಿ ಅಂತ ಒಂದೇ ಸಮನೆ ಅಪೀಲ್ ಮಾಡುತ್ತಿದ್ದರೂ ಜನ ಕೇಳ್ತಾನೆ ಇಲ್ಲ. ಏನಾದರೂ ಒಂದು ಕುಂಟು ನೆಪ ಹೂಡಿಕೊಂಡು ಹೊರಬಂದು ಇಡೀ ವ್ಯವಸ್ಥೆಗೆ ತಲೆನೋವು ಮಾಡುತ್ತಿದ್ದಾರೆ.

ನಿನ್ನೆ ಗುರುವಾರ ಆಗ್ರಾ ಹತ್ತಿರ ಓರ್ವ ಯುವಕ ಮತ್ತು ಆಂಟಿ ದ್ವಿಚಕ್ರದ ಮೇಲೆ ಹೋಗುತ್ತಿದ್ದಾಗ ಪೊಲೀಸರು ರಸ್ತೆಯಲ್ಲಿ ತಡೆದು ನಿಲ್ಲಿಸಿದ್ದಾರೆ. ಹೊರಗೆ ಬಂದ ಕಾರಣ ಕೇಳಿದಾಗ ಮೆಡಿಸಿನ್ ತರಲು ಬಂದಿದ್ದಾಗಿ ನೆಪ ಹೇಳಿದ್ದಾನೆ, ಆದರೆ ನಿಜವಾಗಿ ಯುವಕ ನೆರೆಮನೆಯ ಆಂಟಿಯನ್ನು ಬೈಕ್ ಕಲಿಸಲು ಕರೆದು ತಂದಿರುವ ವಿಷಯ ಬೆಳಕಿಗೆ ಬಂದಿದೆ.

ಗುರುವಾರ ಮಧ್ಯಾಹ್ನ ಎಸ್ ಪಿ ಜೊತೆ ಪೊಲೀಸ್ ಸಿಬ್ಬಂದಿ ವರ್ಗ ಡ್ಯೂಟಿ ಮೇಲೆ ಇದ್ದಾಗ ಬೈಕ್ ಹಿಂದೆ ಯುವಕ ಮತ್ತು ಆಂಟಿ ಬೈಕ್ ನಡೆಸುತ್ತ ಬಂದರಂತೆ. ಬೈಕಿನ ಬ್ಯಾಲನ್ಸ್ ತಪ್ಪಿ ಇನ್ನೇನು ಬೀಳುತ್ತಾರೆ ಎನ್ನುವಷ್ಟರಲ್ಲಿಯೇ ಸಮತೋಲನ ಕಾಯ್ದುಕೊಂಡು ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಇದನ್ನು ನೋಡಿದ ಪೊಲೀಸ್ ಇಬ್ಬರಿಗೂ ಹಿಡಿದು ತನಿಖೆ ನಡೆಸಿದಾಗ ಮೇಲಿನ ವಿಷಯ ಗೊತ್ತಾಗಿದೆ.

ನಂತರ ಅವರ ಈ ಆಟಕ್ಕೆ 3500 ₹ ಗಳ ದಂಡದ ರಸೀದಿಯನ್ನು ಹರಿದು ಇನ್ನೊಮ್ಮೆ ಹೀಗಾಗಬಾರದಂತೆ ಎಚ್ಚರಿಕೆ ಕೊಟ್ಟು ಕಳಿಸಿದ್ದಾನೆ.