ಮುದುಕನ ಕೈಲಿದ್ದ ಹಣದ ಬ್ಯಾಗ್ ಕಸಿದುಕೊಂಡ ಮಂಗ, ಮರವೇರಿ ಎಸೆಯಿತು ಗಾಳಿಯಲ್ಲಿ 500 ರ ನೋಟುಗಳನ್ನು

ಕೋತಿ ಚೇಷ್ಟೆ ಎನ್ನುವ ಪದರವನ್ನು ನಾವು ಕೇಳಿಯೇ ಇದ್ದೇವೆ. ಯಾರಾದರೂ ಸುಮ್ಮನೆ ಕೀಟಲೆ ಮಾಡುತ್ತಾ ನಮಗೆ ತೊಂದರೆಯನ್ನು ನೀಡಿದರೆ ಆಗ ನಾವು ಬಳಸುವ ಪದ ಕಪಿ ಚೇಷ್ಟೆಯನ್ನು ಮಾಡುವುದು ನಿಲ್ಲಿಸು ಎಂದು. ಈ ಮಾತು ಹೇಗೆ ಬಂದಿತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಎನಿಸುತ್ತದೆ.‌ ಮಂಗಗಳು ಕೆಲವೊಮ್ಮೆ ಮಾಡುವ ಚೇಷ್ಟೆಗಳು ನಿಜಕ್ಕೂ ಅಷ್ಟಿಷ್ಟಲ್ಲಾ ಬಹಳಷ್ಟು ಅವಾಂತರವನ್ನೇ ಸೃಷ್ಟಿಸಿ ಬಿಡುತ್ತದೆ ಮಾತ್ರವಲ್ಲದೇ ಜನರು ಪರದಾಡುವ ಪರಿಸ್ಥಿತಿ ಎದುರಾಗಿ ಬಿಡುತ್ತದೆ. ಕೆಲವೊಮ್ಮೆ ಮಂಗಗಳು ಮನೆಯ ಮೇಲೆ ಒಣಗಿ ಹಾಕಿರುವ ಬಟ್ಟೆಗಳನ್ನು ಎತ್ತಿಕೊಂಡು ಹೋಗುವುದು, ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಹೋಗುವುದು ಇವೆಲ್ಲಾ ಕೂಡಾ ಎಲ್ಲರ ಅನುಭವಗಳಿಗೆ ಬಂದಿರುತ್ತದೆ.

ಆದರೆ ಈ ಚೇಷ್ಟೆಗಳನ್ನು ನೋಡಿದಾಗ ಕೆಲವೊಮ್ಮೆ ಕೋಪ ಬಂದರೂ ಅನಂತರ ಅದು ಸಾಮಾನ್ಯ ಎನಿಸಿಬಿಡುತ್ತದೆ‌. ಹೀಗೆ ಸಣ್ಣ ಪುಟ್ಟ ಚೇಷ್ಟೆಗಳನ್ನು ಮಾಡುವ ಮಂಗವೊಂದು ತನಗೇ ತಾನು ಎತ್ತಿಕೊಂಡು ಹೋಗುತ್ತಿರುವ ವಸ್ತು ಏನೆಂದು ತಿಳಿಯದೇ ಲಕ್ಷಗಟ್ಟಲೆ ಹಣವಿರುವ ಬ್ಯಾಗನ್ನೇ ಹೊತ್ತು ಕೊಂಡು ಹೋದರೆ ಅದನ್ನು ಕಳೆದು ಕೊಂಡವರ ಪರಿಸ್ಥಿತಿ ಹೇಗಿರಬೇಡ ಅಲ್ಲವೇ? ಊಹಿಸಿಕೊಂಡರೇನೇ ಸನ್ನಿವೇಶದ ಸಂ ಕ ಷ್ಟ ನಮ್ಮ ಕಣ್ಮುಂದೆ ಬಂದು ಬಿಡುತ್ತದೆ. ಆದರೆ ಇಂತಹುದೊಂದು ವಿ ಲಕ್ಷಣವಾದ ಘಟನೆಯೊಂದು ವಾಸ್ತವದಲ್ಲಿ ಕೂಡಾ ನಡೆದು ಕೆಲ ಕಾಲ ವಾತಾವರಣವನ್ನು ತಳ ಮಳ ಗೊಳಿಸಿದ ಘಟನೆ ನಡೆದಿದೆ‌.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಸೀತಾಪುರದಲ್ಲಿ. ಇಲ್ಲಿ ಒಬ್ಬ ಹಿರಿಯ ವ್ಯಕ್ತಿ ಪ್ರಾಪರ್ಟಿ ರಿಜಿಸ್ಟ್ರೇಶನ್ ಗೆಂದು ಬಂದಿದ್ದರು. ಆ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಬಂದ ಕೋತಿಯೊಂದು ಅವರು ಹಣವನ್ನು ಇಟ್ಟುಕೊಂಡು ಬಂದಿದ್ದ ಬ್ಯಾಗನ್ನು ಕಬಳಿಸಿದೆ‌, ಅನಂತರ ಅದು ಹಣದ ಬ್ಯಾಗ್ ಸಹಿತವಾಗಿ ಮರವನ್ನು ಏರಿದೆ. ಮರದ ಮೇಲೆ ಕುಳಿತ ಮಂಗ, ಬ್ಯಾಗ್ ನಲ್ಲಿದ್ದ ನೋಟ್ ಗಳನ್ನು ತೆಗೆದು ಹೊರಗೆ ಎಸೆಯಲು ಆರಂಭಿಸಿದೆ. ಮರದ ಮೇಲೆ ಕುಳಿತ ಮಂಗ ಐನೂರು ಮುಖ ಬೆಲೆಯ ನೋಟುಗಳನ್ನು ಹೊರಗೆ ಎಸೆಯಲು ಆರಂಭಿಸಿದೆ, ಮರದ ಮೇಲಿಂದ ಹಣದ ಮಳೆಯಾಗುವುದನ್ನು ನೋಡಿ ಅಲ್ಲಿನ ಜನರು ಶಾ ಕ್ ಆಗಿದ್ದಾರೆ.

ಆ ಸುತ್ತಮುತ್ತಲಿನ ಪರಿಸರದಲ್ಲಿ ಕೆಲ ಕಾಲ ಒಂದು ತ ಲ್ಲ ಣ ವನ್ನು ಉಂಟು ಮಾಡುವಂತಹ ಪರಿಸ್ಥಿತಿ ಉಂಟಾಗಿತ್ತು. ಜನರಿಗೆ ಕೋತಿ ಮರದ ಮೇಲಿಂದ ಹಣದ ಬ್ಯಾಗ್ ನಿಂದ ನೋಟುಗಳನ್ನು ತೆಗೆದು ಹೊರ ಎಸೆಯುವುದು ತಿಳಿದು, ಆ ಕೋತಿಯಿಂದ ಬ್ಯಾಗನ್ನು ಮರಳಿ ಪಡೆಯಲು ಪ್ರಯಾಸ ಪಟ್ಟಿದ್ದಾರೆ. ಆದರೆ ಕೋತಿ ಮಾತ್ರ ನೋಟಿನ ಕಂತೆಗಳನ್ನು ಹೊರ ತೆಗೆದು ಹರಿದು ಹರಿದು ಮರದ ಮೇಲಿಂದ ಕೆಳಗೆ ಎಸೆದಿದೆ. ಖೈರಾಬಾದ್ ಠಾಣೆಯ ಕ್ಷೇತ್ರದ ಕಾಸಿಂಪುರದ ನಿವಾಸಿಯಾಗಿರುವ ಭಗವಾನ್ ದೀನ್ ಅವರು ಮಂಗಳವಾರದಂದು ತಮ್ಮ ಒಂದು ಪ್ರಾಪರ್ಟಿಯ ಮಾರಾಟಕ್ಕೆ ಸಂಬಂಧಿಸಿದಂತೆ ರಿಜಿಸ್ಟ್ರೇಶನ್ ಕೆಲಸಕ್ಕೆ ಬಂದಿದ್ದರು.

ಅವರಿಗೆ ಜಮೀನು ವಿಕ್ರಯದಿಂದ ನಾಲ್ಕು ಲಕ್ಷ ರೂಪಾಯಿ ದೊರೆತಿತ್ತು. ಅದನ್ನು ಬ್ಯಾಗ್ ನಲ್ಲಿಟ್ಟುಕೊಂಡು ಅವರು ಒಂದು ಮರದ ಕೆಳಗೆ ಕುಳಿತಿರುವಾಗ ಅಲ್ಲಿಗೆ ಬಂದ ಮಂಗಗಳ ಗುಂಪಿನಲ್ಲಿದ್ದ ಮಂಗವು ನೋಡು ನೋಡುತ್ತಲೇ ಅವರ ಕೈಯಲ್ಲಿದ್ದ ಬ್ಯಾಗ್ ಅನ್ನು ಕಸಿದುಕೊಂಡು ಮರವನ್ನು ಏರಿದೆ. ಭಗವಾನ್ ದೀನ್ ಅವರು ಕೂಡಲೇ ಜೋರಾಗಿ ಮಂಗ ಬ್ಯಾಗ್ ಕಸಿದುಕೊಂಡಿದೆ ಎಂದು ಅರಚಾಡಿದ್ದಾರೆ. ಬ್ಯಾಗ್ ನಲ್ಲಿನ ಐನೂರರ ನೋಟುಗಳನ್ನು ಹೊರ ತೆಗೆದು ಹರಿದು ಎಸೆದ ಮಂಗ ಸುಮಾರು 10-12 ಸಾವಿರ ರೂಪಾಯಿಗಳನ್ನು ಹರಿದು ಹಾಕಿದೆ. ಅಲ್ಲಿದ್ದ ಜನರು ಮಾಡಿದ ಪ್ರಯತ್ನ ಗಳ ನಂತರ ಕೊನೆಗೆ ಮಂಗ ಬ್ಯಾಗ್ ಅನ್ನು ಕೆಳಗೆ ಎಸೆದಿದೆ. ಅಲ್ಲಿದ್ದ ಜನರು ಬ್ಯಾಗ್ ಅನ್ನು ಭಗವಾನ್ ದೀನ್ ಅವರಿಗೆ ನೀಡಿದ್ದಾರೆ.