ಒಂಟಿ ಹೆಣ್ಣಿನ ಮೇಲೆ ಎರಗಿದ ಯುವಕ, ಯುವತಿಯ ರಕ್ಷಣೆಗೆ ಧಾವಿಸಿತು ಬೀದಿ ನಾಯಿ: ಮುಂದಾಗಿದ್ದು ಅದ್ಭುತ
ನಿಯತ್ತು ಎನ್ನುವ ಪದ ಬಂದಾಗ ತಕ್ಷಣ ಅದಕ್ಕೆ ಉದಾಹರಣೆಯನ್ನಾಗಿ ನಾವು ಹೆಸರಿಸುವ ಒಂದೇ ಒಂದು ಹೆಸರು ಎಂದರೆ ಅದು ನಾಯಿಯನ್ನು. ಸ್ವಾಮಿ ನಿಷ್ಠೆ ಹಾಗೂ ನಿಯತ್ತಿಗೆ ನಾಯಿಯಂತಹ ಮತ್ತೊಂದು ಪ್ರಾಣಿ ಇನ್ನೊಂದಿಲ್ಲ. ಹಾಕಿದ ಒಂದು ತುತ್ತಿನ ಅನ್ನದ ಋಣವನ್ನು ತೀರಿಸಿಕೊಳ್ಳಲು ಅನ್ನ ಹಾಕಿದವನ ಮನೆಯ ಮುಂದೆ ಕಾವಲು ಕೂರಲು ಕೂಡಾ ನಾಯಿ ಯೋಚಿಸುವುದಿಲ್ಲ. ಆದರೆ ನಗರ ಪ್ರದೇಶಗಳಲ್ಲಿ ಮಾತ್ರ ಬೀದಿ ನಾಯಿಗಳ ಸಮಸ್ಯೆ ಒಂದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅನೇಕ ಸಂದರ್ಭಗಳಲ್ಲಿ ಬೀದಿ ನಾಯಿಗಳಿಂದ ತೊಂದರೆ ಅನುಭವಿಸಿದ್ದಾಗಿ ಅನೇಕರು ದೂರುಗಳನ್ನು ಸಹ ನೀಡುವುದುಂಟು. ಅಲ್ಲದೆ ಮಾಧ್ಯಮಗಳಲ್ಲಿ ಕೂಡಾ ಈ ವಿಷಯ ದೊಡ್ಡ ಸುದ್ದಿಯಾಗಿ ಬೀದಿನಾಯಿಗಳು ಎಂದರೆ ಒಂದು ರೀತಿಯ ಅ ಸಹನೆ ಹಾಗೂ ಅ ಸಮಾಧಾನದ ಭಾವನೆ ಅನೇಕರಲ್ಲಿ ಮೂಡುತ್ತದೆ
ಇಂತಹ ಅಸಮಾಧಾನ ಹಾಗೂ ನಾಯಿಗಳ ಬಗ್ಗೆ ಒಂದು ಬೇಸರ, ಅ ಸಹನೆ ಗಳಂತಹ ಭಾವನೆಗಳ ನಡುವೆಯೇ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಬೀದಿ ನಾಯಿಗಳಿಂದ ಕೂಡಾ ಯಾವ ರೀತಿ, ಕೆಲವು ಸಂದರ್ಭಗಳಲ್ಲಿ ಅಪಾಯಗಳು ತಪ್ಪಿವೆ ಎಂಬುದನ್ನು ತಿಳಿಸುವ ವಿಡಿಯೋಗಳು ವೈರಲ್ ಆದಾಗ, ಆ ವಿಡಿಯೋಗಳು ನಾಯಿಗಳ ಒಳ್ಳೆಯ ಗುಣಗಳನ್ನು ಜನರ ಮುಂದೆ ಇಡಲು ಸಹಾಯವಾಗುತ್ತದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಇಂತಹದೇ ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡು, ನಾಯಿ ಹೇಗೆ ಒಬ್ಬ ದಾರಿ ಹೋಕ ಮಹಿಳೆಯ ರಕ್ಷಣೆಯನ್ನು ಮಾಡಿದೆ ಎಂಬುದನ್ನು ಜನರ ಮುಂದೆ ಇಟ್ಟು, ಇಲ್ಲಿ ನೀವು ಕಂಡ ಬೀದಿ ನಾಯಿಯನ್ನು ಏನೆಂದು ಹೆಸರಿಸುವಿರಿ? ಎಂದು ಪ್ರಶ್ನೆ ಮಾಡಿದ್ದಾರೆ.
ವೈರಲ್ ವಿಡಿಯೋವನ್ನು ಗಮನಿಸಿದಾಗ ಒಂದು ನಿರ್ಜನವಾದ ರಸ್ತೆಯೊಂದರಲ್ಲಿ ಮಹಿಳೆಯೊಬ್ಬರು ಕೆಲವು ವಸ್ತುಗಳನ್ನು ತನ್ನ ಕೈಯಲ್ಲಿ ಹಿಡಿದು ನಡೆದುಕೊಂಡು ಹೋಗುತ್ತಿದ್ದಾರೆ. ಆಕೆಯ ಹಿಂದೆ ಒಬ್ಬ ಯುವಕ ನಡೆದು ಬರುತ್ತಿದ್ದಾನೆ. ರಸ್ತೆಯೆಲ್ಲಾ ಖಾಲಿಯಿದ್ದು ರಸ್ತೆಯಲ್ಲೊಂದು ನಾಯಿ ಮಾತ್ರವೇ ಇದೆ. ಹೀಗೆ ಯಾರು ಇಲ್ಲದ್ದನ್ನು ಗಮನಿಸಿದ ಆ ಮಹಿಳೆಯ ಹಿಂದೆ ಬರುತ್ತಿದ್ದ ಯುವಕನು ಇದ್ದಕ್ಕಿದ್ದಂತೆ ಒಂಟಿ ಮಹಿಳೆಯ ಮೇಲೆ ಎರಗಿದ್ದಾನೆ, ಆಕೆಯ ಬಳಿ ವಸ್ತುಗಳನ್ನು ದೋಚಲು ಮುಂದಾಗಿದ್ದಾನೆ. ಈ ಸನ್ನಿವೇಶವನ್ನು ಗಮನಿಸಿದ ಬೀದಿ ನಾಯಿ ತಡ ಮಾಡದೆ ಆ ಯುವಕನ ಮೇಲೆ ಧಾಳಿ ಮಾಡಿದೆ.
ನಾಯಿ ಆ ಯುವಕನ ಮೇಲೆ ಧಾ ಳಿ ಮಾಡಿ, ಆತನ ಮೇಲೆ ಎರಗಿ ಕಚ್ಚಲು ಮುಂದಾಗಿದೆ. ಮಹಿಳೆಯ ಕೈಲಿದ್ದ ವಸ್ತುಗಳು ನೆಲದ ಮೇಲೆ ಬಿದ್ದಿವೆ. ನಾಯಿ ಮಾತ್ರ ಆ ಯುವಕನ ಮೇಲೆ ಎರಗಿದ್ದು, ನಾಯಿಯ ಆ ಅನಿರೀಕ್ಷಿತವಾದ ಧಾಳಿಗೆ ಹೆದರಿದ ಯುವಕ ಅಲ್ಲಿಂದ ಓಡಿ ಹೋಗಿದ್ದಾನೆ. ಹೀಗೆ ಬೀದಿ ನಾಯಿ ಒಂಟಿಯಾಗಿ ಹೋಗುತ್ತಿದ್ದ ಮಹಿಳೆಯ ರಕ್ಷಣೆಯನ್ನು ಮಾಡಿದ್ದು ನಿಜಕ್ಕೂ ಒಂದು ಅದ್ಭುತ ಎನಿಸದೇ ಇರಲಾರದು. ಸುಶಾಂತ್ ಅವರು ಶೇರ್ ಮಾಡಿದ ಈ ವೀಡಿಯೋವನ್ನು ಒಂದು ಲಕ್ಷಕ್ಕಿಂತ ಅಧಿಕ ಮಂದಿ ನೋಡಿದ್ದು, ಐದು ಸಾವಿರಕ್ಕಿಂತ ಅಧಿಕ ಜನರು ಇಷ್ಟಪಟ್ಟಿದ್ದು, ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ.
ವಿಡಿಯೋ ನೋಡಿ
What you will call this stray dog… pic.twitter.com/o8HiDzEIWE
— Susanta Nanda IFS (@susantananda3) December 17, 2020
ಇದಕ್ಕೆ ಪ್ರತಿಕ್ರಿಯೆ ನೀಡಿದ ನೆಟ್ಟಿಗರೊಬ್ಬರು ನಾಯಿ ಮನುಷ್ಯರಿಗಿಂತ ಉತ್ತಮ, ಅದಕ್ಕೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಅರಿವಿದೆ. ನಾಯಿ ತನಗೆ ಹಾನಿಯಾಗದ ಅಥವಾ ಪ್ರಚೋದನೆ ನೀಡದ ಹೊರತು ಮನುಷ್ಯರಿಗೆ ತೊಂದರೆ ಕೊಡುವುದಿಲ್ಲ. ತನ್ನನ್ನು ರಕ್ಷಣೆ ಮಾಡಿದ ಆ ನಾಯಿಯನ್ನು ಆ ಯುವತಿ ಮನೆಗೆ ಕರೆದುಕೊಂಡು ಸಾಕಬೇಕು ಎಂದಿದ್ದಾರೆ. ಅನೇಕರು ಆ ಯುವತಿ ಆ ನಾಯಿಯನ್ನು ಕರೆದುಕೊಂಡು ಹೋಗಬೇಕು ಎಂದಿದ್ದಾರೆ. ಕೆಲವರು ನಾಯಿಗಳಿಗೆ ಅಪಾಯದ ಮುನ್ಸೂಚನೆ ಮೊದಲೇ ಸಿಗುತ್ತದೆ ಅವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತವೆ, ಇಲ್ಲಿ ಕೂಡಾ ನಾಯಿ ಅಪಾಯದ ಸುಳಿವು ಸಿಕ್ಕಿ ಆತನ ಮೇಲೆ ಆ ಕ್ರಮ ಣ ಮಾಡಿದೆ ಎಂದಿದ್ದಾರೆ.