ಭಿಕ್ಷುಕನಂತೆ ರಸ್ತೆಯಲ್ಲಿ ಬದುಕುತ್ತಿದ್ದ ವ್ಯಕ್ತಿ ತಲೆಗೂದಲು ಕತ್ತರಿಸಿ, ಗಡ್ಡ ತೆಗೆದ ಮೇಲೆ ಬದಲಾಗಿ ಹೋಯ್ತು ಆತನ ಅದೃಷ್ಟ
ಸೋಷಿಯಲ್ ಮೀಡಿಯಾಗಳ ಬಗ್ಗೆ ಅನೇಕ ಸಲ ಅನೇಕರು ಇದರಿಂದ ತೊಂದರೆಗಳೇ ಹೆಚ್ಚು ಎನ್ನುವರು. ಬಳಸುವಾಗ ತಾವು ಮಾಡುವು ತಪ್ಪುಗಳಿಂದ ಮಾಡಿದ ತಪ್ಪುಗಳಿಗೆ ಕಡೆಗೆ ಸೋಶಿಯಲ್ ಮೀಡಿಯಾಗಳನ್ನು ನಿಂ ದಿ ಸಿ ಸುಮ್ಮನಾಗಿ ಬಿಡುತ್ತಾರೆ. ಆದರೆ ಆಗಾಗ ಸೋಷಿಯಲ್ ಮೀಡಿಯಾಗಳಿಂದ ಕೂಡಾ ಅನೇಕ ಸಂದರ್ಭಗಳಲ್ಲಿ ಅನೇಕರಿಗೆ ಹಲವು ವಿಧದಲ್ಲಿ ಸಹಾಯವಾದಂತಹ ಸುದ್ದಿಗಳು ಬಂದಾಗ ಮಾತ್ರ ಅವುಗಳನ್ನು ತೆಗಳುವವರು ತೆಪ್ಪಗಿದ್ದು ಬಿಡುತ್ತಾರೆ. ಇಂದು ನಾವು ಕೂಡಾ ನಿಮಗೆ ಸೋಶಿಯಲ್ ಮೀಡಿಯಾಗಳಿಂದ ಹೇಗೆ ಒಬ್ಬ ವ್ಯಕ್ತಿಯ ಜೀವನ ಮತ್ತೆ ಅರಳಿತು, ತನ್ನವರನ್ನು ಆತ ಹೇಗೆ ಸೇರಲು ನೆರವಾಯಿತು ಎನ್ನುವುದನ್ನು ತಿಳಿಸುತ್ತೇವೆ. ಓದಿದ ಮೇಲೆ ತಪ್ಪದೇ ನೀವು ಕೂಡಾ ಒಂದು ಮೆಚ್ಚುಗೆ ನೀಡದೇ ಇರಲಾರಿರಿ.
ಬ್ರೆಜಿಲ್ ನಲ್ಲಿ ಒಬ್ಬ ವ್ಯಕ್ತಿ ಕಳೆದ ಒಂದು ದಶಕದಿಂದ ಕೂಡಾ ಮನೆ ಇಲ್ಲದವರಂತೆ ರಸ್ತೆ ಬದಿಗಳಲ್ಲಿ ಬದುಕುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಇಂಟರ್ನೆಟ್ ನ ಫಲವಾಗಿ ಈ ವ್ಯಕ್ತಿ ತಮ್ಮ ತಾಯಿ ಮತ್ತು ಸಹೋದರಿಯನ್ನು ಮತ್ತೆ ನೋಡುವಂತೆ, ಮರಳಿ ತನ್ನ ಮನೆಯನ್ನು ಸೇರುವಂತೆ ಆಗಿದೆ. ಹೌದು ಭಿ ಕ್ಷು ಕನಂತೆ ಬದುಕುತ್ತಿದ್ದ ಈ ವ್ಯಕ್ತಿಯ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ವರ್ಷಗಳಿಂದಲೂ ಕೂಡಾ ಮಗ ಬದುಕಿಲ್ಲವೆಂದು ತಿಳಿದಿದ್ದ ತಾಯಿಗೆ ತನ್ನ ಮಗನನ್ನು ಮತ್ತೆ ನೋಡಲು ಸಾಧ್ಯವಾಗಿದ್ದು, ಆಕೆ ಫೋಟೋಗಳಲ್ಲಿರುವ ವ್ಯಕ್ತಿ ತನ್ನ ಮಗನೆಂದು ಗುರುತಿಸಿದ್ದಾರೆ. ಹಾಗಾದರೆ ಇದು ಆಗಿದ್ದು ಹೇಗೆ ಎಂದು ತಿಳಿಯೋಣ ಬನ್ನಿ.
ಬ್ಯುಸಿನೆಸ್ ಮ್ಯಾನ್, ಮೆನ್ಸ್ ಫ್ಯಾಷನ್ ಸ್ಟೋರ್ ಹಾಗೂ ಬಾ ರ್ಬ ರ್ ಸರ್ವೀಸ್ ನ ಮಾಲೀಕ ಎಲೆಸೆಂಡ್ರೋ ಲೋಬೋ ಅವರು ಜೋವಾವೋ ಕೊಯೆಲ್ಹೋ ಗುಯ್ಮಾರೆಸ್ ಅನ್ನು ರಸ್ತೆಯೊಂದರಲ್ಲಿ ನೋಡಿದಾಗ ಮೊದಲು ಆತನಿಗೆ ಹಸಿವಾಗಿದೆಯಾ? ಎಂದು ಕೇಳಿದ್ದಾರೆ. ಆತನಿಗೆ ಆಹಾರವನ್ನು ಕೊಡಿಸಲು ಅವರು ಪ್ರಯತ್ನ ಪಟ್ಟಾಗ ಜೋವಾವೋ ತನಗೆ ಊಟ ಬೇಡ ಎಂದಿದ್ದಾರೆ. ಅಲ್ಲದೇ ತನ್ನ ಗಡ್ಡವನ್ನು ಟ್ರಿಮ್ ಮಾಡುವಂತೆ ಆತ ಲೋಬೋ ಅವರ ಬಳಿ ಮನವಿ ಯನ್ನು ಮಾಡಿಕೊಂಡಿದ್ದಾರೆ. ಲೋಬೋ ಅವರು ಕೇವಲ ಗಡ್ಡವನ್ನು ಟ್ರಿಮ್ ಮಾಡುವುದು ಮಾತ್ರವೇ ಅಲ್ಲದೇ ಆತನಲ್ಲಿ ಒಂದು ಟ್ರಾನ್ಸಫರ್ಮೇಶನ್ ಮಾಡಲು ನಿರ್ಧಾರವನ್ನು ಮಾಡಿದ್ದಾರೆ.
ಹೀಗೆ ಲೋಬೋ ಅವರು ಜೋವಾವೋ ಗೆ ಒಂದು ಹೊಸ ಲುಕ್ ನೀಡಲು ನಿರ್ಧರಿಸಿದ ನಂತರ ಇಷ್ಟು ದಿನ ಕಾಣದ ಒಂದು ಅಂದವಾದ ಲುಕ್ ಪಡೆದುಕೊಂಡರು ಜೋವಾವೋ. ಲೋಬೋ ಅವರು ಜೋವಾವೋ ನ ಮೇಕ್ ಓವರ್ ಗಿಂತ ಮೊದಲು ರಸ್ತೆಯಲ್ಲಿದ್ದಾಗ ಹೇಗಿದ್ದ ಎನ್ನುವ ಫೋಟೋ ಹಾಗೂ ಟ್ರಾನ್ಸಫಾರ್ಮೇಶನ್ ನಂತರದ ಫೋಟೋ ವನ್ನು ಬಿಫೋರ್ ಮತ್ತು ಆಫ್ಟರ್ ಎಂದು ಕೊಲೇಜ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆದ ಮೇಲೆ ಆತನ ಕುಟುಂಬದವರು ಅವರನ್ನು ಗುರುತಿಸಿ ಜೋವಾವೋವನ್ನು ಹುಡುಕಿ ಬಂದಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಕೂಡಾ ಆತನ ತಾಯಿ ಹಾಗೂ ತಂಗಿಗೆ ಜೋವಾವೋ ಕುರಿತಾದ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಎನ್ನಲಾಗಿದೆ. ಬಹುಶಃ ಆತ ಸ ತ್ತಿ ರ ಬೇಕು ಎಂದು ಅವರು ಇಷ್ಟು ದಿನ ನಂಬಿ ಹುಡುಕುವ ಪ್ರಯತ್ನ ಮಾಡಿರಲಿಲ್ಲ. ಆದರೆ ವೈರಲ್ ಫೋಟೋವನ್ನು ನೋಡಿದಾಗ ಜೋವಾವೋ ಅವರ ತಾಯಿ ಮಗನನ್ನು ನೋಡಿದಾಗಲೇ ಮಗ ಜೀವಂತವಾಗಿಯೇ ಇದ್ದಾನೆ ಎಂದು ತಿಳಿದು ಬಂದಿದ್ದು, ಡಿಸೆಂಬರ್ 17 ರಂದು ಅವರು ಗೊಯಾನಿಯಾ ನಗರಕ್ಕೆ ಬಂದಿದ್ದಾರೆ. ಲೋಬೋ ಅವರು ಕ್ರಿಸಮಸ್ ಸಂದರ್ಭದಲ್ಲಿ ನಾವು ಒಂದು ಉತ್ತಮ ಕಾರ್ಯವನ್ನು ಮಾಡಲು ಇಂತಹ ಪ್ರಯತ್ನ ಮಾಡಿದ್ದೆವು. ಆದರೆ ಅವರ ಈ ಪ್ರಯತ್ನದ ಪರಿಣಾಮ ಹೀಗಿರುತ್ತದೆ ಎಂದು ಊಹಿಸಿರಲಿಲ್ಲ ಎಂದಿದ್ದಾರೆ.