ಅಕ್ಷಯ್ ಕುಮಾರ್ ಅವರ ಈ ವರ್ಷದ ಆದಾಯ ಕೇಳಿದರೆ ಬೇರೆ ಸ್ಟಾರ್ ನಟರಿಗೆ ಬೆವರು ಕಿತ್ತು ಕೊಳ್ಳುವಂತೆ ಇದೆ.

2020 ಜನರೆಂದು ಕೂಡಾ ಮರೆಯಲಾಗದ ವರ್ಷವಾಗಿದೆ. ಬಹುಶಃ ಈ ವರ್ಷ ನೀಡಿರುವ ಕಹಿ ನೆನಪುಗಳನ್ನು ಮರೆಯಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ‌. ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಪೂರ್ತಿ ಅನೇಕರು ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಈ ವರ್ಷ ಯಾರಿಗೂ ಕೂಡಾ ಶುಭ ಪ್ರದವಾಗಿಲ್ಲ, ಸಂತೋಷದಾಯಕವಾಗಿಲ್ಲ ಹಾಗೂ ಸಂತಸವನ್ನು ನೀಡುವ ದಿನಗಳು ಯಾವಾಗ ಮತ್ತೆ ನಮ್ಮ ಜೀವನದಲ್ಲಿ ಇಣುಕಿ ನೋಡಲಿದೆ ಹಾಗೂ ಜನ ಜೀವನ ಮತ್ತೆ ಯಾವಾಗ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಸಾಮಾನ್ಯ ಜನರು ಬಕ ಪಕ್ಷಿಗಳಗಂತೆ ಕಾಯುವಂತಾಗಿದೆ. ಆದರೆ ಈ ನಡುವೆಯೇ ಬಾಲಿವುಡ್ ನಟನೊಬ್ಬರಿಗೆ ಮಾತ್ರ 2020 ನೇ ಈ ವರ್ಷ ಒಂದು ಶುಭ ಹಾಗೂ ಸಂತೋಷದ ಸುದ್ದಿಯನ್ನು ಹೊತ್ತು ತಂದಿದೆ.

ಕೊರೊನಾ ಸಂಕಷ್ಟ ಕಾಲದಲ್ಲೇ ಸಂತೋಷವನ್ನು ಪಡೆದ ಆ ನಟ ಯಾರು ಎನ್ನುವುದಾದರೆ ಅದು ಮತ್ತಾರೂ ಅಲ್ಲ, ಬಾಲಿವುಡ್ ನ ನಟ ಅಕ್ಷಯ್ ಕುಮಾರ್ ಅವರು. ಅಕ್ಷಯ್ ಕುಮಾರ್‌ ಅವರ ಸಾಧನೆಗಳ ಪಟ್ಟಿಗೆ ಈಗ ಈ ವರ್ಷ ಮತ್ತೊಂದು ಸಾಧನೆ ಸೇರಿದೆ. ಫೋರ್ಬ್ಸ್ ಈ ವರ್ಷದ ವಿಶ್ವದ ಅಗ್ರ ಗಳಿಕೆಯನ್ನು ಮಾಡಿರುವ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯನ್ನು ಸಿದ್ಧಪಡಿಸಿ ಶೋಷಣೆಯನ್ನು ಮಾಡಿದ್ದು ಈ ಪಟ್ಟಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಕೂಡಾ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಫೋರ್ಬ್ಸ್ ನ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಂತಹ ಏಕೈಕ ಭಾರತೀಯ ಎನ್ನುವ ಹೆಗ್ಗಳಿಕೆಗೆ ಕೂಡಾ ಅಕ್ಷಯ್ ಕುಮಾರ್ ಅವರು ಪಾತ್ರರಾಗಿದ್ದಾರೆ.

ಫೋರ್ಬ್ಸ್ ಮಾಡಿರುವ ಅತಿ ಹೆಚ್ಚು ಗಳಿಕೆಯ ಈ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 52 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಫೋರ್ಬ್ಸ್ ನ ಪ್ರಕಾರ 2020 ರಲ್ಲಿ ನಟ ಅಕ್ಷಯ್ ಕುಮಾರ್ ಅವರ ಗಳಿಕೆ 548.5 ಮಿಲಿಯನ್ ಗಳಿಸಿದ್ದಾರೆ. ಅಂದರೆ ಭಾರತೀಯ ಮೌಲ್ಯದ ಪ್ರಕಾರ ಅಕ್ಷಯ್ ಕುಮಾರ್ ಅವರ ಈ ವರ್ಷದ ಗಳಿಕೆಯು 365 ಕೋಟಿ ರೂಪಾಯಿಗಳಾಗಿವೆ. ಆದರೆ ಕಳೆದ ವರ್ಷ ನಟ ಅಕ್ಷಯ್ ಕುಮಾರ್ ಅವರ ಆದಾಯವು ಈ ವರ್ಷಕ್ಕಿಂತ ಹೆಚ್ಚಾಗಿಯೇ ಇತ್ತು ಈ ವರ್ಷ ಅದು ಕಡಿಮೆಯಾಗಿದೆ ಎಂದು ಕೂಡಾ ತಿಳಿದು ಬಂದಿದೆ.

ಕಳೆದ ವರ್ಷ ಅಕ್ಷಯ್ ಕುಮಾರ್ ಅವರ ಗಳಿಕೆ 444 ಕೋಟಿ ರೂಪಾಯಿಗಳಾಗಿತ್ತು ಎನ್ನಲಾಗಿದೆ‌. ಅಲ್ಲದೇ ಕಳೆದ ವರ್ಷ ಅವರು ಫೋರ್ಬ್ಸ್ ಪಟ್ಟಿಯಲ್ಲಿ 51 ನೇ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಈ ಬಾರಿ ಅವರ ಆದಾಯದ ಪ್ರಮಾಣವು ಇಳಿಕೆಯಾಗಿರುವ ಕಾರಣ ಅವರು 51 ನೇ ಸ್ಥಾನದಿಂದ 52 ಸ್ಥಾನಕ್ಕೆ ಬಂದಿದ್ದಾರೆ. ಆದರೆ ಈ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಎಂಬುದು ಅವರಿಗೆ ಒಂದು ಸಂತೋಷವನ್ನು ನೀಡಿದೆ.
ಈ ವರ್ಷ ಅವರ ಅದಾಯದಲ್ಲಿ ಸುಮಾರು 88 ಕೋಟಿ ಗಳಷ್ಟು ಕಡಿಮೆಯಾಗಿದೆ. ಆದರೂ ಅವರು ಜಾಕಿ ಚಾನ್ ಹಾಗೂ ಜೆನ್ನಿಫರ್ ಲೋಪೆಜ್ ರಂತಹ ಹಾಲಿವುಡ್ ಸೆಲೆಬ್ರಿಟಿಗಳಿಗಿಂತ ಮುಂದೆ ಇದ್ದಾರೆ.‌

ಫೋರ್ಬ್ಸ್ ಈ ವರ್ಷ ಆಗಸ್ಟ್ ನಲ್ಲಿ ಜಗತ್ತಿನ ಶ್ರೀಮಂತ ನಟರ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ನಟ ಅಕ್ಷಯ್ ಅವರಿಗೆ 6 ನೇ ಸ್ಥಾನ ದೊರೆತಿತ್ತು. ಈ ವರ್ಷ ಅಕ್ಷಯ್ ಕುಮಾರ್ ಅವರ ಒಂದೇ ಒಂದು ಸಿನಿಮಾ ಬಿಡುಗಡೆ ಆಗಿದ್ದು, ಅದರಿಂದಲೇ ಅಕ್ಷಯ್ ಅವರು 50 ಮಿಲಿಯನ್ ಗಳನ್ನು ಗಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವರು ಜಾಹೀರಾತುಗಳಲ್ಲಿ ಕೂಡಾ ಕಾಣಿಸಿಕೊಂಡಿದ್ದು ಇತರೆ ನಟರಿಗೆ ಹೋಲಿಕೆ ಮಾಡಿದಾಗ ಅಕ್ಷಯ್ ಕುಮಾರ್ ಅವರ ಆದಾಯ ಹೆಚ್ಚಾಗಿದೆ. ‌ಅಕ್ಷಯ್ ಕುಮಾರ್ ಅವರು 2021 ರಲ್ಲಿ ಬಹಳ ಬ್ಯುಸಿಯಾಗಲಿದ್ದಾರೆ ಎನ್ನಲಾಗಿದ್ದು, ಅವರ ಕೈಯಲ್ಲಿ ಆರು ಹೊಸ ಸಿನಿಮಾಗಳು ಇವೆ‌.