Viral: ಮನೆಯೇ ಮುಂದಿನಿಂದಲೇ ಬೈಕ್ ಉಡಾಯಿಸಿದ ಚಾಲಾಕಿ ಕಳ್ಳ: ಹೊರಗೆ ಬೈಕ್ ನಿಲ್ಲಿಸುವಿರಾ? ಹಾಗಾದರೆ ಒಮ್ಮೆ ಯೋಚಿಸಿ!

ದಿನಗಳಲ್ಲಿ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅ ಪ ರಾ ಧ ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸರ್ಕಾರ ಎಷ್ಟೇ ಕಠಿಣವಾದ ಕಾನೂನುಗಳನ್ನು ಜಾರಿಗೆ ತಂದರೂ ಕೂಡ ನಡೆಯುತ್ತಿರುವ ಅ ಪ ರಾ ಧಗಳನ್ನು ತಡೆಯುವಲ್ಲಿ ವಿ ಫ ಲವಾಗಿದೆ. ಇನ್ನು ಕ ಳ್ಳ ತ ನ ಎಂಬುದಂತೂ ಒಂದು ಕಡೆ ನಡೆಯುತ್ತಲೇ ಇರುತ್ತದೆ ಹಾಗೂ ಅದರ ಬಗ್ಗೆ ಸುದ್ದಿಗಳು ಕೂಡ ಸದ್ದು ಮಾಡುತ್ತಲೇ ಇರುತ್ತವೆ. ಕಳ್ಳತನವಾದ ವಸ್ತುವನ್ನು ಮರಳಿ ಪಡೆಯಲು ಪೊಲೀಸ್ ಠಾಣೆಯಲ್ಲಿ ದೂರನ್ನು ಏನೋ ನೀಡುತ್ತೇವೆ ಆದರೆ ಕಳೆದ ಹೋದ ವಸ್ತುಗಳು ಸಿಗುವುದು ಮಾತ್ರ ಬಹಳ ಅಪರೂಪ. ಇನ್ನು ಈ ಕಳ್ಳತನ ಎಲ್ಲಿ ಬೇಕಾದರೂ ನಡೆಯಬಹುದು. ಅಂದರೆ ನಾವು ಸ್ವಲ್ಪ ಎಚ್ಚರ ತಪ್ಪಿದರೆ ನಮ್ಮ ಮನೆಗಳ ಮುಂದೆ ಇರುವ ನಮ್ಮ ಬೈಕುಗಳು ಕೂಡ ರಾತ್ರಿ ಕಳೆದು ಹಗಲಾಗುವುದರೊಳಗೆ ನಾಪತ್ತೆಯಾಗಬಹುದು.

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲಾಗಿದೆ. ಈ ವೈರಲ್ ವಿಡಿಯೋದಲ್ಲಿ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ದೃಶ್ಯವನ್ನು ನೋಡಿದಾಗ ನಮ್ಮ ಮನೆಗಳ ಮುಂದೆ ನಾವು ನಮ್ಮ ಬೈಕುಗಳನ್ನು ನಿಲ್ಲಿಸುವ ಮೊದಲು ಪ್ರತಿಯೊಬ್ಬರೂ ಕೂಡ ಅವು ಸುರಕ್ಷಿತವೋ ಅಲ್ಲವೋ ಎಂದು ಆಲೋಚನೆ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಏಕೆಂದರೆ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ಈ ದೃಶ್ಯವನ್ನು ನಾವು ಗಮನಿಸಿದಾಗ ಇಲ್ಲೊಬ್ಬ ಚಾಲಾಕಿ ಕಳ್ಳನು ಮನೆ ಮುಂದೆ ನಿಲ್ಲಿಸಿರುವ ಒಂದು ಬೈಕನ್ನು ತನ್ನ ಚಾಕಚಕ್ಯತೆಯಿಂದ ಹಾರಿಸಿಕೊಂಡು ಹೋಗಿರುವ ದೃಶ್ಯ ನಮ್ಮ ಕಣ್ಣಿಗೆ ಬೀಳುತ್ತದೆ.

ಹೌದು ಸ್ನೇಹಿತರೆ ವಿಡಿಯೋದಲ್ಲಿ ನಾವು ನೋಡಿದಾಗ ಬೆಳಗಿನ ಜಾವ ಸರಿಸುಮಾರು ನಾಲ್ಕು ಗಂಟೆಯ ಹೊತ್ತಿನಲ್ಲಿ ಮನೆಯ ಮುಂದೆ ನಿಲ್ಲಿಸಿರುವ ಬೈಕೊಂದನ್ನು ಕದಿಯಲು ಬರುವ ವ್ಯಕ್ತಿಯೊಬ್ಬನ ಚಲನವಲನಗಳು ಸ್ಪಷ್ಟವಾಗಿ ರೆಕಾರ್ಡ್ ಆಗಿದೆ. ಮೊದಲು ಆ ವ್ಯಕ್ತಿ ಬೈಕನ್ನು ನೋಡಿಕೊಂಡು ಅಲ್ಲಿಂದ ಹೊರಟು ಹೋಗುತ್ತಾನೆ. ಹಾಗೆ ಹೋದವನು ಸ್ವಲ್ಪ ಸಮಯದ ನಂತರ ಆತ ಮತ್ತೆ ಬೈಕ್ ಇರುವ ಜಾಗಕ್ಕೆ ಬರುತ್ತಾನೆ. ಈ ಬಾರಿ ಅವನು ತಯಾರಿಯೊಂದಿಗೆ ಬಂದಿದ್ದು, ಬೈಕ್ ಬಳಿ ಹೋಗಿ ಬಹಳ ಎಚ್ಚರಿಕೆಯಿಂದ ಯಾವುದೋ ಒಂದು ವಸ್ತುವನ್ನು ತೆಗೆದು ಸೇಫ್ಟಿ ಲಾಕ್ ಮಾಡಲಾದ ಬೈಕನ ಲಾಕ್ ಬಹಳ ಚಾಲಾಕಿತನದಿಂದ ರಿಮೂವ್ ಮಾಡುತ್ತಾನೆ.

ಆದರೆ ಆತ ಬೈಕನ್ನು ಆಗಲೇ ಕದಿಯುವುದಿಲ್ಲ, ಏನೂ ಅರಿಯದ ಹಾಗೆ ಮತ್ತೆ ಅಲ್ಲಿಂದ ಹೊರಟು ಹೋಗುತ್ತಾನೆ. ಅದಾದ ಸ್ವಲ್ಪ ಸಮಯ ಬಿಟ್ಟು ಮತ್ತೆ ಆತ ಅದೇ ಸ್ಥಳಕ್ಕೆ ಬರುತ್ತಾನೆ. ಸುತ್ತಲಿನ ವಾತಾವರಣವನ್ನು ಸರಿಯಾಗಿ ಗಮನಿಸುತ್ತಾನೆ. ಅನಂತರ ಕಾಲ ಮುತ್ತಲ ಪರಿಸ್ಥಿತಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದರಿಂದ ಯಾವುದೇ ತೊಂದರೆಯಿಲ್ಲವೆಂದು ಖಾತ್ರಿಯಾಗ ಕೂಡಲೇ ಈಗಾಗಲೇ ತಾನು ಚಾಲಾಕಿತನದಿಂದ ಲಾಕ್ ರಿಮೋವ್ ಮಾಡಿದ ಬೈಕನ್ನು ಬಹಳ ಸುಲಭವಾಗಿ ಅಲ್ಲಿಂದ ಸದ್ದು ಮಾಡದೇ, ಅದನ್ನು ಸ್ಟಾರ್ಟ್ ಮಾಡದೇ ಒಂದಷ್ಟು ದೂರ ನೂಕಿಕೊಂಡು ಹೋಗಿ ಅನಂತರ ಗಾಡಿಯೊಂದಿಗೆ ಪರಾರಿಯಾಗಿದ್ದಾನೆ.

ವಿಡಿಯೋ ನೋಡಿ

ಈ ವೈರಲ್ ನೋಡಿದಾಗ ನಿಜಕ್ಕೂ ಮನೆಗಳ ಹೊರಗೆ ರಸ್ತೆಗಳಲ್ಲಿ ಬೈಕ್ ಗಳನ್ನು ನಿಲ್ಲಿಸುವವರಿಗೆ ತಮ್ಮ ಬೈಕ್ ಗಳೆಷ್ಟು ಸೇಫ್ ಎನ್ನುವ ಪ್ರಶ್ನೆಯಂತೂ ಖಚಿತವಾಗಿ ಕಾಡುತ್ತದೆ. ಇನ್ನುಮುಂದೆ ನಮ್ಮ ಬೈಕ್ ಗಳನ್ನು ಇನ್ನಷ್ಟು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎನ್ನುವ ಆಲೋಚನೆ ಬರುವುದು ಕೂಡಾ ಖಚಿತ. ಈ ವೈರಲ್ ನೋಡಿದ ನೆಟ್ಟಿಗರು ಕೂಡಾ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೆಟ್ಟಿಗರೊಬ್ಬರು ಬಹುಶಃ ರಾತ್ರಿ ವೇಳೆ ಗರ್ಲ್ ಫ್ರೆಂಡ್ ನೋಡಲು ಹೋಗುತ್ತಿದ್ದಾನೆ ಎಂದು ವ್ಯಂಗ್ಯ ಮಾಡಿದ್ದಾರೆ. ಮತ್ತೊಬ್ಬರು ಸುತ್ತ ಮುತ್ತ ಏನಿದೆ ಎಂದು ನೋಡಿದವನಿಗೆ ಸಿಸಿ ಟಿವಿ ಕ್ಯಾಮರಾ ಗಳ ಬಗ್ಗೆ ಗಮನವಿಲ್ಲ ಎಂದಿದ್ದಾರೆ. ಅಲ್ಲದೇ ಇನ್ನೂ ಕೆಲವರು ಪೋಲಿಸರಿಗೆ ದೂ ರು ನೀಡಿದರೂ ಉಪಯೋಗ ಇಲ್ಲ ಎಂದಿದ್ದಾರೆ.