“ನನ್ನ ಎರಡನೇ ಗಂಡನೂ ಅಂಥವನೆ!” ಒಂದು ‘ಕೀ’ ಹಾಳು ಮಾಡಿತು ಮಹಿಳೆಯ ಜೀವನ!

ಚಲನಚಿತ್ರಗಳು ಎಷ್ಟೋ ಸಲ ನಮ್ಮ ಜೀವನದ ಪ್ರತಿಬಿಂಬಗಳಾಗಿರುತ್ತವೆ. ಅಥವಾ ವ್ಯಕ್ತಿಯ ಜೀವನವು ನಿಜಜೀವನದಲ್ಲಿ ಚಲನಚಿತ್ರದ ಹಾಗೆಯೇ ನಡೆದಿರುತ್ತದೆ ಎಂದರೆ ತಪ್ಪಾಗಲಾರದು. ಏಕೆಂದರೆ ಚಲನಚಿತ್ರಗಳಲ್ಲಿ ಬರುವ ಕಥೆಗಳು ನಿಜ ಜೀವನದಲ್ಲಿ ಯಾರಿಗಾದರೂ ಹೊಂದಾಣಿಕೆ ಆಗಿಯೇ ಆಗಿರುತ್ತವೆ.

ಗಂಡ-ಹೆಂಡಿರ ಪ್ರತಿಯೊಂದು ಸಂಬಂಧಗಳು ಪವಿತ್ರವಾಗಿಯೇ ಇರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೋ ಸಲ ಅಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಪರಸ್ಪರ ಸಂಶಯದ ಸುಳಿಗಳು ನಿರ್ಮಾಣವಾಗುತ್ತಲೇ ಇರುತ್ತವೆ.

ಪತಿಯ ಮೇಲೆ ಪತ್ನಿಯರು ಕೆಲವೊಂದು ವಿಷಯಗಳಲ್ಲಿ ಸಂಶಯ ತೆಗೆದುಕೊಳ್ಳುತ್ತಿರುತ್ತಾರೆ. ಮನೆಗೆ ಗಂಡ ಸರಿಯಾದ ಸಮಯಕ್ಕೆ ಬಾರದೆ ಇರುವುದು, ಶರ್ಟ್ ಮೇಲೆ ಲಿಪ್ಸ್ಟಿಕ್ ಗುರುತು, ಶರ್ಟಿನ ಬಟನ್ ನಲ್ಲಿ ಮಹಿಳೆಯ ತಲೆಗೂದಲು ಹಾಗೂ ಪರ್ಫ್ಯೂಮ್ ಪರಿಮಳ ಹೀಗೆ ಇನ್ನೂ ಅನೇಕ ಕ್ಲೂಗಳ ಮುಖಾಂತರ ತನ್ನ ಗಂಡನ ಚರಿತ್ರೆಯ ಬಗ್ಗೆ ಹೆಂಡತಿ ಸಂಶಯ ತೆಗೆದುಕೊಳ್ಳುತ್ತಲೇ ಇರುತ್ತಾಳೆ.

ಈ ರೀತಿಯಾಗಿ ಬರಿ ಚಲನಚಿತ್ರ ಗಳಲ್ಲಷ್ಟೇ ಕಂಡುಬರುವುದಿಲ್ಲ. ನಿಜ ಜೀವನದಲ್ಲಿ ಇಂಥ ಘಟನೆಗಳು ಸುದ್ದಿಯಾಗುತ್ತದೆ. ಈ ಲೇಖನದಲ್ಲಿ ಬರುವ ಮಹಿಳೆಯು ತನ್ನ ಗಂಡನ ಬೇರೆ ಸಂಬಂಧವನ್ನು ಬರೀ ಒಂದು ಬೀಗದ ಕೈ ಮುಖಾಂತರ ಕಂಡುಹಿಡಿದಿದ್ದಾಳೆ. ತದನಂತರ ಇದನ್ನು ಸಹಿಸದೆ ಹೆಂಡತಿಯು ಗಂಡನ ಈ ಕುಕೃತ್ಯವನ್ನೆಲ್ಲ ರಿಲೇಷನ್ಶಿಪ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಿ ಇನ್ನೊಬ್ಬರಿಗೂ ಜಾಗ್ರತೆ ಮಾಡಿದ್ದಾಳೆ.

ನನ್ನ ಮೊದಲ ಪತಿ ನನ್ನ ಜೊತೆಗೆ ಹೀಗೆ ಮೋಸ ಮಾಡಿದ ನಂತರ ನನಗೆ ಇನ್ನೊಮ್ಮೆ ಮದುವೆ ಮಾಡಿಕೊಳ್ಳುವ ಆಸೆಯೇ ಬತ್ತಿಹೋಗಿತ್ತು. ಆದರೆ ನನ್ನ ಭೇಟಿ ಬ್ರೆಂಡನ್ ಹೆಸರಿನ ಶ್ರೀಮಂತ ವ್ಯಕ್ತಿಯ ಜೊತೆಗೆ ಆಯಿತು. ಆತ ನನ್ನನ್ನು ಮದುವೆಯಾಗಲು ಕೇಳಿಕೊಂಡನು. ನನ್ನ ಮೊದಲ ಪತಿ ನನಗೆ ಮೋಸ ಮಾಡಿದ ಕಾರಣದಿಂದಾಗಿ ಬ್ರೆಂಡನ್ ಜೊತೆಗೆ ಮದುವೆಯಾಗಲು ನಾನು ಯೋಚಿಸಬೇಕಾಗಿಯಿತು ಹಾಗೂ ಮದುವೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಒಂದು ವರ್ಷದ ಸಮಯ ಬೇಕು ಎಂದು ಬ್ರೆಂಡನ್ ನನ್ನು ಕೇಳಿದೆ.

ಏತನ್ಮಧ್ಯೆ ಬ್ರೆಂಡನ್ ನನ್ನನ್ನು ರಾಜಕುಮಾರಿಯ ಹಾಗೆ ಕಾಳಜಿ ಮಾಡುತ್ತಿದ್ದನು. ನನ್ನ ಮೊದಲ ಪತಿಯಿಂದ ಆದ ಹುಡುಗಿಯನ್ನು ಸಹಿತ ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಬ್ರೆಂಡನ್ ಮಾತ್ರ ಇತರರಿಗೆ ಪ್ಲೇಬಾಯ್ ತರ ಕಾಣುತ್ತಿದ್ದನು. ಹೀಗಾಗಿ ನನ್ನ ಗೆಳತಿಯರು ನನಗೆ ಯಾವಾಗಲೂ ಜಾಗೃತರಾಗಿರಲು ಸೂಚಿಸುತ್ತಿದ್ದರು.

ಒಂದು ವರ್ಷದ ಸಮಯ ಕಳೆದ ನಂತರ ಆತ ಮದುವೆಯಾಗಲು ಮತ್ತೆ ನನ್ನನ್ನು ಕೇಳಿದನು. ನಾನು ಬ್ರೆಂಡನ್ ಬಗ್ಗೆ ಚೆನ್ನಾಗಿ ವಿಚಾರ ಮಾಡಿ ಮದುವೆಗೆ ಸಮ್ಮತಿಸಿದೆ. ಕೆಲವೇ ಕೆಲವು ನೆಂಟರಿಷ್ಟರ ಸಮ್ಮುಖದಲ್ಲಿ ನಮ್ಮ ಮದುವೆ ನೆರವೇರಿತು.

ನಮ್ಮ ಮಧುಚಂದ್ರದ ಎರಡು ವಾರಗಳ ನಂತರ ಕೆಲಸದ ನಿಮಿತ್ತ ವಾಗಿ ಬ್ರೆಂಡನ್ ಬೇರೊಂದು ಪಟ್ಟಣಕ್ಕೆ ಹೋಗಿದ್ದರು. ವಾಪಸ್ ಬಂದಾಗ ನಮಗಾಗಿ ಗಿಫ್ಟ್ ಗಳನ್ನು ತಂದಿದ್ದರು. ಆಗ ಬ್ರೆಂಡನ್ ಎಲ್ಲವನ್ನು ಹಾಗೆ ಇಟ್ಟು ಜಳಕಕ್ಕಾಗಿ ಸ್ನಾನದ ಕೋಣೆಗೆ ಹೋದಾಗ ಆತನ ಸೂಟ್ ಕೇಸಿನಲ್ಲಿ ನನಗೊಂದು ಬೀಗದ ಕೈ ದೊರಕಿತು.

ಜಳಕ ಮಾಡಿಕೊಂಡು ವಾಪಸ್ ಬಂದಾಗ ಬ್ರೆಂಡನ್ ಗೆ ಬೀಗದಕೈ ಬಗ್ಗೆ ಕೇಳಿದಾಗ ನನಗೆ ಶಾಕ್ ಹೊಡೆದಂತೆ ಅನುಭವವಾಯಿತು. ಏಕೆಂದರೆ ಬ್ರೆಂಡನ್ ಎಲ್ಲವನ್ನು ಸತ್ಯವಾಗಿಯೇ ಹೇಳಿದ, ಆತ ತನ್ನ ಹೇಳಿಕೆಯಲ್ಲಿ, ನಾನು ಒಬ್ಬಳು ಮಹಿಳೆಗೆ ಭೇಟಿಯಾಗಲು ಹೋಗಿದ್ದೆ, ಹಾಗೂ ನಾನು ಈ ಮನೆಗೆ ಬರುವ ಮುಂಚೆ ಅವಳನ್ನು ಭೇಟಿಯಾಗಿಯೇ ಬರುತ್ತಿದ್ದೇನೆ.

ಇದಾದ ನಂತರ ನನಗೆ ಆತನ ಜೊತೆಗೆ ಏನನ್ನು ಮಾತಾಡಲು ಮತ್ತು ಆತನ ಮಾತುಗಳನ್ನು ಕೇಳುವದು ಇಷ್ಟವಿರಲಿಲ್ಲ. ನಾನು ಸಂಪೂರ್ಣವಾಗಿ ದುಃಖಿತಳಾಗಿದ್ದೆ. ಸೂಟ್ ಕೇಸಿನಲ್ಲಿ ದೊರೆತ ಒಂದು ಬೀಗದ ಕೈ ನನ್ನ ಜೀವನವನ್ನು ಹಾಳು ಮಾಡಿತ್ತು. ಅವತ್ತೆ ಆಗಲೇ ನಾನು ಬ್ರೆಂಡನ್ ನನ್ನು ಮನೆಯಿಂದ ಹೊರಹಾಕಿದೆ. ಮೊದಲ ಪತಿಯ ಮಾಡಿದ ಅದೇ ರೀತಿಯ ಮೋಸಕ್ಕೆ ಮತ್ತೊಮ್ಮೆ ಒಳಗಾಗಿದ್ದೆ. ನನ್ನ ಮೊದಲ ಪತಿಯ ಹಾಗೆಯೇ ಈತ ನನಗೆ ಸಿಕ್ಕಿದ್ದ. ನನ್ನ ಗೆಳತಿಯರ ಮಾತು ಕೇಳಬೇಕಾಗಿತ್ತು ಎಂದು ಈಗ ಅನಿಸತೊಡಗಿದೆ. ನನಗಾಗಿ ಇದು ಒಂದು ಒಳ್ಳೆಯ ಪಾಠ ಕಲಿಸಿತು. ಆದ್ದರಿಂದ ನನ್ನ ಗೆಳತಿಯರೇ, ನೀವು ಸಹ ಯಾರ ಮೇಲೆ ವಿಶ್ವಾಸ ಬಿಡಬೇಡಿ.