ಶ್ವಾಸಕೋಶವನ್ನು ನೈಸರ್ಗಿಕವಾಗಿ ಬಲಪಡಿಸಲು ಈ 5 ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಲೇಬೇಕು!

ಶ್ವಾಸಕೋಶ ವ್ಯಕ್ತಿಯ ದೇಹದಲ್ಲಿ ಮಹತ್ವದ ಮತ್ತು ನಾಜೂಕಾದ ಅಂಗವಾಗಿದೆ. ಜಂಕ್ ಫುಡ್ ಗಳಂತಹ ಆಹಾರ, ಹಾಗೂ ಬದಲಾದ ಮಾರಕ ಜೀವನಶೈಲಿ ಇವೆರಡು ಶ್ವಾಸಕೋಶಕ್ಕೆ ತುಂಬಾ ಹಾನಿಯನ್ನು ಮಾಡುತ್ತವೆ. ಆದರೆ ಈ ಲೇಖನದಲ್ಲಿ ಹೇಳಿದ ಕೆಲವು ಆಹಾರಗಳಾದ ತರಕಾರಿ ಮತ್ತು ಹಣ್ಣುಗಳ ಸೇವನೆಯು ನಿಶ್ಚಿತವಾಗಿಯೂ ಶ್ವಾಸಕೋಶವನ್ನು ಬಲಪಡಿಸುವವು. ಮತ್ತು ಆಗಿರತಕ್ಕಂಥ ಹಾನಿಯನ್ನು ತುಂಬಿ ತೆಗೆಯುವವು.

ಊಟಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ಸಮತೋಲನ ಆಹಾರವು ನಮ್ಮನ್ನು ಅನಾರೋಗ್ಯದಿಂದ ರಕ್ಷಿಸುವ ಹಾಗೆಯೇ ನಮ್ಮಲ್ಲಿ ರೋಗ ಪ್ರತಿರೋಧಕ ಶಕ್ತಿ ಬಲವಾಗಿದ್ದರೆ ಔಷಧಿಗಳ ಅವಶ್ಯಕತೆಯೂ ಬೀಳುವುದಿಲ್ಲ. ಆದ್ದರಿಂದ ಪೌಷ್ಟಿಕ ಮತ್ತು ವಿವಿಧ ಜೀವನಸತ್ವಗಳಿಂದ ಕೂಡಿದ ಆಹಾರವನ್ನೇ ಸೇವಿಸಬೇಕು. ಅದಕ್ಕಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಆಹಾರಗಳು ಯಾವವು ಇಲ್ಲಿ ನೋಡುವಾ….

ಸೇಬು– ದಿನಾಲು ಒಂದು ಸೇಬು ಹಣ್ಣಿನ ಸೇವನೆಯು ನಮ್ಮನ್ನು ಡಾಕ್ಟರ್ ದಿಂದ ದೂರವಿಡುತ್ತದೆಯಂತೆ. ಸೇಬಿನಲ್ಲಿರುವ ಫ್ಲೇವೋನಾಯಿಡ್ ಕ್ವರಸಿಟಿನ್ ಹೆಸರಿನ ಪದಾರ್ಥ ಶ್ವಾಸಕೋಶವನ್ನು ಆರೋಗ್ಯದಿಂದ ಇಡಲು ಸಹಾಯ ಮಾಡುತ್ತದೆ. ಫಾಯಬರ್ ಮತ್ತು ವಿಟಮಿನ್ಸ್ ನಿಂದ ಹೇರಳವಾದ ಈ ಹಣ್ಣನ್ನು ದಿನನಿತ್ಯ ಆಹಾರದಲ್ಲಿ ಉಪಯೋಗಿಸಬೇಕು. ಇದು ನಮ್ಮ ಶ್ವಸನ ಪ್ರಕ್ರಿಯೆಗೆ ಬಲ ನೀಡುವುದು.

ಮೆಣಸಿನಕಾಯಿ– ಶ್ವಾಸಕೋಶಕ್ಕೆ ಸಿ ಜೀವನಸತ್ವವು ತುಂಬಾ ಲಾಭದಾಯಕವಾಗಿದೆ. ಇದು ಮೆಣಸಿನಕಾಯಿಯಲ್ಲಿ ತುಂಬಾ ಇರುತ್ತದೆ. ಇದು ದೇಹದಲ್ಲಿ ಆಂಟಿ ಆಕ್ಸಿಡೆಂಟ್ ತರ ಕೆಲಸ ಮಾಡುತ್ತದೆ. ವಿಟಮಿನ್ ಸಿ ಇದು ದೇಹದಲ್ಲಿ ವಿಷಯುಕ್ತ ಘಟಕಗಳನ್ನು ಮತ್ತು ಫ್ರೀ ರಾಡಿಕಲ್ಸ್ ಗಳನ್ನು ತೆಗೆದು ಹಾಕುವಲ್ಲಿ ಮಹತ್ವದ ಕೆಲಸ ಮಾಡುತ್ತದೆ. ಆದ್ದರಿಂದ ನಮ್ಮ ಶ್ವಾಸಕೋಶ ತುಂಬಾ ಸುರಕ್ಷಿತವಾಗಿರುತ್ತದೆ.

ಬೀಟ್– ಬೀಟ್ ಇದು ಪೋಷಕ ಸತ್ವಗಳಿಂದ ಹೇರಳವಾಗಿರುವುದರಿಂದ ದಿನನಿತ್ಯದ ಆಹಾರದಲ್ಲಿ ಸೇವಿಸಬೇಕು. ಬೀಟ್ ನಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ, ಫಾಸ್ಫರಸ್, ವಿಟಮಿನ್ ಬಿ1, ಬಿ2, ಮತ್ತು ಸಿ, ಐರನ್ ಹಾಗೂ ಫೋಲಿಕ್ ಆಸಿಡ್ ಗಳು ಪರಿಪೂರ್ಣವಾಗಿದೆ. ಬೀಟ್ ಸೇವನೆಯಿಂದ ರಕ್ತ ದೊತ್ತಡವು ನಿಯಂತ್ರಣದಲ್ಲಿರುತ್ತದೆ. ಇದರ ಸೇವನೆ ಅಥವಾ ಜ್ಯೂಸ್ ಮಾಡಿ ಕುಡಿದಾಗ ಶರೀರದಲ್ಲಿಯ ಬೇಡವಾದ ಕೊಲೆಸ್ಟ್ರಾಲ್ ಹೊರಹಾಕಿ ಉಪಯುಕ್ತ ಕೊಲೆಸ್ಟ್ರಾಲ್ ನಿರ್ಮಾಣ ಮಾಡುತ್ತದೆ. ಇದರ ಇನ್ನೊಂದು ಉಪಯೋಗ ಶ್ವಾಸ ನಳಿಕೆಯನ್ನು ಸ್ವಚ್ಛಗೊಳಿಸುವುದು.

ಕುಂಬಳಕಾಯಿ– ಶ್ವಾಸಕೋಶಕ್ಕೆ ನಿರೋಗಿಯಾಗಿಡಲು ಕುಂಬಳಕಾಯಿ ಉತ್ತಮ ಪರ್ಯಾಯವಾಗಿದೆ. ಆದ್ದರಿಂದ ಇದು ನಮ್ಮ ಆಹಾರದಲ್ಲಿ ಇರಲೇಬೇಕು. ಇದರಲ್ಲಿರುವ ಬೀಟಾ ಕೆರೋಟಿನ್ ನಿಂದ ವಿಟಮಿನ್ ಎ ದೊರೆಯುವುದು. ಹಳದಿ ಮತ್ತು ಕೇಸರಿ ಬಣ್ಣದ ಕುಂಬಳಕಾಯಿಯಲ್ಲಿ ಕೆರೋಟಿನ್ ಪ್ರಮಾಣವು ಅತಿ ಹೆಚ್ಚು ಕಂಡುಬರುತ್ತದೆ. ಕುಂಬಳಕಾಯಿ ಬೀಜಗಳು ಸಹಿತ ಬಹು ಮೌಲ್ಯವಾಗಿವೆ. ಇದರ ಬೀಜಗಳಲ್ಲಿ ಐರನ್, ಜಿಂಕ್, ಪೊಟ್ಯಾಶಿಯಂ ಮತ್ತು ಮ್ಯಾಗ್ನೀಷಿಯಂ ಪ್ರಮಾಣವು ಹೆಚ್ಚಾಗಿರುತ್ತದೆ. ಆದ್ದರಿಂದ ಕುಂಬಳಕಾಯಿಯ ಸೇವನೆಯಿಂದ ಶ್ವಾಸ ಕೋಶವು ನಿರೋಗಿ ಮತ್ತು ಸ್ವಚ್ಛವಾಗಿರಲು ಸಹಾಯವಾಗುತ್ತದೆ.

ಗಜ್ಜರಿ– ಗಜ್ಜರಿಯಲ್ಲಿ ಎಂಟಿ ಇನ್ಫ್ಲಾಮೆಂಟ್ರಿ ಎಲಿಮೆಂಟ್ಸ್ ಜೊತೆಗೆ ಸಿ ಜೀವನಸತ್ವವು ಹೆಚ್ಚಾಗಿರುತ್ತದೆ. ಹೀಗಾಗಿ ಇದರ ಸೇವನೆಯಿಂದ ವ್ಯಕ್ತಿಯ ಶ್ವಾಸಕೋಶವು ನಿರೋಗಿಯಾಗಿರಲು ಮತ್ತು ಸ್ವಚ್ಛವಾಗಿರಲು ಸಹಾಯವಾಗುತ್ತದೆ. ಹೀಗಾಗಿ ಶಾಸನಕ್ಕೆ ಸಂಬಂಧಿಸಿದ ರೋಗಗಳಿಂದ ದೂರವಿರಲು ಸಹಾಯವಾಗುತ್ತದೆ.

ತರಕಾರಿಗಳು– ಎಲೆಕೋಸು, ಹೂಕೋಸು, ಬ್ರೊಕೋಲಿ, ಮೊಳಕೆಯೊಡೆದ ಧಾನ್ಯಗಳು ಹೀಗೆ ಇನ್ನಿತರ ತರಕಾರಿಗಳು ದೇಹಕ್ಕೆ ಆರೋಗ್ಯದಿಂದಿರಲು ಅತ್ಯಂತ ಉಪಯೋಗವನ್ನು ನೀಡುತ್ತವೆ. ಈ ತರಕಾರಿಗಳಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣವು ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ಈ ತರಕಾರಿಗಳ ಆಹಾರವನ್ನು ದಿನನಿತ್ಯ ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಯಾವುದೇ ರೋಗವು ಶ್ವಾಸಕೋಶದವರೆಗೆ ಹೋಗುವುದಿಲ್ಲ. ಜೊತೆಗೆ ಶ್ವಸನಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ದೂರವಾಗುತ್ತದೆ.

ಈ ಆಹಾರಗಳನ್ನು ದಿನನಿತ್ಯ ಯೋಗ್ಯ ಪ್ರಮಾಣದಲ್ಲಿ ಸೇವಿಸುವದರ ಜೊತೆಗೆ ನಿಯಮಿತವಾಗಿ ಪ್ರಾಣಾಯಾಮ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡಿದರೆ ಶ್ವಾಸಕೋಶದ ಆರೋಗ್ಯದಲ್ಲಿ ತುಂಬಾ ವೃದ್ಧಿಯಾಗುವುದು.

ಮಿತ್ರರೇ, ಈ ಲೇಖನದಲ್ಲಿ ನೀಡಿದ ಮಾಹಿತಿಯು ಸರ್ವಸಾಮಾನ್ಯವಾಗಿದೆ. ಇದನ್ನು ಯಾವುದೇ ಡಾಕ್ಟರ್ ಅಥವಾ ವೈದ್ಯರ ಸಲಹೆ ಎಂದು ತಿಳಿಯಬೇಡಿ. ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ರೋಗ ಅಥವಾ ಸಂಸರ್ಗದ ಲಕ್ಷಣಗಳು ಕಂಡುಬಂದರೆ ತಕ್ಷಣ ನಿಮ್ಮ ಡಾಕ್ಟರ್ ರನ್ನು ಸಂಪರ್ಕಿಸಿರಿ.