Video: ಅಬ್ಬಾ! ಎತ್ತಿನ ಗಾಡಿಗೆ ಮಾಡಿದರು ಎಂಬೆಸೆಡರ್ ಕಾರು! ಆನಂದ್ ಮಹಿಂದ್ರಾ ಅಂತಾರೆ…
ಸಾಮಾನ್ಯವಾಗಿ ಏನಾದರೂ ಒಂದು ವಿಭಿನ್ನವಾದ ಕೆಲಸವನ್ನು ಮಾಡಿದಾಗ ಅದು ಜನರ ಕಣ್ಣನ್ನು ತನ್ನತ್ತ ಸೆಳೆಯುತ್ತದೆ, ಅದರಲ್ಲೂ ಮಾಡುವ ಕೆಲಸ ವಿಚಿತ್ರವಾಗಿದೆ ಎಂದರೆ ಮುಗಿಯಿತು ಇಂದು ಸೋಶಿಯಲ್ ಮೀಡಿಯಾಗಳ ಪರಿಣಾಮವಾಗಿ ಅವು ಸಿಕ್ಕಾಪಟ್ಟೆ ವೈರಲ್ ಆಗಿ ಪಬ್ಲಿಸಿಟಿ ಕೂಡಾ ಸಿಕ್ಕಿ ಬಿಡುತ್ತದೆ. ನಮ್ಮಲ್ಲಿ ಏನೂ ಕೆಲಸಕ್ಕೆ ಬಾರದ ವಸ್ತುಗಳು ಎನ್ನುವಂತವನ್ನು ಕೂಡಾ ಬಳಸಿಕೊಂಡು ವಿಚಿತ್ರವಾಗಿ ಏನಾದರೊಂದು ಸಿದ್ಧಪಡಿಸಿದರೆ ಅದನ್ನು ಇದೆಂತ ಜುಗಾಡ್ ಎನ್ನುವ ಪದ ಹೆಚ್ಚು ಬಳಕೆಗೆ ಬರುತ್ತಿದೆ. ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಕೆಲಸಕ್ಕೆಬಾರದ ವಸ್ತುವನ್ನು ಕೂಡ ಯಾವುದೋ ಒಂದು ರೀತಿಯಲ್ಲಿ ಬಹಳ ಆಕರ್ಷಕ ಆಗಿರುವಂತೆ ಬಳಸಿಕೊಳ್ಳುವಂತಹ ಕಲೆ ಅದಾಗಿರುತ್ತದೆ. ಭಾರತೀಯರು ಈ ಕೆಲಸದಲ್ಲಿ ಬಹಳ ನಿಪುಣತೆಯನ್ನು ಪಡೆದಿದ್ದಾರೆ ಎಂದು ಹೇಳಬಹುದು. ಯಾವುದೇ ಕೆಲಸ ಇರಬಹುದು ಅಥವಾ ಕೆಲಸ ಇಲ್ಲದೇ ಇರಬಹುದು, ಆದರೆ ಕೆಲವರು ಏನಾದರೊಂದು ವಿಚಿತ್ರವಾಗಿ ಮಾಡುವುದು ಮಾತ್ರ ಹವ್ಯಾಸ ಮಾಡಿಕೊಂಡಿರುತ್ತಾರೆ.
ನಮ್ಮ ದೇಶದಲ್ಲಿ ಆಗಾಗ ಇಂತಹ ವಿಷಯಗಳು ಬಹಳ ಬೇಗ ಸುದ್ದಿ ಮಾದ್ಯಮಗಳಲ್ಲಿ ಪ್ರಸಾರವಾಗಿ ಎಲ್ಲರ ಗಮನವನ್ನು ಸೆಳೆದು ಬಿಡುತ್ತದೆ. ಈಗ ಕೂಡಾ ಅಂತಹದೇ ಒಂದು ಜುಗಾಡ್ ಎಲ್ಲರ ಗಮನವನ್ನು ತನ್ನ ಕಡೆ ಸೆಳೆದುಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾ ಗಳಲ್ಲಿ ಒಂದು ಎತ್ತಿನಗಾಡಿಯ ವೀಡಿಯೋ ಬಹಳ ವೈರಲ್ ಆಗುತ್ತಿದೆ, ಹಿಂದೆಂದೂ ಕೂಡಾ ನೀವು ಇಂತಹ ಒಂದು ಎತ್ತಿನ ಗಾಡಿ ಯನ್ನು ನೋಡಿರಲು ಸಾಧ್ಯವೇ ಇಲ್ಲ ಎಂದು ನಾವು ಖಚಿತವಾಗಿ ಹೇಳಬಲ್ಲೆವು. ಏಕೆಂದರೆ ಇದೊಂದು ಕಲ್ಪನೆಗೆ ಮೀರಿದಂತಹ, ಕಣ್ಣೆದುರಿಗೆ ಇಂತಹ ಎತ್ತಿನಗಾಡಿ ಬರುತ್ತದೆ ಎಂದು ಯಾರೂ ಊಹೆ ಕೂಡಾ ಮಾಡಿರದ ಮಾದರಿಯ ಎತ್ತಿನ ಗಾಡಿಯಾಗಿದೆ.
ಈ ವಿಚಿತ್ರವಾದ ಎತ್ತಿನ ಗಾಡಿಯ ವಿಡಿಯೋವನ್ನು ಉದ್ಯಮಿ ಆನಂದ ಮಹೀಂದ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರು ಶೇರ್ ಮಾಡಿದ ವಿಡಿಯೋ ವೈರಲ್ ಆಗಿದ್ದು ಇದನ್ನು ನೋಡಿದ ನೆಟ್ಟಿಗರು ಇಂತಹವನ್ನೆಲ್ಲಾ ನಮ್ಮ ದೇಶದಲ್ಲಿ ಮಾತ್ರವೇ ನೋಡಲು ಸಾಧ್ಯ ಎನ್ನುವ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ವಿಡಿಯೋದಲ್ಲಿ ನಾವು ಒಂದು ಎತ್ತಿನಗಾಡಿಯನ್ನು ನೋಡಬಹುದಾಗಿದ್ದು, ಕರ್ನಾಟಕದಲ್ಲಿ ಈ ಸನ್ನಿವೇಶ ನಡೆದಿದ್ದು ಇಲ್ಲಿ ಎತ್ತಿನ ಗಾಡಿಯನ್ನು ಸಿದ್ಧಪಡಿಸಿದ ವ್ಯಕ್ತಿ ಅದಕ್ಕೆ ಅಂಬಾಸಿಟರ್ ಕಾರಿನ ಲುಕ್ ಅನ್ನು ನೀಡಿದ್ದಾರೆ. ಹಿಂದೆಯಿಂದ ನೋಡಿದಾಗ ಅಕ್ಷರಶಃ ಇದು ಕಾರಿನಂತೆ ಕಾಣುತ್ತದೆ. ಆದರೆ ಮುಂಭಾಗದಲ್ಲಿ ಎರಡು ಎತ್ತುಗಳನ್ನು ಕಟ್ಟಲಾಗಿದೆ.
ಹಿಂದಿನಿಂದ ಬರುವವರಿಗೆ ಈ ಎತ್ತಿನ ಗಾಡಿ ಕಾರೇ ಎನಿಸಬಹುದು ಹಾಗೆ ಅಂದು ಕೊಂಡು ಮುಂದೆ ಬಂದಾಗ ಅವರಿಗೆ ಪೆಟ್ರೋಲ್ ಡೀಸಲ್ ಇಂಜಿನಿನ ಕಾರಲ್ಲ, ಬದಲಿಗೆ ಎತ್ತುಗಳು ಎಳೆಯುವ ಎತ್ತಿನಗಾಡಿ ಎಂದು ತಿಳಿದುಬರುತ್ತದೆ. ಆನಂದ್ ಮಹಿಂದ್ರಾ ಅವರು ಡಿಸೆಂಬರ್ 23 ರಂದು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ಶೀರ್ಷಿಕೆಯಲ್ಲಿ ಅವರು, ಮಸ್ಕ್ ಮತ್ತು ಟೆಸ್ಲಾ ಕಂಪನಿಗಳು ಕೂಡಾ ಅತಿ ಕಡಿಮೆ ವೆಚ್ಚದ ನವೀಕರಣಗೊಳಿಸಬಹುದಾದ ಇಂಧನವನ್ನು ಒಳಗೊಂಡ ಈ ಕಾರಿಗೆ ಸ್ಪರ್ಧೆ ನೀಡುವುದು ಅಸಾಧ್ಯವೆನಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 2 ಲಕ್ಷ 88 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ.
ವಿಡಿಯೋ ನೋಡಿ
I don’t think @elonmusk & Tesla can match the low cost of this renewable energy-fuelled car. Not sure about the emissions level, though, if you take methane into account… pic.twitter.com/C7QzbEOGys
— anand mahindra (@anandmahindra) December 23, 2020
ಸುಮಾರು 22 ಸಾವಿರ ದಾಟಿದ ಲೈಕ್ ಗಳನ್ನು ಈ ವೀಡಿಯೋ ಪಡೆದುಕೊಂಡಿದೆ. ಅನೇಕ ಮಂದಿ ಈ ವಿಡಿಯೋವನ್ನು ರೀಟ್ವೀಟ್ ಕೂಡಾ ಮಾಡಿದ್ದಾರೆ. 50 ಸೆಕೆಂಡುಗಳ ಈ ವಿಡಿಯೋದಲ್ಲಿ ಮೊದಲಿಗೆ ಎತ್ತುಗಳುವಕಾಣಿಸಿಕೊಳ್ಳುತ್ತವೆ. ಅನಂತರ ಎತ್ತುಗಳನ್ನು ಹಿಂದೆ ಅಂಬಾಸಿಡರ್ ಕಾರಿನ ಮಾದರಿಯಲ್ಲಿ ನಿರ್ಮಾಣ ಮಾಡಿರುವ ಬಂಡಿಗೆ ಕಟ್ಟಿರುವುದು ಕಾಣುತ್ತದೆ. ವುಡ್ ನಲ್ಲಿ ಅಂಬಾಸಿಡರ್ ಕಾರಿನ ಮಾದರಿಯನ್ನು ಹೋಲುವಂತೆ ಎತ್ತಿನ ಗಾಡಿಯ ಹಿಂಭಾಗವನ್ನು ನಿರ್ಮಿಸಿದ ಆ ವ್ಯಕ್ತಿಯು ಯಾರೇ ಆಗಲೀ ಆತನ ಕಲಾ ಕೌಶಲ್ಯವನ್ನು ಪ್ರತಿಯೊಬ್ಬರೂ ಕೂಡಾ ಮೆಚ್ಚಲೇಬೇಕು ಎನ್ನುವ ಹಾಗಿದೆ ಈ ಎತ್ತಿನ ಗಾಡಿ.