OMG! “ಕಟ್ ಯಾಕೆ ಹೊಡೆದೆ” ಎಂದು ಕೇಳಿದ್ದಕ್ಕೆ ಬೈಕ್ ಸವಾರನನ್ನು ಉಡಾಯಿಸಿದ ಆಟೋ ಚಾಲಕ; ಬೆ-ಚ್ಚಿ ಬೀಳಿಸುವ Video ವೈರಲ್
ಮುಂಬಯಿ:- ಕೆಲವೊಮ್ಮೆ ಅತಿ ಚಿಕ್ಕ ವಿಷಯಗಳ ಮೇಲಿಂದ ಪ್ರಾರಂಭವಾದ ಜಗಳವು ಜೀವ ಕಳೆದುಕೊಳ್ಳುವವರೆಗೂ ಹೋಗುತ್ತದೆ. ಒಮ್ಮೆ ಕೈಯಿಂದ ಅನಾಹುತ ಘಟಿಸಿದ ನಂತರ ಮುಂದೆ ಎಷ್ಟು ಪಶ್ಚಾತ್ತಾಪಪಟ್ಟರೂ ಅದರಿಂದ ಯಾವುದೇ ಲಾಭವಾಗುವದಿಲ್ಲ. ಬದಲಾಗಿ ಮನಸ್ಸಿಗೆ ನೋವು ಅಥವಾ ದುಃಖವೇ ಆಗುವುದು.
ಯಾವುದೇ ವ್ಯಕ್ತಿಗೆ ಮುಂಬರುವ ಕ್ಷಣ ಯಾವ ರೀತಿಯಾಗಿದೆ ಎನ್ನುವುದು ತಿಳಿದುಬರುವುದಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಮುಂಬೈಯಲ್ಲಿಯ ಒಂದು ಅಪಘಾತದ ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಇಲ್ಲಿಯ ಒಂದು ಮಹಾಮಾರ್ಗದ ಮೇಲೆ ಹೋಗುತ್ತಿರುವಾಗ ರಿಕ್ಷಾ ಚಾಲಕ ಹಾಗೂ ಬೈಕ್ ಸವಾರನ ಮಧ್ಯದಲ್ಲಿ ಮಾತಿನ ಚಕಮಕಿ ನಡೆದಿದೆ. ಅದಾದ ನಂತರ ಬೈಕ್ ಸವಾರ ತನ್ನಷ್ಟಕ್ಕೆ ತಾನು ಬೈಕ್ ನಡೆಸುತ್ತಾ ಹೋಗುತ್ತಿರುವಾಗ ಅದೇ ರಿಕ್ಷಾ ಚಾಲಕ ಬೈಕ್ ಸವಾರನ ಹಿಂದಿನಿಂದ ಹೋಗಿ ಆತನಿಗೆ ಅಪಘಾತಕ್ಕೀಡು ಮಾಡಿ ಹತ್ಯೆಯನ್ನೆ ಮಾಡಬೇಕೆಂಬ ಉದ್ದೇಶದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋದಲ್ಲಿ ರಿಕ್ಷಾ ಚಾಲಕನಿಗೆ ಬೈಕ್ ಸವಾರನು ಕಟ್ ಹೊಡೆದ ಕಾರಣಕ್ಕಾಗಿ ಸವಾಲು ಮಾಡಿದ್ದಾನೆ. ಇದರಿಂದ ಇಬ್ಬರಲ್ಲಿ ಮಾತಿನ ಚಕಮಕಿ ನಡೆದಿದೆ. ಜಗಳವಾದ ನಂತರ ಇಬ್ಬರು ತಮ್ಮಷ್ಟಕ್ಕೆ ತಾವು ಮುಂದೆ ಸಾಗುತ್ತಿರುವಾಗ ರಿಕ್ಷಾ ಚಾಲಕನು ಕೋಪದಲ್ಲಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳುವಂತೆ ಮಾಡಿದ್ದಾನೆ. ರಿಕ್ಷಾ ಚಾಲಕನ ಈ ಕೃತ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲ ಇದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಸಹ ಆಗಿದೆ.
ರಿಕ್ಷಾ ಚಾಲಕನು ಮಾಡಿದ ಈ ಕೃತ್ಯವು ಬೇಕೆಂತಲೆ ಮಾಡಿದ ಕೃತ್ಯವಾಗಿದ್ದು ಕ್ಯಾಮರಾದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಆದರೆ ಇಲ್ಲಿ ಬೈಕ್ ಸವಾರನ ಅದೃಷ್ಟವು ತುಂಬಾ ಚೆನ್ನಾಗಿತ್ತು. ಏಕೆಂದರೆ ರಸ್ತೆಯ ಮೇಲೆ ಬಿದ್ದಾಗ ಹಿಂದೆ ಯಾವುದೇ ರೀತಿಯ ವಾಹನವಿರಲಿಲ್ಲ. ಒಂದು ವೇಳೆ ವಾಹನವಿದ್ದರೆ ಈತನ ಪರಿಸ್ಥಿತಿ ತುಂಬಾ ಗಂಭೀರವಾಗಿ ಇರುತ್ತಿತ್ತು. ರಿಕ್ಷಾ ಚಾಲಕ ಈ ರೀತಿ ಧಕ್ಕೆ ಕೊಟ್ಟದ್ದು ಆತನಿಂದ ಸೇಡುತೀರಿಸಿಕೊಳ್ಳಲು ಎಂಬುದು ವಿಡಿಯೋ ನೋಡಿದಾಗ ಗೊತ್ತಾಗುತ್ತದೆ. ಈ ಘಟನೆ 17 ಡಿಸೆಂಬರ್ ನಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮುಂಬೈಯಲ್ಲಿ ನಡೆದಿದೆ.
ವಿಡಿಯೋ ನೋಡಿ
कट मारल्याचा जाब विचारणाऱ्या बाईकस्वाराला मुजोर रिक्षाचालकानं उडवलं, पाहा मुंबईतील अंगावर शहारे आणणारा थरारक VIDEO pic.twitter.com/TtZ3oA4TRv
— Manoj Khandekar (@manojkhandekar) December 24, 2020
ಈ ವಿಡಿಯೋ ವೈರಲ್ ಆಗುವುದರ ಜೊತೆಗೆ ವಿಡಿಯೋವನ್ನು ನೋಡಿದ ನೆಟ್ಟಿಗರು ರಿಕ್ಷಾ ಚಾಲಕನ ಮೇಲೆ FIR ದಾಖಲಿಸಬೇಕು, ಮತ್ತು ಆತನಿಗೆ ಪೊಲೀಸರ ಮುಖಾಂತರ ತಕ್ಕ ಬುದ್ಧಿ ಕಲಿಸಬೇಕೆಂದು ಡಿಮಾಂಡ್ ಮಾಡುತ್ತಿದ್ದಾರೆ. ಸದ್ಯ ಮುಂಬೈ ಪೊಲೀಸರು ಆಟೋ ನಂಬರ್ ಗುರುತಿಸಿದ್ದು ಅದರ ಮಾಲಿಕನಿಗಾಗಿ ಪತ್ತೆ ಹಚ್ಚುತ್ತಿದ್ದಾರೆ.