ಚಳಿಯೆಂದರೆ ನಡುಗುವ ನಾವು ವಿಶ್ವದ ಅತಿ ಶೀತವಾದ ಹಳ್ಳಿಯ ಬಗ್ಗೆ ತಿಳಿದರೆ ಅದ್ಭುತ ಎನಿಸದೇ ಇರಲಾರದು
ಕಳೆದ ಕೆಲವು ದಿನಗಳಿಂದಲೂ ಕೂಡಾ ಉತ್ತರ ಭಾರತದಲ್ಲಿ ಚಳಿಯ ತೀ ವ್ರ ತೆಯು ಅಧಿಕವಾಗುತ್ತಿದೆ. ಯಾವ ರೀತಿಯ ಶೀತ ವಾತಾವರಣ ಇದೆ ಎಂದರೆ ದೇಹವೇ ಈ ಚಳಿಗೆ ಜಡ್ಡುಗಟ್ಟಿದಂತಹ ಅನುಭವವನ್ನು ನೀಡುವಂತೆ ಇದ್ದು, ಜನರು ತಮ್ಮ ಮನೆಗಳಿಂದ ಹೊರಗೆ ಬರುವುದಕ್ಕಿಂತ ಆರಾಮವಾಗಿ, ಆದಷ್ಟು ಬೆಚ್ಚಗೆ ತಮ್ಮ ಮನೆಗಳಲ್ಲೇ ಉಳಿಯುವುದು ಉತ್ತಮ ಎನ್ನುವಂತೆ ಹೊರಗೆ ಬಾರದೆ ಇರುವಂತಹ ಬೆಳವಣಿಗೆಗಳು ಕೂಡಾ ನಡೆದಿವೆ. ಹವಾಮಾನ ಇಲಾಖೆಯ ಪ್ರಕಾರ ಕೂಡಾ ಈ ಬಾರಿ ಭಾರತ ಮಾತ್ರವೇ ಅಲ್ಲದೇ ವಿಶ್ವದ ಅನೇಕ ಕಡೆಗಳಲ್ಲಿ ಕೂಡಾ ತೀವ್ರವಾದ ಶೀತ ಉಂಟಾಗುವ ಸಂಭವವಿದೆ ಎನ್ನಲಾಗಿದೆ. ಅಲ್ಲದೇ ಭಾರತ ಸೇರಿದಂತೆ ಅನೇಕ ಕಡೆಗಳಲ್ಲಿ ತಾಪಮಾನವು ಮೈನಸ್ ಡಿಗ್ರಿಗಳಿಗೆ ಇಳಿದಿದ್ದು, ಜನ ಚಳಿಯಿಂದ ಕಂಗೆಡುವಂತೆ ಆಗುತ್ತಿದೆ.

ಒಂದೆರಡು ಮೈನಸ್ ಡಿಗ್ರಿ ಆದರೆ ಚಳಿ ತಡೆಯುವುದು ಅಸಾಧ್ಯ ಎನ್ನುವಾಗ ವಿಶ್ವದಲ್ಲಿ ಒಂದು ಕಡೆ ತಾಪಮಾನವು -71° ಇರುತ್ತದೆ ಎಂದರೆ ನಂಬುವುದಕ್ಕೆ ಕಷ್ಟ ಎನಿಸಿದರೂ ಕೂಡಾ ಇದು ನಿಜವಾಗಿದೆ. ಹೌದು ನಾವು ಹೇಳಲು ಹೊರಟಿರುವ ಈ ಪ್ರದೇಶವು ಒಂದು ಹಳ್ಳಿಯಂತಹ ಪ್ರದೇಶವಾಗಿದ್ದು ಇದು ರಷ್ಯಾದಲ್ಲಿದೆ. ರಷ್ಯಾದ ಸೈಬೀರಿಯಾ ದಲ್ಲಿ ಇರುವ ಈ ಗ್ರಾಮದ ಹೆಸರು ಓಮ್ಯಾಕೋನ್ ಎನ್ನಲಾಗಿದ್ದು, ಅಂಟಾರ್ಕ್ಟಿಕಾ ದಿಂದ ಹೊರಗೆ ಭೂಮಿಯ ಮೇಲಿನ ಅತ್ಯಂತ ಶೀತದ ಪ್ರದೇಶ ಇದು ಎಂದೇ ಗುರುತಿಸಲ್ಪಟ್ಟಿದೆ. ಇನ್ನು ಇಲ್ಲಿನ ಸರಾಸರಿ ತಾಪಮಾನದ ವಿಷಯಕ್ಕೆ ಬಂದರೆ ಅದು -50° ಸೆಲ್ಷಿಯಸ್ ಆಗಿರುತ್ತದೆ.

1924 ರಲ್ಲಿ ಈ ಸ್ಥಳದ ತಾಪಮಾನವು 71.2° ಸೆಲ್ಷಿಯಸ್ ಗೆ ಇಳಿದು ದಾಖಲೆ ಮಾಡಿತ್ತು. 2018 ರ ಅಂಕಿ ಅಂಶಗಳ ಪ್ರಕಾರ ಇಲ್ಲಿ ಸುಮಾರು 500 ರಿಂದ 900 ಜನರು ಮಾತ್ರ ವಾಸ ಮಾಡುತ್ತಾರೆ. ಇಲ್ಲಿನ ಜನರಿಗೆ ಸದಾ ಹಿಮಪಾತ ಅಥವಾ ಹಿಮ ಸುರಿಯುವ ಭ ಯ ಅಥವಾ ಅ ಪಾ ಯ ವಂತೂ ಇದ್ದೇ ಇರುತ್ತದೆ.
ಕ ಠಿ ಣ ಎನಿಸುವ ಇಲ್ಲಿನ ಚಳಿಯನ್ನು ಎದುರಿಸ ಬದುಕು ಸಾಗಿಸಲು ಇಲ್ಲಿನ ಮಕ್ಕಳನ್ನು ಕೂಡಾ ಸಜ್ಜು ಮಾಡಲಾಗಿರುತ್ತದೆ. ಇಲ್ಲಿ ಮಕ್ಕಳು ಕೂಡಾ -50° ತಾಪಮಾನದಲ್ಲಿ ಕೂಡಾ ಶಾಲೆಗೆ ಹೋಗುತ್ತಾರೆ. ಆದರೆ ತಾಪಮಾನ ಇನ್ನೂ ಕೆಳಗೆ ಇಳಿಯಲು ಆರಂಭವಾದ ಕೂಡಲೇ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗುತ್ತದೆ.

ಇಲ್ಲಿನ ವರದಿಗಳ ಪ್ರಕಾರ ಡಿಸೆಂಬರ್ ನಲ್ಲಿ ಇಲ್ಲಿ ಸೂರ್ಯೋದಯವಾಗುವುದೇ ಬೆಳಿಗ್ಗೆ ಹತ್ತು ಗಂಟೆಗೆ. ಈ ಅವಧಿಯಲ್ಲಿ ಇಲ್ಲಿನ ಜನರ ಜೀವನವು ಒಂದು ಸವಾಲಿಗಿಂತ ಕಡಿಮೆಯೇನಿಲ್ಲ. ಈ ಸಂದರ್ಭದಲ್ಲಿ ಶೀತಕ್ಕೆ ಜನರು ಹೊರಗೆ ಬರುವುದು ಅಸಾಧ್ಯ ಹಾಗೂ ತಮ್ಮ ವಾಹನಗಳ ಇಂಜಿನ್ ಗಳು ಶೀತದಿಂದ ಹಿಮದ ಕಾರಣ ಬ್ಯಾಟರಿ ಗಳು ಜಾಮ್ ಆಗದಿರಲಿ ಎನ್ನುವ ಕಾರಣಕ್ಕೆ ರಾತ್ರಿಯೆಲ್ಲಾ ಕೂಡಾ ವಾಹನಗಳನ್ನು ಸ್ಟಾರ್ಟ್ ಮಾಡಿ ಹಾಗೇಯೇ ಬಿಟ್ಟಿರುತ್ತಾರೆ. ಇಲ್ಲದೇ ಹೋದರೆ ಗಾಡಿಗಳನ್ನು ಮುಂಜಾನೆಯ ವೇಳೆ ಸ್ಟಾರ್ಟ್ ಮಾಡುವುದು ಅಸಾಧ್ಯವಾಗುವುದು ಖಂಡಿತ.

ಚಳಿಗಾಲದಲ್ಲಿ ಇಲ್ಲಿ ಯಾವುದೇ ಬೆಳೆಗಳು ಇರದ ಕಾರಣ ಇಲ್ಲಿನ ಜನರು ವಿವಿಧ ಬಗೆಯ ಮಾಂಸವನ್ನು ತಿಂದು ಬದುಕುತ್ತಾರೆ. ಕುದುರೆ, ಹಿಮಸಾರಂಗದ ಮಾಂಸವನ್ನು ಮಾತ್ರವಲ್ಲದೇ ಸ್ಟ್ರೋಗಾನಿನಾ ಎನ್ನುವ ಮೀನುಗಳನ್ನು ಕೂಡಾ ಜನರು ಆಹಾರವಾಗಿ ಸೇವನೆ ಮಾಡುತ್ತಾರೆ. ಚಳಿ ಎಂದರೆ ನಡುಗುವ ನಮಗೆ ಈ ಹಳ್ಳಿಯ ಕಥೆ ಕೇಳಿದರೆ ಒಂದು ಕ್ಷಣ ಅಲ್ಲಿನ ಜನರ ಜೀವನವನ್ನು ಊಹೆ ಮಾಡಿಕೊಂಡರೆ ನಿಜಕ್ಕೂ ಅದೊಂದು ಸವಾಲು ಎನಿಸುವುದು ಮಾತ್ರವೇ ಅಲ್ಲದೇ ಇದೊಂದು ಅದ್ಭುತ ಜಗತ್ತು ಎಂದು ಕೂಡಾ ಅನಿಸುವುದು ಸಹಜ.

