‘ಈ’ ಕಾರಣದಿಂದ ದೀಪಿಕಾ ತನ್ನ ತಾಯಿಯನ್ನೇ ಮನೆಯಿಂದ ಆಚೆ ತಳ್ಳಲು ಬಯಸಿದ್ದರು; ತಂದೆ ಮತ್ತು ತಂಗಿಗೂ ಸಾಕಾಗಿ ಹೋಗಿತ್ತು..
ದೀಪಿಕಾ ಪಡುಕೋಣ ಮೂಲತಃ ಕನ್ನಡದವರಾದ ಇವರು ಬಾಲಿವುಡ್ ನಲ್ಲಿ ಒಂದೇ ದಶಕದ ಅವಧಿಯಲ್ಲಿ ಬೇಗನೆ ಯಶಸ್ಸಿನ ಏಣಿಯನ್ನು ಹತ್ತಿದವರು. ಶಾಹರುಕ್ ಖಾನ್ ಅವರ ಜೊತೆಗಿನ ಮೊದಲ ಚಿತ್ರ ‘ಓಂ ಶಾಂತಿ ಓಂ’ ಒಮ್ಮೆಲೆ ಅವರಿಗೆ ಸ್ಟಾರ್ ಳನ್ನಾಗಿ ಮಾಡಿತು.
ಇತ್ತೀಚೆಗೆ ದೀಪಿಕಾಳು ರಣವೀರ್ ಸಿಂಗ್ ಅವರ ಜೊತೆಗೆ ಮದುವೆಯಾಗಿ ತಮ್ಮ ವೈವಾಹಿಕ ಜೀವನವನ್ನು ಶುರುಮಾಡಿದರು.
ದೀಪಿಕಾ ಅವರು ತಮ್ಮ ಕುಟುಂಬಕ್ಕೆ ತುಂಬಾ ಮಹತ್ವ ನೀಡುತ್ತಾರೆ. ತಮ್ಮ ಕುಟುಂಬದ ಮೇಲೆ ಅಪಾರವಾದ ಪ್ರೀತಿಯು ಇದೆ. ಅನೇಕ ಸಲ ಅವರು ಅವಾರ್ಡ್ ನೀಡುವ ಫಂಕ್ಷನ್ ಗಳಲ್ಲಿ ತಮ್ಮ ಮನೆಯ ಸದಸ್ಯರನ್ನು ನೆನಪಿಸಿಕೊಂಡು ಹಾಗೂ ಅವರು ನೀಡಿದ ಬೆಂಬಲಕ್ಕಾಗಿ ಕಣ್ಣೀರನ್ನು ತೆಗೆದಿದ್ದಾರೆ.

ಇಷ್ಟಿದ್ದರೂ ದೀಪಿಕಾ ಅವರ ಬಗ್ಗೆ ವಿಶೇಷವಾದ ಸುದ್ದಿಯೊಂದು ಹೊರಬಿದ್ದಿದೆ. ಈ ವಿಶೇಷ ಸುದ್ದಿಯನ್ನು ದೀಪಿಕಾ ಅವರ ತಾಯಿಯೇ ಹೊರಗೆ ಹಾಕಿದ್ದಾರೆ. ದೀಪಿಕಾ ಅವರ ಕುಟುಂಬದಲ್ಲಿ ತಂದೆ, ತಾಯಿ ಮತ್ತು ತಂಗಿ ಹೀಗೆ ಒಟ್ಟು ನಾಲ್ಕು ಜನರು ಸದಸ್ಯರಿದ್ದಾರೆ.
ತಂದೆಯು ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ ಮತ್ತು ತಾಯಿ ಗ್ರಹಣಿಯಾಗಿದ್ದಾರೆ. ಇತ್ತೀಚೆಗೆ ದೀಪಿಕಾ ಅವರ ತಾಯಿ ಉಜ್ವಲಾ ಅವರು ತಮ್ಮ ಒಂದು ಸಂದರ್ಶನದಲ್ಲಿ ದೀಪಿಕಾ ಅವರ ಬಗೆಗಿನ ಶಾಕಿಂಗ್ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಎರಡು ಮಕ್ಕಳು ತಮ್ಮನ್ನು ಹೇಗೆ ಹೊರಗೆ ತೆಗೆಯಬೇಕೆಂದು ಯೋಚಿಸುತ್ತಿದ್ದರು ಎಂಬುದರ ಬಗ್ಗೆ ಮಾಹಿತಿಯೊಂದನ್ನು ಶೇರ್ ಮಾಡಿದ್ದಾರೆ.
ಇದಕ್ಕೆ ಕಾರಣ ದೀಪಿಕಾ ತಾಯಿ ಉಜ್ವಲಾ ಅವರು ತಮ್ಮ ಶಿಕ್ಷಣವನ್ನು ಬ್ರಿಟಿಷ್ ಬೋರ್ಡಿಂಗ್ ಸ್ಕೂಲ್ ನಲ್ಲಿ ಪಡೆದುಕೊಂಡಿದ್ದಾರೆ. ಹೀಗಾಗಿ ಅವರು ಜೀವನದಲ್ಲಿ ತುಂಬಾ ಶಿಸ್ತಿಗೆ ಮಹತ್ವ ನೀಡಿದವರಾಗಿದ್ದಾರೆ. ಇದನ್ನೇ ಅವರು ತಮ್ಮ ಮನೆಯಲ್ಲಿಯೂ ಅನುಕರಿಸುತ್ತಿದ್ದರು.
ನಾನು ತುಂಬಾ ಕಠೋರ ನಿಯಮಗಳೊಂದಿಗೆ ಜನಿಸಿದೆ. ಮತ್ತು ತುಂಬಾ ಶಿಸ್ತಿನಲ್ಲಿ ದೊಡ್ಡವಳಾಗಿದ್ದೇನೆ. ಇದೇ ಶಿಸ್ತನ್ನು ನಾನು ಮನೆಯಲ್ಲಿಯೂ ಫಾಲೋ ಮಾಡಲು ಒತ್ತಾಯಿಸುತ್ತಿದ್ದೆ. ಇದು ನನ್ನ ಪತಿ ಮತ್ತು ಮಕ್ಕಳಿಗೆ ಇಷ್ಟವಾಗುತ್ತಿರಲಿಲ್ಲ. ಆದ್ದರಿಂದ ನನ್ನನ್ನು ಮನೆಯಿಂದ ಆಚೆ ಕಳುಹಿಸಬೇಕೆಂಬ ವಿಚಾರ ನಡೆದಿತ್ತು. ಎಂದು ಉಜ್ವಲಾ ಅವರು ತಮ್ಮ ಮಗಳಾದ ದೀಪಿಕಾಳ ಬಗ್ಗೆ ವಿಷಯವನ್ನು ಹೇಳಿದ್ದಾರೆ.

ಹಾಗೆ ನೋಡಲಾಗಿ ದೀಪಿಕಾ ಅವರು ತಮ್ಮ ತಾಯಿಯನ್ನು ತುಂಬಾ ಪ್ರೀತಿಸುತ್ತಾರೆ. ಆದರೆ ತಮ್ಮ ತಾಯಿ ಅತಿಯಾದ ಶಿಸ್ತು ಮಾತ್ರ ಅವರಿಗೆ ಇಷ್ಟವಾಗುವುದಿಲ್ಲವಂತೆ. ಬಹುಶಃ ಆದ್ದರಿಂದಲೇ ಶಿಸ್ತಿನ ನಿಯಮಗಳಿಗೆ ಬೇಸತ್ತು ಶಿಸ್ತು ಕಲಿಸುವವರನ್ನೇ ಮನೆಯಿಂದ ಆಚೆ ಹಾಕುವ ಪ್ಲಾನ್ ದೀಪಿಕಾ ಮಾಡಿರಬಹುದು.