ಇಂದಿನಿಂದಲೇ ಹಾಲಿನಲ್ಲಿ ನೆನೆಸಿದ ಅಂಜೂರವನ್ನು ತಿನ್ನಲು ಶುರು ಮಾಡಿ, ಮಾರಕ ‘ಈ’ 11 ಕಾಯಿಲೆಗಳಿಂದ ದೂರ ಇರಿ!
ಪ್ರತಿಯೊಂದು ಕಾಯಿಲೆಯ ಔಷಧವು ನಿಸರ್ಗವು ನಮಗೆ ನೀಡಿದ ಆಹಾರದಲ್ಲಿಯೇ ಇದೆ. ಅದನ್ನು ಹೇಗೆ, ಯಾವ ರೀತಿ, ಮತ್ತು ಎಷ್ಟು ಸೇವಿಸಬೇಕೆಂಬುದು ಅಷ್ಟೇ ಗೊತ್ತಿಲ್ಲ.
ಅಂಜೂರದ ಬಗ್ಗೆ ಹೇಳಬೇಕಾದರೆ, ಇದು ಅನೇಕ ಪೌಷ್ಟಿಕ ಸತ್ವಗಳಿಂದ ಸಂಪತ್ ಭರಿತವಾಗಿದೆ. ಈ ಅಂಜೂರವನ್ನು ಹೇಗೆ, ಯಾವ ರೀತಿ ಸೇವಿಸುವುದರಿಂದ ಆಗುವ ವಿವಿಧ ಲಾಭಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವ.

- ಮಲಬದ್ಧತೆ:- ಅನೇಕರಿಗೆ ಮುಂಜಾನೆಯ ವಿಧಿಯು ತುಂಬಾ ಸಮಸ್ಯೆ ನೀಡುತ್ತಿರುತ್ತದೆ. ಇಂಥವರಿಗಾಗಿ ಅಂಜೂರವು ರಾಮಬಾಣ ಉಪಾಯವಾಗಿದೆ. ಅದಕ್ಕಾಗಿ ದಿನಾಲೂ ರಾತ್ರಿ ಹಾಲಿನಲ್ಲಿ ಎರಡು ಅಂಜೂರಗಳನ್ನು ನೆನೆಯಿಸಿ ಮುಂಜಾನೆ ಎದ್ದ ನಂತರ ತಿನ್ನಬೇಕು. ಈ ಪ್ರಯೋಗವನ್ನು ಕೆಲವು ದಿವಸಗಳವರೆಗೆ ದಿನಂಪ್ರತಿ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆಯು ದೂರಾಗುವುದು. ಹಾಲಿನ ಬದಲಾಗಿ ನೀರಿನಲ್ಲಿಯೂ ಅಂಜೂರವನ್ನು ನೆನೆಯಿಸಿ ತಿನ್ನಬಹುದು.
- ದಮ್ಮು:- ಹೆಚ್ಚುತ್ತಿರುವ ವಯಸ್ಸಿನ ಜೊತೆಗೆ ಕೆಲವರಿಗೆ ದಮ್ಮು ಅಥವಾ ಅಸ್ತಮಾದ ಸಮಸ್ಯೆ ನಿರ್ಮಾಣವಾಗುತ್ತದೆ. ಇದಕ್ಕಾಗಿ ಮೂರು ಅಥವಾ ನಾಲ್ಕು ಅಂಜೂರ ಗಳನ್ನು ದಿನಾಲು ಸೇವಿಸಿದರೆ ಕೆಲವೇ ದಿನಗಳಲ್ಲಿ ಇದರ ಮೇಲೆ ಜಯ ಗಳಿಸಬಹುದಾಗಿದೆ.
- ಬಿಳಿ ಮುಟ್ಟಿನ ಸಮಸ್ಯೆಗೆ ಪರಿಹಾರ:– ಅನೇಕ ಮಹಿಳೆಯರಲ್ಲಿ ಬಿಳಿ ಮುಟ್ಟಿನ ಸಮಸ್ಯೆ ಕಂಡುಬರುತ್ತದೆ. ಅಂಥ ಮಹಿಳೆಯರು ಅಂಜೂರವನ್ನು ಜೇನುತುಪ್ಪದ ಜೊತೆಗೆ ಸೇವಿಸಿದರೆ ಈ ಸಮಸ್ಯೆಯಿಂದ ಪರಿಹಾರ ದೊರೆಯುವುದು.
- ಹೆಚ್ಚುವರಿ ಮೂತ್ರದಿಂದ ಪರಿಹಾರ:– ವಿವಿಧ ಕಾರಣಗಳಿಂದ ಮೂತ್ರವು ಮೇಲಿಂದ ಮೇಲೆ ಬರುತ್ತಿರುತ್ತದೆ. ಹೆಚ್ಚಾಗಿ ಮಧುಮೇಹದ ಕಾರಣದಿಂದಲೂ ಮೂತ್ರವು ಮೇಲಿಂದ ಮೇಲೆ ಬರುತ್ತದೆ. ಆದರೆ ಮಧುಮೇಹದ ಸಮಸ್ಯೆ ಇಲ್ಲದೆ ಇದ್ದಾಗಲೂ ಮೂತ್ರ ಬರುವ ಪ್ರಮಾಣ ಹೆಚ್ಚಾಗಿದ್ದರೆ ಮೂರ್ನಾಲ್ಕು ಅಂಜೂರ ಗಳ ಜೊತೆಗೆ 10 ಗ್ರಾಂ ಕಪ್ಪು ಎಳ್ಳನ್ನು ಸೇವಿಸಬೇಕು. ಇದರಿಂದ ಪರಿಹಾರ ನಿಶ್ಚಿತವಾಗಿಯೂ ದೊರೆಯುತ್ತದೆ.
- ದೌರ್ಬಲ್ಯ:– ತಾರುಣ್ಯದಲ್ಲಿ ಮಾಡಿದ ಅನೇಕ ತಪ್ಪುಗಳಿಂದಾಗಿ ದೌರ್ಬಲ್ಯದ ಸಮಸ್ಯೆ ನಿರ್ಮಾಣವಾಗುತ್ತದೆ. ಇಂಥ ತರುಣರು ಅಂಜೂರವನ್ನು ಸೋಪಿನ ಜೊತೆಗೆ ತಿನ್ನಬೇಕು. ಇದರಿಂದ ದೈಹಿಕ ದೌರ್ಬಲ್ಯವು ಕಡಿಮೆಯಾಗಿ ಶಕ್ತಿಯ ಬಲವರ್ಧನೆ ಆಗುವುದು.
- ರಕ್ತದ ಹೆಚ್ಚಳ:- ಅನೇಕರಿಗೆ ಹೆಚ್ಚುವ ವಯಸ್ಸಿನೊಂದಿಗೆ ರಕ್ತದ ಅಭಾವ ಕಂಡುಬರುತ್ತದೆ. ಇದರಿಂದ ಅನಿಮಿಯ ಸಹ ಆಗುತ್ತದೆ. ಇಂಥವರು ಹತ್ತರಿಂದ ಹದಿನೈದು ಒಣದ್ರಾಕ್ಷಿಯ ಜೊತೆಗೆ ನಾಲ್ಕೈದು ಅಂಜೂರ ಗಳನ್ನು ಹಾಲಿನಲ್ಲಿ ಕುದಿಸಿ ತಿನ್ನಬೇಕು. ಆನಂತರ ಆ ಹಾಲನ್ನು ಸಹ ಕುಡಿಯಬೇಕು. ಇದರಿಂದ ದೇಹದಲ್ಲಿ ರಕ್ತವು ಹೆಚ್ಚಾಗಲು ಸಹಾಯವಾಗುತ್ತದೆ.
- ಶಕ್ತಿ ಹೆಚ್ಚಾಗುವುದು:- ಅಂಜೂರದಲ್ಲಿ ಹೆಚ್ಚಿನ ಪ್ರಮಾಣದ ಪೋಷಕ ತತ್ವಗಳು ಇರುತ್ತವೆ. ಅಂಜೂರದ ಜೊತೆಗೆ ಬಾದಾಮಿಯನ್ನು ಕುದಿಸಿ ಹಾಲಿನಲ್ಲಿ ಸ್ವಲ್ಪ ತುಪ್ಪನ್ನು ಸೇರಿಸಿದ ಪೇಯವನ್ನು ಕೆಲವು ದಿನಗಳವರೆಗೆ ಕುಡಿದರೆ ಶಕ್ತಿಯು ವೃದ್ಧಿಯಾಗುವುದು.
- ಟಿ ಬಿ– ಟಿಬಿ ಸಮಸ್ಯೆಗೆ ಒಳಗಾದ ವ್ಯಕ್ತಿ ದಿನಂಪ್ರತಿ ಅಂಜೂರವನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತದ ವೃದ್ಧಿಯಾಗುವುದು. ಹಾಗೂ ಟಿ ಬಿ ಯ ಸಮಸ್ಯೆಯು ದೂರಾಗುವುದು.
- ದೇಹದ ಉಷ್ಣತೆ ಕಡಿಮೆಯಾಗುವುದು:- ವ್ಯಕ್ತಿಗೆ ವಿವಿಧ ಕಾಯಿಲೆಗಳಿಂದಾಗಿ ಅಥವಾ ವ್ಯಸನಗಳಿಂದಾಗಿ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇಂಥವರು ಅಂಜೂರದ ಜೊತೆಗೆ ಬಾದಾಮಿಯನ್ನು ತಿನ್ನುವುದರಿಂದ ದೇಹದ ಉಷ್ಣತೆಯು ಕಡಿಮೆಯಾಗುವುದು.
- ಶ್ವಾಸಕೋಶ:- ನಮ್ಮ ಶ್ವಾಸಕೋಶವು ನಿರೋಗಿಯಾಗಿ ಇರಬೇಕು. ಶ್ವಾಸಕೋಶವು ದೇಹದ ಮಹತ್ವದ ಅಂಗವಾಗಿದೆ. ದಿನಂಪ್ರತಿ ನಾಲ್ಕೈದು ಅಂಜೂರ ಗಳನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ನೆನೆಯಿಸಿ ಕುಡಿಯುವುದರಿಂದ ಶ್ವಾಸಕೋಶವು ಆರೋಗ್ಯದಿಂದ ಕೂಡಿರುತ್ತದೆ.
- ಮೂಲವ್ಯಾಧಿ (ಪೈಲ್ಸ್):- ಎಣ್ಣೆಯುಕ್ತ, ಮಸಾಲೆಯುಕ್ತ ಹಾಗೂ ಚಟಪಟಾ ಟೇಸ್ಟಿ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆ ನಿರ್ಮಾಣವಾಗುತ್ತದೆ. ಈ ಸಮಸ್ಯೆಯು ಉಲ್ಬಣವಾಗಿ ಮುಂದೆ ಮೂಲವ್ಯಾಧಿಯಲ್ಲಿ ರೂಪಾಂತರವಾಗುತ್ತದೆ. ಇಂಥ ಸಮಸ್ಯೆಯಿಂದ ಬಳಲುವವರು ಪ್ರತಿದಿನ ನಿಯಮಿತವಾಗಿ ಎರಡು ಅಂಜೂರಗಳನ್ನು ನೀರಿನಲ್ಲಿ ನೆನೆಯಿಸಿ ಮುಂಜಾನೆಯ ಸಮಯದಲ್ಲಿ ಸೇವಿಸಬೇಕು. ಈ ರೀತಿಯಾಗಿ ಕೆಲವು ದಿನಗಳವರೆಗೆ ಮಾಡುವುದರಿಂದ ಮೂಲವ್ಯಾಧಿಯ ಸಮಸ್ಯೆಯು ತನ್ನಂತಾನೆ ದೂರವಾಗುವುದು.
