ತಮಾಷೆಗಾಗಿ ಮಂಗನ ಕೈಗೆ ಎಕೆ-47 ಕೊಟ್ಟ ಸೈನಿಕರು: ಮಂಗನಾಟಕ್ಕೆ ಅಲ್ಲಿಂದ ಎದ್ದು ಬಿದ್ದು ಓಡಿದರು
ತಮಾಷೆ ಎನ್ನುವುದು, ಹಾಸ್ಯ ಮಾಡಿ ನಗುವುದು ಹಾಗೂ ನಗಿಸುವುದು ಕೂಡಾ ಒಳ್ಳೆಯದೇ ಆದರೆ ಇದಕ್ಕೆ ಯಾವಾಗಲೂ ಕೂಡಾ ಒಂದು ಮಿತಿ ಎನ್ನುವುದು ಇರಬೇಕು ಏಕೆಂದರೆ ಅತಿಯಾದರೆ ಅಮೃತ ಕೂಡಾ ವಿ ಷ ವಾಗುವುದು ಎನ್ನುವ ಮಾತು ನಾವೆಲ್ಲರೂ ಕೇಳಿಯೇ ಇದ್ದೇವೆ. ಆದ್ದರಿಂದಲೇ ಹಾಸ್ಯ ಅಥವಾ ತಮಾಷೆ ಎನ್ನುವುದು ಸದಾ ಒಂದು ಮಿತಿಯಲ್ಲಿ ಇದ್ದರೆ ಅದು ಜೀವನದಲ್ಲೊಂದು ಸಂತೋಷವನ್ನು ಹಾಗೂ ಚೈತನ್ಯವನ್ನು ನೀಡುವುದು ಮಾತ್ರವೇ ಅಲ್ಲದೇ ಅದು ಜೀವನದಲ್ಲಿ ಅತ್ಯಗತ್ಯ ಎನಿಸುವ ಒಂದು ನಗುವಿನ ರಂಗನ್ನು ತುಂಬಿ ನೂರು ಸಂ ಕ ಷ್ಟ ಗಳ ನಡುವೆಯೇ ನಲಿವಿನಿಂದ ಬದುಕುವ ಹುಮ್ಮಸ್ಸನ್ನು ನೀಡುತ್ತದೆ ಎಂಬುದನ್ನು ನಾವೆಲ್ಲರೂ ಕೂಡಾ ಒಪ್ಪಲೇಬೇಕಿದೆ.
ಇನ್ನು ಹಾಸ್ಯ ನಾವು ನಮ್ಮವರೊಡನೆ, ನಮ್ಮ ಸ್ನೇಹಿತರ ನಡುವೆ ಸರಿ, ಆದರೆ ಪ್ರಾಣಿಗಳ ಜೊತೆ ಇದು ಅಷ್ಟು ಸಮಂಜಸವಲ್ಲ, ಅಲ್ಲದೇ ಪ್ರಾಣಿಗಳ ಜೊತೆಗೆ ತಮಾಷೆ ಯನ್ನು ಮಾಡಲು ಹೋಗಿ ಈಗಾಗಲೇ ಹಲವರು ಅ ಪಾ ಯಗಳನ್ನು ಮೈಮೇಲೆ ಎಳೆದುಕೊಂಡಿರುವುದು ಕೂಡಾ ವಾಸ್ತವ. ಅಂತಹ ನೂರಾರು ವೀಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅಲ್ಲದೇ ಕೆಲವು ಸಂದರ್ಭಗಳಲ್ಲಿ ಸ್ಥಳದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದು ಕೂಡಾ ಹೌದು. ಆದರೆ ಪ್ರಾಣಿಗಳ ಜೊತೆ ಎಂದಿಗೂ ಕೂಡಾ ಅತಿಯಾದ ಹಾಸ್ಯವನ್ನು ಮಾಡಬಾರದು.
ಇಂತಹುದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಈ ವೀಡಿಯೋದಲ್ಲಿ ನಡೆದಿರುವ ಘಟನೆ ನಿಜವಾಗಿಯೂ ಕೂಡಾ ತಮಾಷೆಯೊಂದು ಹೇಗೆ ಒಂದು ವಿಪರೀತಕ್ಕೆ ಕಾರಣವಾಗಿದೆ ಎಂಬುದನ್ನು ನಾವು ನೋಡಬಹುದಾಗಿದೆ. ಬಹುಶಃ ಆಫ್ರಿಕಾದಲ್ಲಿ ಈ ಘಟನೆ ನಡೆದಿರುಬಹುದು ಎನ್ನಲಾಗಿದೆ. ಇಲ್ಲಿ ಸೈನಿಕರ ಗುಂಪೊಂದು ಒಂದು ಕಾಡಿನಂತಹ ಪ್ರದೇಶದಲ್ಲಿ ಯಾವುದೋ ಕಾರ್ಯದಲ್ಲಿ ಇರುವಾಗ ಸಂಗೀತ ಹಾಕಿಕೊಂಡು ಡಾನ್ಸ್ ಮಾಡುತ್ತಿರುವಾಗ ಅಲ್ಲಿಗೆ ಒಂದು ಚಿಂಪಾಂಜಿಯು ಬಂದು ಅದು ಕುಣಿಯಲು ಆರಂಭಿಸಿದೆ.
ಅದನ್ನು ನೋಡಿದ ಸೈನಿಕರು ಮತ್ತಷ್ಟು ಉತ್ತೇಜನಗೊಂಡು ಕುಣಿದಿದ್ದಾರೆ. ಆ ಚಿಂಪಾಂಜಿ ಕೂಡಾ ಅವರನ್ನು ನೋಡಿ ಇನ್ನೂ ಜೋರಾಗಿ ಕುಣಿಯುತ್ತಾ ಅವರನ್ನು ಅನುಕರಣೆ ಮಾಡಿದೆ. ಹೀಗೆ ಮೋಜು ಮಸ್ತಿಯಿಂದ ಕುಣಿಯುವಾಗ ಚಿಂಪಾಂಜಿಯ ಕೈಗೂ ಕೂಡಾ ಒಂದು ಲೋಡ್ ಆಗಿರುವ ಗನ್ ಅನ್ನು ನೀಡಿದ್ದಾರೆ. ಅದನ್ನು ಹಿಡಿದ ಚಿಂಪಾಂಜಿ ಅವರಂತೆ ಕುಣಿದಿದೆ. ಆದರೆ ಅನಂತರ ನಡೆದಿದೆ ಅನಾಹುತ. ಚಿಂಪಾಂಜಿ ಹೇಗೋ ಒಮ್ಮೆ ಟ್ರಿಗರ್ ಒತ್ತಿದೆ, ಬುಲೆಟ್ ಫೈ ರ್ ಆಗಿದೆ. ಅದನ್ನು ನೋಡಿ ಖುಷಿಗೊಂಡ ಚಿಂಪಾಂಜಿ ಮತ್ತೆ ಮತ್ತೆ ಗುಂಡು ಹಾರಿಸಿದೆ. ಬುಲೆಟ್ ಫೈರ್ ಆದ ಕೂಡಲೇ ಅಲ್ಲಿದ್ದ ಸೈನಿಕರು ಎದ್ದೆವೋ ಬಿದ್ದೆವೋ ಎನ್ನುವಂತೆ ಅಲ್ಲಿಂದ ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ.
ಈ ವೈರಲ್ ವೀಡಿಯೋವನ್ನು ಈಗಾಗಲೇ 5 ಕೋಟಿಗಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ 12 ಲಕ್ಷಕ್ಕಿಂತ ಅಧಿಕ ಮಂದಿ ಇಷ್ಟಪಟ್ಟಿದ್ದಾರೆ. 65 ಸಾವಿರ ದಾಟಿದ ಕಾಮೆಂಟ್ ಗಳು ಕೂಡಾ ಬಂದಿವೆ. ಇನ್ನು ಕಾಮೆಂಟ್ ಮಾಡಿರುವ ಅನೇಕರು ಮಂಗನ ಕೈಗೆ ಗನ್ ನೀಡಿದ್ದು ತಪ್ಪು ಎಂದು ಹೇಳಿದ್ದಾರೆ. ಅನೇಕರು ಹಾಲಿವುಡ್ ನ ಪ್ಲಾನೆಟ್ ಏಪ್ಸ್ ಸಿನಿಮಾವನ್ನು ಸ್ಮರಿಸಿದ್ದಾರೆ. ಇನ್ನೂ ಕೆಲವರು ಆ ಮಂಗನ ಬುಲೆಟ್ ಫೈ ರಿಂಗ್ ನಿಂದ ಸತ್ತವರ ವರದಿಯನ್ನು ಕೂಡಾ ನೀಡಿ ಎಂದಿದ್ದಾರೆ. ಒಂದಿಬ್ಬರು ಆ ಮಂಗ ಇಂದಿಗೂ ಗನ್ ಹಿಡಿದು ಕಾಡು ಸುತ್ತುತ್ತಿದೆಯೆಂತೆ ಹುಷಾರಾಗಿರಿ ಎಂದು ಹಾಸ್ಯ ಚಟಾಕಿಯನ್ನು ಕೂಡಾ ಹಾರಿಸಿದ್ದಾರೆ.