ನೀರಿನಲ್ಲಿ ಇದ್ದದ್ದು ಅನಕೊಂಡ ಎಂದು ತಿಳಿಯದೆ ಕೀಟಲೆ ಮಾಡಿದ ವ್ಯಕ್ತಿ: ರೋಷದಿಂದ ಹೊರ ಬಂದ ಹಾವು ನೋಡಿ ಕಾಲ್ಕಿತ್ತ

ಪ್ರಾಣಿಗಳು ಅನವಶ್ಯಕವಾಗಿ, ಯಾವುದೇ ಕಾರಣವಿಲ್ಲದೆ ಮನುಷ್ಯರ ಮೇಲೆ ಆ ಕ್ರ ಮ ಣವನ್ನು ಮಾಡುವುದಿಲ್ಲ. ಅವುಗಳಿಗೆ ಪ್ರಚೋದನೆ ದೊರಕದ ಹೊರತು, ಇತರರಿಂದ ಅ ಪಾ ಯ ಎದುರಾಗುತ್ತದೆ ಎನ್ನುವ ಅನುಮಾನ ಬಾರದ ಹೊರತು ಅವು ಮನುಷ್ಯರಿಗೆ ಹಾ ನಿ ಮಾಡುವಂತಹ ಪ್ರಯತ್ನವನ್ನು ಮಾಡುವುದಿಲ್ಲ‌ವೆಂದು ಅನೇಕರು ಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ‌ ಕೆಲವು ಸಂದರ್ಭಗಳಲ್ಲಿ ಅದು ನಿಜ ಕೂಡಾ ಎನಿಸುತ್ತದೆ. ಏಕೆಂದರೆ ಅಭಯಾರಣ್ಯಗಳಲ್ಲಿ ವೈ ಲ್ಡ್ ಸಫಾರಿ ಮಾಡಲು ಹೊರಟ ಪ್ರವಾಸಿಗರು ಅರಣ್ಯಗಳಲ್ಲಿ ಸಂಚರಿಸುವಾಗ ಅಲ್ಲಿನ ಪ್ರಾಣಿಗಳು ತಮ್ಮ ಪಾಡಿಗೆ ತಾವು ಸಂಚರಿಸುವುದನ್ನು ನಾವು ನೋಡಬಹುದಾಗಿದೆ, ಅಲ್ಲದೇ ಅವು ಅನಾವಶ್ಯಕವಾಗಿ ಪ್ರವಾಸಿಗರ ವಾಹನಗಳ ಮೇಲೆ ಧಾ ಳಿ ಮಾಡುವುದಾಗಲೀ ಅಥವಾ ತೊಂದರೆ ನೀಡುವುದಾಗಲೀ ಕಂಡು ಬರುವುದಿಲ್ಲ.‌

ಹೀಗೆ ತಮ್ಮ ಪಾಡಿಗೆ ತಾವು ಇರುವ ಯಾವುದೇ ಪ್ರಾಣಿಗಳನ್ನೇ ಆಗಲಿ ನಾವೂ ಕೂಡ ತಮಾಷೆಗೋ, ಮನರಂಜನೆಗೋ ಅಥವಾ ಇನ್ನಾವುದೋ ಕಾರಣಕ್ಕೆ ಕೆಣಕುವಂತಹ ಕೆಲಸಗಳನ್ನು ಮಾಡಬಾರದು. ಹೀಗೆ ಮಾಡುವುದರಿಂದ ಅನೇಕ ಸಂದರ್ಭಗಳಲ್ಲಿ ಅ ಪಾ ಯ ಗಳಿಗೆ ನಾವೇ ಆಹ್ವಾನ ನೀಡಿದಂತೆ ಆಗುತ್ತದೆ. ಅಲ್ಲದೆ ಇಂತಹ ಸನ್ನಿವೇಶಗಳನ್ನು ಕೂಡಾ ನಮ್ಮ ಮುಂದೆ ಇಡುವಂತಹ, ಒಂದು ಎಚ್ಚರಿಕೆಯ ಸಂದೇಶವನ್ನು ನೀಡುವ ಅನೇಕ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾ ಗಳಲ್ಲಿ ಈಗಾಗಲೇ ವೈರಲ್ ಆಗಿದ್ದು, ಜನರಿಗೆ ಆದಷ್ಟು ಎಚ್ಚರಿಕೆಯಿಂದ ಇರುವಂತಹ ಒಂದು ಸಂದೇಶವನ್ನು ನೀಡುತ್ತಿವೆ‌.

ಈಗ ಅಂತಹುದೇ, ಕೆಲವು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದಂತಹ ಒಂದು ವಿಡಿಯೋ ಈಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದು, ಬಹಳಷ್ಟು ಜನರ ಗಮನವನ್ನು ಕೂಡಾ ತನ್ನತ್ತ ಸೆಳೆಯುತ್ತಿದೆ. ಈ ವಿಡಿಯೋವನ್ನು ನೋಡುವಾಗ ಒಂದು ಕ್ಷಣ ನೋಡುಗನು ಕೂಡಾ ಬೆಚ್ಚಿ ಬೀಳುವಂತಾಗುವ ದೃಶ್ಯ ಇಲ್ಲಿದೆ.‌ ಏಕೆಂದರೆ ನೀರಿನಲ್ಲಿ ಇದ್ದ ಯಾವುದೋ ಒಂದು ಜೀವಿಯನ್ನು ವ್ಯಕ್ತಿಯೊಬ್ಬರು ಕೆಣಕಿ ತರಲೆ ಮಾಡಿದಾಗ, ಅದು ಕೋಪದಿಂದ ಅದು ಹೊರ ಬಂದಾಗಲೇ ಅದೊಂದು ಸಾಮಾನ್ಯ ಜೀವಿಯಲ್ಲ, ಅದು ಭಾರೀ ಗಾತ್ರದ ಅನಕೊಂಡ ಹಾವು ಎಂದು ಅವರ ಅರಿವಿಗೆ ಬಂದು ಭ ಯ ದಿಂದ ಅಲ್ಲಿಂದ ಓಡಿ ಹೋಗಿದ್ದಾರೆ.

ಈ ವೈರಲ್ ವಿಡಿಯೋದಲ್ಲಿ ಗಮನಿಸಿದಾಗ, ಕಾಡಿನಲ್ಲಿ ಒಂದು ನೀರಿನ ಹೊಂಡವೊಂದರಲ್ಲಿ ಹಾವು ನೀರಿನೊಳಗೆ ಇದೆ. ಆದರೆ ಅದು ಹಾವು ಎಂದು ಯಾರಿಗೂ ತಿಳಿಯದಂತೆ ಅದು ಅಲ್ಲಿನ ಪರಿಸರದ ಬಣ್ಣಕ್ಕೆ ಹೊಂದಿಕೊಂಡಿದೆ. ಆ ನೀರಿ‌ನ ಮೂಲದ ಬಳಿಗೆ ಬಂದ ವ್ಯಕ್ತಿಯೊಬ್ಬರು ಬಹುಶಃ ಅದು ಹಾವಲ್ಲ ಎಂದು ತಿಳಿದೋ ಏನೋ, ಒಂದು ಕಡ್ಡಿಯಿಂದ ಅದರ ಬಾಯಿಯ ಭಾಗವನ್ನು ಚು ಚ್ಚು ವ ಮೂಲಕ ಅದನ್ನು ಕೆಣಕುವ ಪ್ರಯತ್ನವನ್ನು ಮಾಡಿದ್ದಾರೆ. ಹಾಗೆ ಅವರು ಒಂದೆರಡು ಬಾರಿ ಕಡ್ಡಿಯಿಂದ ಕೆಣಕಿದರೂ ಕೂಡ ನೀರಿನೊಳಗಿದ್ದ ಜೀವಿ ಏನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಆತ ತನ್ನ ಚೇಷ್ಟೆಗಳನ್ನು ಮುಂದುವರಿಸಿದಾಗ ತಾಳ್ಮೆಯನ್ನು ಕಳೆದುಕೊಂಡಿದೆ. ತಾಳ್ಮೆ ಕಳೆದುಕೊಂಡ ಹಾವು ಕೋಪದಿಂದ ಬುಸುಗುಡುತ್ತಾ, ತನ್ನ ಚೂಪಾದ ಹಲ್ಲುಗಳನ್ನು ತೋರಿಸುತ್ತಾ, ನೀರಿನಿಂದ ಹೊರಗಡೆಗೆ ಬಂದಿದೆ.

ವಿಡಿಯೋ ನೋಡಿ

ಹೀಗೆ ಹೊರಬಂದ ಜೀವಿಯನ್ನು ನೋಡಿದ ವ್ಯಕ್ತಿ ಅದು ಅನಕೊಂಡ ಎಂದು ತಿಳಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ವಿಡಿಯೋವನ್ನು ಈಗಾಗಲೇ ಒಂಬತ್ತು ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸಾವಿರಾರು ಜನರು ಈ ವಿಡಿಯೋಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ ಕೂಡಾ. ಅನೇಕ ಮಂದಿ ನೀರಿನೊಳಗೆ ಹಾವು ಇದೆ ಎಂಬ ಸುಳಿವು ಕೂಡಾ ಸಿಗದಂತೆ ಅಡಗಿ ಕುಳಿತ ಅನಕೊಂಡದ ಬಗ್ಗೆ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ. ಇನ್ನೂ ಕೆಲವರು ಅದನ್ನು ಕೆಣಕಿದವನ ಅದೃಷ್ಟ ಚೆನ್ನಾಗಿತ್ತು ಎಂದಿದ್ದಾರೆ. ಇನ್ನು ಕೆಲವರು ಹಾವು ನೀರಿನಿಂದ ತನ್ನ ತಲೆ ಎತ್ತಿ ಇನ್ನೊಮ್ಮೆ ಕೆಣಕುವ ಪ್ರಯತ್ನ ಮಾಡು ನೋಡೋಣ ಎಂದು ಆ ವ್ಯಕ್ತಿಗೆ ಎಚ್ಚರಿಕೆಯನ್ನು ಆತನಿಗೆ ನೀಡಿದೆ ಎಂದು ಕೂಡ ಕೂಡ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.