ರೋಸ್ ವಾಟರ್ ನಿಂದ 10 ನಿಮಿಷ ‘ಹೀಗೆ’ ಫೇಶಿಯಲ್ ಮಾಡಿ: ಮುಖದ ಕಾಂತಿ ಒಂದು ತಿಂಗಳಾದರೂ ಹೋಗಲ್ಲ!

ಪ್ರತಿಯೊಂದು ಹುಡುಗಿ ತಾನು ಬೆಳ್ಳಗೆ, ಸುಂದರವಾಗಿ ಕಾಣಬೇಕು ಎಂಬ ಕನಸು ಕಾಣುತ್ತಿರುತ್ತಾಳೆ. ಎಷ್ಟೋ ಸಲ ಅದಕ್ಕಾಗಿ ತುಂಬಾ ಹಣವನ್ನು ಸಹ ಹುಡುಗಿಯರು ಖರ್ಚು ಮಾಡುತ್ತಾರೆ. ಕೆಲವೊಂದು ಸಲ ಈ ಕ್ರೀಮ್ ಗಳಿಂದ ಮುಖದ ಮೇಲೆ ಅಡ್ಡಪರಿಣಾಮಗಳು ಆಗುವುದುಂಟು. ಇದರ ಹೊರತಾಗಿ ಎಷ್ಟೋ ಮಹಿಳೆಯರು, ಹುಡುಗಿಯರು ಬೆಳ್ಳಗೆ ಕಾಣಿಸುವದಕ್ಕಾಗಿ ಡಾಕ್ಟರ್ ಕಡೆಗೆ ಹೋಗಿ ಅಪರಿಮಿತ ಹಣವನ್ನು ಸುರಿಯುವುದುಂಟು. ಬ್ಯೂಟಿ ಪಾರ್ಲರ್ ಗೆ ಹೋಗಿ ಹಣ ಖರ್ಚು ಮಾಡುವುದು ಅದು ಬೇರೆ.

ಆದರೆ ಈಗ ಫೇಶಿಯಲ್ ಮಾಡಿಕೊಳ್ಳುವ ಸಲುವಾಗಿ ನೂರಾರು ರೂಪಾಯಿಗಳನ್ನು ಖರ್ಚು ಮಾಡುವ ಅವಶ್ಯಕತೆ ಇಲ್ಲ. ಯಾಕೆಂದರೆ ರೋಸ್ ವಾಟರ್ ಮುಖಾಂತರ ಮನೆಯಲ್ಲಿ ಫೇಶಿಯಲ್ ಮಾಡಿಕೊಳ್ಳಲು ಸಾಧ್ಯವಿದೆ. ಈ ರೋಸ್ ವಾಟರ್ ಮುಖದ ಮೇಲಿನ ತ್ವಚೆಯ ಪಿಹೆಚ್ ಲೆವೆಲ್ ಸಮತೋಲನವಾಗಿಡುತ್ತದೆ. ಇದರಿಂದ ಮುಖದ ಮೇಲಿನ ಮುಚ್ಚಿದ ರಂದ್ರಗಳು ತೆರೆಯಲ್ಪಡುತ್ತವೆ. ಮುಖಕ್ಕೆ ಕಾಂತಿ ಲಭಿಸುವುದು. ರೋಜ್ ವಾಟರ್ ಮುಖದ ಮೇಲಿನ ಪಿಂಪಲ್ಸ್, ಬ್ಲ್ಯಾಕ್ ಹೆಡ್ಸ್, ಡಾರ್ಕ್ ಸ್ಪೋಟ್ಸ್ ಹಾಗೂ ಸುಕ್ಕುಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ.

ಈ ಲೇಖನದಲ್ಲಿ ರೋಸ್ ವಾಟರ್ ಮೂಲಕ ಮನೆಯಲ್ಲಿ ಫೇಶಿಯಲ್ ಮಾಡುವ ಪದ್ಧತಿಯನ್ನು ಹೇಳಿಕೊಡುವವರಿದ್ದೇವೆ. ಫೇಶಿಯಲ್ ಮಾಡಿಕೊಳ್ಳುವ ಈ 5 ಪ್ರಮುಖ ಸ್ಟೆಪ್ಸ್ ಗಳಿವೆ, ಅವುಗಳನ್ನು ಗಮನದಲ್ಲಿಡಿ. ಅವು ಈ ರೀತಿಯಾಗಿವೆ. ಕ್ಲೆನ್ಸಿಂಗ್, ಸ್ಕ್ರಬ್ಬಿಂಗ್, ಮಸಾಜ್, ಫೇಸ್ ಪ್ಯಾಕ್ ಮತ್ತು ಮಾಯಿಶ್ಚರೈಸಿಂಗ್.

  1. ಕ್ಲೆನ್ಸಿಂಗ್:- ಎರಡು ಚಮಚ ರೋಜ್ ವಾಟರ್ ಮತ್ತು 1 ಚಮಚ ಹಸಿ ಹಾಲು.

ಪದ್ಧತಿ- ಒಂದು ಬಟ್ಟಲಿನಲ್ಲಿ 1 ಚಮಚ ಹಸಿ ಹಾಲಿನಲ್ಲಿ 2 ಚಮಚ ರೋಜ್ ವಾಟರ್ ಬೆರೆಸಿ. ರೋಸ್ ವಾಟರ್ ಉತ್ತಮವಾದ ಕ್ಲಿಂಜರ್ ಇದೆ. ಇದು ತ್ವಚೆಯ ಮೇಲಿನ ಎಣ್ಣೆ ಅಂಶವನ್ನು ತೆಗೆಯುವುದರಲ್ಲಿ ಸಹಾಯ ಮಾಡುತ್ತದೆ. ಮುಖದ ಮೇಲಿನ ರಂದ್ರ ಗಳಲ್ಲಿರುವ ಕಲ್ಮಶವನ್ನು ತೆಗೆಯುತ್ತದೆ. ಬಟ್ಟಲಿನಲ್ಲಿಯ ಮಿಶ್ರಣದಲ್ಲಿ ಸ್ವಲ್ಪ ಕಾಟನ್ ಅದ್ದಿ ಅದರಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ಮುಖದ ಮೇಲೆ ಜಮಾಯಿಸಿದ ಕಲ್ಮಶ ಮತ್ತು ಧೂಳಿನ ಕಣಗಳು ನಿರ್ಮೂಲನೆಯಾಗುತ್ತದೆ.

  1. ಸ್ಕ್ರಬ್ಬಿಂಗ್:- ಸಾಹಿತ್ಯಗಳು- 1 ಚಮಚ ಸಕ್ಕರೆ ಮತ್ತು 2 ಚಮಚ ರೋಸ್ ವಾಟರ್.

ಪದ್ಧತಿ- ಒಂದು ಬಟ್ಟಲಿನಲ್ಲಿ ಸ್ವಲ್ಪ ದೊಡ್ಡ ಚಮಚದಿಂದ ಸಕ್ಕರೆ ತೆಗೆದುಕೊಳ್ಳಿ, ಅದರಲ್ಲಿ 2 ಚಮಚ ರೋಜ್ ವಾಟರ್ ಇವೆರಡನ್ನು ಚೆನ್ನಾಗಿ ಬೆರೆಸಿರಿ. ಈಗ ತಯಾರಾದ ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ಮುಖದ ಮೇಲೆ ಸರ್ಕ್ಯುಲರ್ ಮೋಷನ್ ನಲ್ಲಿ ಮಸಾಜ್ ಮಾಡಿ. ಇದನ್ನು ಒಂದೆರಡು ನಿಮಿಷಗಳವರೆಗೆ ಹಾಗೆಯೇ ಮಸಾಜ್ ಮಾಡಿ. ಸಕ್ಕರೆ ಇದು ತ್ವಚೆಗೆ ಮೃದುಗೊಳಿಸುವುದು. ಈ ಮಿಶ್ರಣ ಮುಖದ ಮೇಲಿನ ಡೆಡ್ ಸೇಲ್ಸ್ ಗಳನ್ನು ತೆಗೆದುಹಾಕಿ ಹೊಸ ಸೇಲ್ಸ್ ಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಈ ರೀತಿ ಮಸಾಜ್ ಮಾಡಿದ ನಂತರ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

  1. ಫೇಶಿಯಲ್ ಮಸಾಜ್:- ಸಾಹಿತ್ಯಗಳು- 1 ಚಮಚ ಜೇನುತುಪ್ಪ ಮತ್ತು ಒಂದು ಚಮಚ ರೋಸ್ ವಾಟರ್.

ಪದ್ಧತಿ- ಒಂದು ಬಟ್ಟಲಿನಲ್ಲಿ ಒಂದು ಚಮಚ ಜೇನುತುಪ್ಪ ಮತ್ತು 1 ಚಮಚ ರೋಜ್ ವಾಟರ್ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಬೆರಳುಗಳಿಂದ ಮುಖಕ್ಕೆ 2/3 ನಿಮಿಷಗಳವರೆಗೆ ಸರ್ಕ್ಯುಲರ್ ಮೋಷನ್ ನಲ್ಲಿ ಮಸಾಜ್ ಮಾಡಬೇಕು. ಜೇನುತುಪ್ಪ ಮುಖಕ್ಕೆ ಮೃದು ಮತ್ತು ಹೈಡ್ರೇಟ್ ಮಾಡುತ್ತದೆ. ಈ ರೀತಿ ಮಸಾಜ್ ಮಾಡಿದ ನಂತರ ಮುಖವನ್ನು ತಣ್ಣೀರಿನಿಂದ ತೊಳೆದು ಕೊಳ್ಳಿ.

  1. ಫೇಸ್ ಪ್ಯಾಕ್:- ಸಾಹಿತ್ಯಗಳು- 1 ಚಮಚ ಸ್ಯಾಂಡಲ್ ಪೌಡರ್ 2 ಚಮಚ ರೋಜ್ ವಾಟರ್.

ಪದ್ಧತಿ:- ಒಂದು ಬಟ್ಟಲಿನಲ್ಲಿ 1 ಚಮಚ ಸ್ಯಾಂಡಲ್ವುಡ್ ಪೌಡರ್ ಎರಡು ಚಮಚ ರೋಸ್ ವಾಟರ್ ಮಿಶ್ರಣವನ್ನು ಚೆನ್ನಾಗಿ ಬೆರೆಸಬೇಕು. ಈ ಪೇಸ್ಟನ್ನು ಚೆನ್ನಾಗಿ ಮುಖಕ್ಕೆ ಹಚ್ಚಿಕೊಳ್ಳಬೇಕು. 10/15 ನಿಮಿಷಗಳ ನಂತರ ಒಣಗಿದ ಮೇಲೆ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಈ ಮಿಶ್ರಣಕ್ಕೆ ಆಂಟಿ ಏಜಿಂಗ್ ಮಾಸ್ಕ್ ಅಂತಲೂ ಉಪಯೋಗಿಸುತ್ತಾರೆ. ಇದರಿಂದ ಮುಖ ಬಿಗಿತವಾಗಿರಲು ಸಹಾಯವಾಗುತ್ತದೆ.

  1. ಮಾಯಿಶ್ಚರೈಸಿಂಗ್:- ಸಾಹಿತ್ಯಗಳು- 2 ಚಮಚ ರೋಸ್ ವಾಟರ್ 1 ಚಮಚ ಗ್ಲಿಸರಿನ್.

ಪದ್ಧತಿ- ಒಂದು ಬಟ್ಟಲಿನಲ್ಲಿ ಎರಡು ಚಮಚ ರೋಸ್ ವಾಟರ್ ಮತ್ತು ಒಂದು ಚಮಚ ಗ್ಲಿಸರಿನ್ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ನಿಮ್ಮ ಮುಖವು ತೈಲಯುಕ್ತವಾಗಿದ್ದರೆ ಈ ಮಿಶ್ರಣದಲ್ಲಿ ವಿಟಮಿನ್ ಇ ಕ್ಯಾಪ್ಸೂಲನ್ನು ಬೆರೆಸಿ. ಈಗ ತಯಾರಾದ ಮಿಶ್ರಣವನ್ನು ನಿಧಾನವಾಗಿ ಮುಖದ ಮೇಲೆ ಲೇಪಿಸಿ. ಸ್ವಲ್ಪ ಸಮಯದ ನಂತರ ಮಸಾಜ್ ಮಾಡಿ. ಕಾರಣ ಈ ಮಿಶ್ರಣ ತ್ವಚೆಯಲ್ಲಿ ಚೆನ್ನಾಗಿ ಇಳಿಯಬೇಕು. ಮಾಯಿಶ್ಚರೈಸರ್ ತ್ವಚೆಯಲ್ಲಿಯ ತೇವಾಂಶವನ್ನು ಹಿಡಿದು ಇಡಲು ಸಹಾಯ ಮಾಡುತ್ತದೆ. ಹೀಗಾಗಿ ನಿಮ್ಮ ತ್ವಚೆ ಒಣಗುವುದಿಲ್ಲ.

ಈ ಫೇಶಿಯಲ್ ಪದ್ಧತಿಯನ್ನು ಪ್ರತಿ 30 ದಿವಸಗಳ ನಂತರ ಮುಖಕ್ಕೆ ಮೇಲಿಂದ ಮೇಲೆ ಮಾಡುತ್ತಿರಿ. ನಿಮ್ಮ ಮುಖದ ಮೇಲಿನ ಕಾಂತಿಯು 30 ದಿವಸಗಳ ವರೆಗೆ ಹಾಗೆಯೇ ಇರುತ್ತದೆ.