“ಸಲ್ಮಾನ್ ಖಾನ್ ಅವರ ‘ಈ’ ಕೆಟ್ಟ ಸ್ವಭಾವದ ಕಾರಣದಿಂದ ಅವರಿಗೆ ಮದುವೆಯ ಆಮಂತ್ರಣ ನೀಡಿರಲಿಲ್ಲ!” ಅನುಷ್ಕಾ ಹೇಳಿಕೆ

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ಅನುಷ್ಕ ಶರ್ಮ ಇವರಿಬ್ಬರ ಮದುವೆ ಇಟಲಿಯಲ್ಲಿ ರಾಜ ವೈಭವದ ಹಾಗೆ ನಡೆಯಿತು. ಮದುವೆಯಾಗಿ ನಾಲ್ಕು ವರ್ಷಗಳು ಕಳೆದರೂ ಸಹ ಮದುವೆಯ ಬಗ್ಗೆ ಇನ್ನೂ ಸಹ ಮೀಡಿಯಾದಲ್ಲಿ ಆಗೀಗ ಚರ್ಚೆಯಾಗುತ್ತಲೇ ಇರುತ್ತವೆ.

ಈ ಮದುವೆಗಾಗಿ ಕೆಲವೇ ಕೆಲವು ಜನರನ್ನು ಆಮಂತ್ರಣ ನೀಡಲಾಗಿತ್ತು. ಇದು ಇಟಲಿಯ ಸುಪ್ರಸಿದ್ಧ ಟಸ್ಕನಿಯ ರೆಸಾರ್ಟ್ನಲ್ಲಿ ನಡೆದಿತ್ತು. ಈ ಮದುವೆಯು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸರಿಯಾಗಿ ನಡೆಯಲಿ ಎಂದು ತುಂಬಾ ಭದ್ರತೆಯ ಕಾಳಜಿ ಸಹ ತೆಗೆದುಕೊಳ್ಳಲಾಗಿತ್ತು. ವಿಶೇಷವೆಂದರೆ ಈ ಮದುವೆಗಾಗಿ ಎಣಿಕೆ ಮಾಡಿ ಬರೀ 50 ವ್ಯಕ್ತಿಗಳಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಇಷ್ಟೇ ಜನರಿಗೆ ಆಮಂತ್ರಣ ನೀಡಿದರೂ ಈ ಮದುವೆಯಲ್ಲಿ ಖರ್ಚು ಮಾತ್ರ ಕೋಟ್ಯಾವಧಿ ರೂಪಾಯಿಗಳಷ್ಟು ಆಗಿತ್ತು.

ಇದಾದನಂತರ ವಿರಾಟ್ ಮತ್ತು ಅನುಷ್ಕಾ ಶರ್ಮಾ ಅವರು ತಮ್ಮ ಮದುವೆಯ ರಿಸೆಪ್ಶನ್ ಪಾರ್ಟಿ ಭವ್ಯವಾಗಿ ಮುಂಬೈಯಲ್ಲಿ ಆಯೋಜಿಸಿದ್ದರು. ಈ ರಿಸೆಪ್ಶನ್ ಪಾರ್ಟಿಗೆ ಬಾಲಿವುಡ್ ಮತ್ತು ಕ್ರಿಕೆಟ್ ದಿಗ್ಗಜರು ಹಾಜರಿ ಕೊಟ್ಟಿದ್ದರು. ಟೀಮ್ ಇಂಡಿಯಾದ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿಯಾಗಿ ಅನುಷ್ಕಾ ಶರ್ಮಾ ಅವರ ಮದುವೆಯ ಮುಂಬೈಯಲ್ಲಿಯ ರಿಸೆಪ್ಶನ್ ಪಾರ್ಟಿಗೆ ವಿಶೇಷವೆಂದರೆ ಬಾಲಿವುಡ್ ಭಾಯಿ ಎಂದೇ ಪರಿಚಿತರಾದ ಸಲ್ಮಾನ್ ಖಾನ್ ಅವರಿಗೆ ಆಮಂತ್ರಣವಿರಲಿಲ್ಲ. ಮೀಡಿಯಾದಲ್ಲಿ ಈ ಪ್ರಶ್ನೆಯು ತುಂಬಾ ಚರ್ಚೆಗೆ ಗ್ರಾಸವಾಗಿತ್ತು.

ಕೊನೆಗೂ ಈ ಬಗ್ಗೆ ಅನುಷ್ಕಾ ಶರ್ಮಾ ಅವರು ತಮ್ಮ ವಿಚಾರವನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಲಾಗಿ ಅನುಷ್ಕಾ ಶರ್ಮಾ ಮತ್ತು ಸಲ್ಮಾನ್ ಖಾನ್ ಅವರ ಸಂಬಂಧ ತುಂಬಾ ಚೆನ್ನಾಗಿದೆ. ಆದರೆ ಒಂದು ಶೋದಲ್ಲಿ ಸಲ್ಮಾನ್ ಖಾನ್ ಅವರು ವಿರಾಟ್ ಕೊಹ್ಲಿ ಅವರಿಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದರು. ಇದು ವಿರಾಟ್ ಅವರ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿತ್ತು. ಹೀಗಾಗಿ ವಿರಾಟ್ ಅವರು ಸಲ್ಮಾನರಿಗೆ ಇಷ್ಟವಾಗುವುದಿಲ್ಲ. ಈ ಕಾರಣದಿಂದಾಗಿ ಅನುಷ್ಕಾ ಅವರು ತಮ್ಮ ರಿಸೆಪ್ಶನ್ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಅವರಿಗೆ ಆಮಂತ್ರಣ ನೀಡಿರಲಿಲ್ಲ.